Advertisement

ಮೋದಿಯವರ ನವಭಾರತ: ಸತ್ತವರನ್ನೆಲ್ಲಾ ಸಂತರ ಪಟ್ಟಕ್ಕೇರಿಸುವ ರಾಜಕೀಯ ಅಮಾಯಕರಿಗೊಂದು ಪ್ರಶ್ನೆ

Advertisement

ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು) "ಬಿಪಿನ್ ರಾವತ್ ಅವರು ಸೇನಾ ಮುಖ್ಯಸ್ಥರಾಗಿದ್ದರೂ ಬಹಿರಂಗವಾಗಿಯೇ ಹಿಂದುತ್ವ ರಾಜಕಾರಣಕ್ಕೆ ಪೂರಕವಾಗಿ ನಡೆದುಕೊಳ್ಳುತ್ತಿರಲಿಲ್ಲವೇ? ಅವರ ನಡಾವಳಿಗಳು ಭಾರತದ ಪ್ರಜಾತಂತ್ರಕ್ಕೆ ಅಪಾಯ ಒಡ್ಡಿರಲಿಲ್ಲವೇ?" ಆತ್ಮೀಯರೇ , ಮೊದಲಿಗೆ ಒಂದೆರೆಡು ಸ್ಪಷ್ಟೀಕರಣ : ಕಳೆದೆರಡು ದಿನಗಳ ಹಿಂದೆ ನಡೆದ ಹೆಲಿಕಾಫ್ಟರ್ ದುರಂತದಲ್ಲಿ ಮೃತರಾದ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ , ಅವರ ಮಡದಿ ಹಾಗೂ ಇನ್ನಿತರ ಸೇನಾ ಸಿಬ್ಬಂದಿಗಳ ಸಾವು ವಿಷಾದಕರ ಮಾತ್ರವಲ್ಲ ಆಘಾತಕಾರಿ. ಮೃತರ ಕುಟುಂಬಗಳಿಗೆ ಸಂತಾಪಗಳನ್ನು ವ್ಯಕ್ತಪಡಿಸುತ್ತಲೇ ಕೆಲವು ತುರ್ತು ಕ್ರಮಗಳನ್ನೂ ಆಗ್ರಹಿಸಸಬೇಕು. ಸಾಮಾನ್ಯ ಸೈನಿಕರು ಸತ್ತಿದ್ದರೆ ಹೇಗಿದ್ದರೂ ಗಂಭೀರವಾಗಿ ತೆಗೆದುಕೊಳ್ಳದ ಸರ್ಕಾರ ಮತ್ತು ಮಾಧ್ಯಮಗಳು.... ಸೇನಾ ಪಡೆಗಳ ಮುಖ್ಯಸ್ಥರೇ ಸಾವಿಗೀಡಾಗಿರುವಾಗಲಾದರೂ ಇಂಥ ವಿದೇಶಿ ಖರೀದಿ ಹೆಲಿಕಾಫ್ಟರುಗಳ ಗುಣಮಟ್ಟ, ಖರೀದಿಯಲ್ಲಿನ ಉನ್ನತ ಮಟ್ಟದ ಅವ್ಯವಹಾರ ಹಾಗೂ ಈ ನಿರ್ದಿಷ್ಟ ದುರಂತದ ಹಿಂದೆ ಇರಬಹುದಾದ ಇನ್ನಿತರ ಯಾವುದೇ ಕಾರಣಗಳ ಬಗ್ಗೆ ಕೂಲಂಕಷ ಹಾಗೂ ನಿಷ್ಪಕ್ಷಪಾತಿ ತನಿಖೆ ಮಾಡಬೇಕು. ಹಾಗೂ.... ಇದೆ ಕಾರಣಕ್ಕಾಗಿಯೇ ಮತ್ತೊಂದು ದುರಂತವಾಗುವ ತನಕ ಕಾಯದೆ ರಫೆಲ್ ಯುದ್ಧ ವಿಮಾನದ ಭ್ರಷ್ಟಾಚಾರದ ತನಿಖೆಯನ್ನೂ ನಿಷ್ಪಕ್ಷಪಾತಿಯಾಗಿ ಕೈಗೆತ್ತಿಕೊಳ್ಳಬೇಕು. ಆದರೆ ಅದೇ ಸಮಯದಲ್ಲಿ ಬಿಪಿನ್ ರಾವತ್ ಅವರು ಭಾರತದ ಈವರೆಗಿನ ಸೇನಾ ಮುಖ್ಯಸ್ಥರಂತೆ ಮತ್ತೊಬ್ಬ ಸೇನಾಧಿಕಾರಿ ಮಾತ್ರವಾಗಿರಲಿಲ್ಲ ಎಂಬುದನ್ನು ಮರೆಯಬಾರದು. ಅವರು ಯೂನಿಫಾರ್ಮ್ ನಲ್ಲಿದ್ದ ಹಿಂದುತ್ವ ರಾಜಕಾರಣದ ರಾಯಭಾರಿಯೂ ಆಗಿದ್ದರು. ಆದ್ದರಿಂದಲೇ ಅವರನ್ನು ಮೋದಿ ಸರ್ಕಾರ ಹೊಸದಾಗಿ ಸೃಷ್ಟಿಸಿದ್ದ ಮೂರೂ ರಕ್ಷಣಾ ಪಡೆಗಳ ಜಂಟಿ ಮುಖ್ಯಸ್ಥರನ್ನಾಗಿ (Chief Of Defence Staff- CDS) ನೇಮಿಸಿತ್ತು. ಅದಕ್ಕಾಗಿಯೇ ಹೊಸ ಕಾಯಿದೆ ರೂಪಿಸಿ ಅವರ ನಿವೃತ್ತಿಯ ವಯಸ್ಸನ್ನು ಏರಿಸಲಾಯಿತು. ಆದ್ದರಿಂದಲೇ ಅವರು ಸಂವಿಧಾನದ ಮತ್ತು ಪ್ರಜಾತಂತ್ರದ ರೀತಿ ರಿವಾಜುಗಳನ್ನೆಲ್ಲಾ ಗಾಳಿಗೆ ತೋರಿ ಸೇನಾ ಮುಖ್ಯಸ್ಥರಾಗಿದ್ದರೂ ತಟಸ್ಥರಾಗಿರದೆ ಭಜರಂಗ ದಳದ ಮುಖ್ಯಸ್ಥರ ರೀತಿ ಮೋದಿ ಸರ್ಕಾರದ ಕೋಮುವಾದಿ ರಾಜಕಾರಣವನ್ನು ಬೆಂಬಲಿಸುತ್ತಿದ್ದರು. ಹೀಗಾಗಿ ಅವರ ದುರಂತ ಸಾವು, ಸೇನಾ ಮುಖ್ಯಸ್ಥರಾಗಿ ಬಿಪಿನ್ ರಾವತ್ ನಡೆದುಕೊಂಡ ರೀತಿ ಭಾರತದ ಪ್ರಜಾತಂತ್ರಕ್ಕೆ ಅಪಾಯಕಾರಿಯಾಗಿತ್ತು ಎಂಬುದನ್ನೂ.... ಹಾಗೂ ಅದು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಮುಜುಗುರಕ್ಕೆ ಸಿಲುಕಿಸಿತ್ತು ಎಂಬುದನ್ನು ಮರೆಸಬಾರದು. ಹಾಗೆ ಮರೆತುಬಿಡುವುದು ರಾಜಕೀಯ ಅಮಾಯಕತನ ಮಾತ್ರವಲ್ಲ.. ರಾಜಕೀಯ ಮುಟ್ಟಾಳತನವೂ ಆಗುತ್ತದೆ. THE ARMY RULES, 1954 ನ ಸೆಕ್ಷನ್ 21 (i) ಮತ್ತು (ii) ರ ಪ್ರಕಾರ ಸೇನಾ ಸಿಬ್ಬಂದಿಗಳು, ಅದರ ಮುಖ್ಯಸ್ಥರನ್ನೂ ಒಳಗೊಂಡಂತೆ, ಯಾವ ಕಾರಣಕ್ಕೂ ರಾಜಕೀಯ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಬರಹ, ಭಾಷಣ ಇತ್ಯಾದಿಗಳ ಮೂಲಕ ವ್ಯಕ್ತಪಡಿಸದೆ ರಾಜಕೀಯವಾಗಿ ಸೇನೆಯ ತಟಸ್ಥ ಸ್ವರೋಪವನ್ನು ಕಾಪಾಡಿಕೊಳ್ಳಬೇಕು. ಇದು ಭಾರತೀಯ ಪ್ರಜಾತಂತ್ರದ ಪ್ರಮುಖ ಅಡಿಪಾಯಗಳಲ್ಲಿ ಒಂದು. ಮೋದಿಯವರು ಪ್ರಧಾನಿಯಾಗುವವರೆಗೆ ಹಾಗೂ ಬಿಪಿನ್ ರಾವತ್ ಅವರು ಸೇನಾ ಮುಖ್ಯಸ್ಥರಾಗುವವರೆಗೆ ಸೇನಾ ಪಡೆಗಳು ಮುಖ್ಯಸ್ಥರು ಒಳಗೆ ಏನೇ ಇದ್ದರೂ ಹೊರಗಡೆ ಸಾಕಷ್ಟು ಮಟ್ಟಿಗೆ ರಾಜಕೀಯ ತಾಟಸ್ಥ್ಯವನ್ನು ಕಾಪಾಡಿಕೊಂಡು ಬಂದಿದ್ದರು. ಆದರೆ ಬಿಪಿನ್ ರಾವತ್ ಅವರು CDS ಆದಮೇಲೆ ಹೆಚ್ಚು ಕಡಿಮೆ ಬಿಜೆಪಿ ಪಕ್ಷದ ಅಧಿಕೃತ ವಕ್ತಾರನಂತೆ ಅಥವಾ ಭಜರಂಗದಳದ ಅಧ್ಯಕ್ಷನಂತೆ ಬಹಿರಂಗವಾಗಿ ಮಾತಾಡತೊಡಗಿದ್ದರು. ಸದ್ಯಕ್ಕೆ ಕೆಲವೇ ಕೆಲವು ಉದಾಹರಣೆಗಳನ್ನು ಗಮನಿಸೋಣ: - 2019ರ ಲೋಕಸಭಾ ಚುನಾವಣೆಗೆ ಮುನ್ನ 2018 ರಲ್ಲಿ ಅಸ್ಸಾಮಿಗೆ ಭೇಟಿ ನೀಡಿದ್ದ ಬಿಪಿನ್ ರಾವತ್ ಅವರು ".ಅಸ್ಸಾಮಿನಲ್ಲಿ ಬಿಜೆಪಿ ಗಿಂತ ವೇಗವಾಗಿ ಮುಸ್ಲಿಂ ಪಕ್ಷವಾದ AIUDF ಬೆಳೆಯಲು ಕಾರಣ ಬಾಂಗ್ಲಾದೇಶದಿಂದ ನುಸುಳಿ ಬರುತ್ತಿರುವ ಅಕ್ರಮ ಮುಸ್ಲಿಂ ವಲಸೆಕೋರರು. ಆದ್ದರಿಂದ ಅದನ್ನು ತಡೆಗಟ್ಟಲು NRC ಮಾಡಲಾಗುತ್ತಿದೆ" ಎಂದು ಹೇಳಿಕೆ ನೀಡಿದ್ದರು. ವಿವರಗಳಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ►►https://www.news18.com/news/india/army-chief-bipin-rawat-aiudf-has-grown-faster-than-bjp-in-assam-1668689.html ಆ ಮೂಲಕ ಸೇನಾಪಡೆಗಳ ಮುಖ್ಯಸ್ಥರೊಬ್ಬರು ಗಡಿ ರಕ್ಷಣೆಯ ಹೆಸರಲ್ಲಿ ಬಿಜೆಪಿ ಎಂಬ ರಾಜಕೀಯ ಪಕ್ಷದ ಪರವಾದ ನಿಲುವನ್ನು ದೇಶದ ಮುಂದಿಟ್ಟಿದ್ದರು. ಹಾಗೂ AIUDF ಗೆ ಓಟು ಹಾಕುವರೆಲ್ಲಾ ಅಕ್ರಮ ವಲಸಿಗರು ಎಂಬ ಬಿಜೆಪಿ ಪ್ರಚಾರಕ್ಕೆ ಸೇನಾ ಮುದ್ರೆಯನ್ನು ಒತ್ತಿದ್ದರು. - CAA-NPR-NRC ವಿರುದ್ಧದ ಹೋರಾಟ ದೇಶಾದ್ಯಂತ ತಾರಕ್ಕದಲ್ಲಿದ್ದಾಗ ಮತ್ತು ಬಿಜೆಪಿಯನ್ನು ಹೊರತುಪಡಿಸಿ ಎಲ್ಲಾ ರಾಜಕೀಯ ಪಕ್ಷಗಳು , ವಿಶೇಷವಾಗಿ ಎಲ್ಲಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು NPR-NRC ವಿರೋಧಿ ಹೋರಾಟದಲ್ಲಿ ತೊಡಗಿಕೊಂಡಿದ್ದಾಗ ಬಿಪಿನ್ ರಾವತ್ ಅವರು : "..ಕೆಲವು ರಾಜಕೀಯ ನಾಯಕರು ದೇಶವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಆ ತಪ್ಪು ದಾರಿಯನ್ನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನುಸರಿಸುತ್ತಿದ್ದಾರೆ. ಇದರಿಂದ ಈ ದೇಶಕ್ಕೆ ಒಳ್ಳೆಯದಾಗುವುದಿಲ್ಲ" ಎಂಬ ಹೇಳಿಕೆ ನೀಡಿ ಎಲ್ಲಾ ರಾಜಕೀಯ ಪಕ್ಷಗಳ ಟೀಕೆಗೆ ಗುರಿಯಾಗಿದ್ದರು . ವಿವರಗಳಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ►►https://www.hindustantimes.com/india-news/this-is-not-leadership-army-chief-bipin-rawat-slams-anti-caa-protests/story-HAWowdTVLQFs35H2Z6JWGK.html - ತೀರಾ ಇತ್ತೀಚಿಗೆ, ನವಂಬರ್ 10 ರಂದು, TIMES NOW ಚಾನೆಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ CDS ರಾವತ್ ಅವರು : " ಕಾಶ್ಮೀರದಲ್ಲಿ ನಾಗರಿಕ ಸಮಾಜವೇ ಭಯೋತ್ಪಾದಕರನ್ನು ಲಿಂಚ್ (ಕೊಂದುಹಾಕಲು ) ಮುಂದೆ ಬಂದಿದೆ. ಇದು ಒಳ್ಳಯ ಬೆಳವಣಿಗೆ. ಇದನ್ನು ಪ್ರೋತ್ಸಾಹಿಸಬೇಕು*" ಎಂದು ಹೇಳಿದ್ದು ಮಾತ್ರವಲ್ಲದೆ, ಇದರಿಂದ ಈಗಾಗಲೇ ಅಲ್ಲಿ ಸೇನಾಪಡೆಗಳು ನಡೆಸುತ್ತಿರುವ ದೌರ್ಜನ್ಯಕ್ಕೆ ಸಮರ್ಥನೆ ಸಿಗುವುದಿಲ್ಲವೇ ಎಂಬ ಪ್ರಶ್ನೆಗೆ " ಸೇನಾಪಡೆಗಳ ಮಾನವ ಹಕ್ಕುಗಳಿಂದ ದೃಷ್ಟಿಯಿಂದ ನೋಡಿದರೆ ಅದರಲ್ಲಿ ತಪ್ಪೇನೋ ಇಲ್ಲ" ಎಂದು ಸಮರ್ಥಿಸಿಕೊಂಡಿದ್ದರು. ವಿವರಗಳಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ►►https://www.facebook.com/watch/?v=1011555833018709 ಆರ್ಟಿಕಲ್ 370 ರದ್ದು ಮತ್ತು ರಾಜ್ಯ ವಿಭಜನೆಯಾಗಿ ಕಾಶ್ಮೀರ ದಲ್ಲಿ ರಾಷ್ಟ್ರಪತಿ ಆಡಳಿತ ಅರ್ಥಾತ್ ಮೋದಿ ಸರ್ಕಾರದ ನೇರ ಆಡಳಿತ ಜಾರಿಯಾದ ನಂತರ ಕಾಶ್ಮೀರದಲ್ಲಿ ನಾಗರೀಕರ ನರಹತ್ಯೆ ನಡೆಯುತ್ತಿದೆ. ಸೇನೆಯು ನಡೆಸುತ್ತಿರುವ ಎಲ್ಲಾ ದೌರ್ಜನ್ಯಗಳನ್ನು ಭಯೋತ್ಪಾದನೆಯ ವಿರೋಧಿ ಕ್ರಮ ಎಂದು ಸಮರ್ಥಿಸಿಕೊಳ್ಳಲಾಗುತ್ತಿದೆ. ಮೊನ್ನೆ ಮೊನ್ನೆ ಇದೇ ರೀತಿ ನಾಗಾ ಲ್ಯಾಂಡಿನಲ್ಲೂ ಸೇನೆ ಅಮಾಯಕ ನಾಗರೀಕರ ಕಗ್ಗೊಲೆಯನ್ನು ನಡೆಸಿದೆ. ಇಂಥಾ ಸಂದರ್ಭದಲ್ಲಿ ಸೇನಾ ಪಡೆಗಳ ಮುಖ್ಯಸ್ಥರ ಇಂಥಾ ಹೇಳಿಕೆ ಯಾರಿಗೆ ಕುಮ್ಮಕ್ಕು ಕೊಡುತ್ತದೆ?? ಇದರ ಜೊತೆಗೆ, ನಾಗರೀಕ ಸಮಾಜವೇ ಶತ್ರು ಎಂದು ಮೊನ್ನೆ ಮೋದಿ ಸರ್ಕಾರದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡ ಘೋಷಿಸಿದ್ದಾರೆ. ಹಾಗೂ ನಾಗರಿಕ ಸಮಾಜದ ಮೇಲೆ ನಡೆಸುವ ಯುದ್ಧಕ್ಕೆ ಸಜ್ಜಾಗಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ. ಮತ್ತೊಂದು ಕಡೆ ಮೋದಿ ಆರಾಧಕ ನಿವೃತ್ತ ನ್ಯಾಯಾಧೀಶ ಅರುಣ್ ಮಿಶ್ರ ನೇತೃತ್ವದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC)ಕಾಶ್ಮೀರ ಹಾಗೂ ಈಶಾನ್ಯ ಭಾರತಗಳಲ್ಲಿ ಮಾನವ ಹಕ್ಕುಗಳೆಂದರೆ ಅಲ್ಲಿ ಅಮಾಯಕರ ಮೇಲೆ ದೌರ್ಜನ್ಯ ಎಸಗುವ ಸೈನಿಕರ ಹಕ್ಕುಗಳ ರಕ್ಷಣೆ ಎಂಬ ಹೊಸ ವ್ಯಾಖ್ಯಾನ ಕೊಡುತ್ತಿದೆ. ಇದು ಮೋದಿಯವರ ನವಭಾರತ. ಒಂದೆಡೆ ನಾಗರೀಕ ಸಮಾಜವನ್ನು ದ್ವೇಷದ ಆಧಾರದಲ್ಲಿ ವಿಭಜಿಸಿ, ಭಿನ್ನಮತೀಯರನ್ನು ದೇಶದ್ರೋಹಿಗಳೆಂದು ಹೆಸರಿಸಿ ಲಿಂಚ್ ಮಾಡುತ್ತಿದ್ದಾರೆ , ಮತ್ತೊಂದು ಕಡೆ ಸೇನೆ ಹಾಗೂ ಪೊಲೀಸ್ ಪಡೆಗಳನ್ನು ಸಂವಿಧಾನಕ್ಕಿಂತ ಹಿಂದುತ್ವ ಸಿದ್ಧಾಂತದ ಸೈನಿಕರನ್ನಾಗಿ ಮಾಡಲಾಗುತ್ತಿದೆ. ಭಾರತದ ಪ್ಯಾಸಿಸಂ ನ ಮತ್ತೊಂದು ಹಂತ ಅನಾವರಣಗೊಳ್ಳುತ್ತಿದೆ. ಬಿಪಿನ್ ರಾವತ್ ಅವರು ಈ ಹೊಸ ಭಾರತದ ದಂಡನಾಯಕರಾಗಿದ್ದರು ಎಂಬುದನ್ನು ಮರೆಯಬಾರದಲ್ಲವೇ? ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ: ►► ನೀವು ಈ ಕೆಳಗಿನ ಲೇಖನಗಳನ್ನು ಓದಿಲ್ಲವೇ? ಅಗತ್ಯವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. ►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ. ►►ಎಳೆಮಕ್ಕಳ, ವಿದ್ಯಾರ್ಥಿಗಳ ಪ್ರಾಣಕ್ಕೆ ಮಾರಕವಾದ ಟೇಸ್ಟಿಂಗ್ ಪೌಡರ್ ಅನ್ನು ಸರ್ಕಾರ ಅದೇಕೆ ನಿಷೇಧಿಸುತ್ತಿಲ್ಲ? ►► ‘ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಭಾರತದಲ್ಲಿ ದಿಢೀರ್‌ ಜನಪ್ರಿಯರಾಗಲು ಇರುವ ಸರಳ ಮಾರ್ಗ ಯಾವುದು ಗೊತ್ತೇ? ►► ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್! ►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ! ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ. ►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) ►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ? ►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..! ►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ! ►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! ►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ? ►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್! ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. ►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ? ►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್ ►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ ►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) ►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►► *ಸ್ವಯಂ ಘೋಷಿತ ರಾಷ್ಟ್ರೀಯವಾದಿ ಸಂಘಟನೆ ಆರೆಸ್ಸೆಸ್, ಸ್ವಾತಂತ್ರ್ಯಾ ನಂತರ ಬರೋಬ್ಬರಿ ಮೂರು ಬಾರಿ ನಿಷೇಧಕ್ಕೊಳಗಾಗಲು ಕಾರಣಗಳೇನು?* ►► *ನೋಟುಬ್ಯಾನ್ ಮಾಡಿದ ನಂತರ ಪ್ರಧಾನಿ ಮೋದಿಯವರು, ಟೋಕಿಯೋದಲ್ಲಿ ಭಾರತದ ಜನರನ್ನು ಗೇಲಿಮಾಡಿ ಮಾಡಿದ ಭಾಷಣದ ಅಪರೂಪದ ವಿಡಿಯೋ.* ►►ಸಂಘಿಬಾನಿಗಳ ಆಡಳಿತದಲ್ಲಿ ಸಂವಿಧಾನ ಬದಲಾಗುತ್ತಾ? ಬದಲಾದರೆ ಏನೇನಾಗುತ್ತೆ ? ಮಿಸ್ ಮಾಡ್ದೆ ಈ ಲೇಖನ ಓದಿ.. ವಿಡಿಯೋ ನೋಡಿ! ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಸ್ವಾತಂತ್ರ ಹೋರಾಟವನ್ನು ಹತ್ತಿಕ್ಕಲು ಬ್ರಿಟೀಷರು, ಸಾವರ್ಕರ್ ರನ್ನು ದಾಳವಾಗಿ ಬಳಸಿದ್ದರೇ? ►►9 ಜನ್ಮದಲ್ಲಿ ಸ್ವರ್ಗಸುಖ ಸಿಗುತ್ತದೆ ಎಂದು ಗೌರಿಯನ್ನು ಕೊಲೆ ಮಾಡಿದ್ದ ಹಂತಕರು.. ತಾಲೀಬಾನ್, ಐಸಿಸ್ ಗಿಂತಲೂ ಅಸಹ್ಯವಾದ ಸಿದ್ದಾಂತವೇ ಕೊಲೆಗೆ ಕಾರಣ ►►ಸ್ವತಂತ್ರ ಭಾರತದ ಇತಿಹಾಸದಲ್ಲಿ ದಾಖಲೆಯಾಗುಳಿವ ಮೋದಿ ಸಾಧನೆಗಳು: ಮೋದಿ ವಿರೋಧಿಗಳು ಮತ್ತು ಬೆಂಬಲಿಗರು ತಿಳಿದುಕೊಳ್ಳಲೇ ಬೇಕಾದ ನಗ್ನಸತ್ಯಗಳು! ►►ಕಾಂಗ್ರೆಸ್‌ನಲ್ಲಿ ಪ್ರಮೋಷನ್‌ ಸಿಗಬೇಕಾದರೆ ಜೈಲಿಗೆ ಹೋಗಬೇಕು’ ಎಂದಿರುವ ಬಿಜೆಪಿ ನಾಯಕ ಸಿ.ಟಿ ರವಿಗೊಂದು ಬಹಿರಂಗ ಪತ್ರ ►►ಅಫ್ಘಾನಿಸ್ತಾನದ ಬೆಳವಣಿಗೆಗಳು ಸಾಬೀತುಪಡಿಸುತ್ತಿರುವುದು ಮೋದಿ ಸರ್ಕಾರದ ಸಿಎಎ ಕಾಯಿದೆಯ ದೂರದೃಷ್ಟಿಯನ್ನೋ ಅಥವಾ ಸಂಘೀಬಾನಿಗಳ ಧೂರ್ತತನವನ್ನೋ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ವಿದ್ಯುತ್ ತಿದ್ದುಪಡಿ ಮಸೂದೆ- 2021; ಕಾರ್ಪೊರೇಟ್ ಲಾಭ ಪ್ರಖರ – ರೈತ, ಕಾರ್ಮಿಕ ಬದುಕು ಬರ್ಬರ! ►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ಜಿಎಸ್‌ಟಿ ಕಟ್ಟಬೇಡಿ’- ದೇಶದ ವರ್ತಕರಿಗೆ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಕರೆ! ►►ಬುರ್ಖಾ, ಜನಿವಾರ, ಮೂಲಭೂತವಾದ, ಕೋಮುವಾದ ಮತ್ತು ಸಮಾನತಾವಾದ ►►ಪತ್ರಕರ್ತರೇ ಎಚ್ಚರ: ಮೋದಿ ಸರ್ಕಾರದ ವೈಫಲ್ಯಗಳ ವಿರುದ್ದ ಬರೆದರೆ ಐಟಿ ದಾಳಿ ನಡೆಯಲಿದೆ ಹುಷಾರ್! ►►ಆರ್ ಎಸ್ ಎಸ್ ಸಿದ್ದಾಂತವನ್ನು ಒಪ್ಪುವವರು ಕಾಂಗ್ರೆಸ್ ಪಕ್ಷಕ್ಕೆ ಅಗತ್ಯ ಇಲ್ಲ. ಬಿಜೆಪಿಗೆ ಹೆದರುವವರು ಪಕ್ಷದಿಂದ ಹೊರಟು ಹೋಗಬಹುದು! ►►ಅಂಬೇಡ್ಕರ್ ಸಂವಿಧಾನದ ವಿರೋಧಿಗಳು ಸಂವಿಧಾನಾತ್ಮಕ ಹುದ್ದೆಯಲ್ಲಿರುವುದು ದೇಶದ ಭವಿಷ್ಯಕ್ಕೆ ಬಹು ಅಪಾಯಕಾರಿ

Advertisement
Advertisement
Recent Posts
Advertisement