Advertisement

ಸಂಸ್ಕೃತ ಭಾಷೆಯ ಮಾತೃಭೂಮಿ ಸಿರಿಯಾ! ಹಾಗಾದರೆ ಆ ಭಾಷೆ ಪಠಿಸುವವರು ಯಾವ ಮೂಲದವರು?

Advertisement

ಬರಹ: ಡಾ. ಜೆ ಎಸ್ ಪಾಟೀಲ (ಲೇಖಕರು ಸಮಾಜವಾದಿ ಹಾಗೂ ಜನಪರ ಚಿಂತಕರು) ಈಗ ಸಂಪೂರ್ಣ ಅಳಿದು ಹೋಗಿರುವ ಜನ ಸಾಮಾನ್ಯರು ಯಾವತ್ತೂ ಮಾತನಾಡದ ಸನಾತನಿ ಆರ್ಯರ ಧಾರ್ಮಿಕ ಗ್ರಾಂಥಿಕ ಭಾಷೆ ಸಂಸ್ಕೃತದ ಕುರಿತು ಸಾಕಷ್ಟು ಸಂಶಯಗಳುˌ ಹಾಗು ವಿವಾದಗಳಿರುವುದು ಅಲ್ಲಗಳೆಯಲಾಗದು. ಸಂಸ್ಕೃತವನ್ನು ಭಾರತದ ಅಷ್ಟೇ ಅಲ್ಲದೆ ಜಗತ್ತಿನ ಅತ್ಯಂತ ಪ್ರಾಚೀನ ಭಾಷೆ ಎಂದು ಬಿಂಬಿಸಿಕೊಂಡು ಬರಲಾಗಿದೆ. ಜನರ ಆಡುಭಾಷೆಯಲ್ಲದ ಯಾವುದೇ ಭಾಷೆಯು ಎಷ್ಟೇ ಪ್ರಾಚೀನವಾಗಿದ್ದರೂ ಅದು ಬದುಕುಳಿಯಲಾರದು. ಜನಸಾಮಾನ್ಯರು ದಿನನಿತ್ಯ ಆಡುವ ಭಾಷೆ ಮಾತ್ರ ಶಾಸ್ವತವಾಗಿ ಉಳಿದು ಬೆಳೆಯ ಬಲ್ಲದು. ಭಾರತದಲ್ಲಿ ಬಹುಜನರು ಆಡುವ ದ್ರಾವಿಡ ಮೂಲದ ದಕ್ಷಿಣದ ಭಾಷೆಗಳೇ ಇದಕ್ಕೆ ಉದಾಹರಣೆ. ಸತ್ಯ ಪರಿಶೀಲನಾ ಅಧ್ಯಯನವೊಂದು ಸಂಸ್ಕೃತವು ಮೊದಲು ದಾಖಲೆಗೊಂಡ ಸ್ಥಳ ಭಾರತವಲ್ಲ ಅದು ಸಿರಿಯಾ ಎನ್ನುವ ಸಂಗತಿ ಹೊರಗೆಡವಿದೆ. ಆ ಕುರಿತು ಸೋಯೆಬ್ ಡ್ಯಾನಿಯಲ್ ಎಂಬ ಅಂಕಣಕಾರ ಸ್ಕ್ರೋಲ್. ಇನ್ ಜರ್ನಲ್ಲಿನಲ್ಲಿ 2015 ರಲ್ಲಿ ಒಂದು ಸುದೀರ್ಘ ಸಂಶೋಧನಾತ್ಮಕ ಲೇಖನ ಬರೆದಿದ್ದಾರೆ. ►►ಎಳೆಮಕ್ಕಳ, ವಿದ್ಯಾರ್ಥಿಗಳ ಪ್ರಾಣಕ್ಕೆ ಮಾರಕವಾದ ಟೇಸ್ಟಿಂಗ್ ಪೌಡರ್ ಅನ್ನು ಸರ್ಕಾರ ಅದೇಕೆ ನಿಷೇಧಿಸುತ್ತಿಲ್ಲ? ಇತ್ತ ಭಾರತದ ಆಡಳಿತ ಚುಕ್ಕಾಣಿಯು ಮಧ್ಯೆ ಏಷಿಯಾ ಮೂಲದ ವಿದೇಶಿ ಆರ್ಯನ್ನರ ನಿಯಂತ್ರಣದ ಬಲಪಂಥೀಯ ಪಕ್ಷದ ಕೈವಶವಾದ ನಂತರ ನರೇಂದ್ರ ಮೋದಿ ಸರ್ಕಾರವು ಸಂಸ್ಕೃತವನ್ನು ಪುನಃ ಜನಪ್ರೀಯಗೊಳಿಸಲು ಹಾಗು ಅದನ್ನು ಸಂಸ್ಕೃತೇತರ ಭಾಷಿಕರ ಮೇಲೆ ಹೇರಲು ಮಾಡುತ್ತಿರುವ ಪ್ರಯತ್ನಗಳು ಎಗ್ಗಿಲ್ಲದೆ ನಡೆಯುತ್ತಿರುವಂತೆ, ಈ ಭಾಷೆಯನ್ನು ಅತ್ಯಂತ ಹಳೆಯ ಸಿರಿಯಾದ ಮೂಲದ ಮಿಟಾನ್ನಿ ಜನರು ಮಾತನಾಡುತ್ತಿದ್ದರೆನ್ನುವ ಸಂಗತಿ ಎಲ್ಲರ ಗಮನ ಸೆಳೆಯುತ್ತಿದೆ. ಜಗತ್ತಿನ ಎಲ್ಲ ಜನರಿಗೆ ಸೇರಿದ ದೈಹಿಕ ಕಸರತ್ತಿನ ವಿದ್ಯೆಯಾದ ಯೋಗವನ್ನು ಹಿಂದೂತ್ವಿಕರಣಗೊಳಿಸಿದ ಮೋದಿ ಸರಕಾರ ಈಗ ಸದ್ದಿಲ್ಲದೆ ತನ್ನ ಗಮನವನ್ನು ಸಂಸ್ಕೃತದ ಉತ್ಥಾನ ಅಥವಾ ಹೇರುವಿಕೆಯತ್ತ ತಿರುಗಿಸಿದೆ. 2015 ರಲ್ಲಿ ಬ್ಯಾಂಕಾಕ್ ನಲ್ಲಿ ನಡೆದ 16ನೇ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಭಾರತ ಸರ್ಕಾರವು ಅತ್ಯಂತ ಉತ್ಸಾಹದಿಂದ ಭಾಗವಹಿಸಿದೆ. 250 ಸಂಸ್ಕೃತ ವಿದ್ವಾಂಸರನ್ನು ಕಳುಹಿಸಿದ್ದಷ್ಟೇ ಅಲ್ಲದೆ ಕಾರ್ಯಕ್ರಮಕ್ಕೆ ಭಾಗಶಃ ಧನಸಹಾಯ ಕೂಡ ನೀಡಿದೆ. ಇದಷ್ಟೇ ಅಲ್ಲದೆ ಸಮ್ಮೇಳನದಲ್ಲಿ ಅಂದಿನ ಇಬ್ಬರು ಹಿರಿಯ ಸಂಪುಟ ದರ್ಜೆಯ ಸಚಿವರು ಭಾಗವಹಿಸಿದ್ದರು. ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಸಂಸ್ಕೃತಕ್ಕಾಗಿ ಜಂಟಿ ಕಾರ್ಯದರ್ಶಿ ಹುದ್ದೆಯನ್ನು ಸೃಷ್ಟಿಸುವುದಾಗಿ ಅಂದಿನ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಘೋಷಿಸಿದ್ದರು. ಇವತ್ತಿಗೂ ಜಗತ್ತಿನ ಯಾವುದೇ ಪ್ರದೇಶದಲ್ಲಿ ಯಾರೂ ಮಾತನಾಡದ, ಬರೆಯದ ಅಥವಾ ಓದದ ಪ್ರಾಚೀನ ಭಾಷೆ ಎಂದು ಬಿಂಬಿಸಲಾಗಿರುವ ಸಂಸ್ಕೃತವನ್ನು ಸಂಸ್ಕೃತೇತರರ ತಲೆಯ ಮೇಲೆ ಹೇರುವ ಚಟುವಟಿಕೆಗಳು ಮೋದಿ ಸರಕಾರ ವ್ಯವಸ್ಥಿತವಾಗಿ ಮಾಡುತ್ತಿದೆ. ಇದರಿಂದ ಭಾರತದೊಳಗೆ ಮತ್ತು ಹೊರಗೆ ದೇಶದ ಅಭಿವೃದ್ಧಿಗೆ ಹೇಗೆ ಸಹಕಾರಿಯಾಗಬಲ್ಲದು ಎನ್ನುವುದು ಕುತೂಹಲದ ಪ್ರಶ್ನೆಯಾಗಿದೆ! ಸ್ಥಳಿಯವಾಗಿ ಯೋಚಿಸಿದಾಗ ಸಂಸ್ಕೃತದ ಬಲವಂತದ ಹೇರಿಕೆಯ ಮೂಲಕ ಸಾಂಸ್ಕೃತಿಕ ರಾಷ್ಟ್ರೀಯತೆಯ ಉನ್ಮಾದ ಕೆರಳಿಸಿ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ರಾಯಕೀಯ ಲಾಭ ಗಿಟ್ಟಿಸಿಕೊಳ್ಳುವ ಹುನ್ನಾರ ಹೊಂದಿದೆ. ಸಂಸ್ಕೃತವು ಸನಾತನ ಆರ್ಯ ಧರ್ಮದ (ಹಿಂದೂ ಧರ್ಮ ಎಂದು ತಪ್ಪಾಗಿ ಕರೆಯಲಾಗುತ್ತಿದೆ) ಧಾರ್ಮಿಕ ವಿಧಿವಿಧಾನಗಳ ಆಚರಣೆಗಳ ಹಾಗು ಪ್ರಾರ್ಥನೆಯ ಮಾಧ್ಯಮವಾಗಿದೆ. ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) ಎಲ್ಲ ಕಾಲಕ್ಕೂ ಭಾರತವನ್ನು ಪ್ರತಿನಿಧಿಸುವ 90% ಕ್ಕಿಂತ ಹೆಚ್ಚಿನ ಕೆಳ ವರ್ಗದ ನೆಲಮೂಲದ ಬಹುಜನರಿಗೆ ಸಂಸ್ಕೃತವನ್ನು ಪಠಿಸುವುದು ಒತ್ತಟ್ಟಿಗಿರಲಿˌ ಅದನ್ನು ಕೇಳಿಸಿಕೊಳ್ಳಲು ಸಹ ಅನುಮತಿಸಿರಲಿಲ್ಲ. ಸಂಸ್ಕೃತವನ್ನು ಮುನ್ನೆಲೆಗೆ ತರುವುದರಿಂದ ಭಾರತದ ಭಾಷಾ ಕೌಶಲ್ಯ ಅಥವಾ ಭಾಷಾ ಕ್ಷೇತ್ರಕ್ಕೆ ಯಾವುದೇ ಲಾಭವಾಗುವುದಿಲ್ಲ. ಈ ಪುರಾತನವೆಂದು ಬಿಂಬಿಸಲಾಗಿರುವ ಆಡುಭಾಷೆಯಲ್ಲದ ಹಾಗು ಸಂಪೂರ್ಣವಾಗಿ ನಶಿಸಿಹೋಗಿರುವ ಭಾಷೆ ಬೆಳೆಸುವುಕ್ಕಿಂತ ಭಾರತದಲ್ಲಿ ಜನ ಸಾಮಾನ್ಯರು ಮಾತಮಾಡುವ ಅವರ ಆಧುನಿಕ ಮಾತೃಭಾಷೆಗಳಲ್ಲಿ ಶಿಕ್ಷಣವನ್ನು ನೀಡಿದರೆ ಅದು ಸಾಕಷ್ಟು ಪ್ರಯೋಜನಕಾರಿಯಾಗಬಲ್ಲದು. ಆದರೆˌ ಜನಸಾಮಾನ್ಯರ ಅನುಕೂಲಕ್ಕಿಂತ ಬಿಜೆಪಿಗೆ ತನ್ನದೇ ಆದ ಅತಿ ಹಾಗು ಹುಸಿ ರಾಷ್ಟ್ರೀಯತೆಯ ಬ್ರಾಂಡ್ ಅನ್ನು ಉಳಿಸಿಕೊಳ್ಳುವುದು ಮುಖ್ಯವಾಗಿದೆ. ►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..! ವಾಸ್ತವ ಇತಿಹಾಸಕ್ಕಿಂತ ಕಾಲ್ಪನಿಕ ಪುರಾಣಾಧರಿತ ಹುಸಿ ರಾಷ್ಟ್ರೀಯತಾವಾದವು ಹೆಚ್ಚು ಸಂಕೀರ್ಣವಾಗಿದೆ. ಬಿಜೆಪಿ ಮತ್ತು ಅದನ್ನು ನಿಯಂತ್ರಿಸುವ ವಿದೇಶಿ ಆರ್ಯನ್ನರ ಸಂಘಟನೆಗಳಿಗೆ ಸಂಸ್ಕೃತವು ಒಂದು ಹಿಂದೂ ರಾಷ್ಟ್ರೀಯತೆಯ ಗುರುತಾಗಿದೆ. ಆದರೆˌ ದುರದೃಷ್ಟದ ಸಂಗತಿ ಏನೆಂದರೆ ಹಿಂದೂಗಳ ಭಾಷೆ ಎಂದು ಬಿಂಬಿಸಲಾಗಿರುವ ಸಂಸ್ಕೃತ ಭಾಷೆ ಮೊಟ್ಟಮೊದಲು ಮಾತನಾಡಿದ ಜನ ಸಮುದಾಯದ ಕುರಿತ ಪುರಾವೆಗಳ ಪ್ರಕಾರ ಹಿಂದೂಗಳು ಅಥವಾ ಭಾರತೀಯರು ಅಲ್ಲ ಎನ್ನುವುದು. ಸಂಸ್ಕೃತವನ್ನು ಮೊದಲು ಮಾತನಾಡಿದ ಜನಾಂಗವು ಸಿರಿಯನ್ನರು ಎನ್ನುವ ಸಂಗತಿ ಎಷ್ಟು ಕಹಿಯೊ ಅಷ್ಟೆ ಸತ್ಯ ಎನ್ನುತ್ತವೆ ಭಾಷಾ ತಜ್ಞರ ಸಂಶೋಧನಾ ವರದಿಗಳು. ಈ ಸಂಗತಿ ತಿಳಿದಾಗ ನಿಮಗೆಲ್ಲರಿಗೂ ಆಶ್ಚರ್ಯ ಮತ್ತು ಕೆಲವರಿಗೆ, ಆಘಾತವೂ ಆಗಬಹುದು. ಸಂಸ್ಕೃತವು ಸಿರಿಯನ್ನರ ಮೂಲ ಭಾಷೆಯಾಗಿತ್ತು ಎನ್ನಲು ಸಾಕಷ್ಟು ಸಂಶೋಧನಾ ದಾಖಲೆಗಳು ಇತ್ತೀಚಿಗೆ ಲಭ್ಯವಾಗುತ್ತಿವೆ. ►►ಸಂಘಿಬಾನಿಗಳ ಆಡಳಿತದಲ್ಲಿ ಸಂವಿಧಾನ ಬದಲಾಗುತ್ತಾ? ಬದಲಾದರೆ ಏನೇನಾಗುತ್ತೆ ? ಮಿಸ್ ಮಾಡ್ದೆ ಈ ಲೇಖನ ಓದಿ.. ವಿಡಿಯೋ ನೋಡಿ! ಸಂಸ್ಕೃತ ಭಾಷೆಯ ಆರಂಭಿಕ ರೂಪವು ಋಗ್ವೇದದಲ್ಲಿ ಬಳಸಲ್ಪಟ್ಟಿದೆ ಎನ್ನಲಾಗುತ್ತದೆ. ಅದನ್ನು ಹಳೆಯ ಇಂಡಿಕ್ ಅಥವಾ ಋಗ್ವೇದ ಸಂಸ್ಕೃತ ಎಂದು ಕರೆಯಲಾಗುತ್ತಿತ್ತಂತೆ. ಆಶ್ಚರ್ಯದ ಸಂಗತಿ ಏನೆಂದರೆ, ಋಗ್ವೇದ ಕಾಲದಲ್ಲಿನ ಸಂಸ್ಕೃತವು ಮೊದಲ ಬಾರಿಗೆ ಭಾರತದ ಬಯಲು ಪ್ರದೇಶದಲ್ಲಿ ಕಂಡುಬಂದಿರದೆ ಅದು ಉತ್ತರ ಸಿರಿಯಾದ ಶಾಸನಗಳಲ್ಲಿ ದಾಖಲಿಸಲಾಗಿತ್ತು ಎನ್ನುತ್ತಾರೆ ಸೋಹೇಬ್ ಡ್ಯಾನಿಯಲ್ ತಮ್ಮ ಲೇಖನದಲ್ಲಿ. ಕ್ರಿ. ಪೂ. 1500 ಮತ್ತು 1350 ರ ನಡುವೆ ಮಿಟಾನ್ನಿ ಎಂಬ ರಾಜ ಮನೆತನವು ಯೂಫ್ರಟಿಸ್-ಟೈಗ್ರಿಸ್ ಜಲಾನಯನ ಪ್ರದೇಶವನ್ನು ಆಳುತ್ತಿತ್ತು. ಇದು ಈಗಿನ ಸಿರಿಯಾ, ಇರಾಕ್ ಮತ್ತು ಟರ್ಕಿ ಪ್ರದೇಶಗಳನ್ನು ಒಳಗೊಂಡಿತ್ತು. ಮಿಟಾನ್ನಿಯರು ಸಂಸ್ಕೃತಕ್ಕೆ ಸಂಬಂಧಿಸದ ಹುರಿಯನ್ ಭಾಷೆಯನ್ನು ಮಾತನಾಡುತ್ತಿದ್ದರು. ಆದಾಗ್ಯೂ, ಪ್ರತಿಯೊಬ್ಬ ಮಿಟಾನ್ನಿ ರಾಜರು ಸಂಸ್ಕೃತದ ಹೆಸರನ್ನು ಹೊಂದಿದ್ದರು. ಅವರ ಹೆಸರುಗಳಲ್ಲಿ ಪುರುಷ (ಅಂದರೆ ಮನುಷ್ಯ), ತುಸ್ರತ್ತಾ (ಆಕ್ರಮಣಕಾರಿ ರಥ), ಸುವರ್ದಾತ (ಸ್ವರ್ಗದಿಂದ ನೀಡಲ್ಪಟ್ಟ), ಇಂದ್ರೋಟಾ (ಇಂದ್ರನಿಂದ ಸಹಾಯ ಮಾಡಲ್ಪಟ್ಟ) ಮತ್ತು ಭಾರತದಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ಸುಬಂಧು ಎನ್ನುವ ಹೆಸರುಗಳು ಇದ್ದವು ಎನ್ನುತ್ತಾರೆ ಸೋಹೆಬ್ ಡ್ಯಾನಿಯಲ್. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ಸನಾತನ ಆರ್ಯ ವೈದಿಕರಂತೆ ಅತ್ಯಂತ ಗೌರವಾನ್ವಿತವಾದ ರಥ ಯುದ್ಧದ ಸಂಸ್ಕೃತಿಯನ್ನು ಮಿಟಾನ್ನಿಯರು ಕೂಡ ಹೊಂದಿದ್ದರು. ವಿಶ್ವದ ಅತ್ಯಂತ ಹಳೆಯ ದಾಖಲೆಯಾದ ಮಿಟಾನ್ನಿ ಕುದುರೆ ಸವಾರಿ ತರಬೇತಿ ಕೈಪಿಡಿಯು ಹಲವಾರು ಸಂಸ್ಕೃತ ಪದಗಳನ್ನು ಬಳಸುತ್ತದೆ. ಉದಾಹರಣೆಗೆ: ಐಕಾ (ಒಂದು), ತೇರಾ (ಮೂರು), ಸತ್ತಾ (ಏಳು) ಮತ್ತು ಅಸುವಾ (ಅಶ್ವ, ಅಂದರೆ ಕುದುರೆ). ಇದಲ್ಲದೆ, ಮಿಟಾನ್ನಿ ಮಿಲಿಟರಿ ಶ್ರೀಮಂತಿಕೆಯು "ಮಾರ್ಯಣ್ಣ" ಎಂದು ಕರೆಯಲ್ಪಡುವ ರಥ ಯೋಧರನ್ನು ಹೊಂದಿತ್ತು ಹಾಗು ಇದು ಸಂಸ್ಕೃತ ಪದ "ಮಾರಿಯಾ" (ಯುವಕ) ಎಂಬರ್ಥ ಹೊಂದಿತ್ತು ಎನ್ನುತ್ತವೆ ಸ್ಕ್ರೋಲ್. ಇನ್ ವರದಿಗಳು. ಮಿಟಾನ್ನಿಯರು ತಮ್ಮದೇ ಆದ ಸ್ಥಳೀಯ ದೇವತೆಗಳನ್ನು ಹೊಂದಿದ್ದರೂ ಕೂಡ ಋಗ್ವೇದದಲ್ಲಿ ಸನಾತನಿ ಆರ್ಯನ್ನರು ಆರಾಧಿಸುತ್ತಿದ್ದ ಅದೇ ದೇವತೆಗಳನ್ನು ಪೂಜಿಸುತ್ತಿದ್ದರು. ಮಿಟಾನ್ನಿ ರಾಜರು ಕ್ರಿ. ಪೂ. 1380 ರಲ್ಲಿ ತಮ್ಮ ಪ್ರತಿಸ್ಪರ್ಧಿ ರಾಜನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆ ರಾಜರುಗಳ ಹೆಸರುಗಳು ಅದು ಇಂದ್ರ, ವರುಣ, ಮಿತ್ರ ಮತ್ತು ನಾಸತ್ಯ (ಅಶ್ವಿನಿ ದೇವತೆಗಳು) ಎಂದಿದ್ದವು. ಇಂದಿನ ಆಧುನಿಕ ಹಿಂದೂಗಳು ಈ ಮೇಲಿನ ದೇವತೆಗಳ ಆರಾಧನೆಯನ್ನು ಬಹುತೇಕ ನಿಲ್ಲಿಸಿದ್ದಾರೆ. ಮಿಟಾನ್ನಿಯರ ದೇವತೆಗಳು ಕೂಡ ಋಗ್ವೇದದಲ್ಲಿ ಅತ್ಯಂತ ಪ್ರಮುಖವಾಗಿದ್ದವು ಎನ್ನುತ್ತಾರೆ ಸೋಹೆಬ್ ಡ್ಯಾನಿಯಲ್. ►► ‘ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ಇನ್ನೊಂದು ಗಮನಾರ್ಹ ಸಂಗತಿ ಏನೆಂದರೆˌ ಡೇವಿಡ್ ಆಂಥೋನಿ ಅವರು ತಮ್ಮ ಪುಸ್ತಕದಲ್ಲಿ ಬಳಸಿದ ಅಶ್ವ ˌ ಚಕ್ರ ಮತ್ತು ಭಾಷೆಗಳು ಸೂಚಿಸುವಂತೆ ಋಗ್ವೇದ ಸಂಸ್ಕೃತವು ವಾಯುವ್ಯ ಭಾರತದಲ್ಲಿ ಋಗ್ವೇದದ ಸಂಕಲನಕ್ಕಿಂತ ಹಿಂದಿನದು ಮಾತ್ರವಲ್ಲದೆ ಧಾರ್ಮಿಕ ಪಂಥ ಕೇಂದ್ರಿತ ಮತ್ತು ಋಗ್ವೇದದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ನೀತಿ ನಂಬಿಕೆಗಳು ಅದಕ್ಕಿಂತ ಮುಂಚೆಯೇ ಅಸ್ತಿತ್ವದಲ್ಲಿದ್ದವು ಎನ್ನುತ್ತವೆ ಸೋಹೆಬ್ ಡ್ಯಾನಿಯಲ್ಲರ ಸಂಶೋಧನಾ ವರದಿಗಳು. ಈ ಸಂಗತಿ ಭಾರತಕ್ಕಿಂತ ಮೊದಲು ಸಂಸ್ಕೃತ ಭಾಷೆಯು ಸಿರಿಯಾವನ್ನು ಹೇಗೆ ತಲುಪಿತು ಎನ್ನುವ ಪ್ರಶ್ನೆ ಹುಟ್ಟುಹಾಕುತ್ತದೆ. ಪಿ ಎನ್ ಓಕ್ ರಂತ ಬಲಪಂಥೀಯ ಇತಿಹಾಸಕಾರರು ಹೇಳುವಂತೆ ಇದು ಒಂದು ಕಾಲದಲ್ಲಿ ಇಡೀ ಜಗತ್ತು ಹಿಂದೂಮಯವಾಗಿತ್ತು ˌ ಮೆಕ್ಕಾದಲ್ಲಿರುವ ಕಾಬಾ ಒಂದು ಕಾಲದಲ್ಲಿ ಶಿವಲಿಂಗವಾಗಿತ್ತು ಎನ್ನುವ ಕಪೋಲಕಲ್ಪಿತ ವಾದವನ್ನು ಪುಷ್ಟಿಕರಿಸುತ್ತದೆ ಎನ್ನುವ ವಿತಂಡವಾದಿಗಳೂ ನಮ್ಮ ನಡುವೆ ಇದ್ದಾರೆ. ಆದರೆ ಇದರ ಹಿಂದಿನ ಇತಿಹಾಸವು ಇನ್ನೂ ಹೆಚ್ಚು ಪ್ರಚಲಿತವಾಗಿದ್ದನ್ನು ನಾವು ಗಮನಿಸಬೇಕಾಗುತ್ತದೆ ಎನ್ನುತ್ತಾರೆ ಸೋಹೆಬ್ ಡ್ಯಾನಿಯಲ್. ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ಸಂಸ್ಕೃತವು ಪ್ರೊಟೊ-ಇಂಡೋ-ಯುರೋಪಿಯನ್ ಕುಟುಂಬದಿಂದ ಬಂದ ಭಾಷೆ ಎಂದು ಗುರುತಿಸಲಾಗುತ್ತದೆ. ಪ್ರೊಟೊ-ಇಂಡೋ-ಇರಾನಿಯನ್ ಎಂಬ ಭಾಷೆಯನ್ನು ಅದರ ಉಪಭಾಷೆಯಾಗಿ ಗುರುತಿಸಲಾಗಿದೆ. ಏಕೆಂದರೆ ಇದು ಉತ್ತರ ಭಾರತದಲ್ಲಿ ಮಾತನಾಡುವ ಮತ್ತು ಇರಾನ್ ದೇಶದ ಅನೇಕ ಭಾಷೆಗಳ ಮೂಲವಾಗಿದೆ ಎನ್ನುವ ಭಾಷಾಶಾಸ್ತ್ರಜ್ಞರ ಅಭಿಪ್ರಾಯವನ್ನು ಸ್ಕ್ರೋಲ್.ಇನ್ ವಿವರಿಸುತ್ತದೆ. ಜೆಪಿ ಮಲ್ಲೋರಿ ಮತ್ತು ಡಿಕ್ಯೂ ಆಡಮ್ಸ್ ಸಂಪಾದಿಸಿದ ಎನ್ಸೈಕ್ಲೋಪೀಡಿಯಾ ಆಫ್ ಇಂಡೋ-ಯುರೋಪಿಯನ್ ಕಲ್ಚರ್ ಪುಸ್ತಕದಲ್ಲಿ ದಕ್ಷಿಣ ಯುರಲ್ಸ್ ಮತ್ತು ಕಝಾಕಿಸ್ತಾನ್‌ನಲ್ಲಿ ಉದಯೋನ್ಮುಖ ಪ್ರೊಟೊ-ಇಂಡೋ-ಇರಾನಿಯನ್ ಭಾಷೆ ಬೆಳೆಯಿತು ಎನ್ನುವ ಸಂಗತಿ ಪ್ರಸ್ತಾಪವಾಗಿದೆಯಂತೆ. ಆಂಡ್ರೊನೊವೊ ಸಂಸ್ಕೃತಿ ಎಂದು ಕರೆಯಲ್ಪಡುವ ಈ ಹುಲ್ಲುಗಾವಲು ಜನರು ಕ್ರಿ. ಪೂ. 2000 ರಲ್ಲಿ ಮೊದಲು ಕಾಣಿಸಿಕೊಳ್ಳುತ್ತಾರೆ ಎನ್ನುವ ಮಾತು ಡ್ಯಾನಿಯಲ್ ಪ್ರಾಸ್ತಾಪಿಸಿದ್ದಾರೆ. ►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ? ಈ ಮಧ್ಯ ಏಷ್ಯಾದ ತಾಯ್ನಾಡಿನಲ್ಲಿ ಅಲ್ಲಿನ ಜನರು ಆನಂತರ ಪ್ರೊಟೊ-ಇಂಡೋ-ಇರಾನಿಯನ್ ಭಾಷೆ ಮಾತನಾಡುವುದನ್ನು ನಿಲ್ಲಿಸಿದರು ಮತ್ತು ಆಗ ಸಂಸ್ಕೃತದ ಆರಂಭಿಕ ರೂಪಗಳಲ್ಲಿ ಮಾತನಾಡುವ ಜನರ ಹೊಸ ಗುಂಪು ಹುಟ್ಟಿಕೊಂಡಿತು. ಈ ಆರಂಭಿಕ ಸಂಸ್ಕೃತ ಮಾತನಾಡುವ ಜನರಲ್ಲಿ ಕೆಲವರು ಪಶ್ಚಿಮಕ್ಕೆ ಈಗಿನ ಸಿರಿಯಾ ಕಡೆಗೆ ಮತ್ತು ಕೆಲವರು ಪೂರ್ವಕ್ಕೆ ಭಾರತದ ಪಂಜಾಬ್ ಪ್ರದೇಶದ ಕಡೆಗೆ ವಲಸೆ ಹೋದರು ಎನ್ನುತ್ತವೆ ಸ್ಕೋಲ್.ಇನ್ ಸಂಶೋಧನಾ ವರದಿಗಳು. ಡೇವಿಡ್ ಆಂಥೋನಿ ಅವರು ಪಶ್ಚಿಮಕ್ಕೆ ತೆರಳಿದ ಜನರು ಬಹುಶಃ ಸಿರಿಯಾದ ಹುರಿಯನ್ ರಾಜರಿಂದ ಕೂಲಿ ಸಾರಥಿಗಳಾಗಿ ನೇಮಕಗೊಂಡಿದ್ದರು ಎಂದು ಬರೆಯುತ್ತಾರೆ. ಈ ಸಾರಥಿಗಳು ಒಂದೇ ಭಾಷೆಯಲ್ಲಿ ಮಾತನಾಡುತ್ತಿದ್ದರು ಮತ್ತು ಅದೇ ಸ್ತೋತ್ರಗಳನ್ನು ಪಠಿಸುತ್ತಿದ್ದರು. ಅದೇ ಭಾಷೆಯನ್ನು ಪೂರ್ವಕ್ಕೆ ಭಾರತದ ಕಡೆಗೆ ವಲಸೆ ಬಂದ ಸಿರಿಯನ್ನರ ಒಡನಾಡಿಗಳಾಗಿದ್ದ ಆರ್ಯನ್ನರು ಋಗ್ವೇದದಲ್ಲಿ ಬಳಸಿದರು ಎನ್ನಲಾಗುತ್ತದೆ. ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. ಈ ಋಗ್ವೇದ ಸಂಸ್ಕೃತ ಭಾಷಿಕರು ತಮ್ಮ ಮಾಲೀಕರ ಸಿಂಹಾಸನವನ್ನು ಕಸಿದುಕೊಂಡು ಮಿಟಾನ್ನಿ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಆಗ ಮಿಟಾನ್ನಿ ಸಂಸ್ಕೃತಿಯು ಶೀಘ್ರದಲ್ಲೇ ಅಧಪತನ ಕಂಡು ಸ್ಥಳೀಯ ಹುರಿಯನ್ ಭಾಷೆ ಮತ್ತು ಧರ್ಮವನ್ನು ಮಿಟಾನ್ನಿಯರು ಅಳವಡಿಸಿಕೊಂಡರು. ಆದಾಗ್ಯೂ, ಮಿಟಾನ್ನಿ ರಾಜಮನೆತನದ ಹೆಸರುಗಳು, ರಥಕ್ಕೆ ಸಂಬಂಧಿಸಿದ ಕೆಲವು ತಾಂತ್ರಿಕ ಪದಗಳು ಮತ್ತು ಸಹಜವಾಗಿ ದೇವತೆಗಳಾದ ಇಂದ್ರ, ವರುಣ, ಮಿತ್ರ ಮತ್ತು ನಾಸತ್ಯ ಪದಗಳು ಹಾಗೆಯೇ ಉಳಿದುಕೊಂಡವು ಎನ್ನುತ್ತಾರೆ ಸೋಹೆಬ್ ಡ್ಯಾನಿಯಲ್. ಮಧ್ಯಪ್ರಾಚ್ಯದಿಂದ ಪೂರ್ವಕ್ಕೆ ವಲಸೆ ಹೋದ ಆರ್ಯನ್ನರ ಗುಂಪು ನಂತರ ಭಾರತವೆಂಬ ಉಪಖಂಡದಲ್ಲಿ ನೆಲೆಸಿ ಋಗ್ವೇದವನ್ನು ರಚಿಸಿತು ಎನ್ನುವ ಸಂಗತಿ ನಮಗೆಲ್ಲ ತಿಳಿದಿದೆ. ಈ ರೀತಿಯಾಗಿ ಮಧ್ಯಪ್ರಾಚ್ಯದಿಂದ ವಲಸೆ ಬಂದ ಆರ್ಯನ್ ಜನಾಂಗದ ಭಾಷೆಯಾದ ಸಂಸ್ಕೃತ ಮತ್ತು ಸಂಸ್ಕೃತಿಯನ್ನು ಅವರು ಕ್ರಮೇಣ ಸಂರಕ್ಷಿಸಿಕೊಂಡರು. ಹೀಗಾಗಿ ವಲಸಿಗ ಆರ್ಯನ್ನರು ಈ ಉಪಖಂಡಕ್ಕೆ ತಮ್ಮೊಂದಿಗೆ ಹೊತ್ತುತಂದ ಸಂಸ್ಕೃತ ಭಾಷೆ ಮತ್ತು ಸನಾತನ ಆರ್ಯ ಧರ್ಮವು ಕಾಲಾನುಕ್ರಮದಲ್ಲಿ ಇಲ್ಲೇ ಬೇರು ಬಿಟ್ಟಿತು. 3,500 ವರ್ಷಗಳ ನಂತರ, ಆಧುನಿಕ ಭಾರತೀಯರ ಮೇಲೆ ಆರ್ಯನ್ನರು ನಿಯಂತ್ರಿಸುವ ಸರಕಾರವು ಇಂದು ತಮ್ಮ ಸಂಸ್ಕೃತವೆಂಬ ನಶಿಸಿಹೋದ ಭಾಷೆಯನ್ನು ಹೇರಲು ಹವಣಿಸುತ್ತಿದೆ. ►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ ಆರ್ಯನ್ನರು ಅಧುನಿಕ ಭಾರತೀಯರ ಮೇಲೆ ಮಧ್ಯ ಏಷಿಯಾದ ಪ್ರಾಚೀನ ಸಂಸ್ಕೃತ ಭಾಷೆಯ ಶ್ರೀಮಂತ ಇತಿಹಾಸವನ್ನು ಧಾರ್ಮಿಕ ನೆಲೆಗಟ್ಟಿನಲ್ಲಿ ಸಿಮಿತ ಗೃಹಿಕೆಗೊಳಪಡಿಸಿ ಹಿಂದುತ್ವೀಕರಣಗೊಳಿಸುತ್ತಿದ್ದಾರೆ. ದುರದೃಷ್ಟದ ಸಂಗತಿ ಏನೆಂದರೆ, ಆರ್ಯನ್ನರ ಭಾಷೆ, ಧರ್ಮ ಮತ್ತು ಸಂಸ್ಕೃತಿಯನ್ನು ಇಂದು ಇಡೀ ಭಾರತಿಯರು ಆಚರಿಸಬೇಕೆಂದು ಒತ್ತಾಯಿಸಲಾಗುತ್ತಿದೆ. ಉಪಖಂಡಕ್ಕೆ ಸಂಸ್ಕೃತವನ್ನು ಹೊತ್ತು ತಂದ ಇಂಡೋ-ಯುರೋಪಿಯನ್ ಜನರ ಇತಿಹಾಸವನ್ನು ಸಾಂಸ್ಕೃತಿಕ ರಾಷ್ಟ್ರೀಯತೆಯ ಬಲಿಪೀಠದಲ್ಲಿ ನಿಲ್ಲಿಸಲು ಪ್ರಯತ್ನಿಸಲಾಗುತ್ತಿದೆ. ಭಾರತದಲ್ಲಿನ ಜನಪ್ರಿಯ ಕಾಲ್ಪನಿಕ ಪುರಾಣಗಳನ್ನು ರಾಷ್ಟ್ರೀಯತೆಯ ವ್ಯಾಖ್ಯಾನಕ್ಕೆ ಸಿಲುಕಿಸಿ ಸಂಸ್ಕೃತ ಭಾಷೆಯನ್ನು ಸಂಪೂರ್ಣವಾಗಿ ಭಾರತೀಯ ಸ್ಥಳೀಯ ಭಾಷೆ ಎಂದು ತಪ್ಪಾಗಿ ಬಣ್ಣಿಸಲಾಗುತ್ತಿದೆ. ಪ್ರಬಲ ಹಿಂದುತ್ವ ಸಿದ್ಧಾಂತವು ಭೌಗೋಳಿಕ ಸ್ಥಳೀಯ ಗುರುತಿಸುವಿಕೆಯನ್ನು ರಾಷ್ಟ್ರೀಯತೆಗೆ ಪೂರ್ವಾಪೇಕ್ಷಿತವಾಗಿ ಪರಿಗಣಿಸುತ್ತಿರುವ ಸಂಗತಿ ಅಪಾಯಕಾರಿ ಹಾಗು ವಿಮರ್ಶಾರ್ಹವೂ ಆಗಿದೆ. ►► *ನೋಟುಬ್ಯಾನ್ ಮಾಡಿದ ನಂತರ ಪ್ರಧಾನಿ ಮೋದಿಯವರು, ಟೋಕಿಯೋದಲ್ಲಿ ಭಾರತದ ಜನರನ್ನು ಗೇಲಿಮಾಡಿ ಮಾಡಿದ ಭಾಷಣದ ಅಪರೂಪದ ವಿಡಿಯೋ.* ಹಿಂದೂ ಧರ್ಮದ ದೇವಸ್ಥಾನಗಳೊಳಗಿನ ಆರಾಧನೆ ಮತ್ತು ಧಾರ್ಮಿಕ ಆಚರಣೆಗೆ ಸಿಮಿತವಾದ ಸಂಸ್ಕೃತವು ಭಾರತಕ್ಕೆ ಅದರ ಆಗಮನಪೂರ್ವದಿಂದ ಹೊಂದಿದ್ದ ಶ್ರೀಮಂತ ಇತಿಹಾಸವನ್ನು ನಿಜವಾಗಿಯೂ ಇಂದು ಹಿಂದುತ್ವವಾದಿಗಳು ಹಿಂದುತ್ವದ ಭಯಾನಕ ಪಾದಗಳ ಕೆಳಗೆ ಹಾಕಿ ಎಳೆಯುತ್ತಿದ್ದಾರೆ. ವಿಪರ್ಯಾಸವೆಂದರೆ, ಉಪಖಂಡದ ಅವಳಿ ರಾಷ್ಟ್ರಗಳಲ್ಲಿ ಒಂದಾದ ಪಾಕಿಸ್ತಾನದ ರಾಷ್ಟ್ರೀಯ ಪುರಾಣಗಳು ಭಾರತದ ಹಿಂದುತ್ವವಾದಿಗಳಿಗಿಂತ ನಿಖರವಾದ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿದೆ. ಅಲ್ಲಿನ ಕಿಲ್ಟರ್ ಇಸ್ಲಾಮಿಸ್ಟ್ಗಳು ವಿದೇಶಿ ಅರಬ್ಬರನ್ನು ತಮ್ಮ ಸಂಸ್ಥಾಪಕ ಪಿತಾಮಹರನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಮತ್ತು ಪಾಕಿಸ್ತಾನಕ್ಕಿರುವ ಉಪಖಂಡದ ಪುರಾತನ ಬೇರುಗಳನ್ನು ಸಂಪೂರ್ಣವಾಗಿ ನಿರಾಕರಿಸುತ್ತಿದ್ದಾರೆ. ಪಾಕಿಸ್ತಾನಿಯರು ಮೂಲ ಭಾರತೀಯರೇ ಹೊರತು ಅರಬ್ಬರಲ್ಲ ಮತ್ತು ಎನ್‌ಸೈಕ್ಲೋಪೀಡಿಯಾ ಆಫ್ ಇಂಡೋ-ಯುರೋಪಿಯನ್ ಕಲ್ಚರ್ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತದೆ. ಈ ಸಿದ್ಧಾಂತದ ಪ್ರಕಾರ ಸಂಸ್ಕೃತ ಮತ್ತು ಅದರ ಮೂಲ ಪ್ರೊಟೊ-ಇಂಡೋ-ಯುರೋಪಿಯನ್ ಭಾಷೆಯು ಭಾರತ ಮೂಲದಲ್ಲ. ಸಂಸ್ಕೃತ ಭಾಷೆಯು ಭಾರತ ಮೂಲದ್ದು ಎಂದು ವಾದಿಸುವ ಇಂಡೋ-ಯುರೋಪಿಯನ್ನರುˌ ತಮ್ಮ ವಾದವನ್ನು ಸಮರ್ಥಿಸಲು ಯಾವುದೇ ಭಾಷಾಶಾಸ್ತ್ರದ ಅಥವಾ ಪುರಾತತ್ತ್ವ ಶಾಸ್ತ್ರದ ಸ್ಪಷ್ಟ ಪೋಷಕ ಪುರಾವೆಗಳನ್ನು ಹೊಂದಿಲ್ಲ ಎನ್ನುತ್ತಾರೆ ಸೋಹೆಬ್ ಡ್ಯಾನಿಯಲ್. ►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) ಒಟ್ಟಾರೆಯಾಗಿˌ ಇಂಡೋ-ಯುರೋಪಿಯನ್ ಮೂಲದ ಸಂಸ್ಕೃತ ಭಾಷೆಯು ಭಾರತೀಯ ಮೂಲದಲ್ಲ ಮತ್ತು ಅದನ್ನು ಪೋಷಿಸಿ ಭಾರತೀಯರ ಮೇಲೆ ಹೇರಲು ಹವಣಿಸುತ್ತಿರುವವರು ಕೂಡ ಭಾರತೀಯ ಮೂಲದವರಲ್ಲ ಎನ್ನುವುದಕ್ಕೆ ಸಾಕಷ್ಟು ದಾಖಲೆಗಳು ಸಿಗುತ್ತವೆ. ಇದರಿಂದ ಭಯಭೀತರಾಗಿರುವ ಆರ್ಯನ್ನರು ಇಂದಿನ ಕೇಂದ್ರ ಸರಕಾರವನ್ನು ನಿಯಂತ್ರಿಸುತ್ತ ಇತಿಹಾಸವನ್ನು ತಿರುಚಲು ಸಮಿತಿಯೊಂದನ್ನು ರಚಿಸುವಂತೆ ಮಾಡಿದ್ದಾರೆ. ಆ ಸಮಿತಿಯಲ್ಲಿ ಬಹುತೇಕರು ಸನಾತನಿ ಆರ್ಯನ್ ಸಮುದಾಯಕ್ಕೆ ಸೇರಿದ ಸಂಸ್ಕೃತ ಪಂಡಿತರೇ ಇದ್ದಾರೆ ಎನ್ನುವುದು ಸೋಜಿಗದ ಸಂಗತಿಯಲ್ಲ. ಹೀಗೆ ವಿದೇಶಿ ಸಂಸ್ಕೃತ ಭಾಷೆ ಮತ್ತು ಅದನ್ನು ಪ್ರೀತಿಸುವ ವಲಸಿಗ ಆರ್ಯನ್ನರು ತಾವು ಪೂರ್ವದಿಂದಲೂ ಭಾರತೀಯ ಮೂಲದವರೇ ಆಗಿದ್ದಿವಿ ಎಂದು ಸಾಧಿಸಲು ಹೊರಟಿದ್ದಾರೆ. ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ: ►► ನೀವು ಈ ಕೆಳಗಿನ ಲೇಖನಗಳನ್ನು ಓದಿಲ್ಲವೇ? ಅಗತ್ಯವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. ►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ. ►►ಭಾರತದಲ್ಲಿ ದಿಢೀರ್‌ ಜನಪ್ರಿಯರಾಗಲು ಇರುವ ಸರಳ ಮಾರ್ಗ ಯಾವುದು ಗೊತ್ತೇ? ►► ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್! ►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ! ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ. ►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ ►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ? ►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ! ►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! ►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು. ►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್! ►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ? ►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್ ►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►► *ಸ್ವಯಂ ಘೋಷಿತ ರಾಷ್ಟ್ರೀಯವಾದಿ ಸಂಘಟನೆ ಆರೆಸ್ಸೆಸ್, ಸ್ವಾತಂತ್ರ್ಯಾ ನಂತರ ಬರೋಬ್ಬರಿ ಮೂರು ಬಾರಿ ನಿಷೇಧಕ್ಕೊಳಗಾಗಲು ಕಾರಣಗಳೇನು?* ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಸ್ವಾತಂತ್ರ ಹೋರಾಟವನ್ನು ಹತ್ತಿಕ್ಕಲು ಬ್ರಿಟೀಷರು, ಸಾವರ್ಕರ್ ರನ್ನು ದಾಳವಾಗಿ ಬಳಸಿದ್ದರೇ? ►►9 ಜನ್ಮದಲ್ಲಿ ಸ್ವರ್ಗಸುಖ ಸಿಗುತ್ತದೆ ಎಂದು ಗೌರಿಯನ್ನು ಕೊಲೆ ಮಾಡಿದ್ದ ಹಂತಕರು.. ತಾಲೀಬಾನ್, ಐಸಿಸ್ ಗಿಂತಲೂ ಅಸಹ್ಯವಾದ ಸಿದ್ದಾಂತವೇ ಕೊಲೆಗೆ ಕಾರಣ ►►ಸ್ವತಂತ್ರ ಭಾರತದ ಇತಿಹಾಸದಲ್ಲಿ ದಾಖಲೆಯಾಗುಳಿವ ಮೋದಿ ಸಾಧನೆಗಳು: ಮೋದಿ ವಿರೋಧಿಗಳು ಮತ್ತು ಬೆಂಬಲಿಗರು ತಿಳಿದುಕೊಳ್ಳಲೇ ಬೇಕಾದ ನಗ್ನಸತ್ಯಗಳು! ►►ಕಾಂಗ್ರೆಸ್‌ನಲ್ಲಿ ಪ್ರಮೋಷನ್‌ ಸಿಗಬೇಕಾದರೆ ಜೈಲಿಗೆ ಹೋಗಬೇಕು’ ಎಂದಿರುವ ಬಿಜೆಪಿ ನಾಯಕ ಸಿ.ಟಿ ರವಿಗೊಂದು ಬಹಿರಂಗ ಪತ್ರ ►►ಅಫ್ಘಾನಿಸ್ತಾನದ ಬೆಳವಣಿಗೆಗಳು ಸಾಬೀತುಪಡಿಸುತ್ತಿರುವುದು ಮೋದಿ ಸರ್ಕಾರದ ಸಿಎಎ ಕಾಯಿದೆಯ ದೂರದೃಷ್ಟಿಯನ್ನೋ ಅಥವಾ ಸಂಘೀಬಾನಿಗಳ ಧೂರ್ತತನವನ್ನೋ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ವಿದ್ಯುತ್ ತಿದ್ದುಪಡಿ ಮಸೂದೆ- 2021; ಕಾರ್ಪೊರೇಟ್ ಲಾಭ ಪ್ರಖರ – ರೈತ, ಕಾರ್ಮಿಕ ಬದುಕು ಬರ್ಬರ! ►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ಜಿಎಸ್‌ಟಿ ಕಟ್ಟಬೇಡಿ’- ದೇಶದ ವರ್ತಕರಿಗೆ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಕರೆ! ►►ಬುರ್ಖಾ, ಜನಿವಾರ, ಮೂಲಭೂತವಾದ, ಕೋಮುವಾದ ಮತ್ತು ಸಮಾನತಾವಾದ ►►ಪತ್ರಕರ್ತರೇ ಎಚ್ಚರ: ಮೋದಿ ಸರ್ಕಾರದ ವೈಫಲ್ಯಗಳ ವಿರುದ್ದ ಬರೆದರೆ ಐಟಿ ದಾಳಿ ನಡೆಯಲಿದೆ ಹುಷಾರ್! ►►ಆರ್ ಎಸ್ ಎಸ್ ಸಿದ್ದಾಂತವನ್ನು ಒಪ್ಪುವವರು ಕಾಂಗ್ರೆಸ್ ಪಕ್ಷಕ್ಕೆ ಅಗತ್ಯ ಇಲ್ಲ. ಬಿಜೆಪಿಗೆ ಹೆದರುವವರು ಪಕ್ಷದಿಂದ ಹೊರಟು ಹೋಗಬಹುದು! ►►ಅಂಬೇಡ್ಕರ್ ಸಂವಿಧಾನದ ವಿರೋಧಿಗಳು ಸಂವಿಧಾನಾತ್ಮಕ ಹುದ್ದೆಯಲ್ಲಿರುವುದು ದೇಶದ ಭವಿಷ್ಯಕ್ಕೆ ಬಹು ಅಪಾಯಕಾರಿ

Advertisement
Advertisement
Recent Posts
Advertisement