ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಮನುವಾದಿ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ ಮನುವಾದಿಗಳ ಪೂರ್ವಜರು ಈ ನೆಲದ ಮೂಲ ನಿವಾಸಿಗಳ ಮೇಲೆ ಆ ಕಾಲದಲ್ಲಿ ನಡೆಸಿದ್ದ ಶೋಷಣೆಗಳೇನು ಗೊತ್ತೇ? ಅವರುಗಳ ನೈಜಸಿದ್ಧಾಂತವೇನು ಗೊತ್ತೇ? ಮತ್ತು ಆ ಮನುವಾದಿಗಳಿಗೆ ಚಾಚಾ ನೆಹರೂ ಮಾಡಿರುವ ದೀರ್ಘಕಾಲೀನ ಹಾನಿ ಯಾವ ಮಟ್ಟದ್ದು ಗೊತ್ತೇ?
ಬರಹ: ಕಮಲಾಕರ ಕಾರಣಗಿರಿ
ಸಾವಿರಾರು ವರ್ಷಗಳ ಕಾಲ ಈ ದೇಶ ಮನುಸ್ಮೃತಿ ಆಧಾರದ ಚಾತುರ್ವರ್ಣ ಯಾ ಜಾತಿ ವ್ಯವಸ್ಥೆಯಿಂದ ನಲುಗಿ ಹೋಗಿತ್ತು. ಬ್ರಿಟೀಷರ ಆಳ್ವಿಕೆ ಆರಂಭವಾಗುವ ತನಕವೂ ಈ ದೇಶದಲ್ಲಿ ಬೆರಳೆಣಿಕೆಯ ಉದಾಹರಣೆ ಬಿಟ್ಟರೆ ಬ್ರಾಹ್ಮಣರಲ್ಲದವರಿಗೆ ವಿದ್ಯೆಯ ಹಕ್ಕು ಇರಲಿಲ್ಲ. ಭೂ ಒಡೆತನದ ಹಕ್ಕು ಇರಲಿಲ್ಲ. ಅಧಿಕಾರದ ಸ್ಥಾನಮಾನದ ಕಥೆ ಬದಿಗಿಡಿ. ಏಕೆಂದರೆ ವಿದ್ಯೆ ಇಲ್ಲದವ ಅದು ಹೇಗೆ ಆ ಸ್ಥಾನಮಾನ ಪಡೆಯಬಲ್ಲ ಅಲ್ಲವೇ? ಬ್ರಾಹ್ಮಣರಲ್ಲದವರು ಕೇವಲ ಜಾತಿ ಆಧಾರಿತ ಗುಲಾಮಗಿರಿಗಷ್ಟೆ ಸೀಮಿತರಾಗಿದ್ದರು. ಗುಲಾಮಗಿರಿ ಯಾರದ್ದು ಮತ್ತು ಎಂತಹದ್ದೆಂದು ಬಿಡಿಸಿ ಹೇಳಬೇಕಾಗಿಲ್ಲ ಏಕೆಂದರೆ ಭೂಮಾಲಕರು, ಅದಿಕಾರದ ಸ್ಥಾನ ಹೊಂದಿರುವ ಜಾತಿಗರು ಯಾರೆಂದು ಈ ಮೇಲೆ ವಿವರವಾಗಿ ಬಿಡಿಸಿಡಲಾಗಿದೆ. ಶೇಕಡಾ 97ರಷ್ಟು ಜನತೆ ಆ ಎಲ್ಲಾ ಸವಲತ್ತುಗಳಿಂದ ವಂಚಿತರಾಗಿದ್ದರು ಮತ್ತು ಶೇಕಡಾ3 ರಷ್ಟು ಜನ ಈ ದೇಶದ ಸಂಪನ್ಮೂಲವನ್ನು ಬಳಸಿಕೊಳ್ಳುತ್ತಿದ್ದರು ಆ 97ಶೇಕಡಾ ಜನರ ಬೆವರ ಫಲವನ್ನು ತಮ್ಮ ವೈಭವಕ್ಕೆ ಬಳಸಿಕೊಳ್ಳುತ್ತಿದ್ದರು ಎಂದರೆ ಊಹಿಸಿ ಆ ಕಾಲಮಾನಕ್ಕೆ ಸಾಮಾನ್ಯ ಜನರ, ಕೆಳ ಜಾತಿಗರ, ಅವಿದ್ಯಾವಂತರ ಜನಜೀವನದ ಮಟ್ಟ ಹೇಗಿತ್ತು ಎಂದು?
ಸ್ವಾತಂತ್ರ್ಯಾ ನಂತರ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಮಾರ್ಗದರ್ಶನದಡಿಯಲ್ಲಿ ಈ ದೇಶದ ಚುಕ್ಕಾಣಿ ಹಿಡಿದ ಕಾಶ್ಮೀರಿ ಪಂಡಿತರ ವಂಶದ ಚಾಚಾ ನೆಹರೂ ನೇತೃತ್ವದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕರುಗಳು ಅದೇ 3ಶೇಕಡಾ ಜನರ ಪರವಾದ ಸಂವಿಧಾನ ತರುವ ಕುರಿತಾಗಿ ವಿರೋಧವಿದ್ದುದು ಮತ್ತು ಯಾವುದೇ ಬಾಹ್ಯ ಮತ್ತು ಆಂತರಿಕ ಒತ್ತಡಕ್ಕೆ ಮಣಿಯದೆ ಶೇಕಡಾ 100 ಜನರಿಗೂ ಸರಿಸಮಾನವಾದ ಹಕ್ಕುಗಳನ್ನು ಒದಗಿಸುವ ಅರ್ಥಾತ್ 'ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು' ಸಿದ್ಧಾಂತದ ಬಾಬಾ ಸಾಹೇಬ್ ಬಿ.ಆರ್ ಅಂಬೇಡ್ಕರ್ ರವರ ರಚನೆಯ ಸಂವಿಧಾನವನ್ನು ಜಾರಿಗೊಳಿಸಿ ದೇಶವನ್ನು ಅಭ್ಯುದಯದ ಪಥದತ್ತ ಕೊಂಡೊಯ್ದದ್ದು ಆ ಶೇಕಡಾ 3ರಷ್ಟು ಜನರ ದೃಷ್ಟಿಯಲ್ಲಿ ನೆಹರೂ ಮಹಾನ್ ತಪ್ಪುಗಾರರಾಗುತ್ತಾರೆ.
ಏಕೆಂದರೆ 3 ಶೇಕಡಾ ದ ಸಮುದಾಯದಿಂದ ಬಂದ ನಾಯಕನೊಬ್ಬ 97 ಶೇಕಡಾ ಜನರ ಪರವಾಗಿ ನಿಲ್ಲುವುದು ತಪ್ಪಲ್ಲವೇ?
ನಿಜ, ಅವರ ದೃಷ್ಟಿಯಲ್ಲಿ ನೆಹರೂ ತಪ್ಪುಗಾರರಾಗುತ್ತಾರೆ ಅದು ಹೇಗೆ ಗೊತ್ತೆ... ಸಮೀಕ್ಷೆಯೊಂದರ ಪ್ರಕಾರ ಈ ದೇಶಕ್ಕೆ ಸ್ವಾತಂತ್ರ್ಯ ಸಿಗುವ ಸಂಧರ್ಭದಲ್ಲಿ ಇಲ್ಲಿ 90%ಗೂ ಹೆಚ್ಚು ಹಿಂದುಳಿದ ವರ್ಗದ ಮತ್ತು ದಲಿತ ವರ್ಗದ ಜನ ಗುಡಿಸಲಿನಲ್ಲಿ ವಾಸಿಸುತ್ತಿದ್ದರು. 95%ಗೂ ಹೆಚ್ಚು ಜನ ಅನಕ್ಷರಸ್ಥ ರಾಗಿದ್ದರು. 40%ಗೂ ಹೆಚ್ಚು ಜನ ಪೌಷ್ಟಿಕಾಹಾರದ ಕೊರತೆಯಿಂದ ಭಾಲ್ಯ, ಯೌವನದಲ್ಲೆ ಸಾವನ್ನಪ್ಪುತ್ತಿದ್ದರು. ಈ ದೇಶದಲ್ಲಿ ಅಲ್ಲೊಂದು ಇಲ್ಲೊಂದು ಬಿಟ್ಟರೆ ಹೆಚ್ಚಿನೆಡೆ ಸೇತುವೆಗಳಿರಲಿಲ್ಲ, ವಿದ್ಯುತ್ ಇರಲಿಲ್ಲ, ಶಾಲೆಗಳಿರಲಿಲ್ಲ, ಆಸ್ಪತ್ರೆ ಗಳಿರಲಿಲ್ಲ, ಉದ್ಯೋಗಾವಕಾಶಗಳಿರಲಿಲ್ಲ. ಅದು ಹಾಗೆಯೇ ಮುಂದುವರಿಯಬೇಕು ತಮ್ಮ ಪ್ರಾಬಲ್ಯಕ್ಕೆ ಕುಂದು ಉಂಟಾಗಬಾರದು ಎಂಬುವುದು ಆ 3%ಮನುವಾದಿಗಳ ಗುರಿಯಾಗಿತ್ತು.
ಆದರೆ ಅದೆಲ್ಲಾ ಕುಂದುಕೊರತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಅಂದರೆ ಅವೆಲ್ಲದರ ಮಹತ್ವವನ್ನು ಆ ಅವಿದ್ಯಾವಂತ ಜನರಿಗೆ ಮನವರಿಕೆ ಮಾಡಿ ಹಂತಹಂತವಾಗಿ ಅವುಗಳನ್ನು ದೇಶದಾದ್ಯಂತ ಅನುಷ್ಠಾನ ಗೊಳಿಸಿದವರು ಈ 60ವರ್ಷಗಳಲ್ಲಿ ನಮ್ಮನ್ನಾಳಿದ ನೆಹರೂ, ಶಾಸ್ತ್ರಿ, ಇಂದಿರಾ, ರಾಜೀವ್, ಪಿವಿಎನ್, ಮನಮೋಹನ್ ಸಿಂಗ್ ಮುಂತಾದವರು. ಈ ದೇಶವನ್ನಾಳಿದ ಈ ಎಲ್ಲಾ ನಾಯಕರುಗಳ ಆ ದೂರಾಲೋಚನೆಯ ಫಲವಾಗಿ ಭಾರತ ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಲ್ಲಿ ಮೂರನೆಯ ಸ್ಥಾನ ಪಡೆಯುವಂತಾಯಿತು.
ಐಟಿ, ಬಿಟಿಯಲ್ಲಿ ಭಾರತ ಗಳಿಸಿದ ಸಾಧನೆಗಾಗಿ ಅಮೆರಿಕಾದ ಆಗಿನ ಅಧ್ಯಕ್ಷರಾಗಿದ್ದ ಬರಾಕ್ ಒಬಾಮರವರು ಭಾರತವನ್ನಾಳಿದ ನಾಯಕರ ಈ ಸಾಧನೆ ಶ್ಲಾಘನೀಯ ಎಂದು ವಿಶ್ವಸಂಸ್ಥೆಯ ಸಮಾರಂಭವೊಂದರಲ್ಲಿ ಹೊಗಳಿದ್ದನ್ನು ನೀವು ಮರೆತಿರಲಾರಿರಿ. ಮಾಜಿ ಪ್ರಧಾನಿ, ವಿಶ್ವದ ಸರ್ವ ಶ್ರೇಷ್ಟ ಆರ್ಥಿಕತಜ್ಞ ಪ್ರಖ್ಯಾತಿಯ ಮನಮೋಹನ್ ಸಿಂಗ್ ಆಡಳಿತಾವಧಿಯಲ್ಲಿ ಈ ಸ್ಥಾನಮಾನ ಕೀರ್ತಿ ಲಬಿಸಿದ್ದನ್ನು ಭಾರತೀಯರಾದ ನಾವು, ನೀವು ಹೆಮ್ಮೆ ಯಿಂದ ಹೇಳಿಕೊಳ್ಳಬೇಕಾದ ವಿಚಾರವಾಗಿದೆ. ಆದರೆ ಮನುವಾದಿ ಗಳ ಪ್ರಕಾರ ಅದು ಮಹಾನ್ ತಪ್ಪು.
ಕಾಂಗ್ರೆಸ್ ಪಕ್ಷದ ಸಂಪೂರ್ಣ ವಿರುದ್ದ ಸಿದ್ದಾಂತದ ಅದೇ ಸ್ವಾರ್ಥಿ ಮನುವಾದಿಗಳ ನೇತೃತ್ವದ ಬಿಜೆಪಿ ಪಕ್ಷವು, ಅಂಬೇಡ್ಕರ್ ಸಂವಿಧಾನದ ಬದಲು ಮನುಸ್ಮೃತಿ ಸಂವಿಧಾನವನ್ನು ಜಾರಿಗೆ ತರಬೇಕು ಎಂದು 1949ರಲ್ಲೆ ಪ್ರಭಲವಾಗಿ ಪ್ರತಿಪಾದಿಸಿದ ನಾಯಕರುಗಳು ಕಟ್ಟಿದ ಬಹು ಅಪಾಯಕಾರಿ ಸಿದ್ಧಾಂತ ಹೊಂದಿದ ಒಂದು ಪಕ್ಷವಾಗಿದೆ.
"ಹಿಂದುಳಿದ ವರ್ಗ ಮತ್ತು ದಲಿತ ವರ್ಗ ವಿದ್ಯೆ ಪಡೆಯುವಂತಿಲ್ಲ, ಉನ್ನತ ಉದ್ಯೋಗಕ್ಕೆ ಏರುವಂತಿಲ್ಲ, ಆಸ್ತಿಯ ಹಕ್ಕು ಹೊಂದುವಂತಿಲ್ಲ ಅವರು ಕೇವಲ ಮೇಲ್ಜಾತಿಯ ಚಾಕರಿ ಮಾಡಿಕೊಂಡಿರಬೇಕು"... ಇದು ಮನುಸ್ಮೃತಿ ಸಂವಿಧಾನದ ಮುಖ್ಯ ಸಿದ್ದಾಂತ. ಇದುವೇ ಬಿಜೆಪಿ, ಸಂಘಪರಿವಾರ ಮತ್ತದರ ಹಿಂದಿರುವ ಪುರೋಹಿತಶಾಹಿ ವರ್ಗದ ಧರ್ಮ ಶಾಸ್ತ್ರ. ಮತ್ತು ಅದನ್ನು ಆ ವರ್ಗ ಶತಶತಮಾನಗಳ ಕಾಲದಿಂದಲೂ ಪಾಲಿಸಿಕೊಂಡು ಬಂದಿದೆ. ಇದೀಗ ಅದೇ ಪುರೋಹಿತಶಾಹಿ ವರ್ಗದ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಸಂವಿಧಾನದ ಬದಲಾವಣೆಯ ಕುರಿತು ಮಾತನಾಡಲು ಆರಂಭಿಸಿದೆ.... ಅದರ ಮುಂದುವರಿದ ಭಾಗವೇ ಬಿಜೆಪಿ ನಾಯಕರುಗಳಾದ ಸಂಸದ ಅನಂತಕುಮಾರ್ ಹೆಗ್ಡೆ, ಗೋ. ಮಧುಸೂದನ್, ಬಿಜೆಪಿ ಪರ ಸಾಹಿತಿ ಎಸ್. ಎಲ್.ಬೈರಪ್ಪ ಮುಂತಾದವರ ಸಂವಿಧಾನ ಬದಲಾವಣೆಯ ಕುರಿತಾದ ಹೇಳಿಕೆಯ ಮೂಲವಾಗಿದೆ.
ಇಷ್ಟಾಗಿಯೂ ಈ ನೆಲದ ಮೂಲನಿವಾಸಿಗಳಾದ ಹಿಂದುಳಿದ ವರ್ಗದ ಮತ್ತು ದಲಿತ ವರ್ಗದ ಜನತೆ ಈ ಮೇಲೆ ವಿವರಿಸಿದ ವಿಚಾರಗಳ ಕುರಿತು ಈಗಿಂದೀಗಲೇ ಜಾಗ್ರತರಾಗದಿದ್ದಲ್ಲಿ ಭವಿಷ್ಯದಲ್ಲಿ ಈ ಜನಾಂಗಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.
►►ಇದನ್ನೂ ಓದಿ:
►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ.
►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?
►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ?
►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.!
►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್!
►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ!
►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ?
►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ?
►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ.
►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ
►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ)
►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ?
►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..!
►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ!
►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ?
►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್!
►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ?
►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು.
►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು?
►►'ಕೋವಿಡ್ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್!
►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ.
►►ಛತ್ತೀಸ್ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ?
►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್
►►ನನ್ನ ರಾಜೀವ್ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ
►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್ ಚಂದ್ರ ಶೆಟ್ಟಿ (ವಿಡಿಯೋ ನೋಡಿ)
►►ಖಾಸಗೀಕರಣದ ಹಿಂದಿನ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ
►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?