Advertisement

'ತೇಜಸ್ವಿ ಸೂರ್ಯ ಎಂಬ ಅಪಕ್ವ ಯುವಕ ಹಾಗೂ ಸಂಘ ಪರಿವಾರದ ದ್ವೇಷಭಕ್ತಿ'

Advertisement

ಬರಹ: ಡಾ. ಜೆ ಎಸ್ ಪಾಟೀಲ‌ (ಲೇಖಕರು ಜನಪರ ಚಿಂತಕರು) ಕರ್ನಾಟಕದ ಮಟ್ಟಿಗೆ ಯಡಿಯೂರಪ್ಪ ನವರು ತನ್ನ ಸ್ವಾರ್ಥ ಮತ್ತು ಶ್ರಮದ ಮೂಲಕ ಕಟ್ಟಿದ ಬಿಜೆಪಿಯಲ್ಲಿ ಸಂಘ ಪರಿವಾರ ಅಂದು ಅನಂತಕುಮಾರರನ್ನು ಪ್ರತಿಷ್ಟಾಪಿಸಿದ ಕತೆ ನಾವೆಲ್ಲರು ಬಲ್ಲೆವು. ಅನಂತಕುಮಾರ ಕಾಲವಾದ ನಂತದ ಆ ಸ್ಥಾನ ತುಂಬುವ ಸಂಘದವರ ಸಮುದಾಯಕ್ಕೆ ಸೇರಿದವರು ಬಿಜೆಪಿಯಲ್ಲಿ ಯಾರೂ ಇಲ್ಲದ ಕಾರಣ ಯಡಿಯೂರಪ್ಪನವರು ಕಟ್ಟಿದ ಮನೆಗೆ ತಮ್ಮವರೊಬ್ಬರನ್ನು ಯಜಮಾನನನ್ನಾಗಿ ಮಾಡುವ ಸಂಘದ ಪ್ರಯತ್ನದ ಭಾಗವೇ ತೇಜಸ್ವಿ ಸೂರ್ಯ ಎನ್ನುವ ಹುಡುಗನಿಗೆ ಸಿಗುತ್ತಿರುವ ಪ್ರಾಶಸ್ಥ್ಯ. ಈ ಹುಡುಗ ಯಡಿಯೂರಪ್ಪ ಬೀದಿಬೀದಿ ಸುತ್ತಿ ಬೆವರು ಹರಿಸಿ ಕಟ್ಟಿದ ಬಿಜೆಪಿಯಲ್ಲಿ ಈಗ ಅನಾಯಾಸವಾಗಿ ಅಧಿಕಾರ ಅನುಭವಿಸುತ್ತಿರುವುದು. ತೇಜಸ್ವಿ ಸೂರ್ಯ ಸಂಘ ಪರಿವಾರದ ಭಾಗವಾಗಿರುವ ವಿದ್ಯಾರ್ಥಿ ಪರಿಷತ್ತಿನಲ್ಲಿರುವ ಕಾಲದಿಂದಲೇ ಟಿವಿ ಸಂವಾದಗಳಿಗೆ ಆತನನ್ನು ಕಳಿಸುವ ಮೂಲಕ ಆತನನ್ನು ಪ್ರಮೋಟ್ ಮಾಡುವ ಕೆಲಸ ಸದ್ದಿಲ್ಲದೆ ನಡೆಯುತ್ತಿತ್ತು. ತನ್ನ ನಂತರ ತನ್ನ ಮಗ ಬಿಜೆಪಿ ಉತ್ತರಾಧಿಕಾರಿಯಾಗಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದ ಯಡಿಯೂರಪ್ಪ ತೆಜಸ್ವಿಯನ್ನು ಬೆಳೆಸುತ್ತಿರುವ ಸಂಘದ ಗುಪ್ತ ಹುನ್ನಾರ ಅರಿಯದೆ ಹೋದರು. ನಮ್ಮ ಉತ್ತರ ಕರ್ನಾಟಕದವರೇ ಆಗಿರುವ ಹಿರಿಯ ರಾಜನೀತಜ್ಞ ಸುಧೀಂದ್ರ ಕುಲಕರ್ಣಿಯವರನ್ನು ನಾವೆಲ್ಲ ಬಲ್ಲೆವು. ಅವರು ಮೊದಲು ಎಡಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದು ೧೯೯೦ ರ ದಶಕದಲ್ಲಿ ಬಿಜೆಪಿ ಸೇರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಅವರಿಗೆ ಸಲಹೆಗಾರರಾಗಿ ಕೆಲಸ ಮಾಡಿದವರು. ಅಂದಿನ ಬಿಜೆಪಿ ಅಗ್ರಗಣ್ಯ ನಾಯಕರೊಂದಿಗೆ ಅನ್ಯೊನ್ಯ ಸಂಬಂಧ ಹೊಂದಿದವರು. ಮೋದಿ ನಿಯಂತ್ರಿತ ಬಿಜೆಪಿಯಿಂದ ಈಗ ಕುಲಕರ್ಣಿಯವರು ಬಹುತೇಕ ಹಿರಿಯ ನಾಯಕರಂತೆ ಬಿಜೆಪಿಯಿಂದ ಅಂತರವನ್ನು ಕಾಯ್ದುಕೊಂಡಿದ್ದಾರೆ. ಕುಲಕರ್ಣಿಯವರು ಕಳೆದ ವಾರ ದಿ ಸ್ಕ್ರೋಲ್.ಇನ್ ವೆಬ್ ಪತ್ರಿಕೆಯಲ್ಲಿ ಈ ತೆಜಸ್ವಿ ಕುರಿತು ಒಂದು ಸುದೀರ್ಘ ಲೇಖನವನ್ನು ಬರೆದಿದ್ದಾರೆ. ಲೇಖನದ ಉದ್ದಕ್ಕೂ ಅವರು ಬಿಜೆಪಿ ಹಾಗು ಸಂಘ ಪರಿವಾರದ ದ್ವೇಷಭಕ್ತಿಯನ್ನು ಪರಿಣಾಮಕಾರಿಯಾಗಿ ಅನಾವರಣ ಮಾಡಿದ್ದಾರೆ. ಹಿಂದೂ ಸಂಸ್ಕೃತಿಯು ಜಗತ್ತಿನಲ್ಲಿ ತನ್ನ ಅವಿಶ್ವಾಸನೀಯ ವೈವಿಧ್ಯತೆˌ ಅವಿಚ್ಛಿನ್ನ ಸಹಿಷ್ಣುತೆ ಮತ್ತು ಇತರರ ನಂಬಿಕೆಗಳು ಹಾಗು ಸಂಸ್ಕೃತಿಗಳನ್ನು ಗೌರವಿಸುವ ಗುಣಗಳಿಗಾಗಿ ವ್ಯಾಪಕವಾಗಿ ಪ್ರಶಂಸಿಸಲಾಗುತ್ತದೆ. ಆ ಕಾರಣದಿಂದ ಫ್ಯಾಬ್-ಇಂಡಿಯಾ ಬಸಿಷ್ಕರಿಸುವ ತೇಜಸ್ವಿ ಸೂರ್ಯನ ಟ್ವೀಟ್ ಹಿಂದೂ ಧರ್ಮದ ಆತ್ಮವನ್ನು ನೋಯಿಸಿದೆ ಎಂದು ಕುಲಕರ್ಣಿಯವರು ಕುಟುಕಿದ್ದಾರೆ. ಕುಲಕರ್ಣಿಯವರು ಇವತ್ತಿನ ಬಿಜೆಪಿಯ ನಾಯಕರ ಅಹಸ್ಯಕರ ನಡವಳಿಕೆಯನ್ನು ತೀಕ್ಷ್ಣವಾಗಿ ವಿಮರ್ಶಿಸಿದ್ದಾರೆ. ಬಿಜೆಪಿಯ ಕೆಲವು ಹೊಸ ತಳಿಯ ನಾಯಕರ ಅತಿಯಾದ ಮೂರ್ಖತನ, ಅಸಹಿಷ್ಣುತೆ ಮತ್ತು ದುರಹಂಕಾರಕ್ಕೆ ಇಂದು ಯಾವುದೆ ಅಂಕೆ ಅಥವಾ ಮಿತಿ ಇಲ್ಲದಂತಾಗಿದೆ. ಅಧಿಕಾರದ ಅಮಲು ಏರಿಸಿಕೊಂಡ ಆ ಪಕ್ಷದ ನಾಯಕರು ಏನು ಬೇಕಾದನ್ನು ಮಾಡಿ ದಕ್ಕಿಸಿಕೊಳ್ಳಬಹುದು ಎಂದು ಭಾವಿಸಿದಂತಿದೆ. ಕೇವಲ ಹಿಂಸೆಗೆ ಪ್ರಚೋದನೆ ನೀಡುವ ಹೇಳಿಕೆಗಳಷ್ಟೇ ಅಲ್ಲದೆ ಈ ನೆಲದ ಮುಗ್ಧ ಜನರ ಮೇಲೆ ದೈಹಿಕ ಹಿಂಸೆ ಮತ್ತು ಆರ್ಥಿಕ ಭಯೋತ್ಪಾದನೆಯನ್ನು ಸಹ ಪ್ರಚೋದಿಸುತ್ತಿದ್ದಾರೆ ಎಂದು ಕುಲಕರ್ಣಿಯವರು ಗುಡುಗಿದ್ದಾರೆ. ಹಿಂದೂ ಸಮಾಜದ ಮೇಲೆ ಕಟ್ಟುನಿಟ್ಟಾದ ಸಾಂಸ್ಕೃತಿಕ ಏಕರೂಪತೆಯನ್ನು ಒತ್ತಾಯಪೂರ್ವಕವಾಗಿ ಹೇರುವ ಪ್ರಯತ್ನದ ಮೂಲಕ ಬಿಜೆಪಿಯವರು ಹಿಂದೂ ಧರ್ಮದ ಆತ್ಮವನ್ನು ಘಾಸಿಗೊಳಿಸುತ್ತಿದ್ದಾರೆ. ಬಿಜೆಪಿಯ ಈ ನಡೆ ಭಾರತೀಯ ಸಮಾಜದ ವೈವಿಧ್ಯತೆˌ ಬಹುತ್ವದಲ್ಲಿನ ನಂಬಿಕೆˌ ವೈವಿದ್ಯ ಸಂಸ್ಕೃತಿˌ ಹಾಗು ಸಹಿಷ್ಣುತೆಗಳಿಗಾಗಿ ಜಾಗತಿಕ ಗೌರವ ಪಡೆದಿರುವ ಭಾರತದ ಆತ್ಮವನ್ನು ನೋಯಿಸಿದೆ ಎಂದು ಕುಲಕರ್ಣಿಯವರು ಅಭಿಪ್ರಾಯ ಪಟ್ಟಿದ್ದಾರೆ. ಸಂಘ ಪರಿವಾರ ಸ್ಥಾಪಕರ ಸಮುದಾಯಕ್ಕೆ ಸೇರಿದ ಬಿಜೆಪಿಯ ಉದಯೋನ್ಮುಖ ಪುಢಾರಿˌ ಪಕ್ಷದ ಯುವ ಘಟಕದ ಅಧ್ಯಕ್ಷ ಮತ್ತು ಬೆಂಗಳೂರು ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಮಾಡಿರುವ ಟ್ವೀಟ್ ಗಾರ್ಮೆಂಟ್ಸ್ ಮತ್ತು ಫರ್ನಿಶಿಂಗ್ ಬ್ರ್ಯಾಂಡ್ ಫ್ಯಾಬ್-ಇಂಡಿಯಾ ಕಂಪನಿಯ ಜಾಹೀರಾತಿಗೆ ಕುಚ್ಯೋದ್ಯದಿಂದ ಪ್ರತಿಕ್ರಿಯಿಸಿದ ಕುರಿತು ಕುಲಕರ್ಣಿಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಪುಢಾರಿ ತೆಜಸ್ವಿ ಸೂರ್ಯನ ಟ್ವೀಟನಲ್ಲಿ ಅಡಕವಾಗಿರುವ ವಿಕೃತ ಆಕ್ರೋಶದ ಹಿಂದಿನ ತಪ್ಪುಗಳನ್ನು ಕುಲಕರ್ಣಿಯವರು ಐದು ಸಂಗತಿಗಳ ಮೂಲಕ ವಿವರಿಸಿದ್ದಾರೆ. ಮೊದಲನೆಯದು: ಹಿಂದೂ ಹಬ್ಬಗಳ ಅಬ್ರಾಹ್ಮಣೀಕರಣದ ಬಗ್ಗೆ ತೇಜಸ್ವಿ ಸೂರ್ಯನ ಆರೋಪವು ಮೂಲದಲ್ಲಿ ಬ್ರಾಹ್ಮಣೇತರರ ಇಂಗ್ಲೀಷ್ ಭಾಷೆಯಲ್ಲಿರುವುದು ವಿಪರ್ಯಾಸ. ಹಿಂದುತ್ವದ ವಿಕೃತಿಗಳನ್ನು ಯುವ ಜನರಿಗೆ ಕಲಿಸುವ ಶಾಲೆಯಲ್ಲಿ ಇಂಗ್ಲಿಷ್ ಒಂದು ಮೂಲ ಭಾರತೀಯ ಭಾಷೆ ಎಂದು ಪರಿಗಣಿಸಲಾಗಿದೆಯೆ ಎಂದು ವ್ಯಂಗ್ಯವಾಗಿ ಕುಲಕರ್ಣಿಯವರು ಪ್ರಶ್ನಿಸಿದ್ದಾರೆ. ಎರಡು: ಕೇವಲ ಸಾಂಪ್ರದಾಯಿಕ ಹಿಂದೂ ಉಡುಪುಗಳನ್ನು ಧರಿಸಿ ದೀಪಾವಳಿ ಹಬ್ಬ ಆಚರಿಸಬೇಕೆಂದು ಎಂದು ಒತ್ತಾಯಿಸುವ ಸೂರ್ಯಗೆ ಸಾಂಪ್ರದಾಯಿಕ ಹಿಂದೂ ಉಡುಪುಗಳು ಯಾವುವು ಎಂದು ಪ್ರಶ್ನಿಸುತ್ತ ಮುಂಬೈನ ಕೊಳೆಗೇರಿಗಳಲ್ಲಿ ಲಕ್ಷಾಂತರ ಬಡ ಹಿಂದೂಗಳು ತಮ್ಮ ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಬೌದ್ಧ ಧರ್ಮದ ನೆರೆಹೊರೆಯವರೊಂದಿಗೆ ದೀಪಾವಳಿಯನ್ನು ಹೇಗೆ ಆಚರಿಸುತ್ತಾರೆ ಎಂಬುದನ್ನು ನೋಡಿ ಕಲಿಯಲಿ ಎಂದು ಬುದ್ದಿವಾದ ಹೇಳಿದ್ದಾರೆ. ಈ ಬಡ ಹಿಂದೂಗಳ್ಯಾರೂ ಮಾನ್ಯವರ್ ಅಥವಾ ಮೋಹೆ ಬ್ರ್ಯಾಂಡಿನ ಸಾಂಪ್ರದಾಯಿಕ ಹಿಂದೂ ಉಡುಪನ್ನು ಧರಿಸುವುದಿಲ್ಲ. ಆದರೂ, ಅವರು ಆಚರಿಸುವ ಹಬ್ಬವು ಕೋಟ್ಯಾಧಿಪತಿಗಳು ಆಚರಿಸುವ ಹಬ್ಬಕ್ಕಿಂತ ಹೆಚ್ಚು ಅರ್ಥಪೂರ್ಣವಾಗಿರುತ್ತದೆ ಎಂದು ಕುಲಕರ್ಣಿಯವರು ಸೂರ್ಯನಿಗೆ ತಿಳಿಹೇಳಿದ್ದಾರೆ. ಭಾರತೀಯ ಪುರುಷರು ಇಂದು ಸಾಮಾನ್ಯವಾಗಿ ಪ್ಯಾಂಟ್ ಮತ್ತು ಶರ್ಟ್ ಧರಿಸುತ್ತಾರೆ. ಈ ದಿರಿಸು ಭಾರತೀಯ ಮೂಲದ್ದಲ್ಲ. ವಸಾಹತುಶಾಹಿ ಯುಗದಲ್ಲಿ ಕ್ರಿಶ್ಚಿಯನ್ ಇಂಗ್ಲೆಂಡ್ನಿಂದ ಭಾರತಕ್ಕೆ ಬಂದದ್ದು. ಆದರೆ ಆ ದಿರಿಸು ಈಗ ಭಾರತದ ಸಾಮಾಜಿಕ-ಸಾಂಸ್ಕೃತಿಕ ಸಂಪ್ರದಾಯಗಳ ಭಾಗವಾಗಿವೆ. ನಾನು ದೀಪಾವಳಿ ಮತ್ತು ಇತರ ಹಬ್ಬದ ದಿನಗಳಲ್ಲಿ ಅದೇ ಉಡುಪನ್ನು ಧರಿಸುತ್ತೇನೆ. ಹಾಗೆ ಮಾಡುವುದರಿಂದ ನಾನು ಮತ್ತು ನನ್ನಂತಹ ಲಕ್ಷಾಂತರ ಜನ ಧರ್ಮನಿಷ್ಠ ಹಿಂದೂಗಳು ಸಾರ್ಟೋರಿಯಲ್ ಕ್ರಿಶ್ಚಿಯನ್ನರಾಗುತ್ತೇವೆಯೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಮೂರು: ಭಾರತದಾದ್ಯಂತ ಯಾವುದೇ ಹಿಂದೂ ಹಬ್ಬವನ್ನು ಏಕರೂಪವಾಗಿ ಆಚರಿಸಲಾಗುವುದಿಲ್ಲ. ದೀಪಾವಳಿಯ ಸಾಮಾನ್ಯ ಅಂಶವೆಂದರೆ ದೀಪಗಳನ್ನು ಬೆಳಗಿಸುವುದು. ಕತ್ತಲೆಯ ಮೇಲೆ ಬೆಳಕಿನ ಜಯˌ ಅಜ್ಞಾನದ ಮೇಲೆ ಜ್ಞಾನದ ಪ್ರಭುತ್ವ ˌ ಕೆಟ್ಟದ್ದರ ಮೇಲೆ ಒಳ್ಳೆಯದರ ಜಯ ಮತ್ತು ಸಾವಿನ ಮೇಲೆ ಅಮರತ್ವದ ವಿಜಯವನ್ನು ಸೂಚಿಸುತ್ತದೆ. ಜೈನರು, ಸಿಖ್ಖರು ಮತ್ತು ಕೆಲವು ಬೌದ್ಧರು ತಮ್ಮ ದೀಪಾವಳಿಯನ್ನು ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ ಎನ್ನುವ ಮೂಲಕ ತೆಜಸ್ವಿ ಸೂರ್ಯ ಎಂಬ ಮೆದಳು ಬಲಿಯದ ಬಾಲಕನಿಗೆ ತಿವಿದು ಬುದ್ದಿ ಹೇಳಿದ್ದಾರೆ. ಹೌದು ಕರ್ನಾಟಕದಲ್ಲಿ ಲಿಂಗಾಯತರು ಚಿನ್ಮಯಜ್ಞಾನಿ ಚೆನ್ನಬಸಣ್ಣನವರ ಜಯಂತಿಯ ನಿಮಿತ್ಯ ದಿಪಾವಳಿ ಹಬ್ಬವನ್ನು ವಚನಗಳ ಜ್ಞಾನ ದಿಪಾವಳಿಯಾಗಿ ಆಚರಿಸುತ್ತಾರೆ. ಕುಲಕರ್ಣಿಯವರ ಮಾತಿನಲ್ಲಿ ಅರ್ಥವಿದೆ. ಆದರೆ ತೆಜಸ್ವಿಯಂತ ಸಂಘ ಪರಿವಾರ ಪ್ರಾಯೋಜಿತ ಬೌದ್ದಿಕವಾಗಿ ದಿವಾಳಿಯಾದ ಯುವಕರಿಗೆ ತಿಳಿಯುವುದಾದರೂ ಹೇಗೆ?ಸರ್ವರ ನಡುವೆ ಸಮನ್ವಯತೆ ಸಾಧಿಸುವುದು ಭಾರತೀಯರ ಹಬ್ಬಗಳ ಆಚರಣೆಯ ಒಂದು ಭಾಗವಾಗಿದೆ. ನಮ್ಮ ಗ್ರಾಮೀಣ ಭಾಗದಲ್ಲಿ ಮುಸ್ಲಿಮರು ಸೇರಿದಂತೆ ಇಡೀ ಹಳ್ಳಿಯ ಎಲ್ಲ ಸಮುದಾಯದ ಜನರು ದಿಪಾವಳಿˌ ಈದ್ ಸೇರಿದಂತೆ ಎಲ್ಲಾ ಹಬ್ಬಗಳನ್ನು ಒಟ್ಟಿಗೆ ಸೇರಿ ಆಚರಿಸುತ್ತಾರೆ. ಅಲ್ಲಿನ ಸಂಪ್ರದಾಯಗಳ ನಡುವೆ ಬ್ರಾಹ್ಮಣೀಕೃತ ಅಥವಾ ಅಬ್ರಾಹ್ಮಣೀಕೃತ ಎಂಬ ಸಂಘ ಪರಿವಾರ ಹುಟ್ಟು ಹಾಕಿರುವ ಯಾವುದೇ ಬಗೆಯ ಕೃತಕ ವ್ಯತ್ಯಾಸಗಳು ಇರುವುದಿಲ್ಲ ಎಂದು ಮಾರ್ಮಿಕವಾಗಿ ಭಾರತಿಯ ಬಹುತ್ವ ಸಂಸ್ಕೃತಿಯನ್ನು ವರ್ಣಿಸಿದ್ದಾರೆ. ನಾವು ನಮ್ಮ ಮನೆಗಳಲ್ಲಿ ಕ್ರಿಸ್‌ಮಸ್ ಆಚರಿಸಿವಾಗ ನಮ್ಮ ಕ್ರಿಶ್ಚಿಯನ್ ಸ್ನೇಹಿತರು ಅದು ಅಬ್ರಾಹ್ಮಣಿಕೃತ ಎಂದು ದೂರುವುದಿಲ್ಲ. ನಮ್ಮ ಮುಸ್ಲಿಂ ಸ್ನೇಹಿತರು ದೀಪಾವಳಿ, ಹೋಳಿ ಅಥವಾ ದಸರಾದಲ್ಲಿ ನಮಗೆ ಶುಭಾಶಯಗಳು ಹೇಳುವಾಗ ಅವರು ಅದನ್ನು "ಹಿಂದೂ" ಅಥವಾ ಬ್ರಾಹ್ಮಣೀಕೃತ ರೀತಿಯಲ್ಲಿ ಹೇಳಬೇಕು ಎಂದು ನಾವು ಒತ್ತಾಯಿಸುವುದಿಲ್ಲ ಎಂದು ಕುಲಕರ್ಣಿಯವರು ಪ್ರತಿಪಾದಿಸಿದ್ದಾರೆ. ಹೀಗೆ ಕುಲಕರ್ಣಿಯವರು ತೆಜಸ್ವಿ ಸೂರ್ಯನ ಚಿಲ್ಲರೆ ಮನಸ್ಥಿತಿಯ ಟ್ವೀಟ್ ನ್ನು ಬಹಳ ಅರ್ಥಪೂರ್ಣವಾಗಿ ವಿಮರ್ಶಿಸಿದ್ದಾರೆ. ಸುಧೀಂದ್ರ ಕುಲಕರ್ಣಿಯವರು ಈ ಅಂಕಣದಲ್ಲಿ ತಮ್ಮ ಕೆಲವು ವೈಯಕ್ತಿಕ ಅನುಭವಗಳನ್ನು ವಿವರಿಸಿದ್ದಾರೆ. ಅವರು ಕೆಲವು ವರ್ಷಗಳ ಹಿಂದೆ ಪಾಕಿಸ್ತಾನಿ-ಕೆನಡಾದ ಖ್ಯಾತ ಸೂಫಿ ವಿದ್ವಾಂಸರಾದ ತಾಹಿರ್-ಉಲ್-ಖಾದ್ರಿ ಅವರನ್ನು ಭೇಟಿ ಮಾಡಲು ಟೊರೊಂಟೊಗೆ ಹೋಗಿದ್ದರಂತೆ. ಖಾದ್ರಿಯವರ ಅನೇಕ ಪುಸ್ತಕಗಳಲ್ಲಿ ಭಯೋತ್ಪಾದನೆ ಮತ್ತು ಆತ್ಮಹತ್ಯಾ ಬಾಂಬ್‌ಗಳ ಕುರಿತು ಫತ್ವಾ ಇರುವ ಬಗ್ಗೆ, ವಿಶೇಷವಾಗಿ ಇಸ್ಲಾಂ ಹೆಸರಿನಲ್ಲಿ ಭಯೋತ್ಪಾದನೆ, ಉಗ್ರವಾದ ಮತ್ತು ದ್ವೇಷ ಹರಡುವಿಕೆ ಪವಿತ್ರ ಕುರ್‌ಆನ್‌ನ ಮೂಲ ಬೋಧನೆಗಳಿಗೆ ಹೇಗೆ ತದ್ವಿರುದ್ಧ ಎಂಬುದನ್ನು ಖಾದ್ರಿಯವರ ಚಿಂತನೆಗಳ ಮೇಲೆ ಕುಲಕರ್ಣಿಯವರು ಬೆಳಕು ಚೆಲ್ಲಿದ್ದಾರೆ. ಕುಲಕರ್ಣಿಯವರು ಖಾದ್ರಿಯವರನ್ನು ಭೇಟಿ ಮಾಡಿದ್ದರ ಉದ್ದೇಶ ಹಿಂದೂ ಮತ್ತು ಇಸ್ಲಾಂ ಧರ್ಮಗಳ ನಡುವೆ ಹಾಗು ಭಾರತ ಮತ್ತು ಪಾಕಿಸ್ತಾನದ ನಡುವೆ ಉತ್ತಮ ಸಂಬಂಧವನ್ನು ಹೇಗೆ ಉತ್ತೇಜಿಸುವುದು ಎಂದು ಅವರಿಂದ ತಿಳಿದುಕೊಳ್ಳುವುದಾಗಿತ್ತು ಎಂದು ಹೇಳಿಕೊಂಡಿದ್ದಾರೆ. ದೀಪಾವಳಿಯ ದಿನ ಕುಲಕರ್ಣಿಯವರು ಟೊರಾಂಟೊಗೆ ಬಂದಿಳಿದಾಗ ಬಹು ಆಶ್ಚರ್ಯಕರ ರೀತಿಯಲ್ಲಿ ಖಾದ್ರಿಯವರು ದೀಪಗಳ ವಿಶೇಷ ಅಲಂಕಾರದೊಂದಿಗೆ ಕುಲಕರ್ಣಿಯವರನ್ನು ಸ್ವಾಗತಿಸುತ್ತ ಸಸ್ಯಾಹಾರಿ ಭೋಜನಕೂಟವನ್ನು ಏರ್ಪಡಿಸಿದ್ದರಂತೆ. ಪ್ರಾರ್ಥನೆಯ ನಂತರ ಉಭಯತರು ಊಟ ಮಾಡಿದ್ದು ˌ ಇಬ್ಬರೂ ತಮ್ಮ ತಮ್ಮ ಧಾರ್ಮಿಕ ಪದ್ದತಿಯಂತೆ ಒಟ್ಟಿಗೆ ಪ್ರಾರ್ಥನೆ ಮಾಡಿದ್ದರ ಕುರಿತು ಕುಲಕರ್ಣಿಯವರು ಬರೆದಿದ್ದಾರೆ. ಆಗ ನಾನು ಖಾದ್ರಿಯವರು ನಮ್ಮ ದಿಪಾವಳಿ ಹಬ್ಬವನ್ನು "ಅಬ್ರಾಹ್ಮಣೀಕರಣಗೊಳಿಸಿದರೆಂದು ದೂರಬೇಕಿತ್ತೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ನಾಲ್ಕು: ತೇಜಸ್ವಿ ಸೂರ್ಯ ತನ್ನ ಟ್ವೀಟ್‌ನಲ್ಲಿ "ಹಿಂದೂ" ಎಂಬ ಪದವನ್ನು ಬಳಸಿದ್ದು ಇದು ಮೂಲದಲ್ಲಿ ಅಬ್ರಾಹ್ಮಣೀಕೃತ ಪದ ಎಂದು ಕುಲಕರ್ಣಿಯವರು ತಕರಾರು ತೆಗೆದಿದ್ದಾರೆ. "ಹಿಂದ್" ಮತ್ತು "ಹಿಂದೂ" ಪದಗಳನ್ನು ಪರ್ಷಿಯನ್ನರು ಮತ್ತು ಅರಬ್ಬರು ಮೊದಲ ಬಾರಿಗೆ ಬಳಸಿದ ಬಗ್ಗೆ ಬೆಟ್ಟದಷ್ಟು ಪುರಾವೆಗಳಿರುವುದಾಗಿಯೂˌ ನಮ್ಮ ರಾಷ್ಟ್ರದ ಹೆಸರು "ಭಾರತ" ಕೂಡ ಅಬ್ರಾಹ್ಮಣೀಕೃತ ಶಬ್ಧ ಎಂದು ಕುಲಕರ್ಣಿಯವರು ವಾದಿಸಿದ್ದಾರೆ. ಹಾಗಾಗಿ ತೆಜಸ್ವಿ ಸೂರ್ಯನಿಗೆ ಅಬ್ರಾಹ್ಮಣೀಕೃತ ಶಬ್ಧಗಳ ಬಗ್ಗೆ ಅಲರ್ಜಿ ಇದ್ದರೆ ತನ್ನನ್ನು ತಾನು ಹಿಂದೂ ಮತ್ತು ಭಾರತೀಯ ಎಂದು ಕರೆದುಕೊಳ್ಳುವುದು ಮೊದಲು ನಿಲ್ಲಿಸಲಿ ಎಂದು ಕುಲಕರ್ಣಿಯವರು ಬುದ್ದಿವಾದ ಹೇಳಿದ್ದಾರೆ. ಹಿಂದೂ ಹಬ್ಬಗಳ ಅಬ್ರಾಹ್ಮಣೀಕರಣದ ಉದ್ದೇಶದಿಂದ ಫ್ಯಾಬ್-ಇಂಡಿಯಾ ದೀಪಾವಳಿ ಜಾಹಿರಾತಿನಲ್ಲಿ ಉರ್ದು ಪದಗಳು ಬಳಸಿದೆ ಎನ್ನುವುದು ತೆಜಸ್ವಿಯ ಆಕ್ಷೇಪ. ಅದೇ ತರ್ಕದಿಂದ ಯೋಚಿಸಿದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೋಟ್ಯಂತರ ಗುಜರಾತಿಗಳು "ಸಾಲ್ ಮುಬಾರಕ್" ಅಥವಾ "ದೀಪಾವಳಿ ನಿ ಮುಬಾರಕ್", ಎಂಬ ಉರ್ದು/ಪರ್ಷಿಯನ್ ಶಬ್ಧಗಳಿಂದ ಪರಸ್ಪರರು ಹಿಂದೂ ಹಬ್ಬಗಳಲ್ಲಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದೇಕೆ ಎಂದು ಕುಲಕರ್ಣಿಯವರು ಪ್ರಶ್ನಿಸಿದ್ದಾರೆ. ಮೊನ್ನೆ ಮೊನ್ನೆ ಒಕ್ಕೂಟ ಸರಕಾರ ಆಚರಿಸಿದ ಸ್ವಾತತ್ರೋತ್ಸವದ ಅಮೃತ ಮಹೋತ್ಸವಕ್ಕೆ "ಅಜಾದಿ ಕಾ ಅಮೃತ ಮಹೋತ್ಸವ್" ಎಂದು ಶಿರ್ಷಿಕೆ ನೀಡಲಾಗಿತ್ತು. ಈ ಆಜಾದಿ ಶಬ್ಧವು ರ್ಷಿಯನ್/ಉರ್ದು ಮೂಲದ್ದು ಎನ್ನುವ ಸಂಗತಿ ಹಾಗು ಅದು ಅಬ್ರಾಹ್ಮಣೀಕೃತ ಶಬ್ಧ ಎಂದ ಸತ್ಯ ತೆಜಸ್ವಿ ಸೂರ್ಯನಂತ ಅಪಕ್ವ ಯುವಕನಿಗೆ ತಿಳಿದಿಲ್ಲವೆ ಎಂದು ಪ್ರಶ್ನಿಸಿದ್ದಾರೆ. ತೆಜಸ್ವಿ ಸೂರ್ಯ ಅಥವಾ ಆತನಂತಿರುವ ಕ್ಷುಲ್ಲಕ ಮನಸ್ಥಿತಿಯ ಅನೇಕ ಜನರು "ಜಶ್ನ್-ಎ-ಆಜಾದಿ" ಎಂದು ಸ್ವಾತಂತ್ರ್ಯ ದಿನಾಚರಣೆಗೆ ಭಾರತದಲ್ಲಿ ಅತ್ಯಂತ ಸಾಮಾನ್ಯವಾಗಿ ಕರೆಯುತ್ತ ಬಂದಿರುವ ಸಂಗತಿ ಗಮನಿಸಬೇಕು. ಬಿಜೆಪಿ ಮತ್ತು ಸಂಘ ಪರಿವಾರದವರು ಉರ್ದು ಪದಗಳ ಬಗ್ಗೆ ಅಷ್ಟು ತೀವ್ರವಾದ ಅಸಹ್ಯ ಹೊಂದಿರುವುದರಿಂದ ಖಂಡಿತವಾಗಿಯೂ ಅವರನ್ನು ಇನ್ನಷ್ಟು ಕೆರಳಿಸುವ ಮಾಹಿತಿ ಕುಲಕರ್ಣಿಯವರು ನೀಡುತ್ತಾರೆ. ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವದಂದು ರಾಷ್ಟ್ರಗೀತೆಯ ಜೊತೆಗೆ ಏಕರೂಪವಾಗಿ ಹಾಡುವ ಇನ್ನೊಂದು ದೇಶಭಕ್ತಿ ಗೀತೆ ಅಂದರೆ ಅಲ್ಲಮಾ ಇಕ್ಬಾಲ್ ಅವರ "ಸಾರೆ ಜಹಾನ್ ಸೆ ಅಚ್ಚಾ ಹಿಂದೂಸ್ತಾನ್ ಹಮಾರಾ" ಕೂಡ ಒಂದು. ಜವಾಹರಲಾಲ್ ನೆಹರೂ ಅವರು ಆಗಸ್ಟ್ 15 1947 ರ ಮಧ್ಯರಾತ್ರಿಯಲ್ಲಿ ತಮ್ಮ ಅಮರವಾದ "ಟ್ರಿಸ್ಟ್ ವಿತ್ ಡೆಸ್ಟಿನಿ" ಭಾಷಣ ಮಾಡಿದ ನಂತರ, ಸಂವಿಧಾನ ಸಭೆಯಲ್ಲಿ ಸುಚೇತಾ ಕೃಪಲಾನಿ ಅವರು ಕೂಡ ಈ ಸುಮಧುರ ಗೀತೆ ಹಾಡಿದ್ದ ಸಂಗತಿಯನ್ನು ಕುಲಕರ್ಣಿಯವರು ಸ್ಮರಿಸಿದ್ದಾರೆ. ಈ ಸಂಪ್ರದಾಯವನ್ನು ಮುಂದುವರೆಸುತ್ತಾ, ಭಾರತೀಯ ಸಶಸ್ತ್ರ ಪಡೆಗಳು ಪ್ರತಿ ವರ್ಷ ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವದಂದು ಮತ್ತು "ಬೀಟಿಂಗ್ ದಿ ರಿಟ್ರೀಟ್" ಸಮಾರಂಭದ ಪರಾಕಾಷ್ಠೆಯಲ್ಲಿ ಇದನ್ನು ಹಾಡುತ್ತವೆ ಎಂದು ಜ್ಞಾಪಿಸಿದ್ದಾರೆ. ಭಾರತದ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಹಾಡಲಾಗುವ ಈ ದೇಶಭಕ್ತಿ ಗೀತೆಗಳು ಭಾರತೀಯ ರಾಷ್ಟ್ರೀಯ ಹಬ್ಬಗಳ "ಅಬ್ರಾಹ್ಮಣೀಕರಣ" ಎಂದು ಪರಿಭಾವಿಸಿ ಇವನ್ನು ತಕ್ಷಣಕ್ಕೆ ನಿಲ್ಲಿಸುವಂತೆ ಒತ್ತಾಯಿಸಿ ತೆಜಸ್ವಿ ಸೂರ್ಯ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆಯಲಿ ಎಂದು ಕುಲಕರ್ಣಿಯವರು ಒತ್ತಾಯಿಸಿದ್ದಾರೆ. ೧೯೦೪ ರಲ್ಲಿ ಕವಿ ಇಕ್ಬಾಲ್ ಬರೆದ ಈ ಮಧುರವಾದ ಪರ್ಷಿಯನ್ ಮತ್ತು ಉರ್ದು ಪದಗಳಲ್ಲಿ ಸಂಯೋಜಿಸಲಾದ ಹಾಡಿನ ಕುರಿತು ಕುಲಕರ್ಣಿಯವರು ಹೆಚ್ಚಿನ ಮಾಹಿತಿಯನ್ನು ನೀಡುತ್ತಾರೆ. ಇಡೀ ಪ್ರಪಂಚಕ್ಕಿಂತ ಸುಂದರವಾದದ್ದು ನನ್ನ ದೇಶ ಎಂದು ವರ್ಣಿಸುವ ಈ ಗೀತೆಯು ಧರ್ಮಗಳ ನಡುವೆ ಪರಸ್ಪರ ದ್ವೇಷವನ್ನು ಕಲಿಸುವುದಿಲ್ಲ ಹಾಗು ಹಿಂದೂಸ್ಥಾನವು ಇಲ್ಲಿ ನೆಲೆಸಿರುವ ಎಲ್ಲ ಧರ್ಮಿಯರ ಸಾಮಾನ್ಯ ಮಾತೃಭೂಮಿಯಾಗಿದೆ ಎಂದು ವರ್ಣಿಸುತ್ತದೆ. ಹಾಗಾಗಿ ತೆಜಸ್ವಿ ಸೂರ್ಯನ ಈ ಟ್ವೀಟ್ ಹಿಂದೂ ವಿರೋಧಿ ಮಾತ್ರವಲ್ಲದೆ ಅದು ರಾಷ್ಟ್ರ ವಿರೋಧಿ ಎಂದು ನಾವು ಭಾವಿಸಬೇಕಿದೆ ಎಂದು ಕುಲಕರ್ಣಿಯವರು ಕಿಡಿಕಾರಿದ್ದಾರೆ. ಕುಲಕರ್ಣಿಯವರು ಮುಂದುವರೆದು ತೆಜಸ್ವಿ ಸೂರ್ಯ ಮತ್ತು ಆತನಂತಿರುವ ಅವರ ಪಕ್ಷದ ಅಲ್ಪಮತಿಗಳಿಗೆ ಧರ್ಮ ಕಾರಣದಿಂದ ಕವಿ ಇಕ್ಬಾಲ್ ಹಾಗು ಅವರ ನುಡಿಗಳು ಅಸಹ್ಯಕರವಾಗಿದ್ದರೆ ನಮ್ಮವರೇ ಆಗಿರುವ ಗುರುದೇವ್ ರವೀಂದ್ರನಾಥ ಟ್ಯಾಗೋರ್ ಅವರ ಗೀತಾಂಜಲಿಯ "... ಕಿರಿದಾದ ಮನೆಯ ಗೋಡೆಗಳಿಂದ ಈ ಬೃಹತ್ ಜಗತ್ತು ತುಣುಕುಗಳಾಗಿ ವಿಭಜನೆಯಾಗಿಲ್ಲ..." ಎನ್ನುವ ಅರ್ಥಗರ್ಭಿತ ಸಾಲುಗಳು ಕಿರಿದಾದ ಮನೆಯ ಗೋಡೆಗಳನ್ನು ನಿರ್ಮಿಸುವ ಮೂಲಕ ನಮ್ಮ ದೇಶವನ್ನು ಅನೇಕ ತುಣುಕುಗಳಾಗಿ ಒಡೆಯುತ್ತಿರುವ ತೆಜಸ್ವಿ ಸೂರ್ಯ ಮತ್ತು ಬಿಜೆಪಿಯವರಿಗೆ ತಿಳಿಯುವುದಾದರೂ ಹೇಗೆ ಎನ್ನುತ್ತಾರೆ ಕುಲಕರ್ಣಿಯವರು. ಐದು: ತೇಜಸ್ವಿ ಸೂರ್ಯನ ಟ್ವೀಟ್‌ನ ಅತ್ಯಂತ ಅಪಾಯಕಾರಿ ಮತ್ತು ಖಂಡನೀಯ ಭಾಗವೆಂದರೆˌ ಹಿಂದುತ್ವಕ್ಕೆ ಹೊಂದಿಕೆಯಾಗದ ರೀತಿಯಲ್ಲಿ ದೀಪಾವಳಿ ಆಚರಣೆಗೆ ಕರೆ ನೀಡುವ ಜಾಹೀರಾತನ್ನು ಹಾಕುವ ದುಸ್ಸಾಹಸಕ್ಕಾಗಿ ಫ್ಯಾಬ್-ಇಂಡಿಯಾ ಆರ್ಥಿಕ ಬೆಲೆ ಎದುರಿಸಬೇಕಾಗುತ್ತದೆ ಎನ್ನುವ ಬೆದರಿಕೆಯ ದಾಟಿ. ಇದೊಂದು ಬಗೆಯ ಆರ್ಥಿಕ ಭಯೋತ್ಪಾದನೆ ಎಂದು ಕುಲಕರ್ಣಿಯವರು ವರ್ಣಿಸುತ್ತಾರೆ. ಈ ದೇಶದ ಕಾನೂನನ್ನು ಸರಿಯಾಗಿ ಮತ್ತು ಪಕ್ಷಪಾತವಿಲ್ಲದೆ ಅನ್ವಯಿಸಿದರೆ ಇಂತಹ ಬೆದರಿಕೆ ನೀಡಿರುವುದಕ್ಕಾಗಿ ತೆಜಸ್ವಿ ಸೂರ್ಯ ಸೂಕ್ತ ಕಾನೂನು ಕ್ರಮ ಎದುರಿಸಬೇಕು. ಸಂಸತ್ ಸದಸ್ಯನಾಗಿ ಭಾರತದ ಸಂವಿಧಾನದ ಮೇಲೆ ನಿಜವಾದ ನಂಬಿಕೆ ಮತ್ತು ನಿಷ್ಠೆ ಹೊಂದುವೆನೆಂದು ಪ್ರಮಾಣವಚನ ಸ್ವೀಕರಿಸಿ ಹೀಗೆ ಕಾನೂನಿಗೆ ವಿರುದ್ಧವಾಗಿ ಮಾತನಾಡಬಾರದು. ಸಂವಿಧಾನದತ್ತ ಹಕ್ಕುಗಳ ಪ್ರಕಾರ ಈ ದೇಶದ ಜನರಿಗೆ ಯಾವುದೇ ಭಯ ಅಥವಾ ಬಲವಂತವಿಲ್ಲದೆ ಯಾವುದೇ ವೃತ್ತಿˌ ವ್ಯಾಪಾರˌ ಉದ್ಯೋಗ ಮಾಡುವ ಅಥವಾ ಧರ್ಮವನ್ನು ಆಚರಿಸುವ ಅಧಿಕಾರವಿದೆ. ತೆಜಸ್ವಿ ಸೂರ್ಯನ ಬೆದರಿಕೆಯಿಂದ ಫ್ಯಾಬ್-ಇಂಡಿಯಾ ತನ್ನ ಜಾಹೀರಾತನ್ನು ವಾಪಸ್ಸು ಪಡೆಯಬಹುದು. ಟಾಟಾರವರ ತನಿಷ್ಕ್ ಕೂಡ ಹೀಗೆ ಮಾಡಿದ್ದನ್ನು ನಾವು ಬಲ್ಲೆವು. ಆಡಳಿತ ಪಕ್ಷಕ್ಕೆ ಸೇರಿದವರಿಂದ ಪ್ರದರ್ಶನವಾಗುವ ಈ ರೀತಿಯ ದಬ್ಬಾಳಿಕೆˌ ಬೆದರಿಕೆಗಳಿಂದ ಅವರ ಅನುಯಾಯಿಗಳು ಅದನ್ನು ಜಾರಿಗೊಳಿಸಲು ಅನುವಾಗಬಹುದು. ಅವರ ನಾಯಕರು ನೀಡುವ ಬಹಿಷ್ಕಾರದ ಕರೆಗಳಿಂದ ಅನುಯಾಯಿಗಳು ಅಂತಹ ವ್ಯಾಪಾರ ಮಳಿಗೆಗಳ ಮೇಲೆ ಮಾಡಬಹುದಾದ ಸಂಭಾವ್ಯ ದಾಳಿಗಳನ್ನು ತಡೆಯುವ ಮತ್ತು ಆ ದಾಳಿಗಳಿಂದಾಗುವ ನಷ್ಟಗಳನ್ನು ಸರಿದೂಗಿಸಲು ಕಾನೂನು ಜಾರಿ ಯಂತ್ರವು ವ್ಯಾಪಾರಿಗಳ ನೆರವಿಗೆ ಬರುವುದಿಲ್ಲ ಎನ್ನುವುದು ಕೂಡ ಅಷ್ಟೇ ಸ್ಪಷ್ಟ ಎಂದು ಕುಲಕರ್ಣಿಯವರು ಕಿಡಿಕಾರಿದ್ದಾರೆ. ಸುಧೀಂದ್ರ ಕುಲಕರ್ಣಿಯವರು ತೇಜಸ್ವಿ ಸೂರ್ಯ ಹಾಕಿರುವ ಬೆದರಿಕೆಯನ್ನು ಯುಗೊಸ್ಲಾವಿಯಾದೊಂದಿದೆ ಹೋಲಿಕೆ ಮಾಡಿ ವಿವರಿಸಿದ್ದಾರೆ. ತೆಜಸ್ವಿ ಸೂರ್ಯನ ಈ ಬೆದರಿಕೆ ಹಿಂದುತ್ವ ಶಕ್ತಿಗಳ ಒಂದು ವ್ಯವಸ್ಥಿತ ಅಭಿಯಾನದ ಭಾಗವಾಗಿದೆ. ಹಿಂದೂ ಧರ್ಮ ಅಪಾಯದಲ್ಲಿದೆ ಮತ್ತು ಅದಕ್ಕಾಗಿ ಹಿಂದೂಗಳು ಹಿಂದೂಯೇತರರ ವಿರುದ್ಧ ಉಗ್ರಗಾಮಿಗಳಾಗಿ ಸಂಘಟಿತರಾಗಬೇಕು ಎನ್ನುವುದು ಹಿಂದುತ್ವವಾದಿಗಳ ಕುಟಿಲ ಹುನ್ನಾರವಾಗಿದೆ ಎನ್ನುತ್ತಾರೆ ಕುಲಕರ್ಣಿ. ಇತ್ತೀಚಿನ ದಿನಗಳಲ್ಲಿ, ಹಿಂದುತ್ವದ ಗೂಂಡಾಗಳು ತಾವು ನಿಗದಿಪಡಿಸಿದ ಸಾಂಸ್ಕೃತಿಕ ಮಾನದಂಡಗಳನ್ನು ಅನುಸರಿಸದ ಕಾರಣಕ್ಕಾಗಿ ಭಾರತದಾದ್ಯಂತ ಹಲವಾರು ನಗರ/ಪಟ್ಟಣಗಳಲ್ಲಿ ಹಿಂದೂಯೇತರ (ಬಹುತೇಕ ಮುಸ್ಲಿಮರು) ಮಾಲೀಕತ್ವದ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಮೇಲೆ ದಾಳಿ ಮಾಡುತ್ತಿರುವ ಘಟನೆಗಳು ಸಾಮಾನ್ಯವಾಗಿವೆ. ಇಂತಹ ಸಂಸ್ಥೆಗಳು ಫ್ಯಾಬ್-ಇಂಡಿಯಾದಂತಹ ಜನಪ್ರೀಯ ಅಥವಾ ಬ್ರಾಂಡ್ ಅಲ್ಲದ್ದರಿಂದ ಅವು ದೊಡ್ಡ ಮಟ್ಟದ ರಾಷ್ಟ್ರೀಯ ಸುದ್ದಿ ಆಗುತ್ತಿಲ್ಲ. ಈ ಘಟನೆಗಳು ಬಹುತೇಕ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಹೆಚ್ಚಾಗಿ ನಡೆಯುತ್ತಿವೆ. ಸ್ಥಳೀಯ ಪೊಲೀಸರಿಗೆ ಆರೋಪಿಗಳು ಯಾರು ಎಂಬುದು ಗೊತ್ತಿರುತ್ತದೆ. ಆದರೆ ಅವರಿಗೆ ರಾಜಕೀಯ ಬೆಂಬಲವಿದೆ ಎಂಬ ಕಾರಣಕ್ಕೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಕುಲಕರ್ಣಿಯವರು ಆರೋಪಿಸಿದ್ದಾರೆ. ಇತ್ತೀಚಿಗೆ ಈ ಹಿಂದುತ್ವವಾದಿಗಳ ವಾಟ್ಸಪ್ ಗುಂಪುಗಳು ಮತ್ತು ವಿವಿಧ ಸಾಮಾಜಿಕ ಮಾಧ್ಯಮಗಳ ಮೂಲಕ ಮುಸ್ಲಿಮರನ್ನು ಆರ್ಥಿಕ ವ್ಯವಹಾರಗಳಿಂದ ಬಹಿಷ್ಕಾರಿಸುವ ಮತ್ತು ಪ್ರತ್ಯೇಕಿಸುವ ಉಗ್ರ ಕರೆಗಳು ಕೊಡುತ್ತಿರುವುದು ಸಾಮಾನ್ಯವಾಗಿದೆ. ದೇಶದಲ್ಲಿ ನಿಖರವಾಗಿ ಏನಾಗುತ್ತಿದೆ ಎಂಬುದನ್ನು ಇನ್ನು ಮುಂದೆ ನಾವು ಈ ವಿದ್ಯಮಾನಗಳಿಂದ ಅರಿತುಕೊಳ್ಳುವುದು ಮುಖ್ಯವಾಗಿದೆ. ಇಲ್ಲಿ ತೇಜಸ್ವಿ ಸೂರ್ಯ ಒಂದು ನೆಪವಷ್ಟೆ. ಭಾರತದ ಜಾತ್ಯತೀತ ಮುಖ್ಯವಾಹಿನಿಯು ಈ ಬಹುಸಂಖ್ಯಾತ ಕೋಮುವಾದಿಗಳ ಬೆದರಿಕೆಯ ವಿರುದ್ಧ ಶಾಂತಿಯುತ ಮತ್ತು ಅಷ್ಟೇ ದೃಢವಾದ ಯುದ್ಧವನ್ನು ತನ್ನ ಸಂಪೂರ್ಣ ಶಕ್ತಿಯೊಂದಿಗೆ ನಡೆಸದ ಹೊರತು, ನಮ್ಮ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗಳು ನೈಜ ಮತ್ತು ಹೆಚ್ಚುತ್ತಿರುವ ಅಪಾಯವನ್ನು ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಸುಧೀಂದ್ರ ಕುಲಕರ್ಣಿಯವರು. ಕುಲಕರ್ಣಿಯವರು ಈ ಲೇಖನವನ್ನು ಆಗ್ನೇಯ ಯುರೋಪಿನ ಆಡ್ರಿಯಾಟಿಕ್ ಸಮುದ್ರ ತೀರದಲ್ಲಿರುವ ಮಾಂತ್ರಿಕ ಸೌಂದರ್ಯದ ಸ್ಥಳವಾದ ಕ್ರೊಯೇಷಿಯಾದ ಡುಬ್ರೊವ್ನಿಕ್‌ನಿಂದ ಬರೆಯುತ್ತಿರುವುದಾಗಿಯೂˌ ಆದರೆ ಆ ಸ್ಥಳದ ಸೌಂದರ್ಯವು ಅದರೊಂದಿಗೆ ಕ್ರೊಯೇಷಿಯಾದ ಇತ್ತೀಚಿನ ಕರಾಳ ಮತ್ತು ಕೊಳಕು ಭೂತಕಾಲದಿಂದ ಭಾರತಕ್ಕೆ ತುಂಬಾ ಪ್ರಸ್ತುತವಾದ ಒಂದು ಭಯಾನಕ ಪಾಠವನ್ನು ಹೇಳುತ್ತದೆ ಎನ್ನುತ್ತಾರೆ. ಕ್ರೊಯೇಷಿಯಾ, ಈಗ ಸ್ವತಂತ್ರ ರಾಷ್ಟ್ರವಾಗಿದ್ದು, ಯುಗೊಸ್ಲಾವಿಯಾವನ್ನು ರೂಪಿಸಿದ ಆರು ಘಟಕ ಗಣರಾಜ್ಯಗಳಲ್ಲಿ ಒಂದಾಗಿದೆ. ಯುಗೋಸ್ಲಾವಿಯಾವು ೧೯೯೧ ಮತ್ತು ೨೦೦೧ ರ ನಡುವೆ ಘಟಿಸಿದ ಯುದ್ಧಗಳು ಮತ್ತು ಸಂಘರ್ಷಗಳ ಸರಣಿಯ ನಂತರ (ಬೋಸ್ನಿಯನ್ ಮುಸ್ಲಿಮರ ನರಮೇಧ ಮತ್ತು ಜನಾಂಗೀಯ ಶುದ್ಧೀಕರಣ ಸೇರಿದಂತೆ) ವಿಭಜನೆಯಾಯಿತು. ಈ ಘಟನೆಗಳು ಅಂದಾಜು ಎರಡು ಲಕ್ಷ ಜನರ ಹತ್ಯೆಗೆ ಕಾರಣವಾಯಿತು. ಯುಗೊಸ್ಲಾವಿಯಾ ಏಕೆ ಒಡೆಯಿತು ಎಂದು ಅವರು ವಿವರಿಸುತ್ತ ಕ್ರೊಯೇಷಿಯಾದ ಮಹಿಳೆಯೊಬ್ಬಳನ್ನು ಕುಲಕರ್ಣಿಯವರು ಈ ಕುರಿತು ಪ್ರಶ್ನಿಸಿದಾಗ ಹಲವಾರು ಕಾರಣಗಳಿರುವುದಾಗಿಯೂ ಮತ್ತು ಮುಖ್ಯವಾಗಿ ಸರ್ಬಿಯನ್ನರ ಬಹುಸಂಖ್ಯಾತ ಮನಸ್ಥಿತಿಯ ಕುರಿತು ಆಕೆ ಹೇಳಿದಳಂತೆ. ಕ್ರೊಯೇಷಿಯಾದಲ್ಲಿ ನಾವು ನಮ್ಮ ಕ್ರೊಯೇಷಿಯಾದ ಗುರುತನ್ನು ಉಳಿಸಿಕೊಳ್ಳಲು, ಕ್ರೊಯೇಷಿಯಾದ ಹಾಡುಗಳನ್ನು ಹಾಡಲು, ಹಬ್ಬಗಳನ್ನು ಆಚರಿಸಲು ಇತ್ಯಾದಿಗಳನ್ನು ಅನುಮತಿಸಲಿಲ್ಲವೆಂತಲುˌ ಸೆರ್ಬಿಯಾ ಏನನ್ನು ನಿರ್ಧರಿಸುತ್ತದೊ ಅದನ್ನು ಅನುಸರಿಸಲು ನಮ್ಮನ್ನು ಒತ್ತಾಯಿಸಲಾಯಿತೆಂದು ಆಕೆ ವಿವರಿಸಿದಳಂತೆ. ಕುಲಕರ್ಣಿಯವರು ತೇಜಸ್ವಿ ಸೂರ್ಯನ ದೀಪಾವಳಿ ಟ್ವೀಟ್ ಅನ್ನು 30 ವರ್ಷ ವಯಸ್ಸಿನ ಉದಯೋನ್ಮುಖ ರಾಜಕೀಯ ಪುಢಾರಿಯ ನಿರುಪದ್ರವ ಹೇಳಿಕೆ ಎಂದು ತಳ್ಳಿಹಾಕಬಾರದು ಎನ್ನುತ್ತಾರೆ. ಇದು ಭಾರತದಲ್ಲಿ ಈಗ ವೇಗವಾಗಿ ಹರಡುತ್ತಿರುವ ಬಹುಸಂಖ್ಯಾತ ಅಸಹಿಷ್ಣುತೆ, ಪ್ರತ್ಯೇಕತೆ ಮತ್ತು ವಿಭಜನೆಯನ್ನು ಸೂಚಿಸುತ್ತದೆ ಎಂದು ಅವರು ಇದನ್ನು ವ್ಯಾಖ್ಯಾನಿಸುತ್ತಾರೆ. ಯುಗೊಸ್ಲಾವಿಯಾದ ವಿಘಟನೆಯು ಕೂಡ ಇದೇ ಬಗೆಯ ಕೆಟ್ಟ ಪ್ರಕಿೃಯೆಗಳಿಂದ ಪ್ರಾರಂಭವಾಯಿತು ಎಂದು ಸುಧೀಂದ್ರ ಕುಲಕರ್ಣಿಯವರು ಆತಂಕ ವ್ಯಕ್ತಪಡಿಸುತ್ತಾರೆ. ಒಟ್ಟಾರೆಯಾಗಿ ಭಾರತದಲ್ಲಿ ಮೋದಿಯ ಆತಂಕಕಾರಿ ಆಡಳಿತದ ಮೂಲಕ ಬಲಪಂಥೀಯ ಸಂಘಟನೆಗಳು ಭಾರತವನ್ನು ಯುಗೋಸ್ಲಾವಿಯಾ ಮಾಡುವ ಹಾದಿಯಲ್ಲಿ ಸಾಗುತ್ತಿವೆ ಎನ್ನುವ ಅಭಿಪ್ರಾಯ ಸುಧೀಂದ್ರ ಕುಲಕರ್ಣಿಯವರ ಈ ಅಂಕಣದಲ್ಲಿ ಬಿಂಬಿತವಾಗಿದೆ. ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ: ►► ನೀವು ಈ ಕೆಳಗಿನ ಲೇಖನಗಳನ್ನು ಓದಿಲ್ಲವೇ? ಅಗತ್ಯವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. ►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ. ►►ಎಳೆಮಕ್ಕಳ, ವಿದ್ಯಾರ್ಥಿಗಳ ಪ್ರಾಣಕ್ಕೆ ಮಾರಕವಾದ ಟೇಸ್ಟಿಂಗ್ ಪೌಡರ್ ಅನ್ನು ಸರ್ಕಾರ ಅದೇಕೆ ನಿಷೇಧಿಸುತ್ತಿಲ್ಲ? ►► ‘ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಭಾರತದಲ್ಲಿ ದಿಢೀರ್‌ ಜನಪ್ರಿಯರಾಗಲು ಇರುವ ಸರಳ ಮಾರ್ಗ ಯಾವುದು ಗೊತ್ತೇ? ►► ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್! ►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ! ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ. ►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) ►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ? ►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..! ►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ! ►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! ►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ? ►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್! ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. ►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ? ►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್ ►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ ►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) ►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►► *ಸ್ವಯಂ ಘೋಷಿತ ರಾಷ್ಟ್ರೀಯವಾದಿ ಸಂಘಟನೆ ಆರೆಸ್ಸೆಸ್, ಸ್ವಾತಂತ್ರ್ಯಾ ನಂತರ ಬರೋಬ್ಬರಿ ಮೂರು ಬಾರಿ ನಿಷೇಧಕ್ಕೊಳಗಾಗಲು ಕಾರಣಗಳೇನು?* ►► *ನೋಟುಬ್ಯಾನ್ ಮಾಡಿದ ನಂತರ ಪ್ರಧಾನಿ ಮೋದಿಯವರು, ಟೋಕಿಯೋದಲ್ಲಿ ಭಾರತದ ಜನರನ್ನು ಗೇಲಿಮಾಡಿ ಮಾಡಿದ ಭಾಷಣದ ಅಪರೂಪದ ವಿಡಿಯೋ.* ►►ಸಂಘಿಬಾನಿಗಳ ಆಡಳಿತದಲ್ಲಿ ಸಂವಿಧಾನ ಬದಲಾಗುತ್ತಾ? ಬದಲಾದರೆ ಏನೇನಾಗುತ್ತೆ ? ಮಿಸ್ ಮಾಡ್ದೆ ಈ ಲೇಖನ ಓದಿ.. ವಿಡಿಯೋ ನೋಡಿ! ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಸ್ವಾತಂತ್ರ ಹೋರಾಟವನ್ನು ಹತ್ತಿಕ್ಕಲು ಬ್ರಿಟೀಷರು, ಸಾವರ್ಕರ್ ರನ್ನು ದಾಳವಾಗಿ ಬಳಸಿದ್ದರೇ? ►►9 ಜನ್ಮದಲ್ಲಿ ಸ್ವರ್ಗಸುಖ ಸಿಗುತ್ತದೆ ಎಂದು ಗೌರಿಯನ್ನು ಕೊಲೆ ಮಾಡಿದ್ದ ಹಂತಕರು.. ತಾಲೀಬಾನ್, ಐಸಿಸ್ ಗಿಂತಲೂ ಅಸಹ್ಯವಾದ ಸಿದ್ದಾಂತವೇ ಕೊಲೆಗೆ ಕಾರಣ ►►ಸ್ವತಂತ್ರ ಭಾರತದ ಇತಿಹಾಸದಲ್ಲಿ ದಾಖಲೆಯಾಗುಳಿವ ಮೋದಿ ಸಾಧನೆಗಳು: ಮೋದಿ ವಿರೋಧಿಗಳು ಮತ್ತು ಬೆಂಬಲಿಗರು ತಿಳಿದುಕೊಳ್ಳಲೇ ಬೇಕಾದ ನಗ್ನಸತ್ಯಗಳು! ►►ಕಾಂಗ್ರೆಸ್‌ನಲ್ಲಿ ಪ್ರಮೋಷನ್‌ ಸಿಗಬೇಕಾದರೆ ಜೈಲಿಗೆ ಹೋಗಬೇಕು’ ಎಂದಿರುವ ಬಿಜೆಪಿ ನಾಯಕ ಸಿ.ಟಿ ರವಿಗೊಂದು ಬಹಿರಂಗ ಪತ್ರ ►►ಅಫ್ಘಾನಿಸ್ತಾನದ ಬೆಳವಣಿಗೆಗಳು ಸಾಬೀತುಪಡಿಸುತ್ತಿರುವುದು ಮೋದಿ ಸರ್ಕಾರದ ಸಿಎಎ ಕಾಯಿದೆಯ ದೂರದೃಷ್ಟಿಯನ್ನೋ ಅಥವಾ ಸಂಘೀಬಾನಿಗಳ ಧೂರ್ತತನವನ್ನೋ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ವಿದ್ಯುತ್ ತಿದ್ದುಪಡಿ ಮಸೂದೆ- 2021; ಕಾರ್ಪೊರೇಟ್ ಲಾಭ ಪ್ರಖರ – ರೈತ, ಕಾರ್ಮಿಕ ಬದುಕು ಬರ್ಬರ! ►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ಜಿಎಸ್‌ಟಿ ಕಟ್ಟಬೇಡಿ’- ದೇಶದ ವರ್ತಕರಿಗೆ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಕರೆ! ►►ಬುರ್ಖಾ, ಜನಿವಾರ, ಮೂಲಭೂತವಾದ, ಕೋಮುವಾದ ಮತ್ತು ಸಮಾನತಾವಾದ ►►ಪತ್ರಕರ್ತರೇ ಎಚ್ಚರ: ಮೋದಿ ಸರ್ಕಾರದ ವೈಫಲ್ಯಗಳ ವಿರುದ್ದ ಬರೆದರೆ ಐಟಿ ದಾಳಿ ನಡೆಯಲಿದೆ ಹುಷಾರ್! ►►ಆರ್ ಎಸ್ ಎಸ್ ಸಿದ್ದಾಂತವನ್ನು ಒಪ್ಪುವವರು ಕಾಂಗ್ರೆಸ್ ಪಕ್ಷಕ್ಕೆ ಅಗತ್ಯ ಇಲ್ಲ. ಬಿಜೆಪಿಗೆ ಹೆದರುವವರು ಪಕ್ಷದಿಂದ ಹೊರಟು ಹೋಗಬಹುದು! ►►ಅಂಬೇಡ್ಕರ್ ಸಂವಿಧಾನದ ವಿರೋಧಿಗಳು ಸಂವಿಧಾನಾತ್ಮಕ ಹುದ್ದೆಯಲ್ಲಿರುವುದು ದೇಶದ ಭವಿಷ್ಯಕ್ಕೆ ಬಹು ಅಪಾಯಕಾರಿ

Advertisement
Advertisement
Recent Posts
Advertisement