Advertisement

ಮತಾಂತರ ನಿಷೇಧ ಮಾಡಬೇಕೆಂದು ಹೇಳುವವರು ಜಾತಿ ಪದ್ದತಿಯನ್ನು, ಮೇಲು- ಕೀಳುಗಳನ್ನು ನಿಷೇಧಿಸಬೇಕೆಂದು ಏಕೆ ಹೇಳುವದಿಲ್ಲ?

Advertisement

ಬರಹ: ಸನತ್ ಕುಮಾರ ಬೆಳಗಲಿ (ಲೇಖಕರು ಹಿರಿಯ ಅಂಕಣಕಾರರು, ಜನಪರ ಚಿಂತಕರು) ಮತಾಂತರ ನಿಷೇಧ ಕಾಯ್ದೆ ತರಲು ಮುಂದಾಗಿರುವ ರಾಜ್ಯ ಬಿಜೆಪಿ ಸರಕಾರ ಇದಕ್ಕಾಗಿ 'ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣೆ ಹಕ್ಕು ಕಾಯ್ದೆ 2021' ವಿಧೇಯಕ ಮಂಡಿಸಲು ಮುಂದಾಗಿದೆ. ಈಗ ತರಲು ಉದ್ದೇಶಿಸಲಾಗಿರುವ ಶಾಸನದ ಪ್ರಕಾರ, ಪರಿಶಿಷ್ಟ ಜಾತಿ, ಬುಡಕಟ್ಟು, ಅಪ್ರಾಪ್ತ ವಯಸ್ಸಿನವರು , ಮಹಿಳೆಯರು ಹಾಗೂ ಬುದ್ದಿ ಮಾಂದ್ಯರನ್ನು ಮತಾಂತರ ಮಾಡಿದವರಿಗೆ ಕನಿಷ್ಠ 3 ರಿಂದ 10 ವರ್ಷದವರೆಗೆ ಜೈಲು ಮತ್ತು ₹ 50 ಸಾವಿರ ದಂಡ ವಿಧಿಸಲಾಗುವುದು. ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಮಾಡಲು ಹೊರಟರೆ ಅಚ್ಚರಿ ಪಡಬೇಕಾಗಿಲ್ಲ. ಇದು ಅವರ ಘೋಷಿತ ಕಾರ್ಯಕ್ರಮ. ಚುನಾವಣೆ ಸಂದರ್ಭದಲ್ಲಿ ಜನಸಾಮಾನ್ಯರಿಗೆ ನೀಡಿದ ಯಾವ ಭರವಸೆಯನ್ನೂ ಈಡೇರಿಸಲು ಸಾಧ್ಯವಾಗದಿದ್ದಾಗ , ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಇಂಥ ಗುರಾಣಿ ಅದಕ್ಕೆ ಬೇಕಾಗುತ್ತದೆ. ಭಾರತೀಯ ಜನತಾ ಪಕ್ಷ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್. ಎಸ್. ಎಸ್) ರಾಜಕೀಯ ವೇದಿಕೆ. ಸಂಘದ ಗುರಿ 'ಹಿಂದು ರಾಷ್ಟ್ರ' ನಿರ್ಮಾಣ. ಶ್ರೇಣೀಕೃತ ಜಾತಿ ವ್ಯವಸ್ಥೆ ಹಿಂದು ಸಾಮಾಜಿಕ ಪದ್ದತಿಯ ಅಡಿಪಾಯ. ಜಾತಿ ವ್ಯವಸ್ಥೆ ಯಾರು ಯಾವ ಕೆಲಸ ಮಾಡಬೇಕೆಂಬುದನ್ನು ನಿಗದಿ ಪಡಿಸಿದೆ. ಚಪ್ಪಲಿ ಹೊಲಿಯಬೇಕಾದವರ, ದನದ ಕೊಟ್ಟಿಗೆಯ ಸಗಣಿ ಬಳಿಯಬೇಕಾದವರು ವಚನ ಅಕ್ಷರ ಕಲಿತು ವಿದ್ಯಾವಂತರಾದರೆ ಕಸ ಬಳಿಯುವ, ಒಳಚರಂಡಿಗೆ ಇಳಿದು ಸ್ವಚ್ಛ ಗೊಳಿಸುವರು ಯಾರು ? ಎಂಬ ಆತಂಕ ಆ ಸಿದ್ಧಾಂತ ನಂಬಿದವರಲ್ಲಿ ಸಹಜ. ಆದರೆ, ವೀರಶೈವ ಅಥವಾ ಲಿಂಗಾಯತ ಎಂಬ ಧರ್ಮ ಅಸ್ತಿತ್ವಕ್ಕೆ ಬಂದಿದ್ದೇ ಮತಾಂತರದಿಂದ ಎಂಬುದು ಅವರಿಗೆ ಗೊತ್ತಿದ್ದರೂ ಮರೆತವರಂತೆ ವರ್ತಿಸುತ್ತಿದ್ದಾರೆ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಜಾತಿ ವ್ಯವಸ್ಥೆಯ ಬೆಂಕಿಯಲ್ಲಿ ಬೆಂದು ಹೋಗುತ್ತಿದ್ದ ಸಮುದಾಯಗಳ ಜನರನ್ನು ಮನವೊಲಿಸಿ ಲಿಂಗ ಕಟ್ಟಿದರು.ಆಗ ಜೈನರೂ ಕೂಡ ದೊಡ್ಡ ಪ್ರಮಾಣದಲ್ಲಿ ಲಿಂಗಾಯತ ಧರ್ಮಕ್ಕೆ ಮತಾಂತರ ಮಾಡಿದರು.ಇವರೆಲ್ಲರಿಂದ ಲಿಂಗಾಯತ ಧರ್ಮ ಉದಯವಾಯಿತು. ಇಂಥ ಧರ್ಮವನ್ನು ಪ್ರತಿನಿಧಿಸುವ ಮಠಾಧೀಶರು ಯಾವಚನ ರಾಜಕೀಯ ಪಕ್ಷಗಳ ಕಾರ್ಯಸೂಚಿಯ ಜಾರಿಗೆ ತಮ್ಮ ಪಾಲಿನ ಸೇವೆ ಸಲ್ಲಿಸುವುದು ಅವರಿಗೆ ಶೋಭೆ ತರುವದಿಲ್ಲ. ಆದರೆ ಹಿಂದೂ ಧರ್ಮಕ್ಕೆ ಸಂಬಂಧವಿಲ್ಲದ ಬಸವಣ್ಣನವರ ಹೆಸರು ಹೇಳುವ ಚಿತ್ರದುರ್ಗ ದ ಮುರುಘಾಮಠದ ಶಿವಮೂರ್ತಿ ಶರಣರಿಗೂ ಮತಾಂತರ ಆತಂಕ ಉಂಟು ಮಾಡಿದ್ದನ್ನು ಕೇಳಿ ಆಶ್ಚರ್ಯ ವಾಯಿತು. ವೀರಶೈವ ಲಿಂಗಾಯತರು ಮತಾಂತರ ಆಗುತ್ತಿರುವ ಬಗ್ಗೆ ಶರಣರು ಕಳವಳ ವ್ಯಕ್ತಪಡಿಸಿದ್ದಾರೆ.ಅವರು ಹಿಂದುಳಿದ ಸಮಾಜದ ಮಠಾಧೀಶರ ಸಭೆಯನ್ನು ನಡೆಸಿ ಮತಾಂತರ ನಿಷೇಧ ಕಾಯ್ದೆಯನ್ನು ತರುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ನಾಗಪುರದ ಗುರುಗಳಿಗೆ ಹತ್ತಿರವಾಗಲು ಯತ್ನಿಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಇದು ಸಹಜ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ಇರುವುದರಿಂದ ಮತಾಂತರ ನಿಷೇಧದಂಥ ಅವರ ನಿಲುವನ್ನು ಬೆಂಬಲಿಸಿದರೆ ಏನಾದರೂ ಪ್ರಯೋಜನವಾದೀತೆಂಬ ಲೆಕ್ಕಾಚಾರ ಸರಿಯಾಗಿದೆ. ಪ್ರಗತಿಪರರ ಒಡನಾಟದಿಂದ ಉಪಯೋಗ ವಿಲ್ಲವೆಂದು ಅವರು ತಮ್ಮ ಅನುಭವದಿಂದ ಕಂಡು ಕೊಂಡಿದ್ದಾರೆ. ಮತಾಂತರ ನಿಷೇಧ ಮಾಡಬೇಕೆಂದು ಹೇಳುವವರು ಜಾತಿ ಪದ್ದತಿಯನ್ನು, ಮೇಲು ಕೀಳು ಗಳನ್ನು ನಿಷೇಧಿಸಬೇಕೆಂದು ಹೇಳುವದಿಲ್ಲ.ಹೆಣ್ಣು ಭ್ರೂಣ ಹತ್ಯೆಯ ಬಗ್ಗೆ ಮಾತಾಡುವದಿಲ್ಲ.ಹಸಿದವರ ನೋವುಗಳಿಗೆ ಧ್ವನಿಯಾಗುವದಿಲ್ಲ‌. ಆದರೆ, ಮತಾಂತರ ವಿರೋಧಿಸುವ ಜೊತೆಗೆ ಬಡವರ ಮಕ್ಕಳು ಮೊಟ್ಟೆ ಸೇವಿಸುವುದನ್ನು ಆಕ್ಷೇಪಿಸುತ್ತಾರೆ. ಮತಾಂತರ ನಿಷೇಧ ಕಾಯ್ದೆಯ ಜೊತೆಗೆ ಲವ್ ಜಿಹಾದ ನಿಷೇಧ ಶಾಸನವನ್ನು ತರಲಾಗುವುದೆಂದು ಸಚಿವರಾದ ಈಶ್ವರಪ್ಪ ಮತ್ತಯ ಸುನಿಲ ಕುಮಾರ ತಿಳಿಸಿದ್ದಾರೆ. ಇದು ಕೂಡ ಅವರ ಕಾರ್ಯಸೂಚಿಯ ಭಾಗ. ಹಿಂದುತ್ವ ಎಂಬ ಸಸಿ ಒಣಗದಂತೆ ನೋಡಿಕೊಳ್ಳಬೇಕಾದರೆ ಇವೆಲ್ಲ ಆಟಗಳನ್ನು ಆಡಲೇಬೇಕಾಗುತ್ತೆ. ಮತಾಂತರ ನಿಷೇಧದ ನೇರ ಗುರಿ ಕ್ರೈಸ್ತ ಸಮುದಾಯದ ಜನ.ಕ್ರೈಸ್ತ ಧರ್ಮಗುರುಗಳು ಬಲವಂತದಿಂದ ಮತಾಂತರ ಮಾಡಿಸುತ್ತಾರೆ ಎಂಬುದು ಇವರ ಆರೋಪ. ಆದರೆ ಬಿಜೆಪಿ ಸಹಿತ ಸಂಘ ಪರಿವಾರದ ನಾಯಕರೆಲ್ಲಿ ಬಹುತೇಕ ಮಂದಿ ವ್ಯಾಸಂಗ ಮಾಡಿದ್ದು ಮತ್ತು ಈಗ ತಮ್ಮ ಮಕ್ಕಳನ್ನು ಓದಿಸುತ್ತಿರುವದು ‌ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಕಾನ್ವೆಂಟ್ ಗಳಲ್ಲಿ ಹಾಗೂ ಅಸ್ವಸ್ಥತೆ ಉಂಟಾದರೆ ಚಿಕಿತ್ಸೆ ಪಡೆಯುವುದು ಕ್ರೈಸ್ತರು ನಡೆಸುವ ಆಸ್ಪತ್ರೆಗಳಲ್ಲಿ ಎಂಬುದರ ಬಗ್ಗೆ ಜಾಣ ಮೌನ ತಾಳುತ್ತಾರೆ. ಭಾರತದಲ್ಲಿ ಪ್ರತಿ ಮೂಲೆ, ಮೂಲೆಗಳಲ್ಲಿ ಸಾವಿರಾರು ಆಸ್ಪತ್ರೆಗಳನ್ನು, ಶಾಲೆಗಳನ್ನು ಕ್ರೈಸ್ತ ಸಂಸ್ಥೆಗಳು ನಡೆಸುತ್ತವೆ.ಅಲ್ಲಿ ಬರುವ ರೋಗಿಗಳನ್ನು, ಮತ್ತು ಶಾಲೆಗೆ ಬರುವ ವಿದ್ಯಾರ್ಥಿಗಳನ್ನು ಮತಾಂತರ ಮಾಡಿಸಿದ್ದರೆ ಕ್ರೈಸ್ತರ ಸಂಖ್ಯೆ ಈ ದೇಶದಲ್ಲಿ ಹತ್ತಾರು ಕೋಟಿ ದಾಟುತ್ತಿತ್ತು.ಆದರೆ ಅವರ ಜನಸಂಖ್ಯೆ ಅಧಿಕೃತ ಅಂಕಿ ಅಂಶಗಳ ಕಳೆದ ಎಪ್ಪತ್ತು ವರ್ಷಗಳಲ್ಲಿ ಶೇ 2ಕ್ಕಿಂತ ಹೆಚ್ಚಾಗಿಲ್ಲ.ಮತಾಂತರ ನಡದೇ ಇಲ್ಲವೆಂದಲ್ಲ ಆದರೆ ಅವೆಲ್ಲ ಸ್ವಯಂ-ಇಚ್ಛೆಚ್ಚೆಯಿಂದ ನಡೆದ ಮತಾಂತರಗಳು ಅದಕ್ಕೆ ಸಂವಿಧಾನದಲ್ಲಿ ಅವಕಾಶವಿದೆ. ಬಲವಂತದ ಮತಾಂತರ ಮಾತ್ರ ಸರಿಯಲ್ಲ. ಅದನ್ನು ನಿರ್ಬಂಧಿಸುವ ಕಾನೂನು ಈಗಾಗಲೇ ಇದೆ.ಈಗ ರಾಜ್ಯದ ಬಿಜೆಪಿ ಸರಕಾರ ತರಲು ಹೊರಟಿರುವ ಇನ್ನೊಂದು ಕಾಯ್ದೆ ಮುಂದಿನ ಚುನಾವಣೆ ಯನ್ನು ದೃಷ್ಟಿ ಯಲ್ಲಿರಿಸಿಕೊಂಡು ಮಾಡುತ್ತಿರುವ ಅಗ್ಗದ ಗಿಮಿಕ್ ಮಾತ್ರ. ಇದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರಿಗೂ ಗೊತ್ತಿದೆ. ಆದರೆ ಅವರು ಸ್ವತಂತ್ರರಲ್ಲ.ಕುರ್ಚಿ ಉಳಿಸಿಕೊಳ್ಳಲು ಇಂಥದಕ್ಕೆಲ್ಲ ಮಣಿಯಲೇ ಬೇಕಾಗುತ್ತದೆ. ಕರ್ನಾಟಕದಲ್ಲಿ ಒಮ್ಮಿಂದೊಮ್ಮಲೆ ಮತಾಂತರ ಕಾಯ್ದೆಯನ್ನು ತರುವದಕ್ಕೆ ಶಾಸಕ ಗೂಳಿಹಟ್ಟಿ ಶೇಖರ ಅವರು ವಿಧಾನ ಸಭೆಯಲ್ಲಿ " ತಮ್ಮ ತಾಯಿಯನ್ನೂ ಮತಾಂತರ ಮಾಡಿಸಲಾಗಿದೆ" ಎಂದು ಮಾಡಿದ ಆರೋಪ. ಕೆಲ ಶಾಸಕರು ಅವರಿಗೆ ದನಿಗೂಡಿಸಿದರು.ಈ ಆರೋಪ ಬಂದ ನಂತರ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಸರ್ಕಾರ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕು ಆಡಳಿತಕ್ಕೆ ಆದೇಶ ನೀಡಿತು.ತಾಲ್ಲೂಕು ಆಡಳಿತ ತನಿಖೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿತು .ಈ ವರದಿಯ ಪ್ರಕಾರ ಮತಾಂತರದ ಆರೋಪ ಸುಳ್ಳು. "ಹೊಸ ದುರ್ಗ ತಾಲ್ಲೂಕಿನಲ್ಲಿ ಬಲವಂತದ ಮತಾಂತರ ನಡೆದ ಯಾವುದೇ ಪ್ರಕರಣ ನಡೆದಿಲ್ಲ ಮತಾಂತರವಾದವರು ಸ್ವಯಂ-ಇಚ್ಛೆಯಿಂದ ಮತಾಂತರವಾಗಿದ್ದಾರೆ" ಎಂದು ಹೊಸದುರ್ಗ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಭಾರತದ ಸಂವಿಧಾನದ 25ನೇ ಕಲಮಿನ ಪ್ರಕಾರ ದೇಶದ ಪ್ರತಿಯೊಬ್ಬ ಪ್ರಜೆಗೂ ತನಗೆ ಇಷ್ಟವಾದ ಧರ್ಮವನ್ನು ಆಚರಿಸುವ ಸ್ವಾತಂತ್ರ್ಯ ವಿದೆ.ಅಷ್ಟೇ ಅಲ್ಲ ತಾನು ಇಷ್ಟ ಪಡುವ ಧರ್ಮವನ್ನು ಪ್ರಚಾರ ಮಾಡುವ ಅವಕಾಶವೂ ಇದೆ.ವಾಸ್ತವಾಂಶ ಹೀಗಿರುವಾಗ ಕ್ರೈಸ್ತರು ಮತ್ತು ಮುಸಲ್ಮಾನರ ಮೇಲೆ ಮತಾಂತರ ,ಲವ್ ಜಿಹಾದ ಹೆಸರಿನಲ್ಲಿ ಅಪಪ್ರಚಾರ ಮಾಡುತ್ತಿರುವದೇಕೆ? ಬಸವಣ್ಣನವರ ಹೆಸರನ್ನು ಬಂಡವಾಳ ಮಾಡಿಕೊಂಡು ತಮ್ಮ ಪೀಠಗಳನ್ನು ಭದ್ರ ಪಡಿಸಿಕೊಳ್ಳುವ ಮಠಾಧೀಶರು ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ.ಅವರಿಗೆ ಇಷ್ಟು ದಿನ ಹೇಳುತ್ತ ಬಂದ ಬಸವಣ್ಣನವರೂ ಬೇಕು, ಬಾಬಾಸಾಹೇಬರ ಹೆಸರೂ ಬೇಕು. ನಾಗಪುರದ ಗುರುಗಳನ್ನು ಒಲೈಸಲು ಸರಕಾರದಿಂದ ಸವಲತ್ತುಗಳನ್ನು ಪಡೆಯಲು ಮತಾಂತರ ವನ್ನೂ ವಿರೋಧಿಸಬೇಕು. "ನೀವು ಮತಾಂತರ ವನ್ನು ವಿರೋಧಿಸದಿದ್ದರೆ ನಿಮ್ಮ ಪಾದಪೂಜೆಗೆ ಭಕ್ತರೂ ಸಿಗುವದಿಲ್ಲ" ಎಂದು ಪ್ರಮೋದ ಮುತಾಲಿಕರು ಎಚ್ಚರಿಕೆ ಯನ್ನೂ ನೀಡಿದ್ದಾರೆಂಬುದು ಗಮನಾರ್ಹ. ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ತರುವ ಮೊದಲೇ ಬೆಳಗಾವಿ,ಬೇಲೂರು ಮುಂತಾದ ಕಡೆ ಕ್ರೈಸ್ತ ಧರ್ಮಗುರುಗಳ ಮೇಲೆ ಮತ್ತು ಪ್ರಾರ್ಥನಾಲಯಗಳ ಮೇಲೆ ನಡೆದ ದಾಳಿ ಮತ್ತು ಹಲ್ಲೆಗಳಿಗೆ ಯಾರು ಹೊಣೆ? ರಾಜ್ಯ ಬಿಜೆಪಿ ಸರಕಾರ ತರಲಿರುವ ಮತಾಂತರ ನಿಷೇಧ ಕಾಯ್ದೆಗೆ ತಮ್ಮ ಸಹಮತವಿದೆ ಎಂದು ಮುರುಘಾ ಶರಣರು ಬಹಿರಂಗವಾಗಿ ಹೇಳಿರುವದರಿಂದ ಅವರು ಯಾವ ಪಾಳೆಯ ಸೇರಿದ್ದಾರೆಂಬುದು ಸ್ಪಷ್ಟವಾಗಿದೆ.ಪ್ರಗತಿಪರರು,ದಲಿತ, ಪ್ರಗತಿಪರ ಸಂಘಟನೆಗಳು ಪ್ರಗತಿಪರ ಎಂದು ಹೇಳಿಕೊಳ್ಳುವ ಮಠಾಧೀಶರು ಮತ್ತು ಸ್ವಾಮಿ ಗಳ ಬಗ್ಗೆ ಬಹಳ ಭ್ರಮೆ ಇಟ್ಟುಕೊಳ್ಳುವದರಲ್ಲಿ ಅರ್ಥವಿಲ್ಲ. ಎಲ್ಲ ಸ್ವಾಮಿಗಳು ಹಾಗಿರಲಿಕ್ಕಿಲ್ಲ.ಗದುಗಿನ ತೋಂಟದಾರ್ಯ ಮಠದ ಹಿಂದಿನ ಶ್ರೀ ಗಳು,ಈಗ ನಮ್ಮ ನಡುವಿರುವ ಧುತ್ತರಗಾಂವ ಮಠದ ಕೊರಣೇಶ್ವರ ಸ್ವಾಮಿಗಳು ಮತ್ತು ಸಾಣೆಹಳ್ಳಿ ಶ್ರೀ ಗಳು ಇದ್ದುದರಲ್ಲಿ ವಾಸಿ.ಸರ್ಕಾರಿ ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವುದನ್ನು ಅವರು ಸಮರ್ಥಿಸಿದ್ದಾರೆ. ಮತಾಂತರ ಮತ್ತು ಲವ್ ಜಿಹಾದ ಹುಯಿಲು ಬಿಜೆಪಿ ಯ ಚುನಾವಣಾ ರಾಜಕೀಯದ ತಂತ್ರ ಎಂದು ತಿಳಿಯದಷ್ಟು ಮುರುಘಾ ಮಠದ ಶರಣರು ಮುಗ್ದರಲ್ಲ.ಆದರೆ ಇವರು ಬಸವಣ್ಣ ಅಲ್ಲ.ಬಸವಣ್ಣನವರಿಗೆ ಬಿಜ್ಜಳನ ಮಂತ್ರಿ ಸ್ಥಾನ ಮುಖ್ಯವಾಗಿರಲಿಲ್ಲ.ತತ್ವದ ಪ್ರಶ್ನೆ ಬಂದಾಗ ಅವರು ರಾಜಿ ಮಾಡಿಕೊಳ್ಳಲಿಲ್ಲ ಮಂತ್ರಿ ಸ್ಥಾನ ತೊರೆದು ತಾವು ನಂಬಿದ ಆದರ್ಶ ಮತ್ತು ಆಶಯಗಳೊಂದಿಗೆ ನಿಂತರು.ಆದರೆ ಅವರ ಹೆಸರು ಹೇಳುವ ಇಂದಿನ ಮಠಾಧೀಶರಿಗೆ ಬಸವಣ್ಣ ಮತ್ತು ನಂಬಿದ ತತ್ವಗಳಿಗಿಂತ ತಾವು ಅಲಂಕರಿಸಿದ ಪೀಠ ಮುಖ್ಯವಾಗಿದೆ. ಒಟ್ಟಾರೆ ಕರ್ನಾಟಕದಲ್ಲಿ ಗುಜರಾತ ಮಾದರಿಯ ಹಿಂದುತ್ವ ಪ್ರಯೋಗ ಶಾಲೆಯನ್ನಾಗಿ ಮಾಡಲು ಮಸಲತ್ತು ನಡೆದಿರುವಾಗ ಅವರ ಕಾರ್ಯ ಸೂಚಿಗೆ ಪ್ರತ್ಯಕ್ಷ ವಾಗಿ ,ಪರೋಕ್ಷವಾಗಿ ಸಹಾಯ ಮಾಡುವವರು ನಂಬಿಕೆ ಗೆ ಅರ್ಹರಲ್ಲ.ಇಂಥವರು ಹಿಂದೆ ಆಡುತ್ತ ಬಂದ ಮಾತುಗಳು ಬೂಟಾಟಿಕೆಯಲ್ಲದೇ ಬೇರೇನೂ ಅಲ್ಲ. ಮತಾಂತರ ಮತ್ತು ಲವ್ ಜಿಹಾದ ಹೆಸರಿನಲ್ಲಿ ಸಾಮಾಜಿಕ ಶಾಂತಿ,ನೆಮ್ಮದಿಯನ್ನು ಕದಡುವ ಹುನ್ನಾರ ಗಳನ್ನು ಸಹಬಾಳ್ವೆಯಲ್ಲ ಕರ್ನಾಟಕದ ಜನ ವಿಫಲಗೊಳಿಸುತ್ತಾರೆ ನಂಬಿಕೆಯನ್ನು ನಾವು ಕಳೆದು ಕೊಳ್ಳಬಾರದು. ಕೃಪೆ: ಪ್ರಚಲಿತ ಅಂಕಣ - ಮಠಾಧೀಶರಿಗೆ ಏಕೆ ಮತಾಂತರದ ಚಿಂತೆ? ವಾರ್ತಾಭಾರತಿ- 19.12.2021. ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ: ►► ನೀವು ಈ ಕೆಳಗಿನ ಲೇಖನಗಳನ್ನು ಓದಿಲ್ಲವೇ? ಅಗತ್ಯವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. ►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ. ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ಜಿಎಸ್‌ಟಿ ಕಟ್ಟಬೇಡಿ’- ದೇಶದ ವರ್ತಕರಿಗೆ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಕರೆ! ►►ಬುರ್ಖಾ, ಜನಿವಾರ, ಮೂಲಭೂತವಾದ, ಕೋಮುವಾದ ಮತ್ತು ಸಮಾನತಾವಾದ ►►ಎಳೆಮಕ್ಕಳ, ವಿದ್ಯಾರ್ಥಿಗಳ ಪ್ರಾಣಕ್ಕೆ ಮಾರಕವಾದ ಟೇಸ್ಟಿಂಗ್ ಪೌಡರ್ ಅನ್ನು ಸರ್ಕಾರ ಅದೇಕೆ ನಿಷೇಧಿಸುತ್ತಿಲ್ಲ? ►► ‘ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಭಾರತದಲ್ಲಿ ದಿಢೀರ್‌ ಜನಪ್ರಿಯರಾಗಲು ಇರುವ ಸರಳ ಮಾರ್ಗ ಯಾವುದು ಗೊತ್ತೇ? ►► ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್! ►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ! ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ. ►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) ►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ? ►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..! ►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ! ►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! ►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ? ►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್! ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. ►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ? ►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್ ►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ ►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) ►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►► *ಸ್ವಯಂ ಘೋಷಿತ ರಾಷ್ಟ್ರೀಯವಾದಿ ಸಂಘಟನೆ ಆರೆಸ್ಸೆಸ್, ಸ್ವಾತಂತ್ರ್ಯಾ ನಂತರ ಬರೋಬ್ಬರಿ ಮೂರು ಬಾರಿ ನಿಷೇಧಕ್ಕೊಳಗಾಗಲು ಕಾರಣಗಳೇನು?* ►► *ನೋಟುಬ್ಯಾನ್ ಮಾಡಿದ ನಂತರ ಪ್ರಧಾನಿ ಮೋದಿಯವರು, ಟೋಕಿಯೋದಲ್ಲಿ ಭಾರತದ ಜನರನ್ನು ಗೇಲಿಮಾಡಿ ಮಾಡಿದ ಭಾಷಣದ ಅಪರೂಪದ ವಿಡಿಯೋ.* ►►ಸಂಘಿಬಾನಿಗಳ ಆಡಳಿತದಲ್ಲಿ ಸಂವಿಧಾನ ಬದಲಾಗುತ್ತಾ? ಬದಲಾದರೆ ಏನೇನಾಗುತ್ತೆ ? ಮಿಸ್ ಮಾಡ್ದೆ ಈ ಲೇಖನ ಓದಿ.. ವಿಡಿಯೋ ನೋಡಿ! ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಸ್ವಾತಂತ್ರ ಹೋರಾಟವನ್ನು ಹತ್ತಿಕ್ಕಲು ಬ್ರಿಟೀಷರು, ಸಾವರ್ಕರ್ ರನ್ನು ದಾಳವಾಗಿ ಬಳಸಿದ್ದರೇ? ►►9 ಜನ್ಮದಲ್ಲಿ ಸ್ವರ್ಗಸುಖ ಸಿಗುತ್ತದೆ ಎಂದು ಗೌರಿಯನ್ನು ಕೊಲೆ ಮಾಡಿದ್ದ ಹಂತಕರು.. ತಾಲೀಬಾನ್, ಐಸಿಸ್ ಗಿಂತಲೂ ಅಸಹ್ಯವಾದ ಸಿದ್ದಾಂತವೇ ಕೊಲೆಗೆ ಕಾರಣ ►►ಸ್ವತಂತ್ರ ಭಾರತದ ಇತಿಹಾಸದಲ್ಲಿ ದಾಖಲೆಯಾಗುಳಿವ ಮೋದಿ ಸಾಧನೆಗಳು: ಮೋದಿ ವಿರೋಧಿಗಳು ಮತ್ತು ಬೆಂಬಲಿಗರು ತಿಳಿದುಕೊಳ್ಳಲೇ ಬೇಕಾದ ನಗ್ನಸತ್ಯಗಳು! ►►ಕಾಂಗ್ರೆಸ್‌ನಲ್ಲಿ ಪ್ರಮೋಷನ್‌ ಸಿಗಬೇಕಾದರೆ ಜೈಲಿಗೆ ಹೋಗಬೇಕು’ ಎಂದಿರುವ ಬಿಜೆಪಿ ನಾಯಕ ಸಿ.ಟಿ ರವಿಗೊಂದು ಬಹಿರಂಗ ಪತ್ರ ►►ಅಫ್ಘಾನಿಸ್ತಾನದ ಬೆಳವಣಿಗೆಗಳು ಸಾಬೀತುಪಡಿಸುತ್ತಿರುವುದು ಮೋದಿ ಸರ್ಕಾರದ ಸಿಎಎ ಕಾಯಿದೆಯ ದೂರದೃಷ್ಟಿಯನ್ನೋ ಅಥವಾ ಸಂಘೀಬಾನಿಗಳ ಧೂರ್ತತನವನ್ನೋ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ವಿದ್ಯುತ್ ತಿದ್ದುಪಡಿ ಮಸೂದೆ- 2021; ಕಾರ್ಪೊರೇಟ್ ಲಾಭ ಪ್ರಖರ – ರೈತ, ಕಾರ್ಮಿಕ ಬದುಕು ಬರ್ಬರ! ►►ಪತ್ರಕರ್ತರೇ ಎಚ್ಚರ: ಮೋದಿ ಸರ್ಕಾರದ ವೈಫಲ್ಯಗಳ ವಿರುದ್ದ ಬರೆದರೆ ಐಟಿ ದಾಳಿ ನಡೆಯಲಿದೆ ಹುಷಾರ್! ►►ಆರ್ ಎಸ್ ಎಸ್ ಸಿದ್ದಾಂತವನ್ನು ಒಪ್ಪುವವರು ಕಾಂಗ್ರೆಸ್ ಪಕ್ಷಕ್ಕೆ ಅಗತ್ಯ ಇಲ್ಲ. ಬಿಜೆಪಿಗೆ ಹೆದರುವವರು ಪಕ್ಷದಿಂದ ಹೊರಟು ಹೋಗಬಹುದು! ►►ಅಂಬೇಡ್ಕರ್ ಸಂವಿಧಾನದ ವಿರೋಧಿಗಳು ಸಂವಿಧಾನಾತ್ಮಕ ಹುದ್ದೆಯಲ್ಲಿರುವುದು ದೇಶದ ಭವಿಷ್ಯಕ್ಕೆ ಬಹು ಅಪಾಯಕಾರಿ

Advertisement
Advertisement
Recent Posts
Advertisement