Advertisement

ಇಸ್ರೋ ಬೆಳೆದುಬಂದ ದಾರಿ!

Advertisement

ಲೇಖನ: ಕವಿರಾಜ್ (ಲೇಖಕರು ಕನ್ನಡ ಚಿತ್ರರಂಗದ ಪ್ರಮುಖ ಗೀತೆರಚನೆಕಾರರಲ್ಲೊಬ್ಬರು. 2003ರಲ್ಲಿ  ಪ್ರೇಮ್ ನಿರ್ದೇಶನದ ಕರಿಯ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಆ ಚಿತ್ರದ 'ನನ್ನಲಿ ನಾನಿಲ್ಲ, ಮನದಲಿ ಏನಿಲ್ಲ' ಗೀತೆಯು ಅವರ ಮೊದಲ ಚಿತ್ರಗೀತೆ.)

"ಬಿಟ್ಟಿಭಾಗ್ಯ" ಎಂಬ ಹೀಯಾಳಿಕೆ ಏಕೆ? ಶ್ರಮಿಕ ವರ್ಗಕ್ಕೂ "ಪೆನ್ಶನ್" ಕೊಡಿ!

ಚಂದ್ರಯಾನ 3 ರ ಯಶಸ್ಸಿನ ನಂತರ ಸೋಷಿಯಲ್ ಮೀಡಿಯಾದಲ್ಲಿ ಆರಂಭವಾಗಿರುವ ಕ್ರೆಡಿಟ್ ವಾರ್ ಬಹಳ‌ ಅನುಚಿತವಾದದ್ದು . ಮುಖ್ಯವಾಗಿ ಅವರ ಅವಧಿಯಲ್ಲಿ ಇಷ್ಟು ಉಪಗ್ರಹಗಳನ್ನು ಹಾರಿಸಲಾಯಿತು . ಇವರ ಇವಧಿಯಲ್ಲಿ ಇಷ್ಟು ಉಪಗ್ರಹಗಳನ್ನು ಹಾರಿಸಲಾಯಿತು ಎಂಬ ಮಾಹಿತಿಯೊಂದರ ಫೋಟೋಗಳು ಓಡಾಡುತ್ತಿವೆ. ಆ ಸಂಖ್ಯೆಗಳು ನಿಜವೇ ?
ಆ ಸಂಖ್ಯೆಗಳ ಮೂಲಕ ಕ್ಲೈಮ್ ಮಾಡಲಾಗುತ್ತಿರುವ ವಿಚಾರ ನಿಜವೇ ? ಎಂದು ನೋಡಲು ಹೊರಟರೇ , ಸಿಗುವುದು ಯಾರ ಆಡಳಿತ ಉತ್ತಮ ಎಂಬ ರಾಜಕೀಯ ಮೇಲಾಟದ ಫಲಿತಾಂಶವಲ್ಲ. ಬದಲಿಗೆ ಅದು 'ಇಸ್ರೋ' ಎಂಬ ದೇಶದ ಮಹೋನ್ನತ ಸಂಸ್ಥೆ ಹತ್ತಾರು ಸವಾಲುಗಳನ್ನು ಎದುರಿಸಿ ವಿಕ್ರಮಗಳನ್ನು ದಾಖಲಿಸಿದ ಯಶೋಗಾಥೆಯ ಪರಿಚಯ ಮಾಡಿಕೊಡುತ್ತದೆ.

ಸ್ವಾತಂತ್ರ್ಯ 76, ಶೋಷಣೆ, ಗಾದೆಯ ಮಾತುಗಳು ಮತ್ತು ಉಪೇಂದ್ರ!

ಇಸ್ರೋ ಸ್ಥಾಪನೆಯಾಗಿದ್ದು 1962 ರಲ್ಲಿ INCOSPAR (Indian National Committee for Space Research)ಎಂಬ ಹೆಸರಿನೊಂದಿಗೆ .
1969 ರಲ್ಲಿ ಅದು ISRO ಎಂದು ಬದಲಾಯಿತು. ಆಗ ISRO ಬಳಿ ಉಪಗ್ರಹಗಳನ್ನು ಗಗನಕ್ಕೆ ಉಡಾವಣೆ ಮಾಡುವ ಸವಲತ್ತು , ಅಂದರೆ ಲಾಂಚಿಂಗ್ ಮಾಡುವ ತಂತ್ರಜ್ಞಾನ ಲಭ್ಯವಿರಲಿಲ್ಲ. ಅದು ತನ್ನ ಉಪಗ್ರಹಗಳನ್ನು ಲಾಂಚ್ ಮಾಡಲು ಬೇರೆ ದೇಶಗಳನ್ನು ಅವಲಂಭಿಸಿತ್ತು. 1975 ರಲ್ಲಿ ನಮ್ಮ ಮೊದಲ ಉಪಗ್ರಹ 'ಆರ್ಯಭಟ'ವನ್ನು ಗಗನಕ್ಕೆ ಚಿಮ್ಮಿಸಿದ್ದು ಸೋವಿಯೆತ್ ರಷ್ಯಾದ 'ಕಪುತಿನ್ ಯಾರ್' ಎಂಬ ನಗರದಲ್ಲಿ , ಸೋವಿಯೆತ್ ಕಾಸ್ಮೋಸ್ M3 ರಾಕೆಟ್ ಎಂಬ ಲಾಂಚಿಂಗ್ ವೆಹಿಕಲ್ ಮೂಲಕ .

'ಗಾಂಜಾ ದುಷ್ಪರಿಣಾಮ' ದ ಕುರಿತು ವೈದ್ಯಕೀಯ ಸತ್ಯ ತಿಳಿದುಕೊಳ್ಳಿ.


ವ್ಯಂಗ್ಯಚಿತ್ರ ಕೃಪೆ: ಸತೀಶ್ ಆಚಾರ್ಯ.

ಉಡಾವಣೆಗೆ ಬೇರೆ ದೇಶವನ್ನು ಆಶ್ರಯಿಸುವುದು ದುಬಾರಿಯಾಗಿತ್ತು. ಹಾಗಾಗಿ 1980 ರಲ್ಲಿ ಇಸ್ರೋ ತನ್ನ ಸ್ವಂತ ಲಾಂಚಿಂಗ್ ವೆಹಿಕಲ್ SLV ( sattellite launching vehicle) ಯನ್ನು ಅಭಿವೃಧ್ಧಿ ಪಡಿಸಿತು . ಇದರ ಮೂಲಕ ತನ್ನ ಉಪಗ್ರಹವಾದ 'ರೋಹಿಣಿ' ಯನ್ನು ತಾನೇ ಸ್ವತಃ, ಗಗನಕ್ಕೆ ಚಿಮ್ಮಿಸಿ ಉಡಾವಣೆ ವಿಚಾರದಲ್ಲಿ ಸ್ವಾವಲಂಬಿ ಆಯಿತು.
ಆಗ ಲಾಂಚಿಂಗ್ ತಂತ್ರಜ್ಞಾನ ಇದ್ದರು ಕೂಡಾ ಅದಕ್ಕಾಗಿ ಉಪಯೋಗಿಸುತ್ತಿದ್ದ ಘನ ಇಂಧನ ದುಬಾರಿಯು ಮತ್ತು ಹೆಚ್ಚು ಭಾರ ಉಳ್ಳದಾಗಿತ್ತು. ಇಂಧನಕ್ಕಾಗಿ ದೊಡ್ಡ ಟ್ಯಾಂಕ್ ಗಳನ್ನು ಹೊಂದಬೇಕಾಗಿತ್ತು , ಮತ್ತು ಅದರಿಂದ ರಾಕೆಟ್ ಕ್ರಮಿಸುವ ದೂರವು ಕೂಡಾ ಕಡಿಮೆಯೇ ಆಗಿರುತ್ತಿತ್ತು.
ಆ ಹೊತ್ತಲ್ಲಿ ಹೈಡ್ರೋಜನ್ ಮತ್ತು ಆಕ್ಸಿಜನ್ಗಳ ದ್ರವರೂಪದ ಮಿಶ್ರಣವಾದ ಕ್ರಯೋಜೆನಿಕ್ ತಂತ್ರಜ್ಞಾನ ಹಗುರ , ಉಪಯುಕ್ತ ಮತ್ತು ಕಡಿಮೆ ವೆಚ್ಚದ್ದಾಗಿ ಅನುಕೂಲಕರವಾಗಿತ್ತು. ಆದರೆ ಆ ತಂತ್ರಜ್ಞಾನ ಇಸ್ರೋ ಬಳಿ ಲಭ್ಯವಿರಲಿಲ್ಲ.
ಆ ತಂತ್ರಜ್ಞಾನವನ್ನು ಕೊಡುವುದಾಗಿ ರಷ್ಯಾ ಒಪ್ಪಿಕೊಂಡಿತ್ತು. ಆದರೆ ತಮ್ಮ 'ನಾಸಾ'ಗೆ ಇಸ್ರೋ ಪ್ರಬಲ ಪ್ರತಿಸ್ಪರ್ಧಿ ಆಗಬಹುದು ಎಂದು ಹೆದರಿದ ಅಮೇರಿಕಾದ ಕುಮ್ಮಕ್ಕಿನಿಂದ, ಕೊನೆ ಕ್ಷಣದಲ್ಲಿ ರಷ್ಯಾ ತಂತ್ರಜ್ಞಾನ ಒದಗಿಸುವ ಒಪ್ಪಂದದಿಂದ ಹಿಂದೆ ಸರಿಯಿತು.
ಆಗ ಇಸ್ರೋ ಇದನ್ನೇ ಸವಾಲಾಗಿ ಸ್ವೀಕರಿಸಿ , ಸುಮಾರು ಎರಡು ದಶಕಗಳ ನಿರಂತರ ಪ್ರಯತ್ನದ ಮೂಲಕ ಕ್ರಯೋಜೆನಿಕ್ ತಂತ್ರಜ್ಞಾನವನ್ನು ಸ್ವದೇಶಿಯಾಗಿ ಅಭಿವೃದ್ಧಿ ಪಡಿಸಿದ್ದು ಭಾರತದ ಬಾಹ್ಯಾಕಾಶ ಕ್ಷೇತ್ರದ ಅಭ್ಯುದಯಕ್ಕೆ ಬಹುಮುಖ್ಯ ಕಾರಣವಾಯಿತು.

ಎಮರ್ಜೆನ್ಸಿ ಘನಘೋರವಾದರೆ ಅದನ್ನು ಸಂಘಪರಿವಾರ ಬೆಂಬಲಿಸಿತ್ತೇಕೆ?!

ಆನಂತರ ಇಸ್ರೋ ತನ್ನ ಉಪಗ್ರಹಗಳಷ್ಟೇ ಅಲ್ಲದೇ , ವಿದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡಿಕೊಡಲು ಆರಂಭಿಸಿತು. 1999 ರಲ್ಲಿ ಮೊದಲ ಬಾರಿಗೆ ತನ್ನ PSLV ( polar sattelite launching vehicle) ಮೂಲಕ ಜರ್ಮನಿ ಮತ್ತು ದಕ್ಷಿಣ ಕೊರಿಯಾದ ಎರಡು ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡಿಕೊಡುವ ಮೂಲಕ ಈ ಶಕೆ ಆರಂಭವಾಯಿತು.
ಅಂದಿನಿಂದ ಆರಂಭವಾದ ಈ ಯಶೋಗಾಥೆ ಅತ್ಯಂತ ಕಡಿಮೆ ವೆಚ್ಚದಲ್ಲಿ ತಮ್ಮ ಉಪಗ್ರಹಗಳನ್ನು ಉಡಾಯಿಸಲು ವಿಶ್ವವೇ ಭಾರತವನ್ನು ಆಶ್ರಯಿಸುವ ಮಟ್ಟಕ್ಕೆ ಬೆಳೆಯಿತು. ಮುಂದೆ ಇಸ್ರೋ GSLV ( Geosynchronous sattelite launching vehicle ) ಉಡಾವಣಾ ರಾಕೆಟ್ ಅನ್ನು ಕೂಡಾ ಅಭಿವೃದ್ಧಿ ಪಡಿಸಿತು. ಹಂತಹಂತವಾಗಿ ಈ ದಿಸೆಯಲ್ಲಿ ಇಸ್ರೋ ಮುಂದಡಿ ಇಡುತ್ತಾ ಬಂದು, ಈವರೆಗೂ ಸುಮಾರು 385 ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಿಕೊಟ್ಟ ಸಾಧನೆಗೈದಿದೆ . ಈ ಮೂಲಕ ಉತ್ತಮ ಆದಾಯವನ್ನು ಗಳಿಸುತ್ತಿದೆ.

ಮಣಿಪುರದ ಪರಿಸ್ಥಿತಿ ಇಡೀ ದೇಶದಲ್ಲಿ ಬರುವ ಮೊದಲು ಎಚ್ಚೆತ್ತುಕೊಳ್ಳಿ!

ಅದರಲ್ಲೂ 2017 ರಲ್ಲಿ PSLV ಮೂಲಕ ವಿದೇಶಗಳ 104 ಉಪಗ್ರಹಗಳನ್ನು , ಒಮ್ಮೆಗೆ, ಒಂದೇ ಲಾಂಚ್ ಮೂಲಕ ಗಗನಕ್ಕೆ ಚಿಮ್ಮಿಸಿದ್ದು ಇಸ್ರೋ ಪರಾಕ್ರಮದ ವಿರಾಟ್ ದರ್ಶನವೇ ಸರಿ. ಅದರಲ್ಲಿ ತನ್ನ ಎರಡು ಉಪಗ್ರಹಗಳ ಜೊತೆ, 96 ಉಪಗ್ರಹಗಳು USA ಗೆ ಸೇರಿದ್ದು , ಇನ್ನುಳಿದವು ಜರ್ಮನಿ, ಬೆಲ್ಜಿಯಂ , ನೆದರ್ಲ್ಯಾಂಡ್ , ಯುಎಈ , ಇಸ್ರೇಲ್ ಮತ್ತು ಕಜಕಸ್ತಾನ್ ದೇಶಗಳಿಗೆ ಸೇರಿದ್ದವು. ಈವರೆಗೆ ಇಸ್ರೋ ಉಡಾಯಿಸಿದ ಉಪಗ್ರಹಗಳೆಲ್ಲವೂ ನಮ್ಮ ದೇಶದವೇ ಅಲ್ಲ . ಅವುಗಳಲ್ಲಿ ಹೆಚ್ಚಿನವು ಬೇರೆ ದೇಶಗಳದ್ದು. ಎಲ್ಲಾ ಮುಂದುವರಿದ ದೇಶಗಳು ಸೇರಿದಂತೆ , ಬೇರೆ ಬೇರೆ ದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡುವುದರಲ್ಲಿ ಇಸ್ರೋ ಈಗ ಜಗತ್ತಿನ ಅತ್ಯಂತ ಬೇಡಿಕೆಯ ಸಂಸ್ಥೆ.

ಕಾಂಗ್ರೆಸ್ ಈ ದೇಶಕ್ಕೇನು ಕೊಟ್ಟಿದೆ?

ಈ ಸಾಧನೆ ಕೇವಲ ಐದಾರು ವರ್ಷಗಳಲ್ಲಿ ಆದದ್ದಲ್ಲ. ಇಸ್ರೋ ತನ್ನ ಮೊದಲ ಉಪಗ್ರಹವನ್ನು ಹಾರಿಸಿ ಸುಮಾರು ಐವತ್ತು ವರ್ಷಗಳಾಗಿ ಹೋಗಿದೆ. ಚಂದ್ರಯಾನದ ಸರಣಿ ಆರಂಭವಾಗಿಯೂ 15 ವರ್ಷವಾಗಿದೆ.
ಆಡಳಿತ , ಅನುದಾನಗಳಿಗಿಂತ ಹೆಚ್ಚು ವಿಜ್ಞಾನಿಗಳ ಪ್ರತಿಭೆ , ಪರಿಶ್ರಮ ಇಸ್ರೋ ಯಶಸ್ಸಿನ ಮೂಲದ್ರವ್ಯ.
1969 ರಿಂದ ಹಂತಹಂತವಾಗೀ ಎಂತೆಂತದ್ದೋ ಕಠಿಣ ಸವಾಲುಗಳನ್ನು ಎದುರಿಸಿ ಇಸ್ರೋ ಇಂದು ಜಗವೇ ಮೆಚ್ಚುವಂತ ಸಾಧನೆಗಳನ್ನು ಮಾಡುವ ಮಟ್ಟಕ್ಕೆ ಬೆಳೆದಿದೆ. ಇಸ್ರೋ ಇಡೀ ದೇಶದ ಪರಂಪರೆಯ ಹೆಮ್ಮೆ. ಅದರ ಹುಟ್ಟಿನಿಂದ ಇಲ್ಲಿಯವರೆಗೂ ಅದರ ಎಲ್ಲ ಸಾಧನೆಗಳು ಇಡೀ ದೇಶಕ್ಕೆ ಸೇರಿದ್ದು‌.
ಇಸ್ರೋದ ಇಂದಿನ ಸಾಧನೆಯ ಕ್ರೆಡಿಟ್ ತೆಗೆದುಕೊಳ್ಳುವ ಹಪಾಹಪಿಯಲ್ಲಿ ಇಂತಹಾ ಅಮೋಘ ಸಂಸ್ಥೆಯನ್ನು ಕಟ್ಟಿ ಬೆಳೆಸಿದವರನ್ನು ಅವಮಾನಿಸುವುದು ಅತ್ಯಂತ ದೊಡ್ಡ ದೇಶದ್ರೋಹವಾಗಿದೆ.
ಯಾವುದೇ ಗಿಡವೂ ನೆಟ್ಟ ಕೂಡಲೇ ಫಲ ನೀಡುವುದಿಲ್ಲ. ಪಕ್ಷ , ಪಂಥಗಳ ಅಮಲಿನಲ್ಲಿ , ವರುಷಗಳ ನಂತರ ಫಲವನ್ನು ಸವಿಯುವ ವೇಳೆ ಉತ್ತಿ ಬಿತ್ತಿ , ನೀರುಣಿಸಿ ಬೆಳೆಸಿದವರನ್ನು ಅವಮಾನಿಸುವಷ್ಟು ಕೃತಘ್ನರಾಗದಿರೋಣ.

ರಾಹುಲ್ v/s ಆರೆಸೆಸ್, ಬಿಜೆಪಿ ಮತ್ತು ಮೋದಿ?

Advertisement
Advertisement
Recent Posts
Advertisement