ಬರಹ: ನವೀನ್ ಸೂರಿಂಜೆ (ಲೇಖಕರು ಖ್ಯಾತ ಪತ್ರಕರ್ತರು, ಜನಪರ ಚಿಂತಕರು)
ವಿಠಲ ಮಲೆಕುಡಿಯರನ್ನು ಬಂಧಿಸಿದ್ದ ಇನ್ಸ್ ಸ್ಪೆಕ್ಟರ್ ಸಚಿನ್ ಲಾರೆನ್ಸ್ ರನ್ನು ವಕೀಲ ದಿನೇಶ್ ಹೆಗ್ಡೆ ಉಳೆಪಾಡಿಯವರು ಪಾಟಿ ಸವಾಲಿಗೆ ಒಳಪಡಿಸಿದ ದಿನ ಬರೆದ ಬರಹ. ಕೋರ್ಟ್ ಕಲಾಪ ಹೇಗೆ ನಡೆಯಿತು ಎಂದು ತಿಳಿಯಲು ಬಯಸುವವರಿಗೆ ಉಪಯೋಗಬಹುದು. (ಸರಕಾರಗಳ ಒತ್ತಡಕ್ಕೆ ಬಿದ್ದೋ, ಸ್ಥಾಪಿತ ಹಿತಾಸಕ್ತಿಗಳ ಒತ್ತಡಕ್ಕೊ ಮಣಿದು ಹೋರಾಟಗಾರರ ಮೇಲೆ ನಕ್ಸಲ್ ಕೇಸು ದಾಖಲಿಸುವ ಪೊಲೀಸರು ನ್ಯಾಯಾಲಯದಲ್ಲಿ ಉತ್ತರಕ್ಕಾಗಿ ತಡಕಾಡಬೇಕಾಗುತ್ತದೆ ಎಂಬುದಕ್ಕೆ ವಿಠಲ ಮಲೆಕುಡಿಯ ಪ್ರಕರಣದ ವಿಚಾರಣೆ ನಿದರ್ಶನ.)
ಪತ್ರಿಕೋಧ್ಯಮ ವಿದ್ಯಾರ್ಥಿಯಾಗಿದ್ದ ವಿಠಲ ಮಲೆಕುಡಿಯರನ್ನು ಪೊಲೀಸರು 2012 ರಲ್ಲಿ ಬಂಧಿಸಿದ್ದರು. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಮೂಲನಿವಾಸಿಗಳನ್ನು ಒಕ್ಕಲೆಬ್ಬಿಸುವ ಜಿಲ್ಲಾಡಳಿತದ ಕ್ರಮದ ವಿರುದ್ದ ಹೋರಾಟ ನಡೆಸುತ್ತಿದ್ದ ಮಲೆಕುಡಿಯ ಸಮುದಾಯದಲ್ಲಿ ವಿಠಲ ಮಲೆಕುಡಿಯ ಒಬ್ಬನೇ ಕಾಲೇಜು ಮೆಟ್ಟಿಲು ಹತ್ತಿದವರು. ಬಲವಂತವಾಗಿ ಮಲೆಕುಡಿಯ ಆದಿವಾಸಿ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನಕ್ಕೆ ಅಡ್ಡಿಯಾಗಿದ್ದೇ ವಿಠಲರ ವಿದ್ಯಾಬ್ಯಾಸ ಮತ್ತು ನಗರದ ಎಡ ಹೋರಾಟಗಾರರ ಸಂಪರ್ಕ. ಇದೇ ಕಾರಣಕ್ಕಾಗಿ ವಿದ್ಯಾರ್ಥಿಯಾಗಿದ್ದ ವಿಠಲರ ವಿರುದ್ದ ನಕ್ಸಲ್ ಆರೋಪ ಹೊರಿಸಿ ತಂದೆಯ ಜೊತೆಗೆ ಬಂಧಿಸಲಾಗಿತ್ತು. ಮೂರು ತಿಂಗಳ ಬಂಧನದ ಬಳಿಕ ವಿಠಲ ಜಾಮೀನಿನ ಮೇಲೆ ಹೊರ ಬಂದಿದ್ದರು. ಇದೀಗ 2019 ನವೆಂಬರ್ 25 ರಿಂದ ಈ ಪ್ರಕರಣದ ವಾದ ಪ್ರತಿವಾದ ನ್ಯಾಯಾಲಯದಲ್ಲಿ ಆರಂಭವಾಗಿದೆ.
ವಿಠಲ ಮಲೆಕುಡಿಯರನ್ನು ಬಂಧಿಸಿದಾಗ ನಕ್ಸಲ್ ನಿಗ್ರಹ ಪಡೆಯಲ್ಲಿ ಪೊಲೀಸ್ ಇನ್ಸ್ ಸ್ಪೆಕ್ಟರ್ ಆಗಿದ್ದ ಸಚಿನ್ ಲಾರೆನ್ಸ್ ಅವರನ್ನು ಪೊಲೀಸರ ಪರವಾಗಿ ಸರಕಾರಿ ವಕೀಲರು ಪ್ರಶ್ನಿಸಿದರು. “ನಕ್ಸಲ್ ನಿಗ್ರಹ ಪಡೆಯ ಕಮಾಂಡರ್ ರವರು ಸೂಚಿಸಿದಂತೆ ನಾನು ಪಂಚ ಸಾಕ್ಷಿಗಳ ಜೊತೆ 2012 ಮಾರ್ಚ್ 03 ರಂದು ಬೆಳಿಗ್ಗೆ 8 ಗಂಟೆಗೆ ಕುತ್ಲೂರು ಕಾಡಿನಲ್ಲಿರುವ ವಿಠಲ ಮಲೆ ಕುಡಿಯರ ಮನೆಗೆ ಹೋಗಿದ್ದೆವು. ಮನೆಯಲ್ಲಿ ವಿಠಲ ಇರಲಿಲ್ಲ. ವಿಠಲನ ತಂದೆ ಮತ್ತು ತಾಯಿ ಇದ್ದರು. ಮನೆಯ ಒಂದು ಕೋಣೆಯಲ್ಲಿ ನೇತು ಹಾಕಿದ್ದ ಚೀಲದಲ್ಲಿ ನಾಲ್ಕು ಬಟ್ಟಲು, ಎರಡು ದೊಡ್ಡ ಚೊಂಬು, ಎರಡು ಚಿಕ್ಕ ಚೊಂಬು, ಐದು ಸ್ಟೀಲ್ ಪಿಂಗಾಣಿ, ಒಂದು ಸ್ಟೀಲ್ ಗ್ಲಾಸ್, ಒಂದು ಚೂರಿ, ಸಕ್ಕರೆ, ಬೆಂಕಿಪೊಟ್ಟಣ, ಕಾಫಿ ಪುಡಿ ಸಿಕ್ಕಿತು. ಪೊಲೀಸ್ ಸಿಬ್ಬಂದಿಗಳ ಜೊತೆ ಮತ್ತೊಂದು ಕೋಣೆಯನ್ನು ಸರ್ಚ್ ಮಾಡಿದಾಗ ಅಲ್ಲಿ ಕತ್ತಿ ಬಂದೂಕಿನ ಚಿತ್ರವುಳ್ಳ ಬೆನಾಕ್ಯುಲರ್ ಇತ್ತು. ಆ ಬೆನಾಕ್ಯೂಲರ್ ಲೆನ್ಸ್ ನಲ್ಲಿ ಮೇಡ್ ಇನ್ ರಷ್ಯಾ ಎಂದು ಬರೆದಿತ್ತು. ಕೆಂಪು ಬಣ್ಣದ ಟಾರ್ಚ್ ಕೂಡಾ ಅದೇ ಕೋಣೆಯಲ್ಲಿ ಪತ್ತೆಯಾಯಿತು. ಮನೆಯ ಹಾಲ್ ನಲ್ಲಿ ತೂಗು ಹಾಕಿದ್ದ ಬ್ಯಾಗ್ ನಲ್ಲಿ ನೋಕಿಯಾ ಮೊಬೈಲ್, ಒಂದು ಚಾರ್ಜರ್, ಕೆಲವು ಪೇಪರ್ ಕಟ್ಟಿಂಗ್ಸ್, ಮತದಾನ ಬಹಿಷ್ಕರಿಸಲು ಬರೆದಿರುವ ಕರಪತ್ರ, ನಕ್ಸಲ್ ವಿಚಾರವಾಗಿ ಬಂದಿರುವ ವರದಿಗಳ ಪೇಪರ್ ಕಟ್ಟಿಂಗ್ಸ್ ಕಂಡು ಬಂದವು. ಮನೆಯ ಅಟ್ಟವನ್ನು ಪರಿಶೀಲಿಸಿದಾಗ ಮೂರು ಕಂಬಳಿಗಳು ಸಿಕ್ಕಿದವು. ಮೂರು ಕಂಬಳಿಗಳ ಪೈಕಿ ಒಂದು ಕಂಬಳಿಯೊಳಗೆ ಭಗತ್ ಸಿಂಗ್ ಪುಸ್ತಕ ಇತ್ತು. ಮನೆಯಲ್ಲಿ ನಡೆಯುತ್ತಿದ್ದ ಶೋಧ ಕಾರ್ಯ ತಿಳಿದು ವಿಠಲ ಮಲೆಕುಡಿಯ ಮನೆಗೆ ಬರುತ್ತಾನೆ. ವಿಠಲ ಮಲೆಕುಡಿಯ ಮತ್ತು ತಂದೆಯನ್ನು ನಕ್ಸಲ್ ನಿಗ್ರಹ ಪಡೆಯ ಪೊಲೀಸರು ಬಂಧಿಸಿ ವೇಣೂರು ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿದೆ.” ಎಂದು ನ್ಯಾಯಾಧೀಶರ ಎದುರು ನಕ್ಸಲ್ ನಿಗ್ರಹ ಪಡೆಯ ಇನ್ಸ್ ಸ್ಪೆಕ್ಟರ್ ಆಗಿದ್ದ ಸಚಿನ್ ಲಾರೆನ್ಸ್ ಸಾಕ್ಷಿ ನುಡಿದರು.
ಪೊಲೀಸರ ಪರ ಸರ್ಕಾರಿ ವಕೀಲರ ವಾದ ಮುಗಿದ ಬಳಿಕ ವಿಠಲ ಮಲೆಕುಡಿಯನ ಪರ ಮಾನವ ಹಕ್ಕು ವಕೀಲ ದಿನೇಶ್ ಹೆಗ್ಡೆ ಉಳೆಪಾಡಿಯವರು ಇನ್ಸ್ ಸ್ಪೆಕ್ಟರ್ ಸಚಿನ್ ಲಾರೆನ್ಸ್ ರನ್ನು ಪಾಟಿ ಸವಾಲಿಗೆ ಗುರಿಪಡಿಸಿದರು. ಪ್ರಶ್ನೊತ್ತರ ಹೀಗಿತ್ತು :
ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ – ವಿಠಲ ಮಲೆಕುಡಿಯನ ಮನೆ ಸರ್ಚ್ ಮಾಡಲು ನಕ್ಸಲ್ ನಿಗ್ರಹ ಪಡೆಯ ಕಮಾಂಡರ್ ಲಿಖಿತ ಆದೇಶ ನೀಡಿದ್ದರೆ?
ಇನ್ಸ್ ಸ್ಪೆಕ್ಟರ್ ಸಚಿನ್ ಲಾರೆನ್ಸ್ – ಲಿಖಿತ ಆದೇಶ ಇಲ್ಲ. ನಾವು 15 ಮಂದಿ ಪೊಲೀಸ್ ಸಿಬ್ಬಂದಿ ಇದ್ದೆವು. ಶೋಧ ಕಾರ್ಯ ಮತ್ತು ಕರ್ತವ್ಯಕ್ಕೆ ನಮ್ಮನ್ನು ವಿಠಲನ ಮನೆಗೆ ನಿಯೋಜಿಸಿರುವ ಬಗ್ಗೆ ಯಾವ ದಾಖಲೆಗಳೂ ಇಲ್ಲ.
ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ – ವಿಠಲನ ಮನೆಯನ್ನು ಪ್ರವೇಶಿಸುವ ಮೊದಲು ಮನೆಯವರಿಗೆ ಯಾವುದಾದರೂ ರೀತಿ ಮಾಹಿತಿ ನೀಡಿದ್ದೀರಾ ?
ಇನ್ಸ್ ಸ್ಪೆಕ್ಟರ್ ಸಚಿನ್ ಲಾರೆನ್ಸ್ – ಇಲ್ಲ
ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ – ನೀವು ವಶಪಡಿಸಿಕೊಂಡ ಬಹುತೇಕ ವಸ್ತುಗಳು ಕುಟುಂಬವೊಂದರ ದಿನಬಳಕೆಯ ವಸ್ತುಗಳು ತಾನೆ ?
ಇನ್ಸ್ ಸ್ಪೆಕ್ಟರ್ ಸಚಿನ್ ಲಾರೆನ್ಸ್ – ಹೌದು ನಿಜ
ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ – ವಿಠಲನ ಮನೆಯಿಂದ ವಶಪಡಿಸಿಕೊಂಡ ಬೆನಾಕ್ಯುಲರ್ ಪೊಲೀಸರು ಕೂಡಾ ಬಳಸ್ತಾರೆ ಅಲ್ವಾ ?
ಇನ್ಸ್ ಸ್ಪೆಕ್ಟರ್ ಸಚಿನ್ ಲಾರೆನ್ಸ್ – ಹೌದು. ನಕ್ಸಲ್ ನಿಗ್ರಹ ಪಡೆ ಸಿಬ್ಬಂದಿ ಕೂಡಾ ಬೆನಾಕ್ಯೂಲರ್ ಬಳಸುತ್ತಾರೆ.
ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ – ನಕ್ಸಲ್ ಚಟುವಟಿಕೆಗೆ ಸಂಬಂಧಿಸಿದ ಪೇಪರ್ ಕಟ್ಟಿಂಗ್ಸ್ ವಿಠಲನ ಮನೆಯಲ್ಲಿ ಸಿಕ್ತು ಅಂತೀರಿ. ಈ ರೀತಿ ನಕ್ಸಲ್ ಗೆ ಸಂಬಂಧಿಸಿದ ಪೇಪರ್ ಕಟ್ಟಿಂಗ್ ನಕ್ಸಲ್ ನಿಗ್ರಹ ಪಡೆಯ ಬಳಿ ಸದಾ ಕಾಲ ಸಂಗ್ರಹಿಸಿಟ್ಟಿರುತ್ತೀರಿ ತಾನೆ ?
ಇನ್ಸ್ ಸ್ಪೆಕ್ಟರ್ ಸಚಿನ್ ಲಾರೆನ್ಸ್ – ಹೌದು. ನಾವೂ ಕೂಡಾ ನಕ್ಸಲ್ ಚಟುವಟಿಕೆಯ ಸುದ್ದಿ ಪೇಪರ್ ನಲ್ಲಿ ಬಂದರೆ ಸಂಗ್ರಹಿಸಿ ಇಡುತ್ತೇವೆ.
ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ – ನೀವು ವಿಠಲನ ಮನೆಯಲ್ಲಿ ವಶಪಡಿಸಿಕೊಂಡ ದಾಖಲೆಗಳನ್ನು ಸಂಪೂರ್ಣ ಓದಿದ್ದೀರಾ ?
ಇನ್ಸ್ ಸ್ಪೆಕ್ಟರ್ ಸಚಿನ್ ಲಾರೆನ್ಸ್ – ಇಲ್ಲ
ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ – ವಿಠಲನ ಮನೆಯಲ್ಲಿ ಸಿಕ್ಕ ಕಾಗದಗಳಲ್ಲಿ ಎಲ್ಲಾದರೂ ನಕ್ಸಲರನ್ನು ಬೆಂಬಲಿಸಿ ಎಂದು ಬರೆದಿತ್ತಾ ?
ಇನ್ಸ್ ಸ್ಪೆಕ್ಟರ್ ಸಚಿನ್ ಲಾರೆನ್ಸ್ – ಇಲ್ಲ. ನಕ್ಸಲರನ್ನು ಬೆಂಬಲಿಸುವ ಬಗ್ಗೆ ನಿರ್ಧಿಷ್ಟ ನಮೂದು ಇಲ್ಲ.
ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ – ವಿಠಲನ ಮನೆಯಲ್ಲಿ ವಶಪಡಿಸಿಕೊಂಡ ಕರಪತ್ರದಲ್ಲಿ ಕುತ್ಲೂರು ಗ್ರಾಮದ ಸ್ಥಳೀಯ ಸಮಸ್ಯೆಗಳನ್ನು ಸರಿ ಪಡಿಸಿ ಎಂದು ಬರೆದಿತ್ತು.
ಇನ್ಸ್ ಸ್ಪೆಕ್ಟರ್ ಸಚಿನ್ ಲಾರೆನ್ಸ್ – ಹೌದು. ನಿಜ.
ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ – ಅದೇ ಕರಪತ್ರದಲ್ಲಿ ಪೊಲೀಸರು ಗ್ರಾಮಸ್ಥರಿಗೆ ನೀಡುತ್ತಿದ್ದ ಕಿರುಕುಳದ ಬಗ್ಗೆಯೂ ಬರೆದಿತ್ತು.
ಇನ್ಸ್ ಸ್ಪೆಕ್ಟರ್ ಸಚಿನ್ ಲಾರೆನ್ಸ್ – ಹೌದು. ಪೊಲೀಸರ ಕಿರುಕುಳದ ಬಗ್ಗೆ ಬರೆಯಲಾಗಿತ್ತು.
ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ – ಪೊಲೀಸರು ಕಿರುಕುಳ ನೀಡುವುದನ್ನು ನಿಲ್ಲಿಸುವವರೆಗೆ ಚುನಾವಣೆ ಬಹಿಷ್ಕರಿಸೋಣಾ ಎಂದು ಕರಪತ್ರದಲ್ಲಿ ಬರೆಯಲಾಗಿತ್ತು.
ಇನ್ಸ್ ಸ್ಪೆಕ್ಟರ್ ಸಚಿನ್ ಲಾರೆನ್ಸ್ – ಹೌದು. ನಿಜ.
ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ – ವಿಠಲನ ಮನೆಯಲ್ಲಿ ವಸ್ತುಗಳನ್ನು ವಶಪಡಿಸಿ, ಪೊಲೀಸ್ ಠಾಣೆಗೆ ಕರೆದೊಯ್ದಿದ್ದು ನಕ್ಸಲ್ ನಿಗ್ರಹ ಪಡೆ. ಆದರೆ ಕೇಸು ದಾಖಲಿಸಿರುವುದು, ವಸ್ತು ವಶಪಡಿಸಿರುವುದನ್ನು ಒಬ್ಬನೇ ವ್ಯಕ್ತಿ ಬರೆದಿದ್ದಾನೆ. ಇದು ಹೇಗೆ ಸಾಧ್ಯ?
ಇನ್ಸ್ ಸ್ಪೆಕ್ಟರ್ ಸಚಿನ್ ಲಾರೆನ್ಸ್ – ನಕ್ಸಲ್ ನಿಗ್ರಹ ಪಡೆಯ ಪೊಲೀಸರಿಗೆ ಮಹಜರನ್ನು ಬರೆಯಲು ಬರುವುದಿಲ್ಲ. ಹಾಗಾಗಿ ಸ್ಥಳದಲ್ಲಿ ರಫ್ ಪ್ರತಿ ಸಿದ್ದಗೊಳಿಸಲಾಯಿತು. ವೇಣೂರು ಠಾಣೆಗೆ ತಲುಪಿದ ಬಳಿಕ ಅಲ್ಲಿನ ಸಿಬ್ಬಂದಿ ದಾಖಲೆ ಸಿದ್ದಪಡಿಸಿದರು.
ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ – ಈ ದಾಖಲೆಗಳನ್ನು ಪೊಲೀಸ್ ಠಾಣೆಯಲ್ಲಿ ಬರೆದವರು ಯಾರು ?
ಇನ್ಸ್ ಸ್ಪೆಕ್ಟರ್ ಸಚಿನ್ ಲಾರೆನ್ಸ್ – ದಾಖಲೆಗಳನ್ನು ಸಿದ್ದಪಡಿಸಿದ ಪೊಲೀಸ್ ಸಿಬ್ಬಂದಿ ಯಾರೆಂದು ನೆನಪಿಲ್ಲ
ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ – ವಿಠಲನ ಮನೆಯಲ್ಲಿ ವಸ್ತುಗಳನ್ನು ವಶಪಡಿಸಿ ಮಾಡಿದ ಮಹಜರು ದಾಖಲೆ ನ್ಯಾಯಾಲಯದ ಮುಂದೆ ಇಲ್ಲ
ಇನ್ಸ್ ಸ್ಪೆಕ್ಟರ್ ಸಚಿನ್ ಲಾರೆನ್ಸ್ – ನಿಜವಿರಬಹುದು
ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ – ವಿಠಲ ಮಲೆಕುಡಿಯ ಮತ್ತು ಅವನ ತಂದೆಯನ್ನು ಬಂಧಿಸಿರುವ ಬಗ್ಗೆ ಸ್ಥಳದಲ್ಲೇ ದಾಖಲೆ ಮಾಡಿಲ್ಲ
ಇನ್ಸ್ ಸ್ಪೆಕ್ಟರ್ ಸಚಿನ್ ಲಾರೆನ್ಸ್ – ಹೌದು. ಬಂಧನದ ದಾಖಲೆ ಸ್ಥಳದಲ್ಲೇ ಮಾಡಿಲ್ಲ
ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ – ಬಂಧನಕ್ಕೆ ಒಳಗಾದಾಗ ವಿಠಲ ಮಲೆಕುಡಿಯನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋಧ್ಯಮ ಅಧ್ಯಯನ ಮಾಡುತ್ತಿದ್ದನು. ಈ ಸಂಧರ್ಭದಲ್ಲಿ ಕುತ್ಲೂರಿನ ಪರಿಸರದಲ್ಲಿ ಪೊಲೀಸರಿಂದ ಜನರಿಗೆ ಆಗುತ್ತಿದ್ದ ಕಿರುಕುಳವನ್ನು ವರದಿ ಮಾಡುತ್ತಿದ್ದನು. ಟಿವಿ ಮಾಧ್ಯಮಗಳಲ್ಲಿ ಸುದ್ದಿ ಮಾಡುತ್ತಿದ್ದನು.
ಇನ್ಸ್ ಸ್ಪೆಕ್ಟರ್ ಸಚಿನ್ ಲಾರೆನ್ಸ್ – ಹೌದು
ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ – ಭಗತ್ ಸಿಂಗ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂಬುದು ಗೊತ್ತಾ ?
ಇನ್ಸ್ ಪೆಕ್ಟರ್ ಸಚಿನ್ ಲಾರೆನ್ಸ್ – ಹೌದು. ಭಗತ್ ಸಿಂಗ್ ಸ್ವಾತಂತ್ರ್ಯ ಹೋರಾಟಗಾರ
ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ – ಭಗತ್ ಸಿಂಗ್ ಪುಸ್ತಕವನ್ನು ಯಾರು ಬೇಕಾದರೂ ಓದಬಹುದು. ಅದು ಅಪರಾಧ ಅಲ್ಲ
ಇನ್ಸ್ ಸ್ಪೆಕ್ಟರ್ ಸಚಿನ್ ಲಾರೆನ್ಸ್ – ನಿಜ. ಅಪರಾಧವಲ್ಲ
ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ – ಚುನಾವಣೆಯ ಸಂಧರ್ಭದಲ್ಲಿ ಊರಿನ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಪ್ರತಿಭಟಿಸುವುದು ಅಪರಾಧವಲ್ಲ
ಇನ್ಸ್ ಸ್ಪೆಕ್ಟರ್ ಸಚಿನ್ ಲಾರೆನ್ಸ್ – ನಿಜ. ಅಪರಾಧವಲ್ಲ
ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ – ನೀವು ವಿಠಲನ ಮನೆಯಿಂದ ನಕ್ಸಲ್ ಸಂಬಂಧಿಸಿದ ಪತ್ರಿಕಾ ವರದಿಗಳ ಪೇಪರ್ ಕಟ್ಟಿಂಗ್ ವಶಪಡಿಸಿಕೊಂಡು ಎಫ್ ಐಆರ್, ಆರೋಪ ಪಟ್ಟಿಯಲ್ಲಿ ದಾಖಲಿಸಿದ್ದೀರಿ. ಆತ ಸಂಗ್ರಹಿಸಿಟ್ಟುಕೊಂಡಿದ್ದ ಪತ್ರಿಕಾ ವರದಿಗಳ ವಿರುದ್ದ ಯಾವುದಾದರೂ ಠಾಣೆಯಲ್ಲಿ ದೂರು ದಾಖಲಾಗಿದೆಯೆ ?
ಇನ್ಸ್ ಸ್ಪೆಕ್ಟರ್ ಸಚಿನ್ ಲಾರೆನ್ಸ್ – ಇಲ್ಲ. ವಿಠಲನ ಮನೆಯಲ್ಲಿ ಸಿಕ್ಕ ಪೇಪರ್ ಕಟ್ಟಿಂಗ್ ನಲ್ಲಿರು ಸುದ್ದಿಗಳ ಬಗ್ಗೆ ಯಾವ ಠಾಣೆಯಲ್ಲೂ ಪ್ರಕರಣ ದಾಖಲಾಗಿಲ್ಲ
ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ – ಕುತ್ಲೂರಿನ ಮಲೆಕುಡಿಯರು ವಿದ್ಯುತ್ ಗಾಗಿ ಸೋಲಾರ್ ಸಿಸ್ಟಮ್ ಹಾಕಿದ್ದಾರೆ. ನಕ್ಸಲ್ ಚಟುವಟಿಕೆಗೆ ಬಳಸುತ್ತಿದ್ದ ಚಾರ್ಜರ್ ಎಂದು ಪೊಲೀಸರು ವಶಪಡಿಸಿಕೊಂಡ ಚಾರ್ಜರ್ ಸೋಲಾರ್ ದೀಪದ ಚಾರ್ಜರ್ ಆಗಿದೆ
ಇನ್ಸ್ ಸ್ಪೆಕ್ಟರ್ ಸಚಿನ್ ಲಾರೆನ್ಸ್ – ನಿಜ. ನಾವು ವಶಪಡಿಸಿಕೊಂಡ ಚಾರ್ಜರ್ ಸೋಲಾರ್ ಚಾರ್ಜರ್ ಆಗಿದೆ.
ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ – ರಾಜಕೀಯ ಕಾರಣಕ್ಕಾಗಿ ಮತ್ತು ಪೊಲೀಸರ ತಪ್ಪು ಮುಚ್ಚಿ ಹಾಕುವ ಉದ್ದೇಶದಿಂದ ವಿದ್ಯಾರ್ಥಿಯಾಗಿದ್ದ ವಿಠಲ ಮಲೆಕುಡಿಯ ಮತ್ತು ಅವನ ತಂದೆಯ ವಿರುದ್ದ ನಕ್ಸಲ್ ಪ್ರಕರಣ ದಾಖಲಿಸಿದ್ದೀರಿ
ಇನ್ಸ್ ಸ್ಪೆಕ್ಟರ್ ಸಚಿನ್ ಲಾರೆನ್ಸ್ – ಸುಳ್ಳು
ವಿಠಲ ಮಲೆಕುಡಿಯ ನಕ್ಸಲ್ ಚಟುವಟಿಕೆ ಮಾಡುತ್ತಿದ್ದ ಎಂದು ದೇಶದ್ರೋಹದ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಮುಗ್ದ, ಅನಕ್ಷರಸ್ಥ ಆದಿವಾಸಿ ಮಲೆಕುಡಿಯರನ್ನು ಒಕ್ಕಲೆಬ್ಬಿಸುವ ಸರ್ಕಾರದ ಪ್ರಕ್ರಿಯೆಗೆ ವಿಠಲ ಮಲೆಕುಡಿಯ ಅಡ್ಡಿಯಾಗಿದ್ದ ಎಂಬ ಕಾರಣಕ್ಕೆ ಆತನ ಮೇಲೆ ನಕ್ಸಲ್ ಆರೋಪ ಹೊರಿಸಿ ಬಂಧಿಸಲಾಗಿತ್ತು. ವಿಠಲ ನಕ್ಸಲ್ ಚಟುವಟಿಕೆಗಳಿಗೆ ಬಳಸುತ್ತಿದ್ದ ಎಂದು ಪೊಲೀಸರಿಂದ ಆರೋಪಿಸಿ ವಶಪಡಿಸಲಾದ ಎಲ್ಲಾ ವಸ್ತುಗಳು ನಕ್ಸಲ್ ಚಟುವಟಿಕೆಗೆ ಸಂಬಂಧಿಸಿದ್ದಲ್ಲ ಎಂದು ಖುದ್ದು ನಕ್ಸಲ್ ನಿಗ್ರಹ ಪಡೆಯ ಇನ್ಸ್ ಸ್ಪೆಕ್ಟರ್ ಸಚಿನ್ ಲಾರೆನ್ಸ್ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದಾರೆ.
ಒಂದೊಂದು ಬಾರಿ ನ್ಯಾಯಾಲಯಗಳು ಭರವಸೆಯ ಬೆಳಕಿನಂತೆ ಕಾಣಲು ವಕೀಲ ದಿನೇಶ್ ಹೆಗ್ಡೆಯಂತವರು ಕಾರಣರಾಗುತ್ತಾರೆ. ವಿಠಲ ಬಂಧನವಾದಾಗ ಆತ ಯಾರೆಂದೇ ದಿನೇಶ್ ಹೆಗ್ಡೆ ಉಳೆಪಾಡಿಯವರಿಗೆ ತಿಳಿದಿರಲಿಲ್ಲ. ಆದಿವಾಸಿಗಳು, ಅರಣ್ಯ ಹಕ್ಕು ಕಾಯ್ದೆ, ಕುದುರೇಮುಖ ರಾಷ್ಟ್ರೀಯ ಉದ್ಯಾನವನ ಯೋಜನೆ, ಒಕ್ಕಲೆಬ್ಬಿಸುವಿಕೆ…. ಹೀಗೆ ಎಲ್ಲವನ್ನೂ ಅಧ್ಯಯನ ಮಾಡಿ ಕಳೆದ 7 ವರ್ಷಗಳಿಂದ ನಿರಂತರವಾಗಿ ಆದಿವಾಸಿ ಮಲೆಕುಡಿಯರ ಜೊತೆ ನಿಂತಿದ್ದಾರೆ. ಒಂದು ರೂಪಾಯಿ ಫೀಸನ್ನೂ ಪಡೆಯದೆ ಮಲೆಕುಡಿಯರ ವಿರುದ್ದವಿರುವ ನಕ್ಸಲ್ ಪ್ರಕರಣದಲ್ಲಿ ನ್ಯಾಯಾಂಗ ಹೋರಾಟ ನಡೆಸುತ್ತಿದ್ದಾರೆ. ಇಂತಹ ವಕೀಲರು, ಹೋರಾಟಗಾರರಿಂದಲೇ ಪ್ರಜಾಪ್ರಭುತ್ವ ಇನ್ನೂ ಉಸಿರಾಡುತ್ತಿದೆ.
ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ:
►► ನೀವು ಈ ಕೆಳಗಿನ ಲೇಖನಗಳನ್ನು ಓದಿಲ್ಲವೇ? ಅಗತ್ಯವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.
►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ.
►►ಎಳೆಮಕ್ಕಳ, ವಿದ್ಯಾರ್ಥಿಗಳ ಪ್ರಾಣಕ್ಕೆ ಮಾರಕವಾದ ಟೇಸ್ಟಿಂಗ್ ಪೌಡರ್ ಅನ್ನು ಸರ್ಕಾರ ಅದೇಕೆ ನಿಷೇಧಿಸುತ್ತಿಲ್ಲ?
►► ‘ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ!
►►ಭಾರತದಲ್ಲಿ ದಿಢೀರ್ ಜನಪ್ರಿಯರಾಗಲು ಇರುವ ಸರಳ ಮಾರ್ಗ ಯಾವುದು ಗೊತ್ತೇ?
►► ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ.
►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ?
►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?
►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ?
►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.!
►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್!
►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ!
►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ?
►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ?
►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ.
►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ
►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ)
►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ?
►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..!
►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ!
►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ?
►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್!
►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ?
►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು.
►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು?
►►'ಕೋವಿಡ್ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್!
►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ.
►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ?
►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್
►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ
►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್ ಚಂದ್ರ ಶೆಟ್ಟಿ (ವಿಡಿಯೋ ನೋಡಿ)
►►ಖಾಸಗೀಕರಣದ ಹಿಂದಿನ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ
►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?
►► *ಸ್ವಯಂ ಘೋಷಿತ ರಾಷ್ಟ್ರೀಯವಾದಿ ಸಂಘಟನೆ ಆರೆಸ್ಸೆಸ್, ಸ್ವಾತಂತ್ರ್ಯಾ ನಂತರ ಬರೋಬ್ಬರಿ ಮೂರು ಬಾರಿ ನಿಷೇಧಕ್ಕೊಳಗಾಗಲು ಕಾರಣಗಳೇನು?*
►► *ನೋಟುಬ್ಯಾನ್ ಮಾಡಿದ ನಂತರ ಪ್ರಧಾನಿ ಮೋದಿಯವರು, ಟೋಕಿಯೋದಲ್ಲಿ ಭಾರತದ ಜನರನ್ನು ಗೇಲಿಮಾಡಿ ಮಾಡಿದ ಭಾಷಣದ ಅಪರೂಪದ ವಿಡಿಯೋ.*
►►ಸಂಘಿಬಾನಿಗಳ ಆಡಳಿತದಲ್ಲಿ ಸಂವಿಧಾನ ಬದಲಾಗುತ್ತಾ? ಬದಲಾದರೆ ಏನೇನಾಗುತ್ತೆ ? ಮಿಸ್ ಮಾಡ್ದೆ ಈ ಲೇಖನ ಓದಿ.. ವಿಡಿಯೋ ನೋಡಿ!
►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು?
►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ!
►►ಸ್ವಾತಂತ್ರ ಹೋರಾಟವನ್ನು ಹತ್ತಿಕ್ಕಲು ಬ್ರಿಟೀಷರು, ಸಾವರ್ಕರ್ ರನ್ನು ದಾಳವಾಗಿ ಬಳಸಿದ್ದರೇ?
►►9 ಜನ್ಮದಲ್ಲಿ ಸ್ವರ್ಗಸುಖ ಸಿಗುತ್ತದೆ ಎಂದು ಗೌರಿಯನ್ನು ಕೊಲೆ ಮಾಡಿದ್ದ ಹಂತಕರು.. ತಾಲೀಬಾನ್, ಐಸಿಸ್ ಗಿಂತಲೂ ಅಸಹ್ಯವಾದ ಸಿದ್ದಾಂತವೇ ಕೊಲೆಗೆ ಕಾರಣ
►►ಸ್ವತಂತ್ರ ಭಾರತದ ಇತಿಹಾಸದಲ್ಲಿ ದಾಖಲೆಯಾಗುಳಿವ ಮೋದಿ ಸಾಧನೆಗಳು: ಮೋದಿ ವಿರೋಧಿಗಳು ಮತ್ತು ಬೆಂಬಲಿಗರು ತಿಳಿದುಕೊಳ್ಳಲೇ ಬೇಕಾದ ನಗ್ನಸತ್ಯಗಳು!
►►ಕಾಂಗ್ರೆಸ್‌ನಲ್ಲಿ ಪ್ರಮೋಷನ್ ಸಿಗಬೇಕಾದರೆ ಜೈಲಿಗೆ ಹೋಗಬೇಕು’ ಎಂದಿರುವ ಬಿಜೆಪಿ ನಾಯಕ ಸಿ.ಟಿ ರವಿಗೊಂದು ಬಹಿರಂಗ ಪತ್ರ
►►ಅಫ್ಘಾನಿಸ್ತಾನದ ಬೆಳವಣಿಗೆಗಳು ಸಾಬೀತುಪಡಿಸುತ್ತಿರುವುದು ಮೋದಿ ಸರ್ಕಾರದ ಸಿಎಎ ಕಾಯಿದೆಯ ದೂರದೃಷ್ಟಿಯನ್ನೋ ಅಥವಾ ಸಂಘೀಬಾನಿಗಳ ಧೂರ್ತತನವನ್ನೋ?
►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ?
►►ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ.
►►ವಿದ್ಯುತ್ ತಿದ್ದುಪಡಿ ಮಸೂದೆ- 2021; ಕಾರ್ಪೊರೇಟ್ ಲಾಭ ಪ್ರಖರ – ರೈತ, ಕಾರ್ಮಿಕ ಬದುಕು ಬರ್ಬರ!
►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ!
►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ?
►►ಜಿಎಸ್‌ಟಿ ಕಟ್ಟಬೇಡಿ’- ದೇಶದ ವರ್ತಕರಿಗೆ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಕರೆ!
►►ಬುರ್ಖಾ, ಜನಿವಾರ, ಮೂಲಭೂತವಾದ, ಕೋಮುವಾದ ಮತ್ತು ಸಮಾನತಾವಾದ
►►ಪತ್ರಕರ್ತರೇ ಎಚ್ಚರ: ಮೋದಿ ಸರ್ಕಾರದ ವೈಫಲ್ಯಗಳ ವಿರುದ್ದ ಬರೆದರೆ ಐಟಿ ದಾಳಿ ನಡೆಯಲಿದೆ ಹುಷಾರ್!
►►ಆರ್ ಎಸ್ ಎಸ್ ಸಿದ್ದಾಂತವನ್ನು ಒಪ್ಪುವವರು ಕಾಂಗ್ರೆಸ್ ಪಕ್ಷಕ್ಕೆ ಅಗತ್ಯ ಇಲ್ಲ. ಬಿಜೆಪಿಗೆ ಹೆದರುವವರು ಪಕ್ಷದಿಂದ ಹೊರಟು ಹೋಗಬಹುದು!
►►ಅಂಬೇಡ್ಕರ್ ಸಂವಿಧಾನದ ವಿರೋಧಿಗಳು ಸಂವಿಧಾನಾತ್ಮಕ ಹುದ್ದೆಯಲ್ಲಿರುವುದು ದೇಶದ ಭವಿಷ್ಯಕ್ಕೆ ಬಹು ಅಪಾಯಕಾರಿ