Advertisement

ವಸಾಹತುಶಾಹಿ, ಬ್ರಾಹ್ಮಣಶಾಹಿ ಹಾಗೂ ಉಳಿಗಮಾನ್ಯ ವ್ಯವಸ್ಥೆಯ ಕಡು ವಿರೋಧಿ ಟಿಪ್ಪು ಸುಲ್ತಾನ್: ತಿಳಿದುಕೊಳ್ಳಲೇ ಬೇಕಾದ ಸತ್ಯಗಳು!

Advertisement

ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಹಾಗೂ ಜನಪರ ಚಿಂತಕರು) ನವೆಂಬರ್ 10: ಮೈಸೂರು ಹುಲಿ ಟಿಪ್ಪು ಸುಲ್ತಾನನ ಹುಟ್ಟಿದ ದಿನ.. ಆ ಪ್ರಯುಕ್ತ ಈ ಬರಹ! ಇಡೀ ಭಾರತವೇ ಹೆಮ್ಮೆಪಡಬೇಕಾಗಿದ್ದ ಟಿಪ್ಪುವನ್ನು ಬ್ರಾಹ್ಮಣಶಾಹಿ , ಕಾರ್ಪೊರೇಟ್ ದಾಸ್ಯದ ಆರೆಸ್ಸೆಸ್-ಬಿಜೆಪಿ ದುಷ್ಟಕೂಟ ಮತಾಂಧನೆಂದು ಚಿತ್ರಿಸುತ್ತಾ ಭಾರತದ ನೆನಪಿನಿಂದಲೇ ಅಳಿಸುವ ಕಾರ್ಯ ನಡೆಸುತ್ತಿವೆ. ಆದರೆ ಟಿಪ್ಪು ಮತ್ತು ಹೈದರಾಲಿಗಳು ಅಮೇರಿಕಾದ ಕ್ರಾಂತಿಕಾರಿಗಳಿಗೂ ಸ್ಪೂರ್ತಿಯಾಗಿದ್ದರು ಎಂಬುದು ನಿಮಗೆ ಗೊತ್ತೇ? ಕನ್ನಡಿಗರಿಗೂ, ಎಲ್ಲಾ ಭಾರತೀಯರಿಗೂ ಹೆಮ್ಮೆ ತರಬೇಕಾದ ಇತಿಹಾಸದ ಈ ಪುಟಗಳ ಬಗ್ಗೆ ಕಳೆದ ವರ್ಷ "ವಾರ್ತಾಭಾರತಿ" ಗೆ ಬರೆದ ಈ ಲೇಖನ ...ಮತ್ತೊಮ್ಮೆ ನಿಮ್ಮ ಓದಿಗೆ.. ನಮ್ಮ ಹೆಮ್ಮೆಗೆ! ಆಸಕ್ತರು ಮತ್ತು ಸಾಧ್ಯವಿರುವವರು ಈ ಲೇಖನದಲ್ಲಿ ಪ್ರಸ್ತಾಪಿತವಾಗಿರುವ ಮೂಲ ಆಕರಗಳನ್ನು ಇನ್ನಷ್ಟು ಒಳಹೊಕ್ಕು ನಾವರಿಯದ ನಮ್ಮ ಚರಿತ್ರೆಯನ್ನು ಇನ್ನಷ್ಟು ಮೊಗೆದು ಕೊಡಬೇಕೆಂದು ವಿನಂತಿಸುತ್ತೇನೆ.. -ಶಿವಸುಂದರ್ ಅಮೆರಿಕಾದ ಕ್ರಾಂತಿಗೂ ಸ್ಪೂರ್ತಿಯಾಗಿದ್ದ ಹೈದರ್ ಮತ್ತು ಟಿಪ್ಪೂ ಇಂದು ಅಮೆರಿಕಾದ ಅಧ್ಯಕ್ಷರ ಕೃಪಾಕಟಾಕ್ಷ ಪಡೆಯುವುದೇ ಭಾರತ ಸರ್ಕಾರದ ಯಶಸ್ಸಿಗೆ ಮಾನದಂಡ ಎಂಬಂತಾಗಿದೆ. ಹೀಗಾಗಿಯೇ ಭಾರತದ ಪ್ರಧಾನಿಗಳು ಅಮೆರಿಕದ ಅಧ್ಯಕ್ಷರ ಅರೆಕಾಲಿಕ ಚುನಾವಣಾ ಪ್ರಚಾರ ಕಾರ್ಯಕರ್ತರೂ ಆಗಿದ್ದನ್ನು ನಾವೆಲ್ಲ ನೋಡಿಯೇ ಇದ್ದೇವೆ. ಗುಲಾಮಿತನವನ್ನೇ ವಿಶ್ವಗುರುತನವೆಂಬಂತೆ ಪ್ರಚಾರ ಮಾಡಿಕೊಳ್ಳುವುದನ್ನೂ ನೋಡುತ್ತಿದ್ದೇವೆ. ಆದರೆ ನಮ್ಮ ಚರಿತ್ರೆಯಲ್ಲಿ ನ್ಯಾಯ ಹಾಗೂ ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರು ನಡೆಸಿದ ಹೋರಾಟದಿಂದಲೇ ಇಡೀ ವಿಶ್ವ ಭಾರತದತ್ತ ಆಶಾಭಾವನೆಯಿಂದ ನೋಡಿದ ಕಾಲವೂ ಇತ್ತು. ಅದರಲ್ಲ್ಲೂ ನಮ್ಮ ಮೈಸೂರಿನ ಹೈದರಾಲಿ ಖಾನ್ ಮತ್ತು ಟೀಪೂ ಸುಲ್ತಾನರು ಬ್ರಿಟಿಶರ ವಿರುದ್ಧ ನಡೆಸಿದ ವೀರೋಚಿತ ಸ್ವಾತಂತ್ರ್ಯ ಸಮರವೂ ಇಡೀ ವಿಶ್ವದ ಗಮನವನ್ನು ಸೆಳೆದಿತ್ತು. ಅಷ್ಟು ಮಾತ್ರವಲ್ಲ. ಅಮೆರಿಕದ ಕ್ರಾಂತಿಕಾರಿಗಳು ಹೈದರ್ ಆಲಿ ಮತ್ತು ಟೀಪೂ ಸುಲ್ತಾನರಿಂದ ತಾವು ಬ್ರಿಟಿಷರ ವಿರುದ್ಧ ನಡೆಸುತ್ತಿದ್ದ ಹೋರಾಟಕ್ಕೆ ಸ್ಪೂರ್ತಿ ಪಡೆದುಕೊಳ್ಳುತ್ತಿದ್ದರು. ಹಾಗೂ ಹೈದರ್ ಮತ್ತು ಟಿಪ್ಪುವಿನ ಗೆಲುವಿಂದ ಅಮೆರಿಕ ಮತ್ತು ಇಡೀ ಜಗತ್ತೇ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಕಬಂಧಬಾಹುಗಳಿಂದ ವಿಮೋಚನೆಯಾಗುತ್ತದೆಂಬ ಆಶಾಭಾವನೆಯಿಂದ ಆಂಗ್ಲೋ-ಮೈಸೂರು ಯುದ್ಧಗಳನ್ನು ಗಮನಿಸುತ್ತಿದ್ದರು. ಹೈದರ್ -ಟಿಪ್ಪು ಗೆದ್ದಾಗ ಇಡೀ ಅಮೆರಿಕ ಸಮ್ಭ್ರಮಗೊಳ್ಳುತ್ತಿತ್ತು ಮತ್ತು ಅವರಿಬ್ಬರೂ ವೀರರಾಗಿ ಸಾವನ್ನಪ್ಪಿದ್ದಾಗ ಇಡೀ ಅಮೆರಿಕವೇ ಕಣ್ಣೀರಿಟ್ಟಿತು. ಬಿಜೆಪಿ ಸರ್ಕಾರ ಎಷ್ಟೇ ಪ್ರಯತ್ನಪಟ್ಟರೂ ಅಮೆರಿಕದ ನಾಸಾದಲ್ಲಿ ಈಗಲೂ ಜತನದಿಂದ ಕಾಪಿಟ್ಟಿರುವ ಟಿಪ್ಪುವಿನ ಹಾಗೂ ಈ ಜಗತ್ತಿನ ಮೊಟ್ಟ ಮೊದಲ ಕ್ಷಿಪಣಿಯನ್ನು ನಾಶಮಾಡಲಾಗಿಲ್ಲ. ಹಾಗೆಯೇ ಅಮೆರಿಕಾದ ಆಳುವ ವರ್ಗ ಎಷ್ಟೇ ಇಸ್ಲಾಮೋಫೋಬಿಕ್ ಆಗಿದ್ದರೂ ಅಮೆರಿಕದ ಕ್ರಾಂತಿಯ ಇತಿಹಾಸದಲ್ಲಿ ಹೈದರ್ ಮತ್ತು ಟಿಪ್ಪುಗಳ ಹೋರಾಟದ ಬಗ್ಗೆ ದಾಖಲಾಗಿರುವ ಅಪಾರ ಗೌರವವನ್ನು ಅಳಿಸಲಾಗಿಲ್ಲ. ಇದು ನಾವರಿಯದ ನಮ್ಮ ಚರಿತ್ರೆ. ಅಥವಾ ಆಳುವವರ್ಗಗಳು ನಾವು ಮರೆಯಬೇಕೆಂದು ಬಯಸುವ ನಮ್ಮ ಹೆಮ್ಮೆಯ ಚರಿತ್ರೆ. ಅಧಿಕಾರದ ವಿರುದ್ಧ ವ್ಯಕ್ತಿಯು ನಡೆಸುವ ಹೋರಾಟವು ಮರೆವಿನ ವಿರುದ್ಧ ನೆನೆಪು ನಡೆಸುವ ಹೋರಾಟವೇ ಆಗಿರುತ್ತದೆ. ಅಮೆರಿಕ ಸಾಮ್ರಾಜ್ಯಶಾಹಿ ಸರ್ಕಾರ ಹಾಗೂ ಭಾರತದ ಹಿಂದೂತ್ವವಾದಿ ಸರ್ಕಾರ ಕಿತ್ತುಹಾಕ ಬಯಸುವ ನಮ್ಮ ಹೆಮ್ಮೆಯ ಇತಿಹಾಸದ ಕೆಲವು ಪುಟಗಳಿವು..... ಬ್ರಿಟಿಷ್ ವಸಾಹತುಶಾಹಿ-ಸಮಾನ ಶತ್ರು 15 ನೇ ಶತಮಾನದಲ್ಲಿ ಕೊಲಂಬಸನು ಅಮೆರಿಕಕ್ಕೆ ಸಮುದ್ರ ಮಾರ್ಗವನ್ನು ಕಂಡುಹಿಡಿದ ನಂತರ ಮೂಲ ಯೋರೋಪಿನಿಂದ ಲಕ್ಷಾಂತರ ಸಂಖ್ಯೆಯಲ್ಲಿ ಯೂರೋಪಿಯನ್ನರು ಅಮೆರಿಕಕ್ಕೆ ವಲಸೆ ಹೋಗಿ ನೆಲೆಸಿದರು. 16-17ನೇ ಶತಮಾನದುದ್ದಕ್ಕೂ ಬ್ರಿಟಿಷ, ಫ್ರೆಂಚ್, ಸ್ಪಾನಿಷ ಹಾಗೂ ಪೋರ್ಚುಗೀಸ್ ವಸಾಹತುಶಾಹಿಗಳು ಅಮೆರಿಕದ ಮೂಲನಿವಾಸಿಗಳನ್ನು ಕೊಂದು-ಬಗ್ಗುಬಡೆದು, ಅಮೆರಿಕ ಖಂಡದ ವಿವಿಧ ಭಾಗಗಳನ್ನು ತಮ್ಮ ತಮ್ಮ ವಸಾಹತುಗಳನ್ನಾಗಿ ಮಾಡಿಕೊಂಡರು. ಅದೇ ಸಮಯದಲ್ಲಿ ಇಡೀ ಜಗತ್ತಿನ ಏಕಾಧಿಪತ್ಯಕ್ಕಾಗಿ ಫ್ರೆಂಚ್ ಮತ್ತು ಬ್ರಿಟಿಷರ ನಡುವೆ ಯೂರೋಪಿನಲ್ಲಿ ನಡೆಯುತ್ತಿದ್ದ ಸಂಘರ್ಷ ಆಫ್ರಿಕಾ, ಏಶಿಯಾ ಹಾಗೂ ಅಮರಿಕದ ವಸಾಹತುಗಳಲ್ಲೂ ಮುಂದುವರಿಕೆಯಾಗುತ್ತಿದ್ದವು. ಭಾರತದ ಮೇಲಿನ ಅಧಿಪತ್ಯಕ್ಕಾಗಿ ಕಾದಾಡುತ್ತಿದ್ದಂತೆ ಅಮೆರಿಕದ ಮೇಲಿನ ತಮ್ಮ ಏಕಾಧಿಪತ್ಯಕ್ಕಾಗಿಯೂ ಫ್ರೆಂಚ್ ಮತ್ತು ಬ್ರಿಟಿಷರು ಕಾದಾಡುತ್ತಿದ್ದರು. ಅದೇ ಸಂದರ್ಭದಲ್ಲಿ ಬ್ರಿಟಿಷ್ ಸಾಮ್ರಾಜ್ಯವಾದಿ ಸರ್ಕಾರಕ್ಕೂ ಮತ್ತು ಅದರಡಿಯಲ್ಲಿ ಸೀಮಿತ ಸ್ಥಳೀಯಾಧಿಕಾರವನ್ನು ಹೊಂದಿದ್ದ ಅಮೆರಿಕದ ಯೂರೋಪಿಯನ್ ಮೂಲದ ನೆಲೆಸಿಗ ವರ್ತಕ ಹಾಗೂ ಇತರ ಜನವರ್ಗಗಳಿಗೂ ದೊಡ್ಡ ವ್ಯಾವಹಾರಿಕ ವೈರುಧ್ಯ ಏರ್ಪಡುತ್ತಿತ್ತು. ತನ್ನ ಆಳ್ವಿಕೆಯಲ್ಲಿರುವ ಅಮೆರಿಕನ್ ವಸಾಹತುಗಳ ಬಗ್ಗೆ ಬ್ರಿಟಿಷ್ ಸರ್ಕಾರ ಜಾರಿ ಮಾಡುತ್ತಿದ್ದ ಕಾನೂನುಗಳೆಲ್ಲವೂ ನೆಲಸಿಗ ಅಮೆರಿಕನ್ನಿರಿಗಿಂತ ಬ್ರಿಟನ್ನಿನ ಹಿತಾಸಕ್ತಿಗಳಿಗೆ ಮಾತ್ರ ಅನೂಕೂಲವಾಗಿರುತ್ತಿದ್ದವು ಮತ್ತು ನಿಚ್ಚಳವಾಗಿ ತಾರತಮ್ಯಗಳಿಂದ ಕೂಡಿರುತ್ತಿದ್ದವು. ಜೊತೆಗೆ ಬ್ರಿಟನ್ ಸರ್ಕಾರ ಅಮೆರಿಕದ ನೆಲಸಿಗರನ್ನು ಎರಡನೇ ದರ್ಜೆ ಪ್ರಜೆಗಳಂತೆ ಪರಿಗಣಿಸುತ್ತಿತ್ತು. ಇದು ಬ್ರಿಟನ್ ಸಾಮ್ರಾಜ್ಯದ ವಿರುದ್ಧ ಅಮೆರಿಕದ ನೆಲೆಸಿಗ ಯೂರೋಪಿಯನ್ನರಲ್ಲಿ ಅಪಾರವಾದ ಅಸಮಾಧಾನ ಹುಟ್ಟಿಹಾಕಿತ್ತು. ಅಮೆರಿಕದ ವ್ಯಾಪಾರಿಗಳ ಹಿತಾಸಕ್ತಿಯನ್ನು ಬಲಿಗೊಟ್ಟು ಬ್ರಿಟನ್ನಿನ ಟೀ ವ್ಯಾಪಾರಿಗಳಿಗೆ ಲಾಭ ಹೆಚ್ಚಿಸುವ ಉದ್ದೇಶದಿಂದ ಬ್ರಿಟನ್ನು 1773ರಲ್ಲಿ ಹೋಸ ಟೀ ತೆರಿಗೆ ನೀತಿ ಜಾರಿ ಮಾಡಿದ ನಂತರ ಹೆಪ್ಪುಗಟ್ಟಿದ ಅಸಮಾಧಾನ ಬೃಹತ್ ಆಕ್ರೋಶವಾಗಿ ಸ್ಪೋಟವಾಯಿತು. 1773ರ ಡಿಸೆಂಬರ್ 16ರಂದು ಬ್ರಿಟನ್ನಿಂದ ಆಮದಾದ ಟೀ ಯನ್ನೆಲ್ಲಾ ಸಮುದ್ರಕ್ಕೆ ಎಸೆದ -ಬೋಸ್ಟನ್ ಟೀಪಾರ್ಟಿ ಯೆಂದು ಪ್ರಖ್ಯಾತವಾಗಿರುವ ಪ್ರತಿರೋಧದ ಮೂಲಕ ಅಮೆರಿಕನ್ನರ ಹೋರಾಟ ಹೊಸ ಮಜಲನ್ನು ಮುಟ್ಟಿತು ಇದಕ್ಕೆ ಪ್ರತಿಯಾಗಿ ಬ್ರಿಟಿಷ್ ವಸಾಹತುಶಾಹಿಗಳು ಮ್ಯಾಸುಚುಸೆಟ್ಸ್ ಸಂಸ್ಥಾನಕ್ಕೆ ಬಿಟ್ಟುಕೊಟ್ಟಿದ್ದ ಸ್ವಯಮಾಡಳಿತ ಹಕ್ಕನ್ನು ರದ್ದುಮಾಡಿತ್ತು. ಇವೆಲ್ಲವೂ ಬ್ರಿಟಿಶ ಸಾಮ್ರಾಜ್ಯಶಾಹಿಯ ವಿರುದ್ಧ ಆರ್ಥಿಕ ನೆಲೆಯಲ್ಲಿ ಮಡುಗಟ್ಟುತ್ತಿದ್ದ ಅಸಮಾಧಾನವನ್ನು ರಾಜಕೀಯ ಸ್ವಾತಂತ್ರ್ಯದ ಹೋರಾಟವನ್ನಾಗಿ ರೂಪಿಸಿತು. 1774ರಲ್ಲಿ ಬ್ರಿಟಿಷ್ ಅಡಿಯಲ್ಲಿದ್ದ ಅಮೆರಿಕದ ೧೮ ಸಂಸ್ಥಾನಗಳು ಮೊಟ್ಟಮೊದಲ ಬಾರಿಗೆ ಒಟ್ಟು ಸೇರಿ ಅಮೆರಿಕ ಖಂಡಮಟ್ಟದ ಸಮ್ಮೇಳನವನ್ನು ನಡೆಸಿ ಬ್ರಿಟಿಶರ ವಿರುದ್ಧ ಯುದ್ಧ ಘೋಷಿಸಿದವು. ಮರುವರ್ಷದಿಂದಲೇ ಅಮೆರಿಕದ ಹೋರಾಟಗಾರರಿಗೂ ಹಾಗೂ ಬ್ರಿಟಿಷ್ ಸೇನೆಯ ನಡುವೆ ಸಶಸ್ತ್ರ ಕಾದಾಟ ಪ್ರಾರಂಭವಾಗುವ ಮೂಲಕ ಅಮೆರಿಕ ಕ್ರಾಂತಿ ಪ್ರಾರಂಭವಾಯಿತು. 1776 ಜುಲೈ 4 ಅಮೆರಿಕನ್ ವಸಾಹತುಗಳ ಎರಡನೇ ಖಂಡಾಂತರ ಸಮ್ಮೇಳನದಲ್ಲಿ ಅಮೆರಿಕನ್ ಕ್ರಾಂತಿಕಾರಿಗಳು ಬ್ರಿಟಿಷರಿಂದ ಸಂಪೂರ್ಣ ಸ್ವಾತಂತ್ರ್ಯವನ್ನು ಘೋಷಿಸಿದರೂ ಮುಂದಿನ ಐದು ವರ್ಷಗಳ ಕಾಲ ಅಮೆರಿಕನ್ ಕ್ರಾಂತಿಕಾರಿಗಳು ಮತ್ತು ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ನಡುವೆ ಘನಘೋರ ಸಶಸ್ತ್ರ ಸಂಘರ್ಷವೂ ನಡೆಯಿತು. ಹೈದರ್-ಟಿಪ್ಪು- ಅಮೆರಿಕನ್ನರ ಸಮರ ಸಂಗಾತಿಗಳು ಈ ಸಂದರ್ಭದಲ್ಲೇ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಜಗತ್ತಿನ ಇತರ ಭಾಗಗಳಲ್ಲಿ ನಡೆಯುತ್ತಿರುವ ಹೋರಾಟಗಳು ವಿಜಯಿಯಾಗುವುದು ತಮ್ಮ ವಿಜಯಕ್ಕೂ ಪೂರ್ವಶರತ್ತು ಎಂಬುದನ್ನು ಅಮೆರಿಕದ ಕ್ರಾಂತಿಕಾರಿಗಳು ಅರ್ಥಮಾಡಿಕೊಂಡರು. ಅದರ ಭಾಗವಾಗಿ ಜಗತ್ತಿನ ವಿವಿಧ ಕಡೆಗಳಿಗೆ ಅದರಲೂ ಬ್ರಿಟಿಷ ಸಾಮ್ರಾಜ್ಯಶಾಹಿಯ ಪರಮ ವೈರಿಯಾಗಿದ್ದ ಹಾಗೂ ಭಾರತವನ್ನು ಒಳಗೊಂಡಂತೆ ಜಗತ್ತಿನ ಹಲವಾರು ಭಾಗಗಳಲ್ಲಿ ಬ್ರಿಟಿಶ್ ಸಾಮ್ರಾಜ್ಯಶಾಹಿಗೆ ಸವಾಲು ಹಾಕುತ್ತಿದ್ದ ಫ್ರಾನ್ಸ್, ಸ್ಪೇನ್, ಇನ್ನಿತ್ಯಾದಿ ದೇಶಗಳಿಗೆ ತಮ್ಮ ರಾಯಭಾರಿಗಳನ್ನು ಕಳಿಸತೊಡಗಿದರು. ಅಮೆರಿಕದ ಪ್ರಥಮ ಸಾಲಿನ ಕ್ರಾಂತಿಕಾರಿಗಳೂ ಹಾಗೂ ಆ ನಂತರದ ಸ್ವತಂತ್ರ ಅಮೆರಿಕದ ಅಧ್ಯಕ್ಷರುಗಳೂ ಆದ ಜಾರ್ಜ್ ವಾಷಿಂಗ್‌ಟನ್, ಥಾಮಸ್ ಜೆಫರ್ಸನ್, ಫ್ರಾಂಕ್ಲಿನ್, ಮ್ಯಾಡಿಸನ್ ಹಾಗೂ ಇನ್ನಿತರರು ಅಮೆರಿಕದ ಸ್ವಾತಂತ್ರ್ಯಕ್ಕೆ ಜಾಗತಿಕ ಬೆಂಬಲ ಗಳಿಸಿಕೊಳ್ಳುವಲ್ಲಿ ಹಾಗೂ ಜಗತ್ತಿನಾದ್ಯಂತ ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ವಿರುದ್ಧ ನಡೆಯುತ್ತಿದ್ದ ಸಮರಗಳ ಜೊತೆ ಸಂಬಂಧ ಹಾಗೂ ಸಹಕಾರಗಳನ್ನು ಸ್ಥಾಪಿಸಿಕೊಳ್ಳುವಲ್ಲಿ ಅಪಾರ ಪರಿಶ್ರಮ ತೋರಿದರು. ಜಗತ್ತಿನ ವಿವಿದೆಡೆಗಳಲ್ಲಿ ನಡೆಯುತ್ತಿದ್ದ ಬ್ರಿಟಿಶ್ ವಿರೋಧಿ ಸಮರಗಳಲ್ಲಿ ಅಮೆರಿಕನ್ನರು ಅತ್ಯಂತ ಗೌರವ, ಆದರ ಹಾಗೂ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದು ಮೈಸೂರು ಪ್ರಾಂತ್ಯದಲ್ಲಿ ಹೈದರ್ ಆಲಿ ಖಾನ್ ಮತ್ತು ಟಿಪ್ಪೂ ಸುಲ್ತಾನ್ ಬ್ರಿಟಿಷರ ವಿರುದ್ಧ ನಡೆಸುತ್ತಿದ್ದ ಸ್ವಾತಂತ್ರ್ಯ ಸಮರದ ಬಗ್ಗೆ ಎಂಬುದು ನಿಜವಾದ ದೇಶಭಕ್ತರಿಗೆಲ್ಲಾ ಹೆಮ್ಮೆ ತರುವ ವಿಷಯವಾಗಿದೆ. ಅಮೆರಿಕನ್ ಕ್ರಾಂತಿಕಾರಿಗಳಿಗೆ ಹೈದರ್ ಮತ್ತು ಟಿಪ್ಪುವಿನ ಪರಿಚಯ ಮಾಡಿಕೊಟ್ಟಿದ್ದು ಫ್ರೆಂಚರು. ಅಮೆರಿಕದ ಎರಡನೇ ಅಧ್ಯಕ್ಷರಾದ ಥಾಮಸ್ ಜೆಫರ್ಸನ್ ಅವರು ಅಮೆರಿಕನ್ ಸಂಗ್ರಾಮದ ಸಂದರ್ಭದಲ್ಲಿ ಪ್ರಾನ್ಸಿನಲ್ಲಿದ್ದಾಗ ಫ಼್ರೆಂಚ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಹೈದರ್ ಮತ್ತು ಟಿಪ್ಪುಗಳ ಸಮರ ಸಾಧನೆಗಳನ್ನು ಹಾಗೂ ಆರ್ಕಾಟ್, ಕಡಲೂರು, ಮದ್ರಾಸ್ ಇನ್ನಿತರ ಕಡೆ ಬ್ರಿಟಿಶ್ ಸೈನ್ಯ ಹೈದರ್ ಮತ್ತು ಟಿಪ್ಪು ಅವರ ರಣಾಕ್ರಮಣಕ್ಕೆ ಶರಣಾಗಿ ಓಡಿ ಹೋಗುತ್ತಿದ್ದನ್ನು, ಅಥವಾ ಹೈದರ್ ಶರತ್ತುಗಳಿಗೆ ಒಪ್ಪಿ ಅನಿವಾರ್ಯವಾಗಿ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದನ್ನು ಅತ್ಯಂತ ಕುತೂಹಲ ಹಾಗೂ ಆಸಕ್ತಿಗಳಿಂದ ಟಿಪ್ಪಣಿ ಮಾಡಿಕೊಂಡು ಅಮೆರಿಕದ ತಮ್ಮ ಸಂಗಾತಿಗಳಿಗೆ ರವಾನಿಸುತ್ತಿದ್ದರು. ಈ ಸಾಹಸಗಾಥೆಗಳು ಅಲ್ಲಿ ಇನ್ನಷ್ಟು ವಿಸ್ತೃತ ಪ್ರಚಾರ ಪಡೆದುಕೊಂಡು ಹೈದರ್ ಮತ್ತು ಟಿಪ್ಪು ಸುಲ್ತಾನರು ಆಗ ಅಮೆರಿಕದ ಮನೆಮಾತಾಗಿಬಿಟ್ಟಿದ್ದರು. ಹೈದರಾಲಿ ಬಗ್ಗೆ ಅಮೆರಿಕನ್ ಲಾವಣಿಗಳು! ಉದಾಹರಣೆಗೆ, ಅಮೆರಿಕದ ಸ್ವಾತಂತ್ರ್ಯ ಸಮರದ ಇತಿಹಾಸಕಾರ ಫ್ರಾಂಕ್ ಮೂರ್ ಅವರು ತಮ್ಮ *Diary of the American Revolution* ನಲ್ಲಿ ದಾಖಲಿಸುವಂತೆ ಹೈದರ್ ಮತ್ತು ಬ್ರಿಟಿಶರ ನಡುವೆ ನಡೆಯುತ್ತಿದ್ದ ಎರಡನೇ ಆಂಗ್ಲೋ ಮೈಸೂರ್ ಯುದ್ಧದಲ್ಲಿ (1780-84) ಟಿಪ್ಪು ನೇತೃತ್ವದ ಮೈಸೂರು ಸೇನೆಯು ಬ್ರಿಟಿಷರಿಗೆ ನೀಡುತ್ತಿದ್ದ ಅನಿರಿಕ್ಷಿತ ಮಾರಣಾಂತಿಕ ಪೆಟ್ಟುಗಳ ಮಾಹಿತಿಗಳು ಅಮೆರಿಕನ್ನರಿಗೆ 1781ರ ಆಗಸ್ಟಿಗೆ ತಲುಪಿತ್ತು. 1781ರ ಅಕ್ಟೋಬರ್‌ನಲ್ಲಿ ಲಾರ್ಡ್ ಕಾರನ್‌ವಾಲಿಸನ ನೇತೃತ್ವದ ಬ್ರಿಟಿಷ್ ಸಾಮ್ರಾಜ್ಯದ ಸೇನೆ ಅಮೆರಿಕಾದ ಕ್ರಾಂತಿಕಾರಿ ಸೇನೆಯ ದಂಡನಾಯಕರಾಗಿದ್ದ ಜಾರ್ಜ್ ವಾಷಿಂಗ್‌ಟನ್ನರಿಗೆ ಶರಣಾಯಿತು. ಒಂಭತ್ತು ದಿನಗಳ ನಂತರ ಈ ವಿಜಯವನ್ನು ನ್ಯೂಜೆರ್ಸಿ ಪ್ರಾಂತ್ಯದ ಟ್ರೆನ್ಟನ್ನಲ್ಲಿ ಆಚರಿಸಲಾಯಿತು. ಹಾಗೂ ಈ ವಿಜಯದಲ್ಲಿ ತಾವು ನೆನೆಸಿಕೊಳ್ಳಬೇಕಿರುವ ೧೩ ಜನರ ನೆನಪಿನಲ್ಲಿ 13 ತೋಪುಗಳನ್ನು ಹಾರಿಸಲಾಯಿತು! ಅಮೆರಿಕದ ಜನರು ತಮ್ಮ ಈ ಸ್ವಾತಂತ್ರ್ಯ ಸಂಭ್ರಮದಲ್ಲೂ ಮರೆಯದೇ ನೆನೆಸಿಕೊಂಡ 13 ಜನರಲ್ಲಿ ಒಬ್ಬರು ಭಾರತದ ಹೆಮ್ಮೆಯ ಹೈದರಾಲಿ. ಫ್ರಾಂಕ್ ಮೂರ್ ದಾಖಲಿಸಿರುವಂತೆ ಅಮೆರಿಕನ್ನರು ಹೈದರ್ ಆಲಿಯನ್ನು ನೆನೆಸಿಕೊಂಡಿದ್ದೂ ಹೀಗೆ: "The great and heroic Hyder Ali, raised up by providence to avenge the numberless cruelties perpetrated by the English on his unoffending countrymen, and to check the insolence and reduce the power of Britain in the East Indies." ಅಂದರೆ- ತನ್ನ ಅಮಾಯಕ ದೇಶವಾಸಿಗಳ ಮೇಲೆ ಇಂಗ್ಲೀಷರು ನಡೆಸಿದ ಅಸಂಖ್ಯಾತ ದಾರುಣ ಕ್ರೌರ್ಯಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಮತ್ತು ಭಾರತದಲ್ಲಿ ಬ್ರಿಟಿಷರ ದರ್ಪ ಮತ್ತು ಆಳ್ವಿಕೆಯನ್ನು ಮೊಟಕುಗೊಳಿಸಲು ದೈವಕೃಪೆಯಿಂದ ಮೇಲೆದ್ದು ಬಂದ ಮಹಾನ್ ವೀರ ಹೈದರ್ ಆಲಿ... (ಆಸಕ್ತರು ಫ್ರಾಂಕ್ ಮೂರ್ ಅವರ ಪುಸ್ತಕ Diary of the American Revolution ಅನ್ನು ಈ ವೆಬ್ ವಿಳಾಸದಲ್ಲಿ ಓದಬಹುದು: : ►►https://archive.org/details/diaryofamericanr0000unse ) ಅಷ್ಟು ಮಾತ್ರವಲ್ಲ. ಚಿಕಾಗೋ ವಿಶ್ವವಿದ್ಯಾಲಯದ ಸಂಶೋಧಕ ಪ್ರೊ. ಬ್ಲೇಕ್ ಸ್ಮಿತ್‌ಅವರು ಹೇಳುವಂತೆ ಟಿಪ್ಪು, ಹೈದರ್ ಮತ್ತು ಮೈಸೂರು ಪ್ರಾಂತ್ಯಗಳ ಹೆಸರು 18 ನೇ ಶತಮಾನದ ಪ್ರಖ್ಯಾತ ಇತಿಹಾಸಕಾರ ಜೆಡಿದಾ ಮೋರ್ಸ್ ಅವರು 1793ರಲ್ಲಿ ಬರೆದ The American Universal Geography ವನ್ನೂ ಒಳಗೊಂಡಂತೆ ಹಲವಾರು ಪಠ್ಯಪುಸ್ತಕಗಳ ಭಾಗವಾಗಿತ್ತು. . ( ►►https://aeon.co/essays/why-american-revolutionaries-admired-the-rebels-of-mysore ) ಅಮೆರಿಕ ಸ್ವಾತಂತ್ರ್ಯ ಸಂಗ್ರಾಮವನ್ನು ಗೆಲ್ಲಬೇಕೆಂದರೆ ಜಾಗತಿಕವಾಗಿ ಬ್ರಿಟಿಷ್ ಸಾಮ್ರಾಜ್ಯದ ಶಕ್ತಿ ಕುಂದುವುದು ಅತ್ಯಗತ್ಯವೆಂದು ಅರ್ಥಮಾಡಿಕೊಂಡಿದ್ದ ಅಮೆರಿಕನ್ ಕ್ರಾಂತಿಕಾರಿಗಳು ಫ಼್ರೆಂಚರೊಂದಿಗೆ ಮಾತ್ರವಲ್ಲದೆ ಬ್ರಿಟಿಶ್ ಸಾಮ್ರಾಜ್ಯಕ್ಕೆ ನಿಜವಾದ ಸವಾಲಾಗಿದ್ದ ಎಲ್ಲರೊಂದಿಗೂ ನೇರ ರಣಮೈತ್ರಿ ಮಾಡಿಕೊಳ್ಳುವ ಆಸಕ್ತಿಯನ್ನು ಹೊಂದಿದ್ದರು. ಅದರ ಭಾಗವಾಗಿಯೇ ಫ್ರೆಂಚ್ ಮಿಲಿಟರಿ ಸಮಾಲೋಚಕ ಥಾಮಸ್ ಕಾನ್ವೆಯ ಸಲಹೆಯ ಮೇರೆಗೆ ಏಷಿಯಾ ಖಂಡದಲ್ಲಿ ಬ್ರಿಟಿಷರಿಗೆ ದೊಡ್ಡ ಸವಾಲಾಗಿದ್ದ ಟಿಪ್ಪೂ ಸಮರಕ್ಕೆ ಸಹಾಯವಾಗಲು 1777ರಲ್ಲಿ ಒಂದು ಸೇನಾಪಡೆಯನ್ನು ಕಳಿಸುವ ಬಗ್ಗೆಯೂ ಯೋಚಿಸಿದ್ದರು. ಅಮೆರಿಕದ ವಿವಿಧ ಸಂಸ್ಥಾನಗಳೂ ಸಹ ವಿವಿಧ ರೀತಿಯಲ್ಲಿ ಮೈಸೂರು ಸಂಸ್ಥಾನದ ಬಗ್ಗೆ ಹಾಗೂ ಹೈದರ್-ಟಿಪ್ಪೂಗಳ ತಮ್ಮ ಗೌರವವನ್ನು ವ್ಯಕ್ತಪಡಿಸಿದ್ದವು. 1781ರಲ್ಲಿ ಪೆನ್ಸಿಲ್ವೇನಿಯಾ ಪ್ರಾಂತ್ಯದ ಶಾಸನಸಭೆಯು ತಮ್ಮ ಒಂದು ಯುದ್ಧ ನೌಕೆಗೆ *Hyder-Ally* (ಮಿತ್ರ) ಎಂದು ಹೆಸರಿಟ್ಟು ಗೌರವಿಸಿತು. ಅಮೆರಿಕದ ಆ ಕಾಲದ ಪ್ರಖ್ಯಾತ ಕವಿ ಹಾಗೂ ಅಮೆರಿಕದ ಎರಡನೇ ಅಧ್ಯಕ್ಷರಾಗಿದ್ದ ಥಾಮಸ್ ಜೆಫರಸನ್ ಅವರ ಮಿತ್ರ ಹೈದರ್ ಆಲಿಯ ಕುರಿತು ನುಡಿ ನಮನವನ್ನೇ ಮಾಡಿರುವುದೂ ಸಹ ಅಮೆರಿಕದ ಇತಿಹಾಸದಲ್ಲಿ ದಾಖಲಾಗಿದೆ: From an Eastern prince she takes her name, Who, smit with freedom’s sacred flame Usurping Britons brought to shame, His country’s wrongs avenging (ಹೆಸರಿದು ಪೂರ್ವದ ರಾಜನದು ಸ್ವಾತಂತ್ರ್ಯದ ಪವಿತ್ರ ಜ್ವಾಲೆಯಲ್ಲಿ ತನ್ನ ನಾಡಿಗೆ ಅನ್ಯಾಯ ಬಗೆದ ದರ್ಪಿಷ್ಟ ಬ್ರಿಟಿಷರಿಗೆ ಪಾಠ ಕಲಿಸಿದ ರಣಕಲಿಯದು....) ( ►►https://quod.lib.umich.edu/a/amverse/BAD9545.0001.001/1:38?rgn=div1;view=fulltext ) ಹಲವಾರು ಅಮೆರಿಕನ್ ಇತಿಹಾಸಕಾರರು ದಾಖಲಿಸಿರುವಂತೆ ಆಗ ಅಮೆರಿಕನ್ ಯುದ್ಧದಲ್ಲಿ ವೀರೋಚಿತ ಪಾತ್ರವಹಿಸಿದ ಹಲವಾರು ಯುದ್ಧ ಕುದುರೆಗಳಿಗೂ ಹೈದರ್ ಹಾಗೂ ಟಿಪ್ಪು ಎಂದು ಹೆಸರಿಟ್ಟಿದ್ದರಂತೆ! 1799ರ ನಾಲ್ಕನೇ ಆಂಗ್ಲೋ-ಮೈಸೂರ್ ಯುದ್ಧದಲ್ಲಿ ಟಿಪ್ಪು ವೀರೋಚಿತವಾಗಿ ಹೋರಾಡಿ ರಣರಂಗದಲ್ಲಿ ಮಡಿದ ನಂತರ ಬ್ರಿಟಿಷ್ ಸಾಮ್ರಾಜ್ಯಶಾಹಿಗೆ ಭಾರತದಲ್ಲಿ ಎದುರಾಗಿದ್ದ ಸವಾಲು ಅಂತಿಮಗೊಳ್ಳುತ್ತದೆ. ಆದರೂ ಅಮೆರಿಕನ್ನರು ಸುಲಭವಾಗಿ ಹೈದರ್-ಟಿಪ್ಪುಗಳನ್ನು ಮರೆಯುವುದಿಲ್ಲ. ಅಮೆರಿಕದ ಜಾನ್ ರಸೆಲ್ ಎನ್ನುವ ಪಾದ್ರಿ 1800ರ ಜುಲೈ 4 ರಂದು ಅಮೆರಿಕದ ಸ್ವಾತಂತ್ರ್ಯ ಘೋಷಣೆಯ ದಿನಾಚರಣೆಯೆಂದು ದಿವ್ಯ ಆಶೀರ್ವಾದ ಪ್ರವಚನವನ್ನು ಮಾಡುತ್ತಾ ಬ್ರಿಟಿಷ್ ಸಾಮ್ರಾಜ್ಯವಾದದ ಅಪಾಯದ ಬಗ್ಗೆ ತನ್ನ ಕೇಳುಗರಿಗೆ ಎಚ್ಚರಿಸುತ್ತಾರೆ. ಹಾಗೂ ತನ್ನ ಪ್ರಾರ್ಥನಾ ಸಭೆಯಲ್ಲಿದ್ದವರಿಗೆ ಟಿಪ್ಪುವಿನ ಸಾವಿನ ಕುರಿತು ಹೇಳುತ್ತಾ: " ಟಿಪ್ಪು ಸುಲ್ತಾನರು ಅತ್ಯಂತ ವೀರೋಚಿತವಾಗಿ ತಮ್ಮ ಸ್ವಾತಂತ್ರ್ಯ ಕಾಪಾಡಿಕೊಳ್ಳಲು ಹೋರಾಡುತ್ತಾ ಒಬ್ಬ ನಿಜವಾದ ರಾಜನಿಗೆ ತಕ್ಕುದಾದ ಸಾವನ್ನು ಅಪ್ಪಿದರು" ಎಂದು ತಿಳಿಸುತ್ತಾರೆ. ( ►►https://aeon.co/essays/why-american-revolutionaries-admired-the-rebels-of-mysore ) ಅಮೆರಿಕದ ಆರ್ಖೈವ್ಸ್ ನಲ್ಲಿ ಭದ್ರಗೊಂಡ ಹೈದರ್-ಟಿಪ್ಪು ನೆನಪು ಒಂದೆಡೆ ಭಾರತದಲ್ಲಿ ಹೈದರ್ ಮತ್ತು ಟಿಪ್ಪು ಅವರ ನೆನೆಪುಗಳನ್ನು ವಿಲನೀಕರಿಸುವ ಅಥವಾ ಅಳಿಸಿಬಿಡುವ ಕುತಂತ್ರಗಳು ಮತ್ತು ರಾಜತಂತ್ರಗಳು ನಡೆಯುತ್ತಿವೆ. ಆದರೆ ಅಮೆರಿಕದಲ್ಲಿ ನಿರುದ್ದಿಶ್ಯವಾಗಿ ಹೈದರ್ ಮತ್ತು ಟಿಪ್ಪು ಅವರ ನೆನಪುಗಳು ಆರ್ಖವ್ ಆಗುತ್ತಲಿದೆ. 2010ರಲ್ಲಿ ಅಮೆರಿಕಾದ ನ್ಯಾಶನಲ್ ಆರ್ಖೈವ್ಸ್ ಮತ್ತು ಯೂನಿವರ್ಸಿಟಿ ಆಫ್ ವರ್ಜೀನಿಯಾ ಗಳು ಪ್‌ಅಮೆರಿಕ ಸಂಸ್ಥಾನದ ಪಿತಾಮಹರುಗಳಿಗೆ ಸಂಬಂಧಪಟ್ಟ ಐತಿಹಾಸಿಕ ದಾಖಲೆಗಳನ್ನು ಸಾರ್ವಜನಿಕಗೊಳಿಸುವ ಒಂದು ವೆಬ್ ಸೈಟನ್ನು ರೂಪಿಸಿದ್ದಾರೆ. ಅದರಲ್ಲಿ ಅಮೆರಿಕದ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳು ಹಾಗೂ ಅಮೆರಿಕದ ಪ್ರಾರಂಭಿಕ ಕಾಲದ ಅಧ್ಯಕ್ಷರುಗಳಾದ ಜಾರ್ಜ್ ವಾಷಿಂಗ್‌ಟನ್, ಬೆಂಜಮಿನ್ ಫ್ರಾಂಕ್ಲಿನ್, ಥಾಮ್ಸ್ ಜೆಫರ್ಸನ್, ಅಲೆಕ್ಸಾಂಡರ್ ಹ್ಯಾಮಿಲ್ಟನ್ ಮತ್ತು ಜೇಮ್ಸ್ ಮಾಡಿಸನ್ ಹಾಗೂ ಇನ್ನಿತರರುಗಳು ಕ್ರಾಂತಿಕಾಲದಲ್ಲಿ ಹಾಗು ಆ ತರುಣದಲ್ಲಿ ಪರಸ್ಪರ ಬರೆದ ಪತ್ರಗಳು, ಬೇರೆಬೇರೆಯವರು ಈ ಮಹನೀಯರುಗಳಿಗೆ ಬರೆದ ಪತ್ರಗಳನ್ನು ಅಪ್ಲೋಡ್ ಮಾಡಲಾಗಿದೆ. ಇದರಲ್ಲಿ ಅಮೆರಿಕದ ಕ್ರಾಂತಿ ಸಂದರ್ಭದಲ್ಲಿ ಮೈಸೂರಿನ ಹೈದರ್ ಅಲಿ ಮತ್ತು ಟಿಪ್ಪೂ ಸುಲ್ತಾನರಬಗ್ಗೆ, ಅವರ ಸಮರಸಾಧನೆಗಳ ಬಗ್ಗೆ ಹಾಗು ಅವುಗಳ ಚಾರಿತ್ರಿಕ ಮಹತ್ವಗಳ ಬಗೆಗೆ ಅವರುಗಳ ನಡೆದ ಪತ್ರಸಂವಾದಗಳನ್ನು ದಾಖಲಿಸಲಾಗಿದೆ. ( ►►https://search.archives.gov/search?query=Hyder+Ali+Khan&submit=&utf8=&affiliate=national-archives ) ಇವೆಲ್ಲವನ್ನೂ ಅತ್ಯಂತ ಜತನದಿಂದ ಹಾಗೂ ಅಕೆಡೆಮಿಕ್ ಶಿಸ್ತಿನಿಂದ ವಿದ್ವತ್ಪೂರ್ಣ ಅಧ್ಯಯನ ಮಾಡಿರುವ ತುಮಕೂರು ಮೂಲದ ಸಂಶೋಧಕ ಅಮೀನ್ ಅಹ್ಮದ್ ಅವರು ಅವುಗಳ ಸಂಕ್ಷಿಪ್ತ ವಿವರಗಳನ್ನು ತಮ್ಮ ►►https://historyofmysuru.blogspot.com/ ಎಂಬ ವೆಬ್ ವಿಳಾಸದಲ್ಲಿ ದಾಖಲಿಸಿದ್ದಾರೆ. ನಮ್ಮ ನಾಡಿನ ನಿಜವಾದ ಹೆಮ್ಮೆಯ ಇತಿಹಾಸವನ್ನು ತಿಳಿದುಕೊಳ್ಳಬಯಸುವವರು ಅದಕ್ಕೆ ಭೇಟಿಕೊಟ್ಟು ಇನ್ನಷ್ಟು ವಿವರಗಳನ್ನು ಪಡೆದುಕೊಳ್ಳಬಹುದು. ಆ ಕೆಲವು ಪತ್ರೋತ್ತರಗಳಲ್ಲಿ ದಾಖಲಾಗಿರುವ ಅಂದಿನ ಕೆಲವು ವಿದ್ಯಮಾನಗಳು ಇಂತಿವೆ: 1781ರುದ್ದಕ್ಕೂ ಅಮೆರಿಕಾದ ಕ್ರಾಂತಿಕಾರಿಗಳು ಆಂಗ್ಲೋ-ಮೈಸೂರು ಯುದ್ಧದ ಬಗ್ಗೆ ತೀವ್ರವಾದ ಕುತೂಹಲದಿಂದ ಪತ್ರವ್ಯವಹಾರಗಳನ್ನು ಮಾಡಿದ್ದಾರೆ. ಈ ಯುದ್ಧದಲ್ಲಿ ಬ್ರಿಟಿಶರು ಸೋಲಬೇಕೆಂಬ ಬಲವಾದ ಆಸೆ ಹಾಗೂ ಭರವಸೆಗಳು ಅವರಲ್ಲಿತ್ತು. 1781ರ ಏಪ್ರಿಲ್ 4 ರಂದು ಬ್ರಸೇಲ್ಸ್ ನಿಂದ ಜಾನ್ ಆಡಮ್ಸ್ ಗೆ ಪತ್ರ ಬರೆಯುವ ಎಡ್ಮಂಡ್ ಜೆನ್ನಿಂಗ್ಸ್ ರ್‍ಯಾಂಡಾಲ್ಫ್ ಅವರು ಬ್ರಿಟಿಷರ ವಿರುದ್ಧ ಹೈದರ್ ಆಲಿ ನಡೆಸುತ್ತಿದ್ದ ಸಮರದ ಕೂಲಂಕಷವಾದ ವಿವರಗಳನ್ನು ನೀಡುತ್ತಾರೆ. ಅದರಲ್ಲಿ ಅವರು ಬ್ರಿಟಿಷ ಪತ್ರಿಕೆಯೊಂದರಲ್ಲಿ ವರದಿಯನ್ನು ಉಲ್ಲೇಖಿಸುತ್ತಾ ಹೈದರ್ ಅಲಿಯ 80,000 ಬಲದ ಅಶ್ವಪಡೆಯು ಆರ್ಕಾಟನ್ನು ಮುತ್ತಿಗೆಹಾಕಿರುವ ಬಗ್ಗೆ ವಿವರಗಳನ್ನು ನೀಡುತ್ತಾರೆ. ಹಾಗೆಯೇ ಈ ಕದನದಲ್ಲಿ ಬ್ರಿಟಿಶ್ ಸೇನೆಯ ಕರ್ನಲ್ ಬೇಲಿ ಮತ್ತು ಕರ್ನಲ್ ಫ್ಲೆಚರ್ ಸಂಪೂರ್ಣವಾಗಿ ಸೋತು 400ಯೂರೋಪಿಯನ್ ಮತ್ತು 4000 ಭಾರತೀಯ ಸಿಪಾಯಿಗಳು ಸತ್ತು ಸ್ವಲ್ಪದರಲ್ಲ್ಲೇ ಕರ್ನಲ್ ಮುನ್ರೊ ತಪ್ಪಿಸಿಕೊಂಡು ಮದ್ರಾಸಿಗೆ ಪಲಾಯನಮಾಡಿದ್ದರ ಬಗ್ಗೆ ಹಾಗೂ ಹೈದಾರಾಲಿಯ ಸೈನ್ಯಕ್ಕೆ ಆಗಿರುವ ಭೌಗೋಳಿಕ ವಿಜಯದ ಬಗ್ಗೆ ಸಂತಸದಿಂದ ದಾಖಲಾಗಿರುವ ವಿವರಗಳಿವೆ. ರ್‍ಯಾಂಡಾಲ್ಫ್ ಅವರು 1775ರಲ್ಲಿ ಜಾರ್ಜ್ ವಾಷಿಂಗ್‌ಟನ್ ಅವರ ಆಪ್ತ ಸೇನಾಧಿಕಾರಿಯಾಗಿದ್ದರು. ಮತ್ತು ಥಾಮಸ್ ಜೆಫರ್ಸನ್ ಅವರ ನಂತರ 1794ರಲ್ಲಿ ಅಮೆರಿಕದ ಎರಡನೇ ಸೆಕ್ರೆಟರಿ ಆಫ್ ಸ್ಟೇಟ್ (ಗೃಹಮಂತ್ರಿ) ಯಾಗುತ್ತಾರೆ. ಜಾನ್ ಕ್ವಿನ್ಸಿ ಆಡಮ್ಸ್ ಅವರು 1825ರಲ್ಲಿ ಅಮೆರಿಕದ ಆರನೇ ಅಧ್ಯಕ್ಷರಾಗುತ್ತಾರೆ. ಅವರು 13ನೇ ವಯಸ್ಸಿನಲ್ಲಿದ್ದಾಗ ಹೈದರಾಲಿಯ ವಿಜಯ ಹಾಗೂ ಕರ್ನಲ್ ಫೆಚರ್ ಮರಣ ಮತ್ತು ಕರ್ನಲ್ ಬೇಲಿ ಬಂಧನದ ಕುರಿತು ತನ್ನ ತಾಯಿ ಅಬಿಗೈಲ್ ಆಡಮ್ಸ್ ಗೆ 1781ರ ಏಪ್ರಿಲ್ 8ರಂದು ಬರೆದ ಪತ್ರವೂ ಅಮೆರಿಕನ್ ಆರ್ಖೈವ್ಸ್ ನಲ್ಲಿ ಸುರಕ್ಷಿತವಾಗಿದೆ. ಕೆಲವು ದಿನಗಳನಂತರ 1782ರ ಜೂನ್ 25ರಂದು ಜೇಮ್ಸ್ ಮ್ಯಾಡಿಸನ್ ಅವರು ಫಿಲಿಡಾಲ್ಫಿಯಾದಿಂದ ರ್‍ಯಾಮ್ಡ್ಲಾಫ್ ಅವರಿಗೆ ಬರೆದ ಪತ್ರದಲ್ಲಿ ಹೈದರಾಲಿಯವರು ಇಂಗ್ಲಿಷರ ವಿರುದ್ಧ ಗಳಿಸುತ್ತಿರುವ ವಿಜಯದ ಬಗ್ಗೆ ಹೆಮ್ಮೆಯಿಂದ ಪ್ರಸ್ತಾಪಿಸುತ್ತಾರೆ. ಮ್ಯಾಡಿಸನ್ ಅವರು 1809ರಲ್ಲಿ ಅಮೆರಿಕದ ನಾಲ್ಕನೇ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಇದು ನಮ್ಮ ಹೆಮ್ಮೆಯ ಹೈದರಾಲಿ ಖಾನ್ ಮತ್ತು ಟೀಪೂ ಸುಲ್ತಾನ್. ಈಗ ತಾನೇ ಜಗತ್ತಿನ ದೊಡ್ಡ ಸಾಮ್ರಾಜ್ಯಶಾಹಿಯಾಗಿ ಬದಲಾಗಿರುವ ಅಮೆರಿಕಕ್ಕೆ, ಹಾಗೂ ಭಾರತದ ಬ್ರಾಹ್ಮಣಶಾಹಿಗಳಿಗೆ ಹಾಗೂ ನವವಸಾಹತುಶಾಹಿಗಳ ಗುಲಾಮರಿಗೆ ಅಪ್ಪಟ ಸ್ವಾತಂತ್ರ್ಯ ಯೋಧರಾಗಿದ್ದ ಹೈದರ್ ಮತ್ತು ಟೀಪೂಗಳ ನೆನಪು ಬೇಡವಾಗಿದೆ. ಆದರೆ ನಮಗೆ ಬೇಕಲ್ಲವೇ? ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ: ►► ನೀವು ಈ ಕೆಳಗಿನ ಲೇಖನಗಳನ್ನು ಓದಿಲ್ಲವೇ? ಅಗತ್ಯವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. ►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ. ►►ಎಳೆಮಕ್ಕಳ, ವಿದ್ಯಾರ್ಥಿಗಳ ಪ್ರಾಣಕ್ಕೆ ಮಾರಕವಾದ ಟೇಸ್ಟಿಂಗ್ ಪೌಡರ್ ಅನ್ನು ಸರ್ಕಾರ ಅದೇಕೆ ನಿಷೇಧಿಸುತ್ತಿಲ್ಲ? ►► ‘ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಭಾರತದಲ್ಲಿ ದಿಢೀರ್‌ ಜನಪ್ರಿಯರಾಗಲು ಇರುವ ಸರಳ ಮಾರ್ಗ ಯಾವುದು ಗೊತ್ತೇ? ►► ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್! ►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ! ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ. ►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) ►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ? ►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..! ►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ! ►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! ►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ? ►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್! ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. ►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ? ►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್ ►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ ►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) ►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►► *ಸ್ವಯಂ ಘೋಷಿತ ರಾಷ್ಟ್ರೀಯವಾದಿ ಸಂಘಟನೆ ಆರೆಸ್ಸೆಸ್, ಸ್ವಾತಂತ್ರ್ಯಾ ನಂತರ ಬರೋಬ್ಬರಿ ಮೂರು ಬಾರಿ ನಿಷೇಧಕ್ಕೊಳಗಾಗಲು ಕಾರಣಗಳೇನು?* ►► *ನೋಟುಬ್ಯಾನ್ ಮಾಡಿದ ನಂತರ ಪ್ರಧಾನಿ ಮೋದಿಯವರು, ಟೋಕಿಯೋದಲ್ಲಿ ಭಾರತದ ಜನರನ್ನು ಗೇಲಿಮಾಡಿ ಮಾಡಿದ ಭಾಷಣದ ಅಪರೂಪದ ವಿಡಿಯೋ.* ►►ಸಂಘಿಬಾನಿಗಳ ಆಡಳಿತದಲ್ಲಿ ಸಂವಿಧಾನ ಬದಲಾಗುತ್ತಾ? ಬದಲಾದರೆ ಏನೇನಾಗುತ್ತೆ ? ಮಿಸ್ ಮಾಡ್ದೆ ಈ ಲೇಖನ ಓದಿ.. ವಿಡಿಯೋ ನೋಡಿ! ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಸ್ವಾತಂತ್ರ ಹೋರಾಟವನ್ನು ಹತ್ತಿಕ್ಕಲು ಬ್ರಿಟೀಷರು, ಸಾವರ್ಕರ್ ರನ್ನು ದಾಳವಾಗಿ ಬಳಸಿದ್ದರೇ? ►►9 ಜನ್ಮದಲ್ಲಿ ಸ್ವರ್ಗಸುಖ ಸಿಗುತ್ತದೆ ಎಂದು ಗೌರಿಯನ್ನು ಕೊಲೆ ಮಾಡಿದ್ದ ಹಂತಕರು.. ತಾಲೀಬಾನ್, ಐಸಿಸ್ ಗಿಂತಲೂ ಅಸಹ್ಯವಾದ ಸಿದ್ದಾಂತವೇ ಕೊಲೆಗೆ ಕಾರಣ ►►ಸ್ವತಂತ್ರ ಭಾರತದ ಇತಿಹಾಸದಲ್ಲಿ ದಾಖಲೆಯಾಗುಳಿವ ಮೋದಿ ಸಾಧನೆಗಳು: ಮೋದಿ ವಿರೋಧಿಗಳು ಮತ್ತು ಬೆಂಬಲಿಗರು ತಿಳಿದುಕೊಳ್ಳಲೇ ಬೇಕಾದ ನಗ್ನಸತ್ಯಗಳು! ►►ಕಾಂಗ್ರೆಸ್‌ನಲ್ಲಿ ಪ್ರಮೋಷನ್‌ ಸಿಗಬೇಕಾದರೆ ಜೈಲಿಗೆ ಹೋಗಬೇಕು’ ಎಂದಿರುವ ಬಿಜೆಪಿ ನಾಯಕ ಸಿ.ಟಿ ರವಿಗೊಂದು ಬಹಿರಂಗ ಪತ್ರ ►►ಅಫ್ಘಾನಿಸ್ತಾನದ ಬೆಳವಣಿಗೆಗಳು ಸಾಬೀತುಪಡಿಸುತ್ತಿರುವುದು ಮೋದಿ ಸರ್ಕಾರದ ಸಿಎಎ ಕಾಯಿದೆಯ ದೂರದೃಷ್ಟಿಯನ್ನೋ ಅಥವಾ ಸಂಘೀಬಾನಿಗಳ ಧೂರ್ತತನವನ್ನೋ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ವಿದ್ಯುತ್ ತಿದ್ದುಪಡಿ ಮಸೂದೆ- 2021; ಕಾರ್ಪೊರೇಟ್ ಲಾಭ ಪ್ರಖರ – ರೈತ, ಕಾರ್ಮಿಕ ಬದುಕು ಬರ್ಬರ! ►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ಜಿಎಸ್‌ಟಿ ಕಟ್ಟಬೇಡಿ’- ದೇಶದ ವರ್ತಕರಿಗೆ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಕರೆ! ►►ಬುರ್ಖಾ, ಜನಿವಾರ, ಮೂಲಭೂತವಾದ, ಕೋಮುವಾದ ಮತ್ತು ಸಮಾನತಾವಾದ ►►ಪತ್ರಕರ್ತರೇ ಎಚ್ಚರ: ಮೋದಿ ಸರ್ಕಾರದ ವೈಫಲ್ಯಗಳ ವಿರುದ್ದ ಬರೆದರೆ ಐಟಿ ದಾಳಿ ನಡೆಯಲಿದೆ ಹುಷಾರ್! ►►ಆರ್ ಎಸ್ ಎಸ್ ಸಿದ್ದಾಂತವನ್ನು ಒಪ್ಪುವವರು ಕಾಂಗ್ರೆಸ್ ಪಕ್ಷಕ್ಕೆ ಅಗತ್ಯ ಇಲ್ಲ. ಬಿಜೆಪಿಗೆ ಹೆದರುವವರು ಪಕ್ಷದಿಂದ ಹೊರಟು ಹೋಗಬಹುದು! ►►ಅಂಬೇಡ್ಕರ್ ಸಂವಿಧಾನದ ವಿರೋಧಿಗಳು ಸಂವಿಧಾನಾತ್ಮಕ ಹುದ್ದೆಯಲ್ಲಿರುವುದು ದೇಶದ ಭವಿಷ್ಯಕ್ಕೆ ಬಹು ಅಪಾಯಕಾರಿ

Advertisement
Advertisement
Recent Posts
Advertisement