Advertisement

ಈ ದೇಶದಲ್ಲಿ 'ಪ್ರಜಾಪ್ರಭುತ್ವ' ಸ್ಥಾಪಿಸಿದ್ದು ಹಾಗೂ 'ಅಂಬೇಡ್ಕರ್ ಸಂವಿಧಾನ' ಜಾರಿಗೊಳಿಸಿದ್ದು ಕಾಂಗ್ರೆಸ್ ಮಾಡಿದ ತಪ್ಪೇ?

Advertisement

'1857ರಲ್ಲಿ ಆರಂಭಗೊಂಡ ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷಾಂತರ ಜನ ಭಾರತೀಯರ ಬಲಿದಾನವಾದ ಬಳಿಕ 1947ರಲ್ಲಿ ಸ್ವಾತಂತ್ರ್ಯ ದೊರಕುತ್ತದೆ' ಇದು ಇಡೀ ಜಗತ್ತಿಗೆ ತಿಳಿದಿರುವ ಐತಿಹಾಸಿಕ ಸತ್ಯ! ಆಂಗ್ಲರ ಆಡಳಿತದ ಕಾಲದ ಭಾರತೀಯರ 'ಸ್ವಾತಂತ್ರ್ಯ' ದ ಪರಿಕಲ್ಪನೆ ಹೇಗಿತ್ತೆಂದರೆ 'ಪರಕೀಯ ಆಂಗ್ಲರು ಭಾರತ ಬಿಟ್ಟು ತೊಲಗಿ, ಮತ್ತೆ ಭಾರತೀಯ ಅರಸರುಗಳ ಕೈಗೆ ಅಧಿಕಾರ ಹಸ್ತಾಂತರ ಆದರೆ ಅದುವೇ ಭಾರತಕ್ಕೆ ಸಿಗುವ ಸ್ವಾತಂತ್ರ್ಯ' ಎಂಬುವುದಾಗಿತ್ತು ಅಥವಾ ಹಾಗೆ ಈ ದೇಶದ ಜನರ ತಲೆಗಳಲ್ಲಿ ತುಂಬಿಸಲಾಗಿತ್ತು. ಆದರೆ 1947ರಲ್ಲಿ ಸ್ವಾತಂತ್ರ್ಯ ಸಿಗುವ ವೇಳೆಗೆ ಮುಂಚೂಣಿಯಲ್ಲಿದ್ದ ಯಾ ಈ ದೇಶದ ನಾಯಕತ್ವ ವಹಿಸಿದ್ದ (1885ರಲ್ಲಿ ಸ್ವಾತಂತ್ರ್ಯ ಸಮರಕ್ಕಾಗಿಯೇ ಸ್ಥಾಪಿತಗೊಂಡಿದ್ದ) 'ಕಾಂಗ್ರೆಸ್ ನಾಯಕತ್ವ' ದ ಸ್ವಾತಂತ್ರ್ಯದ ಪರಿಕಲ್ಪನೆ ಹೇಗಿತ್ತೆಂದರೆ 'ಹಿಂದೆ ಈ ದೇಶವನ್ನು ಸುಮಾರು 300ವರ್ಷಗಳ ಕಾಲ ಆಳಿದ್ದ ಆಂಗ್ಲರು, 800ವರ್ಷಗಳ ಕಾಲ ಆಳಿದ್ದ ಮೊಗಲರು ಅಥವಾ ಅದಕ್ಕೂ ಮೊದಲು ಆಳಿದ್ದ ಭಾರತೀಯ ರಾಜರುಗಳ ಮಾದರಿಯ ಸರ್ವಾಧಿಕಾರಿ ಆಡಳಿತ ಈ ದೇಶಕ್ಕೆ ಪುನಃ ಬರಬಾರದು. ಆ ಆಡಳಿತಗಳೆಂದೂ ಈ ದೇಶದ ಸರ್ವ ಜಾತಿ, ಸರ್ವ ಜನಾಂಗದ ಜನರ ಪರವಾಗಿ ಇದ್ದಿರಲಿಲ್ಲ. ಅದು ಕೇವಲ ಮನುವಾದಿಗಳ ಪರವಾಗಿತ್ತು. ಆ ಮನುವಾದಿ ಗಳ ನೇತೃತ್ವದ ಆ ಎಲ್ಲಾ ರಾಜಸತ್ತೆಯ ಸರ್ಕಾರಗಳು ಈ ನೆಲದ ಬಹುಸಂಖ್ಯಾತ ಜನರಾದ ಹಿಂದುಳಿದ ವರ್ಗ, ದಲಿತ ಹಾಗೂ ಅಲ್ಪಸಂಖ್ಯಾತ ವರ್ಗದ ಜನರನ್ನು ಮೂಲಭೂತ ಹಕ್ಕುಗಳಾದ ವಿದ್ಯೆ, ಅಧಿಕಾರ ಹಾಗೂ ಭೂಮಿಯ ಹಕ್ಕುಗಳಿಂದ ವಂಚಿಸುತ್ತಲೇ ಬಂದಿವೆ ಅಥವಾ ಧರ್ಮ ಮತ್ತು ಶಾಸ್ತ್ರದ ಹೆಸರಿನಲ್ಲಿ ಆ ಎಲ್ಲಾ ಹಕ್ಕುಗಳನ್ನು ನಿರಾಕರಿಸುತ್ತಲೇ ಬಂದಿವೆ. ಆ ಕಾರಣಗಳಿಂದಾಗಿ ಈ ದೇಶದ ಸರ್ವ ಸಂಪನ್ಮೂಲಗಳಾದ ಭೂಮಿ ಹಾಗೂ ಇತರ ಸಂಪತ್ತು ಈ ದೇಶದ ಪ್ರತಿ ಪ್ರಜೆಗೂ ಸಮನಾಗಿ ಹಂಚಿಕೆಯಾಗುವ ಮಾದರಿಯ ಆಡಳಿತವನ್ನು ನೀಡುವ ಜನಪರ ಸರ್ಕಾರವನ್ನು ಸ್ಥಾಪನೆ ಮಾಡಬೇಕು' ಎಂಬುವುದಾಗಿತ್ತು. ಹಾಗೆಯೇ ಆ ಪರಿಕಲ್ಪನೆಗೆ ಪೂರಕವಾದ 'ಸಂವಿಧಾನ' ದ ರಚನೆ ಮಾಡುವುದು ಕೂಡ ಕಾಂಗ್ರೆಸ್ ನಾಯಕರುಗಳ ಪರಮಗುರಿಯಾಗಿತ್ತು. ಆ ಗುರಿಯ ಭಾಗವಾಗಿ ಈ ದೇಶದಲ್ಲಿ ಅಂತಿಮವಾಗಿ 526+ ರಾಜ ಸಂಸ್ಥಾನಗಳ ಅರಸರುಗಳ ಮನ‌ ಒಲಿಸಿ 'ಜನರಿಂದ, ಜನರಿಗಾಗಿ, ಜನರೇ ಆಡಳಿತ ನಡೆಸುವ ಪ್ರಜಾಪ್ರಭುತ್ವ ಸರ್ಕಾರ' ದ ಸ್ಥಾಪನೆ ಹಾಗೂ 'ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಸಿದ್ದಾಂತ ದ ಅಂಬೇಡ್ಕರ್ ಸಂವಿಧಾನದ ರಚನೆಯಾಗುತ್ತದೆ.' ಆದರೆ, ಕಾಂಗ್ರೆಸ್ ನಿಂದ ತಮಗೆ ಎದುರಾಗುವ ಆ ಎಲ್ಲಾ ಅಪಾಯ(?)ಗಳನ್ನು ಮೊದಲೇ ಅರಿತಿದ್ದ ಈ ದೇಶದ ಮೂಲಭೂತವಾದಿಗಳು ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧವಾಗಿ ಬ್ರಿಟೀಷರ ಪರವಾಗಿ ಮಾಹಿತಿದಾರರಾಗಿ ಕೆಲಸ ಮಾಡಿ ಸ್ವಾತಂತ್ರ್ಯ ಹೋರಾಟಗಾರರಿಗೆ ಕಠಿಣ ಶಿಕ್ಷೆ ಯಾ ಗಲ್ಲು ಶಿಕ್ಷೆಯನ್ನು ಕೂಡ ಕೊಡಿಸುತ್ತಾರೆ. ಇದು ಇತಿಹಾಸದ ಪುಟಗಳಲ್ಲಿ ದಾಖಲುಗೊಂಡಿರುವ ಸತ್ಯವಾಗಿದೆ. ಆದರೆ ಅಂತಿಮವಾಗಿ ಕಾಂಗ್ರೆಸ್ ನೇತೃತ್ವದ ಸ್ವಾತಂತ್ರ್ಯ ಹೋರಾಟಗಾರರ ಕೈಯೇ ಮೇಲಾಗಿ ಸ್ವಾತಂತ್ರ್ಯಾ ನಂತರ ಪ್ರಜಾಪ್ರಭುತ್ವ ಮಾದರಿಯ ಸರ್ಕಾರ ರಚನೆ ಮತ್ತು ಹೊಸ ಸಂವಿಧಾನದ ರಚನೆ ಹಾಗೂ ಜಾರಿಯ ಸಂಧರ್ಭದಲ್ಲಿ ಅವರುಗಳು ರಾಜಸತ್ತೆ ಪುನಃ ಸ್ಥಾಪನೆಯಾಗಬೇಕು, ಬ್ರಿಟೀಷರು ಯಾವ ರಾಜರಿಂದ ರಾಜ್ಯವನ್ನು ಕಿತ್ತುಕೊಂಡಿದ್ದರೋ ಅದೇ ರಾಜರುಗಳ ವಂಶಸ್ಥರಿಗೆ ಅದನ್ನು ಹಂಚಬೇಕು ಹಾಗೂ ಸನಾತನ ಧರ್ಮದ ಸಂವಿಧಾನವಾದ ಮನುಸ್ಮೃತಿ ಯ ಆಧಾರದಲ್ಲಿ ಧರ್ಮಾಧಾರಿತ ಸಂವಿಧಾನ ರಚನೆಯಾಗಬೇಕು ಎಂಬ ಬೇಡಿಕೆಯನ್ನು ಇಡುತ್ತಾರೆ ಅಥವಾ ಪಟ್ಟು ಹಿಡಿಯುತ್ತಾರೆ ಹಾಗೂ ಅದು ಸಾಧ್ಯವೇ ಇಲ್ಲ ಎಂದು ಮನದಟ್ಟಾದಾಗ ಮಹಾತ್ಮಾ ಗಾಂಧಿ ಯಂತಹ ಮೇರು ವ್ಯಕ್ತಿತ್ವದ ವ್ಯಕ್ತಿಯನ್ನೇ ಪಿತೂರಿ ಮಾಡಿ ಕೊಲೆ ಮಾಡುತ್ತಾರೆ ಯಾ ಮಾಡಿಸುತ್ತಾರೆ. ಇಷ್ಟಾಗಿಯೂ ಕಾಂಗ್ರೆಸ್ ನಾಯಕರು ಅಂತಿಮವಾಗಿ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳೇ ಆಡಳಿತ ನಡೆಸುವ 'ಪ್ರಜಾಪ್ರಭುತ್ವ' ಮಾದರಿಯ ಸರ್ಕಾರ ಹಾಗೂ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಸಿದ್ದಾಂತದ 'ಅಂಬೇಡ್ಕರ್ ಸಂವಿಧಾನ' ವನ್ನು ಜಾರಿಗೊಳಿಸಿ ಯುಗಯುಗಗಳಿಂದ ಈ ನೆಲದ ಬಹುಸಂಖ್ಯಾತರಿಗೆ ನಿರಾಕರಿಸಲ್ಪಟ್ಟಿದ್ದ ವಿದ್ಯೆ, ಅಧಿಕಾರ ಮತ್ತು ಭೂಮಿಯ ಹಕ್ಕುಗಳನ್ನು ನೀಡುತ್ತಾರೆ. (ಭಾರತ ಮತ್ತು ಪಾಕಿಸ್ತಾನಕ್ಕೆ ಒಂದೇ ದಿನದ ಅಂತರದಲ್ಲಿ ಸ್ವಾತಂತ್ರ್ಯ ಲಭಿಸಿತ್ತಾದರೂ, 2012-13ರ ಹೊತ್ತಿಗೆ ಭಾರತ ವಿಶ್ವದ ಮೂರನೆಯ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳಲು 'ಅಂಬೇಡ್ಕರ್ ಸಂವಿಧಾನ' ದ ಆಶಯಗಳೇ ಕಾರಣವಾಗಿದ್ದವು ಹಾಗೂ ಪಾಕಿಸ್ತಾನ ಶಿಕ್ಷಣ, ಆರೋಗ್ಯ, ವಿಜ್ಞಾನ ಹಾಗೂ ದೇಶದ ಆರ್ಥಿಕತೆ ಮುಂತಾದ ರಂಗಗಳಲ್ಲಿ ಅತೀ ಹಿಂದುಳಿದ ರಾಷ್ಟ್ರವಾಗಿ ಉಳಿಯಲು ಆ ದೇಶದ ಆಡಳಿತ ಅಲ್ಲಿನ ಮೂಲಭೂತವಾದಿಗಳ ಕೈಯಲ್ಲಿ ಸಿಕ್ಕಿ ಆ ಮೂಲಕ ಧರ್ಮಾಧಾರಿತ ಸಂವಿಧಾನದ ರಚನೆಯಾಗಿದ್ದೆ ಕಾರಣವಾಗಿತ್ತು.) ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ಪರವಾಗಿ ಕೆಲಸ ಮಾಡಿ ಸ್ವಾತಂತ್ರ್ಯ ಹೋರಾಟಗಾರರಿಗೆ ಗಲ್ಲು ಶಿಕ್ಷೆ ಕೊಡಿಸಿದ್ದ ಹಾಗೂ ಸ್ವಾತಂತ್ರ್ಯಾ ನಂತರ ಅಂಬೇಡ್ಕರ್ ಸಂವಿಧಾನದ ಜಾರಿಗೆ ವಿರೋಧಿಸಿದ್ದ ಹಿಂದೂ ಮೂಲಭೂತವಾದಿ ನಾಯಕರುಗಳು (ಸ್ವಾತಂತ್ರ್ಯ ಪೂರ್ವದಲ್ಲಿ) 1925ರಲ್ಲಿ ಕಟ್ಟಿದ ಸಂಘಟನೆಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಯಾ ಆರೆಸ್ಸೆಸ್! ಹಾಗೆಯೇ ಈ ಸಂಘಟನೆ ಎಂದೂ ಸ್ವಾತಂತ್ರ್ಯ ಸಮರದಲ್ಲಿ ಭಾಗವಹಿಸಿರಲಿಲ್ಲ ಅಥವಾ ಅದರ ಯಾವುದೇ ನಾಯಕರ ಬಲಿದಾನ ಆಗಿಲ್ಲ ಎಂಬುವುದು ಇತಿಹಾಸದಲ್ಲಿ ದಾಖಲುಗೊಂಡಿರುವ ವಿಚಾರ. ಆದರಿಂದು ಅದೇ ಸಂಘಟನೆಯ ನೇತೃತ್ವದ ಬಿಜೆಪಿ ಎಂಬ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದೆ. 'ಕಾಂಗ್ರೆಸ್ ಮುಕ್ತ ಭಾರತ' ನಿರ್ಮಿಸುವುದಾಗಿ ಘೋಷಿಸಿಕೊಂಡಿದೆ. ನಿಜಕ್ಕೂ 'ಕಾಂಗ್ರೆಸ್ ಮುಕ್ತ ಭಾರತ್' ಎಂಬ ಘೋಷಣೆ, ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯಾ ನಂತರದ ಕಾಂಗ್ರೆಸ್‌ನ ಸಾಧನೆಗಳ ಕುರಿತು ಈ ಮೇಲೆ ವಿವರಿಸಿದ ಕನಿಷ್ಠ ಇತಿಹಾಸ ಜ್ಞಾನ ಹೊಂದಿಲ್ಲದ ಅಥವಾ ಬ್ರೈನ್ ವಾಷ್ ಗೊಳಗಾದ ಕಾರಣಕ್ಕಾಗಿ ಪೂರ್ವಾಗ್ರಹವನ್ನು ತಲೆಯಲ್ಲಿ ತುಂಬಿಸಿಕೊಂಡಿರುವ, ಮೋದಿ ಕುರಿತು ಕಪೋಲಕಲ್ಪಿತ ಭ್ರಮೆಯನ್ನು ತಲೆಯಲ್ಲಿ ತುಂಬಿಸಿಕೊಂಡಿರುವ ಅಂಧಭಕ್ತರ ಪಡೆ ದೇಶದಾದ್ಯಂತ ಮೋದಿ ಭಜನೆಯಲ್ಲಿ ತೊಡಗಿದೆ. ಮೋದಿ ಎಂದರೆ ವಿಷ್ಣುವಿನ ಹದಿಮೂರನೆ ಅವತಾರ ಎಂದು ಕೂಡ ಸಾರ್ವಜನಿಕವಾಗಿ, ಯಾವುದೇ ಮುಜುಗರ ಇಲ್ಲದೇ ಪ್ರಚಾರದಲ್ಲಿ ತೊಡಗಿದೆ. ಏನಿದು ಕಾಂಗ್ರೆಸ್ ಮುಕ್ತ ಭಾರತ? ಸ್ವಾತಂತ್ರ್ಯ ಪೂರ್ವದಲ್ಲಿ 'ಕಾಂಗ್ರೆಸ್' ಎಂದರೆ 'ಸ್ವಾತಂತ್ರ್ಯ ಹೋರಾಟ' ಎಂಬ ಅರ್ಥ ಹೊಂದಿದ್ದರೆ, ಸ್ವಾತಂತ್ರ್ಯಾ ನಂತರ 'ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು' ಸಿದ್ದಾಂತದ ಸಂವಿಧಾನ ಜಾರಿ ಮತ್ತದರ ರಕ್ಷಣೆಯೇ ಆಗಿತ್ತು. ಹಾಗೆಯೇ ಆ ಕಾಂಗ್ರೆಸ್ ಮುಕ್ತ ಭಾರತ ಘೋಷಣೆಯ ಹಿಂದೆ ಕಾಂಗ್ರೆಸ್ ಜಾರಿಗೊಳಿಸಿದ ಸಂವಿಧಾನವನ್ನು ಇಲ್ಲವಾಗಿಸುವ ಏಕೈಕ ಗುಪ್ತಕಾರ್ಯಸೂಚಿ ಇದೆ ಎಂಬುವುದು ಬೆರಳು ಚೀಪುವ ಎಳೆಮಕ್ಕಳಿಗೂ ಅರ್ಥವಾಗುವ ವಿಚಾರವಾಗಿದೆ. ಇದೇ ಸಮಯದಲ್ಲಿ ಬಿಜೆಪಿ ಹಿಂದಿರುವ ಮೂಲಭೂತವಾದಿಗಳ ನೇತೃತ್ವದ ಶಕ್ತಿಗಳು ಸಂವಿಧಾನ ಬದಲಾವಣೆಯ ಕುರಿತು ಅಭಿಯಾನ ಆರಂಭಿಸಿದೆ. ಸಂವಿಧಾನದ ಬದಲಾವಣೆಯಿಂದಾಗುವ ಅಪಾಯದ ಕುರಿತು ಅರಿವಿಲ್ಲದ ಅದೇ ಸಂವಿಧಾನದ ಫಲಾನುಭವಿಗಳನ್ನು ಭ್ರೈನ್‌ವಾಷ್ ಮಾಡಿ ಅದೇ ಅಭಿಯಾನದಲ್ಲಿ ಭಾಗಿಯಾಗಿಸಿಕೊಂಡಿದೆ. ದೇಶದ ಸಕಲ ಜನರಿಗೂ ಸೇರಬೇಕಾದ ಲಕ್ಷಾಂತರ ಕೋಟಿ ಬೆಲೆಬಾಳುವ ಸರ್ಕಾರಿ ಆಸ್ತಿಗಳನ್ನು ಮೂರುಕಾಸಿನ ಬೆಲೆಗೆ ತನ್ನ ಪಕ್ಷದ ಚುನಾವಣಾ ಖರ್ಚು ಭರಿಸುವ ಕಳ್ಳ ಉಧ್ಯಮಿಗಳಿಗೆ ಮಾರಾಟ ಮಾಡುತ್ತಿದೆ. ಆ ಮೂಲಕ ದೇಶವನ್ನು ಮತ್ತೆ ಶಿಲಾಯುಗದತ್ತ ಕೊಂಡೊಯ್ಯುತ್ತಿದೆ. ಹಾಗೂ ಆ ಸಂಘಟನೆ ಆರೆಸ್ಸೆಸ್ ಹಿಡೆನ್ ಅಜೆಂಡಾದ ಕುರಿತು ಅಥವಾ ಮನುವಾದ ಯಾ ಮನುವಾದಿಗಳ ಕುರಿತು ಚರ್ಚೆಯಾಗದಂತೆ ಕೂಡ ಜಾಗ್ರತೆ ವಹಿಸುತ್ತಲೇ ಬಂದಿದೆ. ಅದರ ಒಂದು ಮುಖ್ಯಭಾಗವೇ ಕಲ್ಬುರ್ಗಿ ಹಾಗೂ ಗೌರಿ ಲಂಕೇಶ್ ಹತ್ಯೆ ಎಂಬುದು ತನಿಖೆಯಿಂದ ಸಾಭೀತಾಗಿದೆ‌. ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ: ►► ನೀವು ಈ ಕೆಳಗಿನ ಲೇಖನಗಳನ್ನು ಓದಿಲ್ಲವೇ? ಅಗತ್ಯವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. ►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ. ►►ಎಳೆಮಕ್ಕಳ, ವಿದ್ಯಾರ್ಥಿಗಳ ಪ್ರಾಣಕ್ಕೆ ಮಾರಕವಾದ ಟೇಸ್ಟಿಂಗ್ ಪೌಡರ್ ಅನ್ನು ಸರ್ಕಾರ ಅದೇಕೆ ನಿಷೇಧಿಸುತ್ತಿಲ್ಲ? ►► ‘ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಭಾರತದಲ್ಲಿ ದಿಢೀರ್‌ ಜನಪ್ರಿಯರಾಗಲು ಇರುವ ಸರಳ ಮಾರ್ಗ ಯಾವುದು ಗೊತ್ತೇ? ►► ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್! ►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ! ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ. ►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) ►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ? ►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..! ►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ! ►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! ►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ? ►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್! ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. ►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ? ►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್ ►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ ►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) ►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►► *ಸ್ವಯಂ ಘೋಷಿತ ರಾಷ್ಟ್ರೀಯವಾದಿ ಸಂಘಟನೆ ಆರೆಸ್ಸೆಸ್, ಸ್ವಾತಂತ್ರ್ಯಾ ನಂತರ ಬರೋಬ್ಬರಿ ಮೂರು ಬಾರಿ ನಿಷೇಧಕ್ಕೊಳಗಾಗಲು ಕಾರಣಗಳೇನು?* ►► *ನೋಟುಬ್ಯಾನ್ ಮಾಡಿದ ನಂತರ ಪ್ರಧಾನಿ ಮೋದಿಯವರು, ಟೋಕಿಯೋದಲ್ಲಿ ಭಾರತದ ಜನರನ್ನು ಗೇಲಿಮಾಡಿ ಮಾಡಿದ ಭಾಷಣದ ಅಪರೂಪದ ವಿಡಿಯೋ.* ►►ಸಂಘಿಬಾನಿಗಳ ಆಡಳಿತದಲ್ಲಿ ಸಂವಿಧಾನ ಬದಲಾಗುತ್ತಾ? ಬದಲಾದರೆ ಏನೇನಾಗುತ್ತೆ ? ಮಿಸ್ ಮಾಡ್ದೆ ಈ ಲೇಖನ ಓದಿ.. ವಿಡಿಯೋ ನೋಡಿ! ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಸ್ವಾತಂತ್ರ ಹೋರಾಟವನ್ನು ಹತ್ತಿಕ್ಕಲು ಬ್ರಿಟೀಷರು, ಸಾವರ್ಕರ್ ರನ್ನು ದಾಳವಾಗಿ ಬಳಸಿದ್ದರೇ? ►►9 ಜನ್ಮದಲ್ಲಿ ಸ್ವರ್ಗಸುಖ ಸಿಗುತ್ತದೆ ಎಂದು ಗೌರಿಯನ್ನು ಕೊಲೆ ಮಾಡಿದ್ದ ಹಂತಕರು.. ತಾಲೀಬಾನ್, ಐಸಿಸ್ ಗಿಂತಲೂ ಅಸಹ್ಯವಾದ ಸಿದ್ದಾಂತವೇ ಕೊಲೆಗೆ ಕಾರಣ ►►ಸ್ವತಂತ್ರ ಭಾರತದ ಇತಿಹಾಸದಲ್ಲಿ ದಾಖಲೆಯಾಗುಳಿವ ಮೋದಿ ಸಾಧನೆಗಳು: ಮೋದಿ ವಿರೋಧಿಗಳು ಮತ್ತು ಬೆಂಬಲಿಗರು ತಿಳಿದುಕೊಳ್ಳಲೇ ಬೇಕಾದ ನಗ್ನಸತ್ಯಗಳು! ►►ಕಾಂಗ್ರೆಸ್‌ನಲ್ಲಿ ಪ್ರಮೋಷನ್‌ ಸಿಗಬೇಕಾದರೆ ಜೈಲಿಗೆ ಹೋಗಬೇಕು’ ಎಂದಿರುವ ಬಿಜೆಪಿ ನಾಯಕ ಸಿ.ಟಿ ರವಿಗೊಂದು ಬಹಿರಂಗ ಪತ್ರ ►►ಅಫ್ಘಾನಿಸ್ತಾನದ ಬೆಳವಣಿಗೆಗಳು ಸಾಬೀತುಪಡಿಸುತ್ತಿರುವುದು ಮೋದಿ ಸರ್ಕಾರದ ಸಿಎಎ ಕಾಯಿದೆಯ ದೂರದೃಷ್ಟಿಯನ್ನೋ ಅಥವಾ ಸಂಘೀಬಾನಿಗಳ ಧೂರ್ತತನವನ್ನೋ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ವಿದ್ಯುತ್ ತಿದ್ದುಪಡಿ ಮಸೂದೆ- 2021; ಕಾರ್ಪೊರೇಟ್ ಲಾಭ ಪ್ರಖರ – ರೈತ, ಕಾರ್ಮಿಕ ಬದುಕು ಬರ್ಬರ! ►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ಜಿಎಸ್‌ಟಿ ಕಟ್ಟಬೇಡಿ’- ದೇಶದ ವರ್ತಕರಿಗೆ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಕರೆ! ►►ಬುರ್ಖಾ, ಜನಿವಾರ, ಮೂಲಭೂತವಾದ, ಕೋಮುವಾದ ಮತ್ತು ಸಮಾನತಾವಾದ ►►ಪತ್ರಕರ್ತರೇ ಎಚ್ಚರ: ಮೋದಿ ಸರ್ಕಾರದ ವೈಫಲ್ಯಗಳ ವಿರುದ್ದ ಬರೆದರೆ ಐಟಿ ದಾಳಿ ನಡೆಯಲಿದೆ ಹುಷಾರ್! ►►ಆರ್ ಎಸ್ ಎಸ್ ಸಿದ್ದಾಂತವನ್ನು ಒಪ್ಪುವವರು ಕಾಂಗ್ರೆಸ್ ಪಕ್ಷಕ್ಕೆ ಅಗತ್ಯ ಇಲ್ಲ. ಬಿಜೆಪಿಗೆ ಹೆದರುವವರು ಪಕ್ಷದಿಂದ ಹೊರಟು ಹೋಗಬಹುದು! ►►ಅಂಬೇಡ್ಕರ್ ಸಂವಿಧಾನದ ವಿರೋಧಿಗಳು ಸಂವಿಧಾನಾತ್ಮಕ ಹುದ್ದೆಯಲ್ಲಿರುವುದು ದೇಶದ ಭವಿಷ್ಯಕ್ಕೆ ಬಹು ಅಪಾಯಕಾರಿ

Advertisement
Advertisement
Recent Posts
Advertisement