Advertisement

'ವಿಜಯದಶಮಿಯಂದು BJP ಯ ಕೋಮುವಾದಿ ಚುನಾವಣಾ ಪ್ರಚಾರ ಪ್ರಾರಂಭಿಸಿದ RSS ಭಾಗವತರು'

Advertisement

ಮುಸ್ಲಿಂ ಜನಸಂಖ್ಯಾ ಏರಿಕೆಯ ಬಗ್ಗೆ ಸುಳ್ಳು ಪ್ರಚಾರದಲ್ಲಿ BJP ಸರ್ಕಾರವನ್ನು ಮೀರಿಸಿದ RSS ಸರಸಂಘಚಾಲಕರು ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು) ಯಾರು ಏನೇ ಹೇಳಲಿ, ಭಾರತದ ಜನಸಂಖ್ಯೆಯ ಬಗ್ಗೆ ಮೋದಿ ಸರ್ಕಾರದ ಇಲಾಖೆಗಳು ಎರಡು ಸತ್ಯಗಳನ್ನು ಸಾಬೀತು ಮಾಡಿವೆ. 1.ಭಾರತದ ಜನಸಂಖ್ಯಾ ಏರಿಕೆ ಗತಿ ಕುಂಠಿತವಾಗಿದೆ ಮತ್ತು 2.ಮುಸ್ಲಿಮ್ ಜನಸಂಖ್ಯೆ ತೀವ್ರವಾಗಿ ಕಡಿಮೆಯಾಗುತ್ತಿದೆ ಇದಕ್ಕೆ ಮೋದಿ ಸರ್ಕಾರವೇ ಹಲವಾರು ಪುರಾವೆಗಳನ್ನೂ ಒದಗಿಸುತ್ತದೆ. ಆದರೂ, ಕೆಲವು ತಿಂಗಳ ಹಿಂದೆ ಉತ್ತರಪ್ರದೇಶದ ಯೋಗಿ ಸರ್ಕಾರ ಎರಡು ಮಕ್ಕಳಗಿಂತ ಜಾಸ್ತಿ ಹೊಂದುವ ಕುಟುಂಬಗಳ ಮೇಲೆ ಶಿಕ್ಷಾ ಕ್ರಮವನ್ನು ತೆಗೆದುಕೊಳ್ಳುವ ಯೋಜನೆಯನ್ನು ಘೋಷಿಸಿತ್ತು. ಅದನ್ನು ಅನುಸರಿಸಿ ಅಸ್ಸಾಮಿನ ಮುಖ್ಯಮಂತ್ರಿಯೂ ಕುಟುಂಬ ಶಿಕ್ಷಾ ಯೋಜನೆಯನ್ನೂ ಘೋಷಿಸಿದ್ದರು ಹಾಗೂ ಕರ್ನಾಟಕದಲ್ಲಿ ಸೀಟೀ ರವಿಯವರೂ ಸಹ ಅದೇ ರೀತಿ ಕಾನೂನನ್ನು ಕರ್ನಾಟಕದಲ್ಲಿ ಜಾರಿಗೆ ತರುವ ಬಗ್ಗೆ ಬಿಜೆಪಿ ಪಕ್ಷ ಯೋಚಿಸುತ್ತಿದೆ ಎಂದು ಮುನ್ಸೂಚನೆ ನೀಡಿದ್ದರು. ಈಗ ಆರೆಸ್ಸೆಸ್ಸಿನ ಸರಸಂಘಚಾಲಕರ ಸುಳ್ಳು ಭಾಗವತ... ಆದರೆ ಇದೆಲ್ಲದರ ಹಿಂದೆ ಬರಲಿರುವ ಚುನಾವಣೆಯಯಲ್ಲಿ ಮುಸ್ಲಿಮ್ ಸಮುದಾಯವನ್ನು ದೇಶದ್ರೋಹಿ ಹಾಗೂ ದೇಶದ ಪ್ರಗತಿಗೆ ಕಂಟಕರೆಂದು ಬಿಂಬಿಸುವ ಉದ್ದೇಶ ಬಿಟ್ಟು ಬೇರೆ ಯಾವ ದೇಶಹಿತದ ಉದ್ದೆಶವೂ ಇಲವೆಂಬುದು ಮೇಲ್ನೋಟಕ್ಕೆ ಅರ್ಥವಾಗುತ್ತದೆ. ಆದರೆ ಹಿಂದೂಪರವೆಂಬ ಹೆಸರಲ್ಲಿ ಓಟುಬ್ಯಾಂಕ್ ಸೃಷ್ಟಿಸಿಕೊಂಡಿರುವ ಈ ಸರ್ಕಾರಗಳ ಕುಟುಂಬ ಶಿಕ್ಷಾ ಕಾರ್ಯಕ್ರಮ ಮುಸ್ಲಿಮರಿಗಿಂತ ಹೆಚ್ಚಾಗಿ ಬಡ ದಲಿತ, ಹಿಂದುಳಿದ ಹಾಗೂ ಆದಿವಾಸಿಗಳನ್ನೇ ಶಿಕ್ಷಿಸಲಿದೆ. *ಏಕೆಂದರೆ ಇಬ್ಬರಿಗಿಂತ ಹೆಚ್ಚು ಮಕ್ಕಳಿರುವ ಈ ದೇಶದ ಶೇ. 46 ಕುಟುಂಬಗಳಲ್ಲಿ ಶೇ. 83 ರಷ್ಟು ಹಿಂದೂಗಳೇ ಹಾಗೂ ಅವರಲ್ಲಿ ಶೇ. 80 ರಷ್ಟು ಬಡ ದಲಿತ, ಹಿಂದುಳಿದ ಸಮುದಾಯಗಳೇ ಆಗಿವೆ.* ►►https://pbs.twimg.com/media/E6Ebn9iVgAUIZD3.jpg ಅಷ್ಟು ಮಾತ್ರವಲ್ಲ. ಈ ಬಿಜೆಪಿ ಪಕ್ಷದ ಜನ ಒಮ್ಮೆಯಾದರೂ ಪಕ್ಷದ ಹಿತಕ್ಕಿಂತ ಹೆಚ್ಚು ದೇಶದ ಹಿತವನ್ನು ಗಮನದಲ್ಲಿಟ್ಟುಕೊಂಡು ಯೋಚಿಸಿದರೆ: - ಭಾರತವು ಜನಸಂಖ್ಯಾ ಸ್ಪೋಟದ ಪರಿಸ್ಥಿತಿಯನ್ನು ಎದುರಿಸುತ್ತಿಲ್ಲವೆಂದೂ, - ವಾಸ್ತವವಾಗಿ ಜನಸಂಖ್ಯಾ ಏರಿಕೆಯು ಭಾರತದ ಬಡತನಕ್ಕೆ ಕಾರಣವಲ್ಲ ಎಂಬುದೂ ಹಾಗೂ ಈಗ ಭಾರತದಲ್ಲಿ ಯುವಜನಸಂಖ್ಯೆ ಹೆಚ್ಚಿರುವ ಕಾರಣದಿಂದ ಅದ್ಭುತ ಆರ್ಥಿಕ ಪ್ರಗತಿಯ ಅವಕಾಶವಿದೆಯೆಂಬುದೂ -ಹಾಗೂ ಮುಸ್ಲಿಮರ ಜನಸಂಖ್ಯೆಯ ಏರಿಕೆಯ ಗತಿ ಕಳೆದ ಎರಡು ದಶಕಗಳಲ್ಲಿ ಹಿಂದೂಗಳ ಜನಸಂಖ್ಯೆಯ ಏರಿಕೆಯ ಗತಿಗಿಂತ ತೀವ್ರವಾಗಿ ಕುಸಿಯುತ್ತಿರುವುದೂ ಸ್ಪಷ್ಟವಾಗುತ್ತದೆ. ಈ ಎಲ್ಲಾ ಅಂಶಗಳನ್ನು ಭಾರತ ಸರ್ಕಾರದ ಕುಟುಂಬ ಮತ್ತು ಆರೋಗ್ಯ ಕಲ್ಯಾಣ ಇಲಾಖೆಯೂ ಭಾಗವಾಗಿರುವ ರಾಷ್ಟೀಯ ಕುಟುಂಬ ಆರೋಗ್ಯ ಸರ್ವೇ (NFHS)ನ 3,4 ಮತ್ತು5 ನೇ ಸುತ್ತಿನ ಸರ್ವೇಗಳು ಹಾಗೂ ಭಾರತದ 1991, 2001 ಹಾಗೂ 2011ರ ಜನಸಂಖ್ಯಾ ಸೆನ್ಸಸ್ ವರದಿಗಳೂ ಸ್ಪಷ್ಟಪಡಿಸುತ್ತವೆ. ಭಾರತೀಯರ ಬಡತನಕ್ಕೆ ಜನಸಂಖ್ಯೆ ಕಾರಣವಲ್ಲ ಮೊದಲನೆಯದಾಗಿ ಭಾರತದ ಬಡತನಕ್ಕೆ ಜನಸಂಖ್ಯೆ ಏರಿಕೆ ಕಾರಣವೇ ಎಂಬುದನ್ನು ನೋಡೋಣ: 1951ರಲ್ಲಿ ಭಾರತದ ಜನಸಖ್ಯೆ 36 ಕೋಟಿ ಇದ್ದರೆ ಈಗ 140 ಕೋಟಿಯಾಗಿದೆ. ಅಂದರೆ ಹೆಚ್ಚೂ ಕಡಿಮೆ 4 ಪಟ್ಟು ಹೆಚ್ಚಿದೆ. 1951ರಲ್ಲಿ ಭಾರತದ ಜಿಡಿಪಿ 2.52 ಲಕ್ಷ ಕೋಟಿ. ಈಗ ಭಾರತದ ಜಿಡಿಪಿ 200ಲಕ್ಷ ಕೋಟಿ. ಅಂದರೆ ಭಾರತದ ಸಂಪತ್ತ್ತು ಸ್ವಾತಂತ್ರ್ಯಾ ನಂತರದಲ್ಲಿ 83 ಪಟ್ಟು ಹೆಚ್ಚಿಗೆಯಾಗಿದೆ. ಅಂದರೆ, ಸ್ವಾತಂತ್ರ್ಯಾನಂತರದಲ್ಲಿ ಜನಸಂಖ್ಯೆ 4 ಪಟ್ಟು ಹೆಚ್ಚಾದರೂ ಭಾರತದ ಸಂಪತ್ತು 83 ಪಟ್ಟು ಹೆಚ್ಚಾಗಿದೆ. ಈ ಸಂಪತ್ತನ್ನು ಸೃಷ್ಟಿಸಿರುವವರು ಈ ದೇಶದ ಬಡಕಾರ್ಮಿಕರು, ರೈತರು, ಉದ್ಯೋಗಿಗಳೇ. ಆದರೂ ಅವರು ಬಡವರಾಗಿಯೇ ಉಳಿದಿರಲು ಕಾರಣ ಸಂಪತ್ತಿನ ವಿತರಣೆಯಲ್ಲಿ ಬ್ರಾಹ್ಮಣವಾದಿ ಹಾಗೂ ಬಂಡವಾಳಶಾಹಿ ನೀತಿಗಳನ್ನು ಅನುಸರಿಸುತ್ತಿರುವುದು ಕಾರಣವೇ ಹೊರತು ಜನಸಂಖ್ಯಾ ಏರಿಕೆಯಲ್ಲ.. ಭಾರತದ ಜನಸಂಖ್ಯೆಯ ಏರಿಕೆಯ ದರ ಕುಸಿಯುತ್ತಿದೆ ಜನಸಂಖ್ಯೆಯ ಕುರಿತಾದ ಮತ್ತೊಂದು ಅತಿದೊಡ್ಡ ಮಿಥ್ಯೆಯೆಂದರೆ ಜನಸಂಖ್ಯೆಯಲ್ಲಿ ಭಾರತವು ಇಡೀ ಜಗತ್ತಿನಲ್ಲೇ ಎರಡನೇ ಸ್ಥಾನದಲ್ಲಿದ್ದು ಭಾರತದ ಜನಸಂಖ್ಯಾ ಏರಿಕೆಯ ಪ್ರಮಾಣ ಸ್ಪೋಟಕ ಪರಿಸ್ಥಿತಿಯಲ್ಲಿದೆ. ಆದ್ದರಿಂದ ಅದನ್ನು ಕೂಡಲೇ ನಿಯಂತ್ರಣದಲ್ಲಿಡಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು..ಇತ್ಯಾದಿ. ವಾಸ್ತವದಲ್ಲಿ ಪರಿಸ್ಥಿತಿ ಅದಕ್ಕೆ ತದ್ವಿರುದ್ಧವಾಗಿದೆ. ಭಾರತದ ಜನಸಂಖ್ಯಾ ಏರಿಕೆಯ ದರ ಆರೋಗ್ಯಕರವಾಗಿ ಕಡಿಮೆಯಾಗುತ್ತಿದೆಯೇ ವಿನಾ ಹೆಚ್ಚಾಗುತ್ತಿಲ್ಲ.. ಸಾಮಾನ್ಯವಾಗಿ ಒಂದು ದೇಶದ ಜನಸಂಖ್ಯೆಯ ಏರಿಕೆಯ ಗತಿಯನ್ನು ಅರಿಯಲು ಒಟ್ಟಾರೆ ಫಲವಂತಿಕೆ ದರ (Total Fertility Rate- TFR) ಎಂಬ ಮಾನದಂಡವನ್ನು ಬಳಸುತ್ತಾರೆ. ಅಂದರೆ ಒಂದು ದೇಶದಲ್ಲಿ-ಪ್ರದೇಶದಲ್ಲಿ ಒಬ್ಬ ಮಹಿಳೆ 18-49 ವಯಸ್ಸಿನ ನಡುವಿನ ತನ್ನ ಗರ್ಭಧಾರಣಾ ಅವಧಿಯಲ್ಲಿ ಸರಾಸರಿ ಎಷ್ಟು ಮಕ್ಕಳಿಗೆ ಜನ್ಮ ನೀಡುತ್ತಿದ್ದಾಳೆ ಎನ್ನುವ ಸರಾಸರಿ ಸಂಕ್ಯೆಯದು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಭಾರತದ TFR ದರ 5.9. ಅಂದರೆ 1951ರ ವೇಳೆಗೆ ಭಾರತದ ಮಹಿಳೆ ಸರಾಸರಿ 6 ಮಕ್ಕಳಿಗೆ ಜನ್ಮ ಕೊಡುತ್ತಿದ್ದರು ಎಂದರ್ಥ. ಅದೇ ರೀತಿ ಮುಂದುವರೆದಿದ್ದರೆ ಈಗ ಭಾರತದ ಜನಸಂಖ್ಯೆ 250-300 ಕೋಟಿಗೆ ತಲುಪಬೇಕಿತ್ತು. ಆದರೆ ಭಾರತವು ಪ್ರಾರಂಭದಿಂದಲೇ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಅರಿವು ಹಾಗೂ ಕುಟುಂಬ ನಿಯಂತ್ರಣ ಸಾಧನಗಳ ಲಭ್ಯತೆಯ ಬಗ್ಗೆ ಹೆಚ್ಚು ಒತ್ತು ಕೊಟ್ಟಿದ್ದರಿಂದ ಎಲ್ಲೆಲ್ಲಿ, ಅರಿವು, ಲಭ್ಯತೆ ಹಾಗೂ ಮಹಿಳೆಯ ಶಿಕ್ಷಣ ಹಗೂ ಸಬಲೀಕರಣ ಸಾಪೇಕ್ಷವಾಗಿ ಸಾಧ್ಯವಾಯಿತೋ ಅಲ್ಲೆಲ್ಲಾ ಬಹಳ ಬೇಗನೆ TFR ದರ ಕುಸಿಯುತ್ತಾ ಬಂತು. 2015-16ರ NFHS ನ ಅಂಕಿಅಂಶದ ಪ್ರಕಾರ ಈಗ ಭಾರತದ ಸರಾಸರಿ TFR ದರ 2.30 ಗೆ ಕುಸಿದಿದೆ. ಅಂದರೆ 1951ಕ್ಕೆ ಹೋಲಿಸಿದರೆ ಜನಸಂಖ್ಯಾ ಏರಿಕೆಯ ದರ ಅರ್ಧಕ್ಕಿಂತಲೂ ಹೆಚ್ಚು ಕಡಿಮೆಯಾಗಿದೆ. ►►http://rchiips.org/nfhs/nfhs-4Reports/India.pdf TFR ದರ ಕುಸಿಯಲು ಕಾರಣ ಮಹಿಳಾ ಸಬಲೀಕರಣವೇ ವಿನಾ ಕಾನೂನಲ್ಲ ಹಾಗೆ ನೋಡಿದರೆ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಬಲವಂತದ ಸಂತಾನ ಹರಣ ಶಸ್ತ್ರ ಚಿಕಿತ್ಸೆಗಳನ್ನು ನಡೆಸಿದ ಅತಿರೇಕಗಳನ್ನು ಬಿಟ್ಟರೆ ಭಾರತದ ಜನಸಂಖ್ಯಾ ನಿಯಂತ್ರಣ ಯೋಜನೆಯು ಪ್ರಧಾನವಾಗಿ ಮನವರಿಕೆ, ಸೌಲಭ್ಯಗಳ ಒದಗಿಸುವಿಕೆ ನಾಗೂ ಮಹಿಳೆಯ ಸಬಲೀಕರಣಗಳನ್ನು ಆಧರಿಸಿಯೇ ನಡೆಯುತ್ತಿದೆ. ಜಗತ್ತಿನಾದ್ಯಂತವೂ ಎಲ್ಲಾ ಯಶಸ್ವೀ ಕುಟುಂಬ ನಿಯಂತ್ರಣಗಳ ಕಥನವೂ ಇದೇ ಮಾರ್ಗವನ್ನು ಅನುಸರಿಸಿದೆ. 1994ರಲ್ಲಿ ಕೈರೋ ದಲ್ಲಿ ನಡೆದ ಜನಸಂಖ್ಯಾ ನಿಯಂತ್ರಣ ಮತ್ತು ಅಭಿವೃದ್ಧಿ ಸಮ್ಮೇಳನದಲ್ಲೂ ಭಾರತ ಇದೇ ಮಾರ್ಗಕ್ಕೆ ಬದ್ಧವಾಗಿರುವುದಾಗಿ ಘೋಷಿಸಿದೆ. ಭಾರತದೊಳಗೆ ವಿವಿಧ ರಾಜ್ಯಗಳಲ್ಲಿ ವಿಭಿನ್ನವಾಗಿರುವ ಈ TFR ದರವನ್ನು ಅವಲೋಕಿಸಿದಾಗಲೂ ಈ ಅಂಶ ಸ್ಪಷ್ಟವಾಗುತ್ತದೆ. 2015-16ರ NFHS ನ ವರದಿಯ ಪ್ರಕಾರ ಭಾರತದ ಸರಾಸರಿTFR ದರ 2.3 ಆಗಿದ್ದರೆ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್..ಇನ್ನಿತ್ಯಾದಿ ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ TFR ದರ 1.7 - 1.8 ರಷ್ಟು ಮಾತ್ರ ಅಂದರೆ ದೇಶದ ಸರಾಸರಿಗಿಂತ ಕಡಿಮೆಯಾಗಿತ್ತು. ಆದರೆ ಬಿಹಾರದ ದರ 3.4 ಆಗಿದ್ದರೆ ಉತ್ತರ ಪ್ರದೇಶದ್ದು 2.7. ಅಂದರೆ ದೇಶದ ಸರಾಸರಿಗಿಂತ ಹೆಚ್ಚು. ಮೇಲ್ನೋಟಕ್ಕೆ ಕಾಣುವಂತೆ ಬಿಹಾರ ಹಾಗೂ ಉತರ ಪ್ರದೇಶಗಳಿಗಿಂತ TFR ದರ ಕಡಿಮೆ ಇರುವ ರಾಜ್ಯಗಳಲ್ಲಿ ಮಹಿಳಾ ಸಾಕ್ಷರತೆ, ಶಿಕ್ಷಣ, ಸಾರ್ವಜನಿಕ ವಲಯದಲ್ಲಿ ಮಹಿಳೆಯ ಭಾಗವಹಿಸುವಿಕೆ, ಮತ್ತು ಆ ರಾಜ್ಯಗಳ ಸಾಪೇಕ್ಷ ಅಭಿವೃದ್ಧಿ ದರಗಳು ಹೆಚ್ಚಾಗಿದೆ. ಹಾಗೆ ನೋಡಿದರೆ, ಉತ್ತರ ಪ್ರದೇಶ ಮತ್ತು ಬಿಹಾರದ ಹಿಂದೂಗಳ TFR ದರವು ದಕ್ಷಿಣ ರಾಜ್ಯಗಳ ಮುಸ್ಲಿಮರTFR ದರಕ್ಕಿಂತ ಜಾಸ್ತಿ. ಅರ್ಥಾತ ಬಿಹಾರ ಹಾಗೂ ಉತ್ತರ ಪ್ರದೇಶಗಳ ಹಿಂದೂಗಳಿಗಿಂತ ದಕ್ಷಿಣ ರಾಜ್ಯಗಳ ಮುಸ್ಲಿಮ್ ಮಹಿಳೆಯರು ಕಡಿಮೆ ಮಕ್ಕಳಿಗೆ ಜನ್ಮ ನೀಡುತ್ತಿದ್ದಾಳೆ. ಆದ್ದರಿಂದಲೇ Development Is The Best Contraceptive- ಅಭಿವೃದ್ಧಿಯೇ ಅತ್ಯುತ್ತಮ ಸಂತಾನ ನಿರೋಧಕ ಎಂಬ ಮಂತ್ರವನ್ನು ಜಗತ್ತಿನಾದ್ಯಂತ ಜಪಿಸಲಾಗುತ್ತಿದೆ. ಶಿಕ್ಷಿಸುವ ಕಾನೂನುಗಳಲ್ಲ. ಅಷ್ಟೆ ಮುಖ್ಯವಾಗಿ 2020-21 ರ NFHS ನ ವರದಿಯ ಪ್ರಕಾರ ಭಾರತದ ಶೇ. 54ರಷ್ಟು ಮಹಿಳೆಯರಿಗೇ ಕೇವಲ ಇಬ್ಬರು ಮಕ್ಕಳಿದ್ದರೆ ಈ ದಶಕದಲ್ಲಿ ಮದುವೆಯಾದ ಶೇ. 76 ರಷ್ಟು ಮಹಿಳೆಯರಿಗೆ ಎರಡನೇ ಮಗುವನ್ನು ಮಾಡಿಕೊಳ್ಳಲು ಇಷ್ಟವಿಲ್ಲ. ಅಂದರೆ ಕುಟುಂಬದಲ್ಲಿ ಮಹಿಳೆಯನ್ನು ಆಕೆಯ ದೇಹದ ಮೇಲೆ ಹಾಗೂ ಫಲವಂತಿಕೆಯ ಮೇಲೆ ತಾನೇ ತೀರ್ಮಾನ ತೆಗೆದುಕೊಳ್ಳುವಷ್ಟು ಸಬಲೀಕರಿಸಿದರೆ ಮತ್ತು ಕುಟುಂಬಗಳು ಪ್ರಜಾತಾಂತ್ರಿಕರಣಗೊಂಡರೆ ತಾನಾಗಿಯೇ ದೇಶದ ಜನಸಂಖ್ಯೆ ಕಡಿಮೆಯಾಗುತ್ತದೆ. ಮುಸ್ಲಿಮರ ಜನಸಂಖ್ಯೆ ಹಿಂದುಗಳಿಗಿಂತ ವೇಗವಾಗಿ ಕಡಿಮೆಯಾಗುತ್ತಿದೆ NFHS ನ ವರದಿಗಳು ಸ್ಪಷ್ಟಪಡಿಸುವ ಮತ್ತೊಂದು ಸತ್ಯವೇನೆಂದರೆ ಕಳೆದ ಮೂರು ದಶಕಗಳಿಂದ ದೇಶದಲ್ಲಿ ಮುಸ್ಲಿಮರ TFR ದರವು ಹಿಂದುಗಳಿಗಿಂತ ವೇಗವಾಗಿ ಇಳಿಕೆಯಾಗುತ್ತಿದೆ. ಉದಾಹರಣೆಗೆ 2005-6ರಲ್ಲಿ ನಡೆದ NFHS ನ 3ನೇ ಸರ್ವೇಯ ಪ್ರಕಾರ ಹಿಂದೂಗಳ TFR ದರವು 2.59 ಇದ್ದರೆ ಮುಸ್ಲಿಮರ TFR ದರವು 3.4 ರಷ್ಟಿತ್ತು. ಆದರೆ ಹತ್ತುವರ್ಷಗಳ ನಂತರ NFHS ನ 4ನೇ ಸರ್ವೇಯ ಪ್ರಕಾರ ಹಿಂದೂಗಳ TFR ದರವು 2.59 ರಿಂದ 2.13ಕ್ಕೆ ಇಳಿದಿತ್ತು. ಅಂದರೆ 0.46 ರಷ್ಟು ಇಳಿಕೆ. ಅದೇ ಅವಧಿಯಲ್ಲಿ ಮುಸ್ಲಿಮರ TFR ದರವು 3.4 ರಿಂದ 2.61 ಕ್ಕೆ ಇಳಿಯಿತು. ಅಂದರೆ 0.79 ರಷ್ಟು ಇಳಿಕೆ. ಅಂದರೆ, ಈಗಲೂ ಮುಸ್ಲಿಮರTFR ದರವು ಹಿಂದೂಗಳಿಗಿಂತ ಜಾಸ್ತಿ ಇದ್ದರೂ ಕಳೆದೊಂದು ದಶಕದಲ್ಲಿ ಮುಸ್ಲಿಮರ TFR ದರ ಮತ್ತು ಆ ಕಾರಣಕ್ಕಾಗಿ ಮುಸ್ಲಿಮರ ಜನಸಂಕ್ಯಾ ಏರಿಕೆಯ ಪ್ರಮಾಣ ಹಿಂದೂಗಳಿಗಿಂತ ತೀವ್ರವಾಗಿ ಕಡಿಮೆಯಾಗುತ್ತಿದೆ. 2005ರಲ್ಲಿ ಮುಸ್ಲಿಮರ TFR ಪ್ರಮಾಣವು ಹಿಂದೂಗಳಿಗಿಂತ 0.81 ರಷ್ಟು ಹೆಚ್ಚಿದ್ದರೆ ಆ ಅಂತರವು ಹತ್ತು ವರ್ಷಗಳ ನಂತರ 2015ರಲ್ಲಿ 0.4 ಕ್ಕೆ ಇಳಿದಿದೆ. ಹೀಗಾಗಿ ಮುಂದಿನ ದಶಕದಲ್ಲಿ ಹಿಂದೂ -ಮುಸ್ಲಿಂ ಫಲವಂತಿಕೆಯ ಪ್ರಮಾಣದಲ್ಲಿ ಯಾವುದೇ ಅಂತರವೇ ಇಲ್ಲದಂತಾಗಲಿದೆ. ಅಷ್ಟೆ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಮುಸ್ಲಿಮ್ TFR ದರವು ಕೇರಳ, ಅಸ್ಸಾಂ, ಪ. ಬಂಗಾಳ ಜಮ್ಮು-ಕಾಶ್ಮೀರದಂತ ಮುಸ್ಲಿಂ ಬಾಹುಳ್ಯವಿರುವ ರಾಜ್ಯಗಳಲ್ಲೇ ವೇಗವಾಗಿ ಕುಸಿಯುತ್ತಿದೆ. ಮೇಲಿನ ಸರ್ಕಾರೀ ಅಂಕಿಅಂಶಗಳು ಸ್ಪಷ್ಟಪಡಿಸುವುದು- -ಭಾರತದ ಜನಸಂಕ್ಯಾ ಏರಿಕೆಯ ಪ್ರಮಾಣ ಆರೋಗ್ಯಕರವಾಗಿ ಕುಸಿಯುತ್ತಿದೆ. - ಮುಸ್ಲಿಮರ ಜನಸಂಖ್ಯೆಯ ಏರಿಕೆಯ ಪ್ರಮಾಣವು ಹಿಂದೂಗಳ ಜನಸಂಖ್ಯೆಯ ಏರಿಕೆಯ ಪ್ರಮಾಣಕ್ಕಿಂತ ಅರ್ಧಕ್ಕರ್ಧ ಕಡಿಮೆಯಾಗುತ್ತಿದೆ. - ಮತ್ತು ಯಾವ ರಾಜ್ಯಗಳಲ್ಲಿ ಸಾಪೇಕ್ಷವಾಗಿ ಅಭಿವೃದ್ಧಿಯಾಗಿದೆಯೋ ಆ ರಾಜ್ಯಗಳಲ್ಲಿ ಹಿಂದೂ-ಮುಸ್ಲಿಂ ಎಂಬ ಬೇಧ ಭಾವವಿಲ್ಲದೆ ಎಲ್ಲಾ ಸಮುದಾಯಗಳ TFR ದರ ಕುಸಿದಿದೆ. ಹೀಗಾಗಿ ಜನಸಂಖ್ಯೆಯ ನಿಯಂತ್ರಣ ಮಾಡಲು ಸರ್ಕಾರ ಗಮನಹರಿಸಬೇಕಿರುವುದು ಶಿಕ್ಷಣ, ಉದ್ಯೋಗ, ಆರೋಗ್ಯ, ಕುಟುಂಬ ಕಲ್ಯಾಣ ಯೋಜನೆಗಳ ಅರಿವು, ಸಾಧನಗಳ ಲಭ್ಯತೆ ಮತ್ತು ಮಹಿಳಾ ಸಬಲೀಕರಣಗಳ ಮೇಲೆಯೇ ವಿನಾ ಕುಟುಂಬವನ್ನು ಶಿಕ್ಷಿಸುವ ಕಾನೂನುಗಳ ಮೇಲಲ್ಲ. ಕೌಟುಂಬಿಕ ಹಿಂಸೆಯನ್ನು ಹೆಚ್ಚಿಸುವ ಕುಟುಂಬ ಕಲ್ಯಾಣ ಕಾನೂನುಗಳು ಅದರ ಬದಲಿಗೆ ಎರಡು ಮಕ್ಕಳಿಗಿಂತ ಹೆಚ್ಚಿರುವ ಕುಟುಂಬಗಳನ್ನು ಶಿಕ್ಷಿಸುವ ಕಾನೂನನ್ನು ಮಾಡಿದರೆ ಕುಟುಂಬದಲ್ಲಿನ ಮಹಿಳೆ ಇನ್ನಷ್ಟು ಹಿಂಸಾಚಾರಕ್ಕೆ ಗುರಿಯಾಗುತ್ತಾಳೆ. ಅಭದ್ರಳಾಗುತ್ತಾಳೆ. ಮತ್ತು ಅತಂತ್ರಳಾಗುತ್ತಾಳೆ. ಏಕೆಂದರೆ ಎರಡಕ್ಕಿಂತ ಹೆಚ್ಚು ಮಕ್ಕಳಾದರೆ ಸರ್ಕರೇ ಉದ್ಯೋಗವೋ ಮತ್ತೊಂದೋ ಸಿಗುವುದಿಲ್ಲ ಎಂಬ ಕಾರಣಕ್ಕೆ ಆಗಿರುವ ಮದುವೆಯನ್ನು ದಾಖಲು ಮಾಡದೇ ಹೋಗುವ ಪ್ರವೃತ್ತಿ ಇಂಥಾ ಕಾನೂನಿರುವ ಹರ್ಯಾಣದಲ್ಲಿ ವಿಸ್ತೃತವಾಗಿ ಕಂಡುಬರುತ್ತಿದೆ. ಹೀಗೆಯೇ ಹೆಂಡತಿಯನ್ನು ತೊರೆಯುವ ಅಥವಾ ವಿಚ್ಹೇದನ ಕೊಡುವ ಪ್ರಕರಣಗಳು ಹೆಚ್ಚಾಗಲಿವೆ. ಹಾಗೆಯೇ ನಮ್ಮಂಥ ಪುರುಷ ಪ್ರಧಾನ ಸಮಾಜದಲ್ಲಿ ಗಂಡು ಮಗು ಪ್ರಾಧಾನ್ಯತೆಯು ಎಲ್ಲ ಕುಟುಂಬದಲ್ಲೂ ಕೆಲಸ ಮಾಡುವುದರಿಂದ ಎರಡೇ ಮಕ್ಕಳು ಎಂದಾಗ ಭ್ರೂಣ ಪತ್ತೆಗಳ ದಂಧೆ ಹಾಗೂ ಅನಾರೋಗ್ಯಕರ ಅಬಾರ್ಷನ್ ದಂಧೆಗಳು ಹೆಚ್ಚಾಗಲಿವೆ. ಇದರಿಂದ ಈಗಾಗಲೇ ಅಪಾರ ಅಸಮತೋಲದಲ್ಲಿರುವ ಈ ದೇಶದ ಗಂಡು-ಹೆಣ್ಣು ಅನುಪಾತವು ಇನ್ನೂ ತೀವ್ರವಾಗಿ ಕುಸಿಯಲಿದೆ. ಇದೆಲ್ಲದರ ಜೊತೆಗೆ ಮಹಿಳೆಯರ ಆರೋಗ್ಯವೂ ದುಸ್ಥಿತಿಗೆ ಈಡಾಗುತ್ತದೆ. ಮತ್ತು ಮಹಿಳೆಗೆ ತನ್ನ ದೇಹದ ಮೇಲೆ ಯಾವುದೇ ಅಧಿಕಾರವೂ ಇಲ್ಲದಂತಾಗುತ್ತದೆ. ಹೀಗಾಗಿ ಕಾನೂನಿನ ಮೂಲಕ ಕುಟುಂಬ ನಿಯಂತ್ರಣ ಮಾಡುವ ನೀತಿಗಳು ಅತ್ಯಂತ ಮಹಿಳಾ ವಿರೋಧಿಯಾಗಿವೆ. ಪ್ರಜಾತಂತ್ರ ವಿರೋಧಿಯಾಗಿವೆ. ಅಸಲೀ ಸಮಸ್ಯೆ- ಜನಸಂಖ್ಯೆ ಹೆಚ್ಚಳದ್ದಲ್ಲ- ಕಡಿಮೆಯಾಗುವುದು! ಹಾಗೆ ನೋಡಿದರೆ, NFHS ನ ವರದಿಗಳೂ ಹಾಗೂ ಜಗತ್ತಿನಾದ್ಯಂತ ನಡೆಯುತ್ತಿರುವ ಜನಸಂಕ್ಯೆ ಅಧ್ಯಯನಗಳು ಮುಂದಿಡುತ್ತಿರುವ ಅಪಾಯ ಜನಸಂಖ್ಯೆ ಹೆಚ್ಚಳದ್ದಲ್ಲ. ಜನಸಂಖ್ಯೆ ಕಡಿಮೆಯಾಗುತ್ತಿರುವುದು! ಏಕೆಂದರೆ ಪ್ರತಿಯೊಂದು ಕುಟುಂಬಕ್ಕೆ ಎರಡು ಮಕ್ಕಳಿದ್ದರೆ ಅಪ್ಪ-ಅಮ್ಮ ತೀರಿಕೊಂಡ ಬಳಿಕ ಆ ಸಂಕ್ಯೆಯನ್ನು ಎರಡು ಮಕ್ಕಳು ಭರ್ತಿ ಮಾಡುತ್ತಾರೆ. ಆಗ ಆ ದೇಶದ ಜನಸಂಕ್ಯೆ ಒಂದು ಸ್ಥಿರತೆಯಲ್ಲಿರುತ್ತದೆ. ಆದ್ದರಿಂದ ಒಂದು ದೇಶದಲ್ಲಿ TFR ದರವು 2.1ರಷ್ಟಿದ್ದರೆ ಅದನ್ನು ರೀಪ್ಲೇಸ್‌ಮೆಂಟ್ ದರ ಎಂದು ಕರೆಯುತ್ತಾರೆ. ಅದಕ್ಕಿಂತ ಕಡಿಮೆಯಾದರೆ ಆ ದೇಶದ ಒಟ್ಟಾರೆ ಜನಸಂಖ್ಯೆಯೇ ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. NFHS ನ ವರದಿಗಳ ಪ್ರಕಾರ ಭಾರತದ 22 ರಾಜ್ಯಗಳಲ್ಲಿ TFR ದರವು 2.1 ಕ್ಕಿಂತ ಕಡಿಮೆ. TFR ದರವು 1.7 - 1.8 ರಷ್ಟಿರುವ ದಕ್ಷಿಣ ರಾಜ್ಯಗಳ ಜನಸಂಖ್ಯೆ ಮುಂದಿನ ನಾಲ್ಕು ದಶಕಗಳಲ್ಲಿ ಈಗಿರುವುದಕ್ಕಿಂತ ಕಡಿಮೆಯಾಗಲಿದೆ. LANCET ಎಂಬ ಜಗತ್ತಿನ ಅತ್ಯಂತ ಪ್ರತಿಷ್ಟಿತ ವೈಜ್ನಾನಿಕ ಜರ್ನಲ್ ನ ಅಧ್ಯಯನದ ಪ್ರಕಾರ ಈಗ ಭಾರತದ ಜನಸಂಖ್ಯೆ 140 ಕೋಟಿಯಿದ್ದು, 2048ರ ವೇಳೆಗೆ 160 ಕೋಟಿಗೆ ತಲುಪಿದರೂ ಜನಸಂಖ್ಯೆಯ ಏರಿಕೆಯ ವೇಗ ಕುಸಿಯುತ್ತಿರುವುದರಿಂದ 2048 ರಿಂದ ಭಾರತದ ಜನಸಂಖ್ಯೆ ಕುಸಿಯುತಾ ಹೋಗುತ್ತದೆ. ಹಾಗೂ 2100 ರ ವೇಳೆಗೆ ಭಾರತದ ಜನಸಂಖ್ಯೆ 109 ಕೋಟಿಗೆ ಇಳಿದಿರುತ್ತದೆ. ►►https://www.thelancet.com/action/showPdf?pii=S0140-6736%2820%2930677-2 ಅದಕಿಂತ ಗಂಭೀರವಾದ ಸಂಗತಿಯೆಂದರೆ ಆ ಅಂದರ್ಭದಲ್ಲಿ ಕೆಲಸ ಮಾಡಬಲ್ಲ *ಯುವಕರ ಸಂಖ್ಯೆಗಿಂತ ಹಿರಿಯರ- ವೃದ್ಧರ ಸಂಖ್ಯೆ ಎರಡು ಪಟ್ಟು ಹೆಚ್ಚಿರುತ್ತದೆ. ಒಬ್ಬ ದುಡಿಯುವ ವ್ಯಕ್ತಿಯ ಮೇಲೆ ಅಪ್ಪ, ಅಮ್ಮ, ತಾತ, ಅಜ್ಜಿ ಹೀಗೆ ನಾಲ್ವರು ಅವಲಂಬಿತರಾಗುವ ಪರಿಸ್ಥಿತಿ ಎದುರಾಗುತ್ತದೆ.* ಇದು ಆ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ. ಕೆಲಸ ಮಾಡುವ ಜನರಿಗಾಗಿ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳನ್ನು ಅವಲಂಬಿಸಬೇಕಾಗುತ್ತದೆ. ಈಗಾಗಲೇ ಚೀನಾದಲ್ಲಿ ಆ ಪರಿಸ್ಥಿತಿ ಎದುರಾಗಿದೆ. ಆದ್ದರಿಂದಲೇ ಅಲ್ಲಿ ಒಂದು ಮಕ್ಕಳ ನೀತಿಯನ್ನು ಸಡಿಲಿಸಿ ಈಗ ಮೂರು ಮಕ್ಕಳನ್ನು ಮಾಡಿಕೊಳ್ಳಲು ಉತ್ತೇಜನ ಕೊಡಲಾಗುತ್ತಿದೆ. ಭಾರತದಲ್ಲಿ ದಕ್ಷಿಣ ರಾಜ್ಯಗಳಿಗೆ ಅಂಥಾ ಪರಿಸ್ಥಿತಿ ಉತ್ತರ ರಾಜ್ಯಗಳಿಗಿಂತ ಬೇಗನೇ ಬಂದೊದಗಲಿದೆ.. ಹೀಗಾಗಿ ಸರ್ಕಾರ ಚಿಂತಿಸಬೇಕಿರುವುದು ಇಲ್ಲದ ಜನಸಂಖ್ಯಾಸ್ಪೋಟದ ಸಮಸ್ಯೆಯ ಬಗ್ಗೆಯಲ್ಲ. ಈಗ ಜಗತ್ತಿನಲೇ ಅತಿ ಹೆಚ್ಚು ಯುವಶಕ್ತಿ ಇರುವ ಈ ದೇಶದಲ್ಲಿ ಹೇಗೆ ಉದ್ಯೋಗಗಳನ್ನು ಸೃಷ್ಟಿಸಿ ಅದನ್ನು ರಚನಾತ್ಮಕವಾಗಿ ಬಳಸಿಕೊಳ್ಳಬಹುದು ಎಂಬ ಬಗ್ಗೆ. ಮತ್ತು ಇನ್ನೆರಡು ದಶಕಗಳ ನಂತರ ಎದುರಾಗಲಿರುವ ಹಿರಿಯರ ಬಾಹುಳ್ಯ ತಂದೊಡ್ಡುವ ಆರ್ಥಿಕ-ರಾಜಕೀಯ-ಸಾಂಸ್ಕೃತಿಕ ಸಮಸ್ಯೆಗಳನ್ನು ಹೇಗೆ ಎದುರಿಸುವುದು ಎಂಬ ಬಗ್ಗೆ. ಕೃಪೆ: ವಾರ್ತಾಭಾರತಿ ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ: ►► ನೀವು ಈ ಕೆಳಗಿನ ಲೇಖನಗಳನ್ನು ಓದಿಲ್ಲವೇ? ಅಗತ್ಯವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. ►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ. ►►ಎಳೆಮಕ್ಕಳ, ವಿದ್ಯಾರ್ಥಿಗಳ ಪ್ರಾಣಕ್ಕೆ ಮಾರಕವಾದ ಟೇಸ್ಟಿಂಗ್ ಪೌಡರ್ ಅನ್ನು ಸರ್ಕಾರ ಅದೇಕೆ ನಿಷೇಧಿಸುತ್ತಿಲ್ಲ? ►► ‘ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಭಾರತದಲ್ಲಿ ದಿಢೀರ್‌ ಜನಪ್ರಿಯರಾಗಲು ಇರುವ ಸರಳ ಮಾರ್ಗ ಯಾವುದು ಗೊತ್ತೇ? ►► ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್! ►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ! ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ. ►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) ►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ? ►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..! ►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ! ►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! ►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ? ►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್! ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. ►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ? ►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್ ►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ ►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) ►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►► *ಸ್ವಯಂ ಘೋಷಿತ ರಾಷ್ಟ್ರೀಯವಾದಿ ಸಂಘಟನೆ ಆರೆಸ್ಸೆಸ್, ಸ್ವಾತಂತ್ರ್ಯಾ ನಂತರ ಬರೋಬ್ಬರಿ ಮೂರು ಬಾರಿ ನಿಷೇಧಕ್ಕೊಳಗಾಗಲು ಕಾರಣಗಳೇನು?* ►► *ನೋಟುಬ್ಯಾನ್ ಮಾಡಿದ ನಂತರ ಪ್ರಧಾನಿ ಮೋದಿಯವರು, ಟೋಕಿಯೋದಲ್ಲಿ ಭಾರತದ ಜನರನ್ನು ಗೇಲಿಮಾಡಿ ಮಾಡಿದ ಭಾಷಣದ ಅಪರೂಪದ ವಿಡಿಯೋ.* ►►ಸಂಘಿಬಾನಿಗಳ ಆಡಳಿತದಲ್ಲಿ ಸಂವಿಧಾನ ಬದಲಾಗುತ್ತಾ? ಬದಲಾದರೆ ಏನೇನಾಗುತ್ತೆ ? ಮಿಸ್ ಮಾಡ್ದೆ ಈ ಲೇಖನ ಓದಿ.. ವಿಡಿಯೋ ನೋಡಿ! ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಸ್ವಾತಂತ್ರ ಹೋರಾಟವನ್ನು ಹತ್ತಿಕ್ಕಲು ಬ್ರಿಟೀಷರು, ಸಾವರ್ಕರ್ ರನ್ನು ದಾಳವಾಗಿ ಬಳಸಿದ್ದರೇ? ►►9 ಜನ್ಮದಲ್ಲಿ ಸ್ವರ್ಗಸುಖ ಸಿಗುತ್ತದೆ ಎಂದು ಗೌರಿಯನ್ನು ಕೊಲೆ ಮಾಡಿದ್ದ ಹಂತಕರು.. ತಾಲೀಬಾನ್, ಐಸಿಸ್ ಗಿಂತಲೂ ಅಸಹ್ಯವಾದ ಸಿದ್ದಾಂತವೇ ಕೊಲೆಗೆ ಕಾರಣ ►►ಸ್ವತಂತ್ರ ಭಾರತದ ಇತಿಹಾಸದಲ್ಲಿ ದಾಖಲೆಯಾಗುಳಿವ ಮೋದಿ ಸಾಧನೆಗಳು: ಮೋದಿ ವಿರೋಧಿಗಳು ಮತ್ತು ಬೆಂಬಲಿಗರು ತಿಳಿದುಕೊಳ್ಳಲೇ ಬೇಕಾದ ನಗ್ನಸತ್ಯಗಳು! ►►ಕಾಂಗ್ರೆಸ್‌ನಲ್ಲಿ ಪ್ರಮೋಷನ್‌ ಸಿಗಬೇಕಾದರೆ ಜೈಲಿಗೆ ಹೋಗಬೇಕು’ ಎಂದಿರುವ ಬಿಜೆಪಿ ನಾಯಕ ಸಿ.ಟಿ ರವಿಗೊಂದು ಬಹಿರಂಗ ಪತ್ರ ►►ಅಫ್ಘಾನಿಸ್ತಾನದ ಬೆಳವಣಿಗೆಗಳು ಸಾಬೀತುಪಡಿಸುತ್ತಿರುವುದು ಮೋದಿ ಸರ್ಕಾರದ ಸಿಎಎ ಕಾಯಿದೆಯ ದೂರದೃಷ್ಟಿಯನ್ನೋ ಅಥವಾ ಸಂಘೀಬಾನಿಗಳ ಧೂರ್ತತನವನ್ನೋ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ವಿದ್ಯುತ್ ತಿದ್ದುಪಡಿ ಮಸೂದೆ- 2021; ಕಾರ್ಪೊರೇಟ್ ಲಾಭ ಪ್ರಖರ – ರೈತ, ಕಾರ್ಮಿಕ ಬದುಕು ಬರ್ಬರ! ►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ಜಿಎಸ್‌ಟಿ ಕಟ್ಟಬೇಡಿ’- ದೇಶದ ವರ್ತಕರಿಗೆ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಕರೆ! ►►ಬುರ್ಖಾ, ಜನಿವಾರ, ಮೂಲಭೂತವಾದ, ಕೋಮುವಾದ ಮತ್ತು ಸಮಾನತಾವಾದ ►►ಪತ್ರಕರ್ತರೇ ಎಚ್ಚರ: ಮೋದಿ ಸರ್ಕಾರದ ವೈಫಲ್ಯಗಳ ವಿರುದ್ದ ಬರೆದರೆ ಐಟಿ ದಾಳಿ ನಡೆಯಲಿದೆ ಹುಷಾರ್! ►►ಆರ್ ಎಸ್ ಎಸ್ ಸಿದ್ದಾಂತವನ್ನು ಒಪ್ಪುವವರು ಕಾಂಗ್ರೆಸ್ ಪಕ್ಷಕ್ಕೆ ಅಗತ್ಯ ಇಲ್ಲ. ಬಿಜೆಪಿಗೆ ಹೆದರುವವರು ಪಕ್ಷದಿಂದ ಹೊರಟು ಹೋಗಬಹುದು! ►►ಅಂಬೇಡ್ಕರ್ ಸಂವಿಧಾನದ ವಿರೋಧಿಗಳು ಸಂವಿಧಾನಾತ್ಮಕ ಹುದ್ದೆಯಲ್ಲಿರುವುದು ದೇಶದ ಭವಿಷ್ಯಕ್ಕೆ ಬಹು ಅಪಾಯಕಾರಿ

Advertisement
Advertisement
Recent Posts
Advertisement