Advertisement

ಯಡಿಯೂರಪ್ಪ ರಾಜೀನಾಮೆಯ ಹಿಂದಿನ ಕಥೆಯೂ... ವೈದಿಕವ್ಯಾದಿಯ ವ್ಯಥೆಯೂ!

Advertisement

ಬರಹ: ಡಾ. ಜೆ ಎಸ್ ಪಾಟೀಲ (ಲೇಖಕರು ಜನಪರ ಚಿಂತಕರು ) ►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ. ಕರ್ನಾಟಕದ ರಾಜಕೀಯ ಉತ್ತರ ಭಾರತದ ರಾಜಕೀಯಕ್ಕಿಂತ ಭಿನ್ನ ನೆಲೆಯಲ್ಲಿ ಕಲ್ಪಿಸಿಕೊಳ್ಳಲಾಗದೆ ಬಿಜೆಪಿಯನ್ನು ನಿಯಂತ್ರಿಸುವ ಅಸಂವಿಧಾನಿಕ ಶಕ್ತಿಗಳು ಮತ್ತೊಮ್ಮೆ ಸೋತಿವೆ. ಶೂದ್ರನ ಬೆವರಿನ ಶ್ರಮದ ಫಲವನ್ನು ಅನಾಯಾಸವಾಗಿ ಉಣ್ಣಬೇಕೆಂಬ ತಮ್ಮ ಪರಂಪರಾಗತ ಹುನ್ನಾರದ ಮುಂದುವರೆದ ಭಾಗವಾಗಿದ್ದ ಯಡಿಯೂರಪ್ಪ ಪದಚ್ಯುತಿಯ ಪ್ರಹಸನ ಆ ಅಸಂವಿಧಾನಿಕ ಶಕ್ತಿಗಳಿಗೆ ಸೋಲನ್ನುಂಟು ಮಾಡಿದೆ. ಹಿಂದೆ ಎಸ್. ಆರ್ ಬೊಮ್ಮಾಯಿ, ಜೆ ಎಚ್ ಪಟೇಲ್ˌ ಎಸ್ ಬಂಗಾರಪ್ಪ, ನಜೀರಸಾಬ್, ಬಿ. ರಾಚಯ್ಯ, ದೇವೇಗೌಡ ಮುಂತಾದ ದಿಗ್ಗಜರು ಕಟ್ಟಿ ಅಧಿಕಾರಕ್ಕೆ ತಂದಿದ್ದ ಜನತಾರಂಗ ಸರಕಾರದ ನಾಯಕತ್ವ ದಿಲ್ಲಿಯಿಂದ ಹೇರಲ್ಪಟ್ಟಿದ್ದ ರಾಮಕೃಷ್ಣ ಹೆಗಡೆಯವರ ಕೈಗೆ ಅನಾಯಾಸವಾಗಿ ಹಸ್ತಾಂತರಗೊಂಡಿದ್ದ ಘಟನೆಯನ್ನು ಯಡಿಯೂರಪ್ಪನವರು ಒಂದು ಪಾಠವಾಗಿ ತಗೆದುಕೊಂಡಿದ್ದರು ಎನ್ನುವುದನ್ನು ಇತ್ತೀಚಿನ ಬಿಜೆಪಿಯೊಳಗಿನ ಬೆಳವಣಿಗೆಗಳು ಧೃಢಪಡಿಸುತ್ತಿವೆ. ಯಡಿಯೂರಪ್ಪ ಪದಚ್ಯುತಿಗೆ 'ಅವರ ವಯಸ್ಸು' ಕಾರಣ ಎಂದು ವೈದಿಕವ್ಯಾಧಿ ಮಾಧ್ಯಮಗಳು ಬಾಯಿ ಬಡೆದುಕೊಳ್ಳುತ್ತಿವೆ. ಆದರೆ ಕೇರಳ ಚುನಾವಣೆಯಲ್ಲಿ 80 ರ ಮೇಲ್ಪಟ್ಟು ವಯಸ್ಸಿನ ಮೆಟ್ರೊ ಶ್ರೀಧರನ್ ರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಜೆಪಿ ಬಿಂಬಿಸುವಾಗ ವಯಸ್ಸಿನ ಮಾನದಂಡ ಎಲ್ಲಿ ಹೋಗಿತ್ತು ಮತ್ತು ಯಡಿಯೂರಪ್ಪ ಈ ಸಲ ವಿರೋಧ ಪಕ್ಷದ ಶಾಸಕರನ್ನು ಸೆಳೆದು ಸರಕಾರ ರಚಿಸುವಾಗ ಅವರ ವಯಸ್ಸು ಬಿಜೆಪಿಗೆ ಗೊತ್ತಿರಲಿಲ್ಲವೆ ಎನ್ನುವ ಪ್ರಶ್ನೆ ಸಹಜವಾಗಿ ಏಳುತ್ತದೆ. ಹಿಂದೆ ಪಕ್ಷವನ್ನು ತಳಮಟ್ಟದಿಂದ ಕಟ್ಟಿದ್ದ ಲಾಲ್‌ಕೃಷ್ಣ ಅಡ್ವಾಣಿಯವರನ್ನು ಬದಿಗೊತ್ತಿ ವಾಜಪೇಯಿಯನ್ನು ಪ್ರಧಾನಿ ಮಾಡಿದ್ದು ಇದೇ ಅಸಂವಿಧಾನಿಕ ಶಕ್ತಿಗಳು. ಈಗ ಅದೇ ಅಡ್ವಾಣಿಯನ್ನು ಸಂಪೂರ್ಣ ಮೂಲೆಗುಂಪು ಮಾಡಿರುವುದನ್ನು ನಾವು ಜ್ಞಾಪಿಸಿಕೊಳ್ಳಬೇಕು. ಯಡಿಯೂರಪ್ಪ ಪದಚ್ಯುತಿಗೆ ವಯಸ್ಸು ಕಾರಣ ಅಲ್ಲವೇ ಅಲ್ಲ ಅನ್ನುವುದು ಇದರಿಂದ ಸಾಬೀತಾದಂತಿದೆ. ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ಈ ಅವಧಿಯಲ್ಲಿ ಯಡಿಯೂರಪ್ಪನವರಿಗೆ ವಯಸ್ಸು ಮಿಕ್ಕಿತ್ತು ಎನ್ನುವ ವಾದವನ್ನು ಒಪ್ಪತ್ತು ಜನರಿಗೆ ಕನ್ವಿನ್ಸ್ ಆಗಬಹುದು. ಆದರೆ ಕಳೆದ ಅವಧಿಯಲ್ಲಿ ಯಡಿಯೂರಪ್ಪ ಆಡಳಿತ ಸುಗಮವಾಗಿ ನಡೆಯಲು ಬಿಡದವರು ಯಾರು ಎನ್ನುವುದು ಜನರಿಗೆ ತಿಳಿಯದ ಸಂಗತಿಯೇನಲ್ಲ. ಕರಾವಳಿಯಲ್ಲಿ ಚರ್ಚುಗಳ ಮತ್ತು ಪಬ್ಬುಗಳ ಮೇಲಿನ ಕೋಮುವಾದಿಗಳ ದಾಳಿಯು ಯಡಿಯೂರಪ್ಪ ಆಡಳಿತ ಪ್ರಕ್ಷುಬ್ಧಗೊಳಿಸುವ ಹುನ್ನಾರವಾಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಬಳ್ಳಾರಿ ಮಣ್ಣುಗಳ್ಳರನ್ನು ಮುಂದೆ ಮಾಡಿ ಯಡಿಯೂರಪ್ಪನವರನ್ನು ಪದಚ್ಯುತಿಗೊಳಿಸಲು ಮಾಡಿದ ಕೋಮುವಾದಿಗಳ ಹುನ್ನಾರದ ಹಿಂದೆ ಅಂದಿನ ಕರ್ನಾಟಕ ಮೂಲದ ಕೇಂದ್ರದ ಮಾಜಿ ಮಂತ್ರಿ ಮತ್ತು ಇಬ್ಬರು ಕುಲಬಾಂಧವ ಪತ್ರಕರ್ತರು ಇದ್ದರು ಎನ್ನುವ ಸಂಗತಿ ಈಗ ಗುಟ್ಟಾಗಿ ಉಳಿದಿಲ್ಲ. ಆನಂತರ ಮುಖ್ಯಮಂತ್ರಿಯಾಗಿ ಆ ಮಾಜಿ ಕೇಂದ್ರ ಮಂತ್ರಿಯನ್ನು ಹೇರಲು ಪ್ರಯತ್ನಿಸಿದಾಗ ಯಡಿಯೂರಪ್ಪ ಆಗಲೂ ಕೂಡ ಅದನ್ನು ಯಶಸ್ವಿಯಾಗಿ ತಡೆದು ಸದಾನಂದಗೌಡ ಎಂಬ ಆಗುಂತಕನನ್ನು ಆಯ್ಕೆ ಮಾಡಿದ್ದು ಬಲ್ಲೆವು. ಈ ಸಲ ವಿರೋಧ ಪಕ್ಷದ ಶಾಸಕರನ್ನು ಸೆಳೆದು ಸಮ್ಮಿಶ್ರ ಸರಕಾರವನ್ನು ಪದಚ್ಯುತಗೊಳಿಸಿ ಬಿಜೆಪಿ ಸರಕಾರ ರಚಿಸುವ ಯಡಿಯೂರಪ್ಪನವರ ಆರ್ಥಿಕವಾಗಿ ಅತ್ಯಂತ ದುಬಾರಿ ಸಾಹಸಕ್ಕೆ ಬಿಜೆಪಿ ಹೈಕಮಾಂಡ್ ನ ಬೆಂಬಲವಿತ್ತು ಎನ್ನುವ ಸಂಗತಿ ಎಲ್ಲರಿಗೆ ಗೊತ್ತಿರುವಂತದ್ದು. ಆಮೇಲೆ ಅನರ್ಹಗೊಂಡ ಶಾಸಕರನ್ನು ನ್ಯಾಯಾಂಗದ ಮೇಲೆ ಪ್ರಭಾವ ಬೀರಿ ಅರ್ಹರನ್ನಾಗಿಸುವ ಅತಿಯಾದ ಆತ್ಮವಿಶ್ವಾಸವೂ ಹೈಕಮಾಂಡಿಗಿತ್ತು ಅನ್ನುವುದು ಆ ದಿನದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ತಿಳಿಯುತ್ತದೆ. ಆ ಕೆಲಸ ಯಶಸ್ವಿಯಾಗಿ ಮುಗಿದಾದ ಮೇಲೆ ಯಡಿಯೂರಪ್ಪನವರು ಅವಧಿಗೆ ಮುನ್ನ ರಾಜಿನಾಮೆ ಕೊಟ್ಟು ಮತ್ತೊಬ್ಬ ನಾಯಕನಿಗೆ ಅವಕಾಶಮಾಡಿ ಕೊಡಬೇಕು ಎನ್ನುವ ಷರತ್ತು ಬಿಜೆಪಿ ಹೈಕಮಾಂಡ್ ವಿಧಿಸಿತ್ತು ಎನ್ನುವುದು ಈಗ ಬಯಲಾದ ಸಂಗತಿ. ಆಗೇನೊ ಯಡಿಯೂರಪ್ಪ ಆ ನಿಬಂಧನೆಗೆ ಒಪ್ಪಿದ್ದಂತೆ ಕಾಣುತ್ತದೆ. ಮುಂದೆ ನಾನೇಕೆ ಅಧಿಕಾರದಿಂದ ಇಳಿಯಬೇಕು ಎನ್ನುವ ವರಸೆ ಆರಂಭಿಸಿದ್ದು ಬಿಜೆಪಿ ಹೈಕಮಾಂಡ್‌ನ ತಲೆನೋವು ಹೆಚ್ಚಲು ಕಾರಣವಾಗಿತ್ತೇನೊ. ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) ಯಡಿಯೂರಪ್ಪನವರನ್ನು ಹೇಗಾದರೂ ಮಾಡಿ ಇಳಿಸಿ ಅವರ ಸ್ಥಾನದಲ್ಲಿ ಬಿಜೆಪಿಯನ್ನು ನಿಯಂತ್ರಿಸುವ ಅಸಂವಿಧಾನಿಕ ಶಕ್ತಿಗಳ ಕುಲಬಾಂಧವನೊಬ್ಬನನ್ನು ಕರ್ನಾಟಕದ ಜನರ ತಲೆಯ ಮೇಲೆ ಹೇರುವ ಹುನ್ನಾರದ ಭಾಗವಾಗಿಯೇ ಕರ್ನಾಟಕದಲ್ಲಿ ಕುರುಬರ ಎಸ್ಟಿ ಮೀಸಲಾತಿ ಮತ್ತು ಲಿಂಗಾಯತ ಪಂಚಮಸಾಲಿಗಳ 2 ಎ ಮೀಸಲಾತಿ ಹೋರಾಟಗಳಿಗೆ ಕುಮ್ಮಕ್ಕು ನೀಡಲಾಯಿತು. ಬಿಜೆಪಿ ಶಾಸಕರು ಹಾದಿಬೀದಿಯಲ್ಲಿ ಯಡಿಯೂರಪ್ಪನವರನ್ನು ತೆಗಳುತ್ತ ತಿರುಗಲು ಗುಟ್ಟಾಗಿ ಉತ್ತೇಜನ ನೀಡಲಾಯಿತು ಎನ್ನುವ ಸಂಗತಿಗಳು ಅತ್ಯಂತ ಸಾಮಾನ್ಯ ಜನರಿಗೂ ತಿಳಿಯುವಂತಾದವು. ಸಂಶಯ ಬಾರದಂತೆ ಕೆಲವು ಆಯ್ದ ದೃಶ್ಯ ಮಾಧ್ಯಮಗಳ ಮುಖೇನ ಯಡಿಯೂರಪ್ಪ ಪುತ್ರನ ಆಡಳಿತದಲ್ಲಿನ ಹಸ್ತಕ್ಷೇಪದ ಕುರಿತು ಸರಣಿ ವರದಿಗಳು ಬರುವಂತೆ ನೋಡಿಕೊಳ್ಳಲಾದ ಸಂಗತಿಯೂ ಗುಟ್ಟಾಗಿ ಉಳಿಯಲಿಲ್ಲ. ಇಷ್ಟಾದರೂ ಯಡಿಯೂರಪ್ಪ ಇಳಿಯುವ ಲಕ್ಷಣಗಳು ಗೋಚರಿಸದಾದಾಗ ಐಟಿ, ಇಡಿ, ಆದಾಯ ತೆರಿಗೆ ದಾಳಿಗಳ ಸೂಕ್ಷ್ಮ ಬೆದರಿಕೆಯ ಅಸ್ತ್ರಗಳು ಕೂಡ ಪ್ರಯೋಗವಾಗಿರುವ ಸಾಧ್ಯತೆಗಳು ಗೋಚರಿಸಹತ್ತಿದ್ದವು. ಇದರ ಅಪಾಯವನ್ನು ಅರಿತುಕೊಂಡ ಯಡಿಯೂರಪ್ಪ ಕೊನೆಗೂ ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವ ನಿರ್ಧಾರ ಮಾಡಿದರೆಂದು ಕಾಣುತ್ತದೆ. ಹಾಗೊಂದು ವೇಳೆ ಇಳಿಯುವುದಾದಲ್ಲಿ ತಮ್ಮ ಪದಚ್ಯುತಿಗೆ ಕಾರಣರಾದವರನ್ನು ಮುಖ್ಯಮಂತ್ರಿ ಮಾಡಲು ಬಿಡಬಾರದೆಂದು ಯಡಿಯೂರಪ್ಪನವರು ನಿರ್ಧರಿಸಿಯೇ ಬಿಟ್ಟಿದ್ದರು. ಮುಂದಿನ ಚುನಾವಣೆಯನ್ನು ತಮ್ಮ ಮಗನ ನೇತೃತ್ವದಲ್ಲಿ ಎದುರಿಸುವ ತನಕ ತಮ್ಮ ಖಾಸಾ ಅನುಯಾಯಿ ಆರ್. ಅಶೋಕರನ್ನು ಮುಖ್ಯಮಂತ್ರಿ ಮಾಡುವ ಬೇಡಿಕೆ ಹೈಕಮಾಂಡ್ ಎದುರಿಗೆ ಯಡಿಯೂರಪ್ಪ ಮಂಡಿಸಿದ್ದರು. ಆದರೆ ಬಿಜೆಪಿ ಹೈಕಮಾಂಡ್ ತಲೆಯಲ್ಲಿ ತಮ್ಮನ್ನು ನಿಯಂತ್ರಿಸುವ ಅಸಂವಿಧಾನಿಕ ಶಕ್ತಿಗಳು ಶಿಫಾರಸ್ಸು ಮಾಡಿದ ವ್ಯಕ್ತಿಗಳ ಹೆಸರು ಇದ್ದವು ಎನ್ನುವುದು ಯಡಿಯೂರಪ್ಪನವರಿಗೆ ತಿಳಿದಿತ್ತು. ಅದನ್ನು ತಪ್ಪಿಸಲು ಯಡಿಯೂರಪ್ಪನವರು ಶತಾಯಗತಾಯ ಪ್ರಯತ್ನಿಸಿ ಯಶಸ್ವಿಯಾದರು. ►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..! ದಿಲ್ಲಿಯಿಂದ ಬೆಂಗಳೂರಿಗೆ ಬಂದು ರಾಜಿನಾಮೆ ಕೊಡುವ ಘೋಷಣೆ ಮಾಡಿದ ಯಡಿಯೂರಪ್ಪನವರು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಯಾವ ಶಕ್ತಿಗಳು ತಮ್ಮನ್ನು ಅಧಿಕಾರದಿಂದ ಇಳಿಸಲು ಯಶಸ್ವಿಯಾಗಿದ್ದವೊ ಆ ಶಕ್ತಿಗಳ ಕೈಗೆ ಅಧಿಕಾರ ಸಿಗದಂತೆ ತಡೆಯುವ ಕೆಲಸಕ್ಕೆ ಕೈಹಾಕಿದರು. ನಾಲ್ಕೈದು ದಶಕಗಳಿಂದ ಪಕ್ಷವನ್ನು ತಳಮಟ್ಟದಿಂದ ಕಟ್ಟಿದ ತಮ್ಮನ್ನು ಅಲಕ್ಷಿಸಿ ಹೈಕಮಾಂಡ್ ಯಾವ ನಿರ್ಧಾರವನ್ನು ತೆಗೆದುಕೊಳ್ಳುವಂತಿಲ್ಲ ಎನ್ನುವ ಸಂದೇಶ ರವಾನಿಸಲು ಯಡಿಯೂರಪ್ಪ ಸಜ್ಜಾದರು. ಅನಾಯಾಸವಾಗಿ ಅಧಿಕಾರದ ಗದ್ದುಗೆಯ ಕನಸು ಕಾಣುತ್ತಿದ್ದವರನ್ನು ದೂರವಿಡಲು ಮಠಾಧೀಶರ ಸಮಾವೇಶಗಳು ನಡೆಯತೊಡಗಿದವು. ಎಲ್ಲ ಬಗೆಯ ಒತ್ತಡ ತಂತ್ರಗಳು ಬಿಜೆಪಿ ಹೈಕಮಾಂಡಿನ ನಿದ್ದೆಗೆಡಿಸಿದವು. ಹೈಕಮಾಂಡ್ ತನ್ನ ನಿರ್ಧಾರವನ್ನು ಮರೆತು ಯಡಿಯೂರಪ್ಪನವರಿಗೆ ಶರಣಾಗತಿ ಆಗುವಂತ ವಾತಾವರಣ ಸೃಷ್ಠಿಸಲಾಯಿತು. ಬಿಜೆಪಿಯೊಳಗಿನ ಬಹುತೇಕ ಲಿಂಗಾಯತ ನಾಯಕರೆಲ್ಲ ಗುಪ್ತ ಸಮಾಲೋಚನೆಯ ಮೂಲಕ ತಮ್ಮ ಶ್ರಮದ ಫಲ ಅನಾಯಾಸವಾಗಿ ಬೇರೊಬ್ಬರಿಗೆ ದಕ್ಕಬಾರದೆನ್ನುವ ತಿರ್ಮಾನ ಮಾಡಿದ ಪ್ರಯತ್ನದ ಫಲ ಯಶಸ್ವಿಯಾಯಿತು. ಯಡಿಯೂರಪ್ಪನವರು ಕಳೆದ ಅವಧಿಯಲ್ಲಿ ಅನುಭವಿಸಿದ ಅವಮಾನದಿಂದ ಪಾಠ ಕಲಿತಿದ್ದರು. ಈ ಸಲ ಅವರು ಯಾವುದೇ ಅವಸರ ಮಾಡದೆ ಬಹಳ ಯೋಚಿಸಿ ಕಾರ್ಯತಂತ್ರವನ್ನು ಹೆಣೆದಿದ್ದರು. ಹೈಕಮಾಂಡ್ ತಲೆಯಲ್ಲಿದ್ದ ವ್ಯಕ್ತಿ ಹೋಗಲಿ, ಯಡಿಯೂರಪ್ಪ ಶಿಫಾರಸ್ಸು ಮಾಡಿದ ಆರ್. ಅಶೋಕರನ್ನು ಕೂಡ ಮುಖ್ಯಮಂತ್ರಿ ಮಾಡಲು ಹೈಕಮಾಂಡಿಗೆ ಆಗದೆಹೋಯಿತು. ಒಂದು ವೇಳೆ ಯಡಿಯೂರಪ್ಪ ಮಾತಿನಂತೆ ಅಶೋಕರನ್ನ ಮುಖ್ಯಮಂತ್ರಿ ಮಾಡಿದ್ದರೆ ಲಿಂಗಾಯತರಿಗೆ ಅಸಮಧಾನವಾಗುವಂತೆˌ ಅಥವಾ ಅಶೋಕರನ್ನು ಮಾಡದೆ ಹೋದರೆ ವಕ್ಕಲಿಗರಿಗೆ ಅಸಮಧಾನವಾಗುವಂತೆ ಯಡಿಯೂರಪ್ಪ ಹೆಣೆದ ಕಾರ್ಯತಂತ್ರದಿಂದ ಬಿಜೆಪಿ ಹೈಕಮಾಂಡ್ ಮತ್ತು ಅದನ್ನು ನಿಯಂತ್ರಿಸುವ ಅಸಂವಿಧಾನಿಕ ಶಕ್ತಿಗಳು ಅಕ್ಷರಶಃ ಕಂಗಾಲಾಗಿದ್ದವು. ಆರ್. ಅಶೋಕರ ಹೆಸರು ಯಡಿಯೂರಪ್ಪ ಹೈಕಮಾಂಡ್ ಎದುರಿಗೆ ತೇಲಿ ಬಿಟ್ಟು ಇಲ್ಲಿ ಮಠಾಧೀಶರ ಮೂಲಕ ಒತ್ತಡ ಹಾಕುವ ಮೂಲಕ ಮುಖ್ಯಮಂತ್ರಿ ಸ್ಥಾನದಿಂದ ಯಾರನ್ನು ಹೊರಗಿಡಬೇಕು ಮತ್ತು ಯಾರನ್ನು ಕೂರಿಸಬೇಕು ಎನ್ನುವುದನ್ನು ನಿರ್ಧರಿಸಿದ್ದರು ಎನ್ನುವ ಸಂಗತಿ ಸ್ಪಷ್ಟವಾಗುತ್ತದೆ. ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? ಯಡಿಯೂರಪ್ಪ ರಾಜಿನಾಮೆ ಕೊಡುವುದು ಖಾತ್ರಿಯಾಗುತ್ತಿದ್ದಂತೆ ಕನ್ನಡದ ವಿದ್ಯುನ್ಮಾನ ಮಾಧ್ಯಮಗಳ ಪುರೋಹಿತ ಪುಂಗವರು ಪುಳಕಿತರಾಗಿ ತಮ್ಮ ಕುಲಬಾಂಧವರಿಗೆ ಪಟ್ಟಕಟ್ಟಲು ಉತ್ಸುಕರಾಗಿ ಅತಿರಂಚಿತ ವರದಿಗಳನ್ನು ಬಿತ್ತರಿಸಲಾರಂಭಿಸಿದರು. ಆದರೆ ಯಡಿಯೂರಪ್ಪನವರ ತೆರೆಮರೆಯ ಕಾರ್ಯತಂತ್ರವೇ ಕೊನೆಗೆ ಜಯಿಸಿತ್ತು. ಆಗ ಈ ಮಾಧ್ಯಮ ಪುಂಗವರು ಲಿಂಗಾಯತ ನಾಯಕರೊಳಗೆ ವೈಮನಸ್ಸು ತರುವ ವರದಿಗಳನ್ನು ತೇಲಿಬಿಡಲಾರಂಭಿಸಿದರು. ಅರವಿಂದ್ ಬೆಲ್ಲದ ಮತ್ತು ಮುರುಗೇಶ್ ನಿರಾಣಿಯವರ ಹೆಸರನ್ನು ಯಡಿಯೂರಪ್ಪ ವಿರೋಧಿಸಿದರು ಎನ್ನುವಂತೆ ಸುದ್ದಿ ಹರಿದಾಡುವಂತೆ ವೈದಿಕವ್ಯಾಧಿ ಮಾದ್ಯಮಗಳು ವರದಿ ಮಾಡಲಾರಂಭಿಸಿದವು. ತಮ್ಮವನೊಬ್ಬನಿಗೆ ಪಟ್ಟ ತಪ್ಪಿದಾಗ ಅವುಗಳ ನಿರಾಶೆ ಹತಾಶೆಯ ರೂಪ ತಾಳಿತ್ತು ಎನ್ನುವುದು ಆ ವರದಿಗಳೇ ಹೇಳುತ್ತವೆ. ಹೀಗೆ ಯಡಿಯೂರಪ್ಪ ಸೋತು ಕೂಡ ಗೆಲುವನ್ನು ತಮ್ಮದಾಗಿಸಿಕೊಂಡರು. ತೆರೆಮರೆಯಲ್ಲಿ ತಮ್ಮ ಪದಚ್ಯುತಿಗೆ ಕಾರಣರಾದವರನ್ನು ಯಡಿಯೂರಪ್ಪ ಎಂದಿಗೂ ಮುಖ್ಯಮಂತ್ರಿಯಾಗಲು ಬಿಡುವುದಿಲ್ಲ ಎನ್ನುವ ಸಂಗತಿ ನಾವು ಅರಿಯಬೇಕಿದೆ ಮತ್ತು ಯಡಿಯೂರಪ್ಪನವರನ್ನು ಎರಡೂ ಅವಧಿಯಲ್ಲಿ ಸುಲಲಿತ ಆಡಳಿತ ಮಾಡಲು ಬಿಡದೆ ಕಾಡಿದವರ ಬಗ್ಗೆ ಅವರ ಅನುಯಾಯಿಗಳು ಎಚ್ಚರಿಕೆಯಿಂದ ಇರಬೇಕಾದದ್ದು ಮುಂದಿನ ದಿನಗಳಲ್ಲಿ ಖಂಡಿತ ಅಗತ್ಯವಿದೆ ಎನ್ನುವುದನ್ನು ನಾವು ಒತ್ತಿ ಹೇಳಬೇಕಿದೆ. ►►ಇದನ್ನೂ ಓದಿ: ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್! ►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ! ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ. ►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ ►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ? ►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ! ►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! ►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ? ►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್! ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. ►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ? ►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್ ►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ ►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) ►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?

Advertisement
Advertisement
Recent Posts
Advertisement